ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈಬ್ರಂಟ್ ಗುಜರಾತ್: ಮೋದಿ ಭಾಷಣದ ಹೈಲೈಟ್ಸ್

|
Google Oneindia Kannada News

ಗಾಂಧಿನಗರ, ಜ. 11 : ಭಾರತ ಇತರ ರಾಜ್ಯಗಳಿಗೆ ಗುಜರಾತ್ ಅಭಿವೃದ್ಧಿ ಮಾದರಿಯಾಗಬೇಕು, ಭಾರತ ಬದಲಾವಣೆ ಹಾದಿಯಲ್ಲಿದ್ದು, ಉತ್ಪಾದನೆ ಹೆಚ್ಚಿಸಿ ಅತಿದೊಡ್ಡ ರಫ್ತು ದೇಶವಾಗಿ ಹೊರಹೊಮ್ಮಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪುನರುಚ್ಚರಿಸಿದ್ದಾರೆ.

ಗುಜರಾತ್ ಗಾಂಧಿನಗರದಲ್ಲಿ ಹಮ್ಮಿಕೊಂಡಿರುವ 'ವೈಬ್ರಂಟ್ ಗುಜರಾತ್' ಶೃಂಗಸಭೆ'ಗೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಕೃತಿಯನ್ನು ಸಂರಕ್ಷಿಸುವುದು ಭಾರತೀಯರಿಗೆ ರಕ್ತಗತವಾಗಿಯೇ ಬಂದಿದೆ. ನೈಸರ್ಗಿಕ ಸಂಪತ್ತನ್ನು ಬಳಸಿಕೊಂಡೇ ಉತ್ಪಾದನೆ ಹೆಚ್ಚಿಸಬೇಕಿದೆ. ಈ ಮೂಲಕ ಅಭಿವೃದ್ಧಿ ಪಥದಲ್ಲಿ ಸಾಗಬೇಕಿದೆ ಎಂದು ಹೇಳಿದರು.[ವಿದೇಶಿಗರನ್ನು ಡಾಲರ್ ನಿಂದ ಅಳೆಯಬೇಡಿ]

modi

ಸಮಾವೇಶದಲ್ಲಿ, ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್, ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರ್ರಿ, ನೂರಾರು ದೇಶದ ಉದ್ಯಮಿಗಳು ಮತ್ತು ಬಂಡವಾಳ ಹೂಡಿಕೆದಾರರು ಭಾಗವಹಿಸದ್ದರು.

ಪ್ರಧಾನಿ ಮೋದಿ ಭಾಷಣದ ಹೈಲೈಟ್ಸ್

* ಯೋಗಕ್ಕೆ ಜಗತ್ತಿನ ಮನ್ನಣೆ ನೀಡಿದ ಎಲ್ಲರಿಗೆ ಧನ್ಯವಾದ ಅರ್ಪಿಸುತ್ತೇನೆ.
* ಸರ್ವಾಂಗೀಣ ಅಭಿವೃದ್ಧಿ ನಮ್ಮ ಮೂಲ ಮಂತ್ರ
* ಭಾರತದೊಂದಿಗೆ ಕೆಲಸ ಮಾಡಲು ಎಲ್ಲ ದೇಶದವರು ಉತ್ಸುಕರಾಗಿದ್ದಾರೆ
* ಮಾಲಿನ್ಯ ತಡೆಗೆ ಪ್ರತಿಯೊಬ್ಬರು ಕೈ ಜೋಡಿಸಬೇಕಿದೆ
* ಬಂಡವಾಳ ಹೂಡಿಕೆದಾರರಿಗೆ ಭಾರತದ ಬಾಗಿಲು ಸದಾ ತೆರೆದಿರುತ್ತದೆ.
* ಸಾರ್ವಜನಿಕ ವಲಯ ಮತ್ತು ಖಾಸಗಿ ಹಣ ಬಳಸಿಕೊಂಡು ಕೈಗಾರಿಕೆಗಳನ್ನು ಬೆಳೆಸಬೇಕಾಗಿದೆ.
* ಮುಂದಿನ ಪೀಳಿಗೆಗೆ ಹೊಸ ಶಕ್ತಿ ನೀಡುವ ಜವಾಬ್ದಾರಿ ನಮ್ಮ ಮೇಲಿದೆ.
* ನಮಗೆ ನಾವೇ ಕೆಲವೊಂದು ಮಿತಿ ಹೇರಿಕೊಳ್ಳಬೇಕಾಗಿದೆ.
* ಅಂತಾರಾಷ್ಟ್ರೀಯ ಅರ್ಥ ವ್ಯವಸ್ಥೆ ಬಗ್ಗೆ ಎದುರಾಗಿರುವ ಆತಂಕ ದೇಶಕ್ಕೆ ತಟ್ಟಬಾರದು
* ಸಾಮಾನ್ಯ ಮನುಷ್ಯನೊಬ್ಬನಿಗೆ ಸುಲಭವಾಗಿ ಉದ್ಯೋಗ ದೊರೆಯುವಂಥ ಪರಿಸ್ಥಿತಿ ನಿರ್ಮಾಣವಾಗಬೇಕು.

English summary
With pioneer promoter having become PM, Vibrant Gujarat assumes global proportions in seventh edition over the next two days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X