ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೊರಕೆ ಹಿಡಿದು ಕಚೇರಿ ಸ್ವಚ್ಛಗೊಳಿಸಿದ ಉ.ಪ್ರದೇಶ ಸಚಿವ

ಲಕ್ನೋದ ವಿಧಾಸಭೆಯಲ್ಲಿನ ತಮ್ಮ ಕಚೇರಿಯ ಮುಂದೆ ಕಸವನ್ನು ನೋಡಿದ ಕೂಡಲೇ ಬೇಸರಪಟ್ಟುಕೊಂಡ ಸಚಿವ ಉಪೇಂದ್ರ ತಾವೇ ಖುದ್ದು ಪೊರಕೆ ಹಿಡಿದು ಸ್ವಚ್ಛಗೊಳಿಸಿದ್ದಾರೆ.

|
Google Oneindia Kannada News

ಲಕ್ನೋ, ಮಾರ್ಚ್ 23: ಉತ್ತರ ಪ್ರದೇಶದ ನೂತನ ಸಚಿವ ಹಾಗೂ ಉಪ ಮುಖ್ಯಮಂತ್ರಿ ಉಪೇಂದ್ರ ತಿವಾರಿ ಅವರು, ತಮ್ಮ ಕಚೇರಿಯನ್ನು ತಾವೇ ಸ್ವಚ್ಛಗೊಳಿಸಿದ್ದಾರೆ.

ಇಲ್ಲಿನ ವಿಧಾನ ಸಭಾಕ್ಕೆ ಎಂದಿನಂತೆ ತಮ್ಮ ಕರ್ತವ್ಯಕ್ಕೆ ಹಾಜರಾದ ಉಪೇಂದ್ರ ತಿವಾರಿ, ವಿಧಾನ ಸಭಾ ಕಟ್ಟಡದಲ್ಲಿನ ತಮ್ಮ ಕಚೇರಿಯ ಮುಂಭಾಗದಲ್ಲಿ ಕಸ ಗುಡಿಸದೇ ಇರುವುದನ್ನು ನೋಡಿ ಬೇಸರಗೊಂಡರು.[ಯೋಗಿ ಆದಿತ್ಯನಾಥ್ ಅವರಿಗೆ ಮೋದಿ ಕೊಟ್ಟ 12 ಸಲಹೆಗಳು]

Minister cleans his office premises with groom stick

ಹಾಗೆಂದ ಮಾತ್ರಕ್ಕೇ ಅವರು ಅಲ್ಲಿನ ಸಿಬ್ಬಂದಿಯನ್ನು ಅಥವಾ ಪರಿಚಾರಕರ ಮೇಲೆ ರೇಗಲಿಲ್ಲ. ಅಲ್ಲೇ ಮೂಲೆಯಲ್ಲಿದ್ದ ಪೊರಕೆ ಅವರ ಕಣ್ಣಿಗೆ ಬಿದ್ದಿದ್ದೇ ತಡ, ತಕ್ಷಣ ಅದನ್ನು ತೆಗೆದುಕೊಂಡು ಪೊರಕೆಯಿಂದ ಮನೆ ಸ್ವಚ್ಛಗೊಳಿಸಲು ಶುರುವಿಟ್ಟುಕೊಂಡರು.

ಇದನ್ನು ನೋಡಿದ ಅವರ ಬೆಂಬಲಿಗರು ಹಾಗೂ ಕಾರ್ಯಕರ್ತರು, ತಕ್ಷಣವೇ ಅವರ ಬಳಿಗೆ ಹೋಗಿ ಪೊರಕೆ ಕೊಡಿರೆಂದು ಮನವಿ ಮಾಡಿದರೂ, ಬೇಡವೆಂದ ಉಪೇಂದ್ರ, ತಾವೇ ಕಚೇರಿಯ ಮುಂಭಾಗವನ್ನು ಸ್ವಚ್ಛಗೊಳಿಸಿದರು.[ರಾಮಮಂದಿರ ನಿರ್ಮಾಣ: ಸಿಎಂ ಯೋಗಿ ಕೈಲಿದೆ 'ಪವರ್' ಅಸ್ತ್ರ]

44 ವರ್ಷದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಇತ್ತೀಚೆಗಷ್ಟೇ, ಸರ್ಕಾರಿ ವಲಯಗಳು, ಕಚೇರಿಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವ ಬಗ್ಗೆ ಅಧಿಕಾರಿಗಳಿಗೆ ಹಾಗೂ ಹೊಸದಾಗಿ ತಮ್ಮೊಂದಿಗೆ ಪ್ರಮಾಣ ವಚನ ಸ್ವೀಕರಿಸಿರುವ ಸಚಿವರುಗಳಿಗೆ ತಾಕೀತು ಮಾಡಿದ್ದರು.

ಇದರ ಜತೆಗೇ, ಸರ್ಕಾರಿ ಕಚೇರಿಗಳಲ್ಲಿ ಗುಟ್ಕಾ ಹಾಗೂ ಪಾನ್ ಮಸಾಲಾಗಳನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.

English summary
The Deputy CM of Uttar Pradesh Upendra Tiwari grabed the attention of Media as he cleaned his office in Vidhana Sabha on March 23, 2017. When he came to office at morning he saw the premises was not cleaned yet, suddenly he grabbed the groom and began to clean.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X