ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹಿಳೆಯರೇ, ನಿಮ್ಮ ಸುರಕ್ಷೆಗಿರಲಿ ಸುರಕ್ಷಾ ಆಪ್!

'ಸುರಕ್ಷಾ ಪೊಲೀಸ್: ನಿಮಗೋಸ್ಕರ, ನಿಮ್ಮೊಂದಿಗೆ' ಎಂಬ ಧ್ಯೇಯ ವಾಕ್ಯದೊಂದಿಗೆ ಬಿಡುಗಡೆಯಾಗಿರುವ ಸುರಕ್ಷಾ ಆಪ್ ನ ಕುರಿತ ಕೆಲವು ಮಾಹಿತಿ ನಿಮಗಾಗಿ, ಇಲ್ಲಿದೆ.

|
Google Oneindia Kannada News

ಬೆಂಗಳೂರು, ಏಪ್ರಿಲ್ 11: ಮಹಿಳೆಯರ ರಕ್ಷಣೆಯ ಹೊಣೆ ಹೊತ್ತ ಸುರಕ್ಷಾ ಆಫ್ ಅನ್ನು ನಿನ್ನೆ(ಏಪ್ರಿಲ್ 1೦) ತಾನೇ ರಾಜ್ಯ ಸರ್ಕಾರ ಬಿಡುಗಡೆಗೊಳಿಸಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ರಾಜಧಾನಿಯಲ್ಲಿ ದಿನೇ ದಿನೇ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವ ಈ ಸಮಯದಲ್ಲಿ ಸುರಕ್ಷಾ ಆಪ್ ಪರಿಚಯ ಸ್ವಾಗತಾರ್ಹವೇ.

'ಸುರಕ್ಷಾ ಪೊಲೀಸ್: ನಿಮಗೋಸ್ಕರ, ನಿಮ್ಮೊಂದಿಗೆ' ಎಂಬ ಧ್ಯೇಯ ವಾಕ್ಯದೊಂದಿಗೆ ಬಿಡುಗಡೆಯಾಗಿರುವ ಈ ಆಪ್ ಅನ್ನು ಮಹಿಳೆಯರು ಎಷ್ಟರಮಟ್ಟಿಗೆ ಸದುಪಯೋಗ ಪಡಿಸಿಕೊಳ್ಳತ್ತಾರೆ ಎಂಬುದನ್ನು ಕಾದುನೋಡಬೇಕಿದೆ.[ಪಿಂಕ್ ಹೊಯ್ಸಳ: ಮಹಿಳಾ ರಕ್ಷಣೆಯತ್ತ ದಿಟ್ಟ ಹೆಜ್ಜೆ]

ಸುರಕ್ಷತೆಯ ದೃಷ್ಟಿಯಿಂದ ಪ್ರತಿಯೊಬ್ಬ ಮಹಿಳೆಯರೂ ತಮ್ಮ ಸ್ಮಾರ್ಟ್ ಫೋನ್ ಗಳಲ್ಲಿ ಸುರಕ್ಷಾ ಆಪ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಬೇಕೆಂದು ಸರ್ಕಾರ ಹೇಳಿದೆ. ಈ ಆಪ್ ಅನ್ನು ಡೌನ್ ಲೋಡ್ ಮಾಡಿಕೊಳ್ಳೋದು ಹೇಗೆ, ಈ ಆಪ್ ನ ಉಪಯೋಗ ಪಡೆದುಕೊಳ್ಳುವುದು ಹೇಗೆ ಎಂಬ ಮಾಹಿತಿ ನಿಮಗಾಗಿ, ಇಲ್ಲಿದೆ.

ಡೌನ್ ಲೋಡ್ ಮಾಡೋದು ಹೇಗೆ?

ಡೌನ್ ಲೋಡ್ ಮಾಡೋದು ಹೇಗೆ?

ಮೊದಲು ಗೂಗಲ್ ಪ್ಲೇಸ್ಟೋರ್ ಗೆ ಹೋಗಿ, ಸುರಕ್ಷಾ ಆಪ್ ಎಂದು ಟೈಪ್ ಮಾಡಿದರೆ, ಅಲ್ಲಿ ಕರ್ನಾಟಕ ಸರ್ಕಾರದ ಲೋಗೋ ಇರುವ ಸುರಕ್ಷಾ ಆಪ್ ಐಕಾನ್ ಕಾಣಿಸುತ್ತದೆ. ಐಕಾನ್ ಮೇಲೆ ಕ್ಲಿಕ್ ಮಾಡುವ ಮೂಲಕ ಆಪ್ ಅನ್ನು ನಿಮ್ಮ ಮೊಬೈಲ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಿ. ಅಂದ ಹಾಗೇ ಇದು ಫ್ರಿ ಆಪ್ ಎಂಬುದು ನೆನಪಿರಲಿ!

ರಿಜಿಸ್ಟರ್ ಮಾಡಿಕೊಳ್ಳೋದು ಹೇಗೆ?

ರಿಜಿಸ್ಟರ್ ಮಾಡಿಕೊಳ್ಳೋದು ಹೇಗೆ?

ಡೌನ್ ಲೋಡ್ ಆಗಿರುವ ಸುರಕ್ಷಾ ಆಪ್ ಐಕಾನ್ ಮೇಲೆ ಕ್ಲಿಕ್ ಮಾಡಿದರೆ ಅದು ನಿಮ್ಮ ಹೆಸರನ್ನು ರಿಜಿಸ್ಟರ್ ಮಾಡುವಂತೆ ಸೂಚಿಸುತ್ತದೆ. ನಿಮ್ಮ ಹೆಸರು ಮತ್ತು ಫೋನ್ ನಂಬರ್ ಕೊಟ್ಟರೆ ನಿಮಗೊಂದು ವೆರಿಫಿಕೇಶನ್ ಕೋಡ್ ಬರುತ್ತದೆ. ಆ ವೆರಿಫಿಕೇಶನ್ ಕೋಡ್ ಅನ್ನು ನಮೂದಿಸಿದರೆ ನಿಮ್ಮ ಹೆಸರು ಆಪ್ ನಲ್ಲಿ ರಿಜಿಸ್ಟರ್ ಆದಂತೆ.

ದೂರು ಪೋಸ್ಟ್ ಮಾಡೋದು ಹೇಗೆ?

ದೂರು ಪೋಸ್ಟ್ ಮಾಡೋದು ಹೇಗೆ?

ನಂತರ ನಿಮಗೆ ದೂರು ನೀಡಬೇಕಿದ್ದಲ್ಲಿ, ಪೋಸ್ಟ್ ಕಂಪ್ಲೆಂಟ್ ಎಂಬ ಆಯ್ಕೆ ಇರುತ್ತದೆ. ಅಲ್ಲಿ ನಿಮ್ಮ ದೂರನ್ನು ಪೋಸ್ಟ್ ಮಾಡಬಹುದು. ದೂರಿನ ವಿಷಯ, ದೂರಿನ ವಿವರ ಮತ್ತು ದೂರಿಗೆ ಸಂಬಂಧಿಸಿದ ಫೋಟೋವನ್ನು ಪೋಸ್ಟ್ ಮಾಡಬೇಕಾಗುತ್ತದೆ. ಇದರೊಂದಿಗೆ ನಿಮ್ಮ ದೂರಿನ ಗಂಭೀರತೆ ಎಷ್ಟಿದೆ ಎಂಬುದನ್ನೂ ನೀವು ಈ ಆಪ್ ಮೂಲಕವೇ ತಿಳಿಸಬಹುದು, ತೀರಾ ಗಂಭೀರ, ಮತ್ತು ಶೀಘ್ರ ನೆರವಿನ ಅಗತ್ಯವಿದ್ದಲ್ಲಿ ಆ ದೂರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.

ದೂರಿನ ಸ್ಥಿತಿ-ಗತಿ ತಿಳಿಯಿರಿ

ದೂರಿನ ಸ್ಥಿತಿ-ಗತಿ ತಿಳಿಯಿರಿ

ನೀವು ನೀಡಿದ ದೂರಿನ ಸ್ಟೇಟಸ್ ಏನಾಗಿದೆ ಎಂಬುದನ್ನೂ ನೀವು ಕಂಪ್ಲೆಂಟ್ ಟ್ರ್ಯಾಕರ್ ಮೂಲಕ ತಿಳಿದುಕೊಳ್ಳಬಹುದಾಗಿದೆ. ಇಲ್ಲಿ ತನಿಖೆ ಯಾವ ಹಾದಿಯಲ್ಲಿ ಸಾಗುತ್ತಿದೆ, ದೂರಿಗೆ ಸಂಬಂಧಿಸಿದಂತೆ ಏನೆಲ್ಲ ಬೆಳವಣಿಗೆಗಳಾಗಿವೆ ಎಂಬ ಮಾಹಿತಿ ಸಿಕ್ಕುತ್ತದೆ.

ಪ್ರವೀಣ್ ಸೂದ್ ಮನವಿ

ಇದರೊಂದಿಗಿರುವ ಅನೌನ್ಸ್ ಮೆಂಟ್ ಎಂಬ ಆಯ್ಕೆ ಈ ಆಪ್ ಬಗ್ಗೆ ವಿವರ ನೀಡುತ್ತದೆ. ಮಾತ್ರವಲ್ಲ, ಆಪ್ ಕುರಿತು ನಿಮ್ಮ ಫೀಡ್ ಬ್ಯಾಕ್ ಏನಾದರೂ ಇದ್ದರೆ ಇಲ್ಲಿ ನೀಡಬಹುದು. ರಾಜಧಾನಿಯ ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ರಾಜ್ಯ ಸರ್ಕಾರ ಪರಿಚಯಿಸಿದ ಈ ಆಪ್ ಅನ್ನು ಎಲ್ಲ ಮಹಿಳೆಯರೂ ಬಳಸುವಂತೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಪ್ರವೀಣ್ ಸೂದ್ ಸಹ ಮನವಿ ಮಾಡಿದ್ದಾರೆ. ನೀವೂ ಈ ಆಪ್ ಡೌನ್ ಲೋಡ್ ಮಾಡಬೇಕೆಂದರೆ ಈ ಲಿಂಕ್ ಕ್ಲಿಕ್ ಮಾಡಿ

English summary
State government of Karnataka has introduced a new app for saftey of women in state capital Bengaluru. You can download Suraksha app. Here are the few guidelines about Suraksha app.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X