ದಾವೂದ್ ಜತೆ ಶ್ರೀಶಾಂತ್ ಮೇಲೂ ಚಾರ್ಜ್ ಶೀಟ್
ನವದೆಹಲಿ, ಜು.30: ದೇಶಾದ್ಯಂತ ಕೋಲಾಹಲ ಸೃಷ್ಟಿಸಿದ್ದ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಮಂಗಳವಾರ ಭೂಗತ ಪಾತಕಿಗಳಾದ ದಾವೂದ್ ಇಬ್ರಾಹಿಂ, ಛೋಟಾ ಶಕಿಲ್, ಕ್ರಿಕೆಟ್ ಆಟಗಾರ ಶ್ರೀಶಾಂತ್ ಸೇರಿದಂತೆ 30 ಮಂದಿ ಮೇಲೆ ದೋಷಾರೋಪ ಪಟ್ಟಿ (ಚಾರ್ಜ್ ಶೀಟ್) ತಯಾರಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ದಾವೂದ್ ಹಾಗೂ ಛೋಟಾ ಶಕೀಲ್ ಸ್ಪಾಟ್ ಫಿಕ್ಸಿಂಗ್ ನ ಪ್ರಮುಖ ರೂವಾರಿಗಳಾಗಿದ್ದು, ಕ್ರಿಕೆಟಿಗ ಶ್ರೀಶಾಂತ್ ಅದನ್ನು ಕಾರ್ಯಗತಗೊಳಿಸಿದ್ದ. ಸ್ಪಾಟ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ನಲ್ಲಿ ಪಾಕಿಸ್ತಾನದ ಬುಕ್ಕಿಗಳು ಭಾರತದ ಬುಕ್ಕಿಗಳನ್ನು ನಿಯಂತ್ರಿಸುತ್ತಿದ್ದಾರೆ ಎಂದು ದೆಹಲಿ ಪೊಲೀಸರು ದೂರಿದ್ದಾರೆ.

ಇನ್ನು ಪ್ರಕರಣ ಸಂಬಂಧ ಶ್ರೀಶಾಂತ್ ಸೇರಿದಂತೆ ಇತರ 20 ಆರೋಪಿಗಳ ಜಾಮೀನು ರದ್ದುಗೊಳಿಸುವಂತೆ ಕೋರ್ಟಿಗೆ ಮನವಿ ಮಾಡಲಾಗುವುದು ಎಂದು ದೆಹಲಿ ವಿಶೇಷ ಪೊಲೀಸ್ ಆಯುಕ್ತ ಎಸ್.ಎನ್. ಶ್ರೀವತ್ಸಾವ್ ಅವರು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ರಾಜಸ್ಥಾನ ರಾಯಲ್ಸ್ ತಂಡದ ಮೂವರು ಆಟಗಾರರಾದ ಶ್ರೀಶಾಂತ್, ಅಂಕೀತ್ ಚೌವ್ಹಾಣ್ ಮತ್ತು ಅಜಿತ್ ಚಾಂಡಿಲ ಅವರನ್ನು ಕಳೆದ ಮೇ 16ರಂದು ಮುಂಬೈಯಲ್ಲಿ ದೆಹಲಿ ಪೊಲೀಸರು ಬಂಧಿಸಿದ್ದರು. ನಂತರ ಶ್ರೀಶಾಂತ್ ಹಾಗೂ ಚೌವ್ಹಾಣ್ ಜಾಮೀನನ ಮೇಲೆ ಬಿಡುಗಡೆಯಾಗಿದ್ದರು. ಆದರೆ ಮತ್ತೊರ್ವ ಆಟಗಾರ ಚಾಂಡಿಲ ಮಾತ್ರ ಇನ್ನು ತಿಹಾರ್ ಜೈಲಲ್ಲೇ ಇದ್ದಾರೆ.
ಚಾರ್ಚ್ ಶೀಟ್ : ದೆಹಲಿ ಪೊಲೀಸ್ ಆಯುಕ್ತ ನೀರಜ್ ಕುಮಾರ್ ನೇತೃತ್ವದ ತಂಡ ದೋಷಾರೋಪಣ ಪಟ್ಟಿ ಸಿದ್ಧಪಡಿಸಿದ್ದು, ಜು.31 ರಂದು ನೀರಜ್ ಕುಮಾರ್ ಅವರು ನಿವೃತ್ತಿ ಹೊಂದುತ್ತಿದ್ದು ಅದಕ್ಕಿಂತ ಮೊದಲು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿರುವವರ ಮೇಲೆ ಮಹಾರಾಷ್ಟ್ರ ಅಪರಾಧ ನಿಯಂತ್ರಣ ಕಾಯ್ದೆ (ಮೊಕಾ) ಪ್ರಕಾರ ದೂರು ದಾಖಲಿಸಲಾಗಿದೆ.
ಐಪಿಸಿ ಸೆಕ್ಷನ್ 420, 409 ಹಾಗೂ 120 (ಬಿ) ಹಾಗೂ ಮೋಕಾ ಸೆಕ್ಷನ್ 6 ಮತ್ತು 8 ಅಡಿಯಲ್ಲಿ ಆರೋಪಗಳನ್ನು ದಾಖಲಿಸಲಾಗಿದೆ. ಶ್ರೀಶಾಂತ್ ಗೆಳೆಯ ಅಭಿಷೇಕ್ ಶುಕ್ಲಾ ಅವರನ್ನು ಮೋಕಾ ಅಡಿಯಲ್ಲಿ ಆರೋಪಿಯನ್ನಾಗಿಸಿಲ್ಲ. ಪಾಕಿಸ್ತಾನ, ದುಬೈ ಹಾಗೂ ಇಂಗ್ಲೆಂಡ್ ನಿಂದ ದಾವೂದ್ ಇಬ್ರಾಹಿಂ ಹಾಗೂ ಛೋಟಾ ಶಕೀಲ್ ಸ್ಪಾಟ್ ಫಿಕ್ಸಿಂಗ್ ನಿಯಂತ್ರಿಸುತ್ತಿದ್ದರು. ಪಾಕಿಸ್ತಾನ ಬುಕ್ಕಿ ಸಲ್ಮಾನ್, ದುಬೈ ಬುಕ್ಕಿ ಜಾವೇದ್ aka ಡಾಕ್ಟರ್ aka ಜಾವೇದ್ ಛೂಟನಿ ಅವರು ಭಾರತದ ಬುಕ್ಕಿಗಳಾದ ರಮೇಶ್ ವ್ಯಾಸ್ ಹಾಗೂ ಟಿಂಕು ಮಂಡಿ ಮೂಲಕ ಫಿಕ್ಸಿಂಗ್ ಮಾಡುತ್ತಿದ್ದರು ಎಂದು ಅರೋಪಪಟ್ಟಿಯಲ್ಲಿ ಹೇಳಲಾಗಿದೆ.
-
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು?












Click it and Unblock the Notifications