ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿಕ್ಕರಸಿನಕೆರೆ ದೈವಿ ಬಸವನಿಗೆ ರೆಸ್ಟ್ ಕೊಡಿ

By ಮಲೆನಾಡಿಗ
|
Google Oneindia Kannada News

'ಬೋರದ್ಯಾವರ ಬಸ್ವನಿಗೆ ಎಂದಾದರೂ ಬಳಲಿಕೆಯಾಗುತ್ತದೆಯೇ?' ಎಂದು ಕೇಳಿದ ಪ್ರಶ್ನೆಗೆ ಅಲ್ಲಿದ್ದ ಭಕ್ತರೊಬ್ಬರು ಸಾಧ್ಯವೇ ಇಲ್ಲ. ದೈವ ಎಲ್ಲವನ್ನು ಮೀರಿದ್ದು ಎಂದರು. ಆದರೆ, ದೈವಿ ಸ್ವರೂಪಿ 'ಬಸವ' ನಿಗೂ ಹುಲ್ಲು ನೀಡಬೇಕು, ನೀರಡಕೆಯಾಗುತ್ತದೆ, ಖಾಸಗಿ ಸಮಯ ನೀಡಬೇಕು ಎಂದೆನಿಸಿತು.

ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಚಿಕ್ಕರಸಿನಕೆರೆ, ದೊಡ್ಡರಸಿನಕೆರೆ, ಕೆಎಂ ದೊಡ್ಡಿ, ಆತಗೂರು, ನಿಡಘಟ್ಟ, ಹೆಮ್ಮನಹಳ್ಳಿ ದಾಟಿ ಬೆಂಗಳೂರಿಗೆ ಆಗಾಗ ಬೋರದೇವರ ಬಸವ ಬರುತ್ತಾನೆ. ಭಕ್ತರ ಕಷ್ಟಗಳನ್ನು ನಿವಾರಿಸುತ್ತಾನೆ. ಇಂದು ದೇಶ ವಿದೇಶಗಳಲ್ಲಿ ತನ್ನ ಖ್ಯಾತಿಯನ್ನು ಹಬ್ಬಿಸಿಕೊಂಡಿರುವ ಕಲಿಯುಗ ದೈವ ಚಿಕ್ಕರಸಿನಕೆರೆ ಬಸವ.

ಚಿಕ್ಕರಸಿನಕೆರೆ ಕಾಲಭೈರವೇಶ್ವರ ದೇಗುಲದಲ್ಲಿರುವ ಬಸಪ್ಪನ ಬಗ್ಗೆ ಅನೇಕ ಕಥೆಗಳಿವೆ. ಕಳ್ಳರು ಹಾಗೂ ಮೋಸಗಾರರಿಗೆ ಸಿಂಹಸ್ವಪ್ನವಾಗಿ ವಿವಿಧ ಗ್ರಾಮಗಳಲ್ಲಿ ದೇವಸ್ಥಾನದ ಜಮೀನುಗಳ ಒತ್ತುವರಿಯನ್ನು ತೆರವುಗೊಳಿಸುವ ಮೂಲಕ ಸುತ್ತ-ಮುತ್ತಲ ಗ್ರಾಮಗಳ ಹಾಗೂ ಜಿಲ್ಲೆಗಳ ಜನರಲ್ಲಿ ಅಪಾರ ದೈವಭಕ್ತಿಯನ್ನುಂಟುಮಾಡುವಲ್ಲಿ ಬಸವ ತನ್ನ ವೈಶಿಷ್ಟತೆ ಮೆರೆಯುತ್ತಾನೆ. ಆನೇಕ ನಾಸ್ತಿಕರನ್ನು ತನ್ನ ಮಹಿಮೆಯಿಂದ ಆಸ್ತಿಕರನ್ನಾಗಿಸಿದ ಉದಾಹರಣೆಗಳಿವೆ ಎನ್ನುತ್ತಾರೆ ಸ್ಥಳೀಯರಾದ ಬೋರಲಿಂಗೇಗೌಡ.

ಕಾಲಭೈರವೇಶ್ವರನ ಜಾತ್ರೆ ಸಾಮಾನ್ಯವಾಗಿ ಏಪ್ರಿಲ್ ತಿಂಗಳಿನಲ್ಲಿ ನಡೆಯುತ್ತದೆ. ಆದಾದ ನಂತರ ಕಾರ್ತೀಕ ಮಾಸದಲ್ಲಿ ದೀಪಾವಳಿ ಸಂಭ್ರಮದಲ್ಲಿ ಬಸಪ್ಪನಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಇದು ಬಿಟ್ಟರೆ ವಿವಿಧ ಊರುಗಳಿಗೆ ಬಸಪ್ಪನ ಭೇಟಿ ಪೂರ್ವನಿಗದಿಯಂತೆ ಕೆಲವೊಮ್ಮೆ ಅಚಾನಕ್ ಆಗಿ ಆಗುವುದುಂಟು. ಚಿಕ್ಕನರಸಿಕೆರೆ ಅಲ್ಲದೆ ಕಾರ್ಕಹಳ್ಳಿಯಲ್ಲೂ ಬಸವ ಇದ್ದು ಎರಡು ದೈವಿ ಬಸವಗಳು ಜನರ ಆಸ್ತಿಕತೆಯ ಪ್ರತೀಕವಾಗಿದೆ.

ಬಸವನಿಗೆ ಪೂಜೆ : ಬಸಪ್ಪನ ಜಾತ್ರೆಯಂದು ಚಿಕ್ಕರಸಿನಕೆರೆ, ಹುಣ್ಣನದೊಡ್ಡಿ ಹಾಗೂ ಗುರುದೇವರಹಳ್ಳಿ ಗ್ರಾಮದವರಿಂದ ಕೊಂಡಬಂದಿ ಉತ್ಸವ, ಕಾಳಮ್ಮ, ಕಾರ್ಕಹಳ್ಳಿ ಬಸವೇಶ್ವರ, ಕಾಲಭೈರವೇಶ್ವರ ಸೇರಿದಂತೆ ದೇವಾನುದೇವತೆಗಳ ಶಿಂಷಾನದಿಯಲ್ಲಿ ಹೂ-ಹೊಂಬಾಳೆ ಕಾರ್ಯಕ್ರಮ, ಮಹಾಪೂಜೆಯ ಬಳಿಕ ಪ್ರಮುಖ ಬೀದಿಗಳಲ್ಲಿ ಬಸಪ್ಪನ ಮೆರವಣಿಗೆ ನಡೆಸಿ ಭಕ್ತಾಧಿಗಳು ವಿಶೇಷ ಪೂಜೆ ಸಲ್ಲಿಸಿದ ನಂತರ ದೇವಸ್ಥಾನದ ಆವರಣದಲ್ಲಿ ವಿವಿಧ ರೀತಿಯ ಪುಷ್ಪಾಭಿಷೇಕ ನಡೆಸಲಾಗುತ್ತದೆ. ಬಸಪ್ಪನ ಕೊಂಬಿಗೆ ಕಟ್ಟಲಾಗಿರುವ ಕಾಣಿಕೆ ದುಡ್ಡನ್ನು ಎಂದಿಗೂ ಯಾರೂ ಮುಟ್ಟುವುದಿಲ್ಲ.

ಸ್ಥಳ ಪುರಾಣ, ಹಬ್ಬದ ಹಿನ್ನೆಲೆ: ಬಹುಕಾಲದ ಹಿಂದೆ ಚಿಕ್ಕಅರಸಿ ಮತ್ತು ದೊಡ್ಡಅರಸಿ ಎಂಬ ಇಬ್ಬರು ಅಕ್ಕ-ತಂಗಿಯರಿದ್ದರು. ಅವರಿಬ್ಬರು ಎರಡು ಕೆರೆಗಳನ್ನು ಕಟ್ಟಿಸಿದರು. ನಂತರ ದಿನಗಳಲ್ಲಿ ಚಿಕ್ಕಅರಸಿ ಬಳಿ ನಿರ್ಮಾಣವಾದ ಗ್ರಾಮವನ್ನು ಚಿಕ್ಕರಸಿನಕೆರೆ ಎಂತಲೂ, ದೊಡ್ಡರಸಿ ಬಳಿ ನಿರ್ಮಾಣವಾದ ಗ್ರಾಮವನ್ನು ದೊಡ್ಡರಸಿನಕೆರೆ ಎಂದು ನಾಮಕರಣ ಮಾಡಲಾಯಿತು.

ಚಿಕ್ಕರಸಿನಕೆರೆಯಲ್ಲಿ ಶತಮಾನದ ದಿನಗಳ ಹಿಂದೆ ಹುತ್ತವೊಂದು ಬೆಳೆದುಕೊಡಿತ್ತು. ದೊಡ್ಡರಸಿನಕೆರೆ ಗ್ರಾಮದ ಬ್ರಹ್ಮಣರ ಕುಟುಂಬದ ಹಸುವೊಂದು ಮನೆಯಲ್ಲಿ ಹಾಲಿನ ಬದಲು ರಕ್ತವನ್ನು ನೀಡಿ ಚಿಕ್ಕರಸಿನಕೆರೆ ಬಳಿಗೆ ಬಂದು ಹುತ್ತದ ಬಳಿ ಹಾಲನ್ನು ಸುರಿಸುತ್ತಿತ್ತು ಎನ್ನಲಾಗಿದೆ. ಇದನ್ನು ಗಮನಿಸಿದ ಗ್ರಾಮಸ್ಥರು ಹುತ್ತವನ್ನು ಅಗೆದು ನೋಡುವಷ್ಟರಲ್ಲಿ ಭೂಮಿಯೊಳಗೆ ಶ್ರೀಕಾಲಭೈರವೇಶ್ವರ ಬಸವನ ವಿಗ್ರಹವು ದೊರೆತಿದೆ.

ನಂತರ ಗ್ರಾಮಸ್ಥರು ಆ ವಿಗ್ರಹವನ್ನು ಅಲ್ಲೆ ಪ್ರತಿಷ್ಠಾಪಿಸಿ ದೇವಾಲಯವನ್ನು ನಿರ್ಮಿಸಿದರು. ದೇವರ ಹೆಸರಿನಲ್ಲಿ ಬಸವ ಬಿಡುತ್ತ ಪ್ರತಿವರ್ಷವು ಜಾತ್ರಾಮಹೋತ್ಸವವು ವಿಜೃಂಭಣೆಯಿಂದ ನಡೆಸಿಕೊಂಡು ಬರಲಾಗುತ್ತಿದೆ. ಈ ದೇವರಿಗೆ ಬೋರದೇವರೆಂಬ ಮತ್ತೂಂದು ಹೆಸರು.

ಕಾಲ ಭೈರವ: ಪರಮಶಿವನ ಸಂಹಾರಿ ಗಣಗಳಾದ ಕಾಲ ಭೈರವ, ಅಸಿತಾಂಗ ಭೈರವ, ಸಂಹಾರ ಭೈರವ, ರುರು ಭೈರವ, ಕ್ರೋಧ ಭೈರವ, ಕಪಾಲ ಭೈರವ, ರುದ್ರ ಭೈರವ ಹಾಗೂ ಉನ್ಮತ್ತ ಭೈರವ. ಈ ಪೈಕಿ ಅತ್ಯಂತ ಬಲಿಷ್ಠ ಹಾಗೂ ದುಷ್ಟರ ಪಾಲಿನ ಸಿಂಹಸ್ವಪ್ನನಾದ ಕಾಲಭೈರವ ಇಲ್ಲಿ ನೆಲೆಸಿದ್ದಾನೆ

English summary
Chikkarasinakere is renowned for the holy bull of the Bhairaveshwara Temple. Devotees of this bull believe that it cures illness, settles disputes, identifies thieves from among suspects. But, Holy bull needs rest in off season reports Malenadiga
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X