Get Updates
Get notified of breaking news, exclusive insights, and must-see stories!

ಐರೋಪ್ಯ ಪ್ರಭಾವದಿಂದ ಮನ್ನಣೆ ವಂಚಿತ ಸಾಹಿತ್ಯದೈತ್ಯಕಾರಂತ-ಅನಂತಮೂರ್ತಿ

Shivram Karanth didnt get prominance like Tagore : Dr.U.R.Ananthamurthy ಬೆಂಗಳೂರು : ಸ್ವಾತಂತ್ರ್ಯಕ್ಕೆ ಮುಂಚೆ ರವೀಂದ್ರನಾಥ ಟ್ಯಾಗೋರ್‌ ಸಾಹಿತ್ಯ ಪುರುಷ. ಸ್ವಾತಂತ್ರ್ಯಾ ನಂತರ ಡಾ.ಶಿವರಾಮ ಕಾರಂತರು ಸಾಹಿತ್ಯದಲ್ಲಿ ದೈತ್ಯ ಶಕ್ತಿಯಾಗಿ ಬೆಳೆದರು. ಐರೋಪ್ಯ ಚಿಂತನೆಯ ಪ್ರಭಾವ ಹೆಚ್ಚಾದ್ದರಿಂದ ಟ್ಯಾಗೋರರಿಗೆ ಸಿಕ್ಕ ಮನ್ನಣೆ ಕಾರಂತರಿಗೆ ಸಿಗಲಿಲ್ಲ.

ತುಮಕೂರಿನಲ್ಲಿ ನಡೆಯಲಿರುವ 69ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷ ಯು.ಆರ್‌.ಅನಂತಮೂರ್ತಿ ದಕ್ಷಿಣ ಕನ್ನಡದವರನ್ನು ಉದಾಹರಣೆಯಾಂದಿಗೆ ಶ್ಲಾಘಿಸಿದ್ದು ಹೀಗೆ. ಸಂದರ್ಭ- ದಕ್ಷಿಣ ಕನ್ನಡಿಗರ ಸಂಘ ಚಿತ್ರಕಲಾ ಪರಿಷತ್‌ನಲ್ಲಿ ಭಾನುವಾರ ಏರ್ಪಡಿಸಿದ್ದ ಪರಶುರಾಮ ಪ್ರಶಸ್ತಿ ಪ್ರದಾನ ಸಮಾರಂಭ. ನಟಿ ಜಯಮಾಲಾ, ಸಾಹಿತಿ ನಾ.ಮೊಗಸಾಲೆ, ಪ್ರೀಡಾಪಟು ಆಶೀಶ್‌ ಬಲ್ಲಾಳ್‌, ಲೇಖಕಿ ಗಾಯತ್ರಿ ನಾವಡ ಸೇರಿದಂತೆ 14 ಮಂದಿಗೆ ಪ್ರಶಸ್ತಿ ನೀಡಿ, ಗೌರವಿಸಲಾಯಿತು.

ಎಲ್ಲೆಡೆಗೂ ಸಂದ ದಕ್ಷಿಣ ಕನ್ನಡದವರು : ಸಮಾರಂಭದಲ್ಲಿ ಉದ್ಘಾಟನಾ ಭಾಷಣ ಮಾಡಿದ ಅನಂತಮೂರ್ತಿ, ಬೆಳೆಯುವವರಿಗೆ ಮುಂಬಯಿ ಸಾಕಷ್ಟು ಅವಕಾಶ ಕೊಡುತ್ತದೆ. ಅದನ್ನು ಸದುಪಯೋಗ ಮಾಡಿಕೊಂಡವರು ಕರಾವಳಿ ಜನ. ತಾವೂ ಬೆಳೆದು ಜಿಲ್ಲೆಯ ಸಂಸ್ಕೃತಿಯನ್ನೂ ಬೆಳೆಸುತ್ತಿರುವ ಹೆಮ್ಮೆಯ ಜನ ಇವರು. ರಾಷ್ಟ್ರದಲ್ಲಿ ಕೇರಳ ರಾಜ್ಯದವರನ್ನು ಬಿಟ್ಟರೆ ಇಡೀ ಜನಾಂಗವೇ ಬೇರೆ ಜಾಗಕ್ಕೆ ಹೋಗಿ, ವಿದ್ಯಾವಂತರಾಗಿ, ತಮ್ಮ ಕಾಲ ಮೇಲೆ ನಿಂತವರೆಂದರೆ ದಕ್ಷಿಣ ಕನ್ನಡದವರು ಮಾತ್ರ ಎಂದು ಹೊಗಳಿದರು.

ದಕ್ಷಿಣ ಕನ್ನಡ ಜನ ಅನುಭವಿಸಿದ ಒಳ ಒತ್ತಡವೇ ಅವರಿಗೆ ಸಾಹಸದ ದಾರಿಯಾಯಿತು. ಹೀಗಾಗಿ ಇಡೀ ಜಿಲ್ಲೆಯೇ ಮೇಲೆ ಬಂತು. ಈ ಜಿಲ್ಲೆಯ ಎಲ್ಲ ಜಾತಿಯ ಜನರಲ್ಲಿ ಈಗ ಬುದ್ಧಿವಂತರಿದ್ದಾರೆ. ಕೊಂಕಣಿ, ತುಳು ಹಾಗೂ ಕನ್ನಡ ಭಾಷೆಗಳು ಒಟ್ಟಾಗಿ ಬೆಳೆದಿವೆ ಎಂದರು.

ಅನ್ನ ವಿಕ್ರಯ ಮಾಡಬೇಡ : ತಮ್ಮ ಆಗಿನ ದಿನಗಳನ್ನು ಅನಂತಮೂರ್ತಿ ನೆನಪಿಸಿಕೊಂಡದ್ದು ಹೀಗೆ- ನಾನಂತೂ ಯಾವುದೇ ಕಾರಣಕ್ಕೂ ಹೊಟೇಲ್‌ ಇಡಕೂಡದು ಅಂತ ತೀರ್ಮಾನಿಸಿದ್ದೆ. ಕಷ್ಟಪಟ್ಟು ಓದುವುದೊಂದೇ ಅದಕ್ಕೆ ಮಾರ್ಗ ಎನ್ನುವುದನ್ನೂ ಕಂಡುಕೊಂಡಿದ್ದೆ. ಇದಕ್ಕೆ ಇಂಬಾಗಿ ನನ್ನ ತಾತ, ಯಾವುದೇ ಕಾರಣಕ್ಕೂ ಅನ್ನ ವಿಕ್ರಯ ಮಾಡಬೇಡ ಎಂದು ಹೇಳುತ್ತಿದ್ದರು.

ಪುನರೂರು ಟೀಕಾ ಪ್ರಹಾರ : ಡಾ.ಅನಂತ ಮೂರ್ತಿಯವರ ಸೃಜನಶೀಲತೆ, ಪಾಂಡಿತ್ಯಕ್ಕೆ ತುಮಕೂರಿನಲ್ಲಿ ನಡೆಯಲಿರುವ 60ನೇ ಅಖಿಲ ಭಾರತ ಸಮ್ಮೇಳನದ ಅಧ್ಯಕ್ಷ ಸ್ಥಾನ ಸಿಕ್ಕಿದೆ. ಬೇರೆಯವರು ಬೆಳೆಯುವುದನ್ನು ಸಹಿಸದ ಕೆಲವರು ತಡವಾಗಿ ಎಚ್ಚೆತ್ತುಕೊಂಡಿದ್ದಾರೆ. ಅಂಥವರ ಮಾತುಗಳ ಬಗೆಗೆ ಯೋಚನೆ ಮಾಡುವ ಅವಶ್ಯಕತೆ ಇಲ್ಲ ಎಂದು ಸಾಹಿತ್ಯ ಪರಿಷತ್‌ ಅಧ್ಯಕ್ಷ ಹರಿಕೃಷ್ಣ ಪುನರೂರು ಅನಂತಮೂರ್ತಿಯವರ ವಿರುದ್ಧ ದನಿಯೆತ್ತಿರುವವರಿಗೆ ಟೀಕಾ ಪ್ರಹಾರ ಮಾಡಿದರು.

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು


More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+