30 ವರ್ಷದ ಹಿಂದೆ ಭಿಕ್ಷೆ ಬೇಡ್ತಿದ್ರೂ ನ್ಯೂಜಿಲೆಂಡ್ ಗೆ ಹೇಗ್ ಹೋದ್ರು ಮೋದಿ?ಆಗ ಪರಿಸ್ಥಿತಿ ಅಷ್ಟೊಂದ್ ಚನ್ನಾಗಿತ್ತಾ?
ಪ್ರಧಾನಿ ನರೇಂದ್ರ ಮೋದಿ ಅವರು ನ್ಯೂಜಿಲೆಂಡ್ ಪ್ರವಾಸದ ಬಗ್ಗೆ ಮಾಡಿದ ಒಂದು ನೆನಪಿನ ಹೇಳಿಕೆ ಇದೀಗ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಸುಮಾರು 30 ವರ್ಷಗಳ ಹಿಂದೆ ತಾವು ನ್ಯೂಜಿಲೆಂಡ್‌ಗೆ ಭೇಟಿ ನೀಡಿದ್ದಾಗ, ತಮ್ಮನ್ನು ಯಾರೂ ಗುರುತಿಸುತ್ತಿರಲಿಲ್ಲ ಮತ್ತು ಅಲ್ಲಿ ಒಬ್ಬ ಸ್ನೇಹಿತರಿಂದ ಮಫ್ಲರ್, ಟೋಪಿ ಹಾಗೂ ಕೈಗವಸುಗಳನ್ನು ಉಡುಗೊರೆಯಾಗಿ ಪಡೆದಿದ್ದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಈ ಹೇಳಿಕೆಯ ನಂತರ ಕಾಂಗ್ರೆಸ್ ಬೆಂಬಲಿಗರು ಹಾಗೂ ಹಲವು ಸಾಮಾಜಿಕ ಜಾಲತಾಣ ಬಳಕೆದಾರರು, ಪ್ರಧಾನಿ ಮೋದಿ ಈ ಹಿಂದೆ ತಮ್ಮ ಜೀವನದ ಕುರಿತು ನೀಡಿದ್ದ ಹೇಳಿಕೆಗಳನ್ನು ಉಲ್ಲೇಖಿಸಿ ವ್ಯಂಗ್ಯಾತ್ಮಕ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ. ಈ ವಿಚಾರ ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
Video Published On: Monday, Jul 13, 2026, 03:51 [IST]


Click it and Unblock the Notifications