ಯಲಹಂಕ-ಎರ್ನಾಕುಲಂ ವಿಶೇಷ ರೈಲು ಸೇವೆ ವಿಸ್ತರಣೆ- ಸಮಯ, ದಿನಾಂಕಗಳ ವಿವರ ತಿಳಿಯಿರಿ

Special Train: ಪ್ರಯಾಣಿಕರ ದಟ್ಟಣೆ ನಿಯಂತ್ರಿಸಲು ರೈಲ್ವೇ ಇಲಾಖೆ ವಿಶೇಷ ರೈಲುಗಳನ್ನು ಬಿಡುತ್ತಲೇ ಬಂದಿದೆ. ಇನ್ನೂ ಇದೀಗ ಗಣೇಶ ಹಬ್ಬ ಹಿನ್ನೆಲೆ ಊರಿಗೆ ಹೊರಡುವ ಹಾಗೂ ಹಬ್ಬ ಮುಗಿದ ಬಳಿಕ ಮತ್ತೆ ಬೆಂಗಳೂರಿಗೆ ವಾಪಸ್‌ ಆಗುವವರ ಸಂಖ್ಯೆ ಸಾಮಾನ್ಯ ದಿನಗಳಿಗಿಂತಲೂ ಹೆಚ್ಚಿರುತ್ತದೆ. ಆದ್ದರಿಂದ ವಿಶೇಷ ರೈಲು ಸೇವೆಯನ್ನು ವಿಸ್ತರಣೆ ಮಾಡಿದೆ. ಮಾಹಿತಿ ಇಲ್ಲಿದೆ ತಿಳಿಯಿರಿ.

ಎರ್ನಾಕುಲಂ-ಯಲಹಂಕ ನಡುವೆ ವಾರಕ್ಕೆ 3 ದಿನ ಸಂಚರಿಸುತ್ತಿದ್ದ ವಿಶೇಷ ರೈಲ ಸೇವೆಯನ್ನು ಸೆಪ್ಟೆಂಬರ್ 19ರ ವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ. ಸೆಪ್ಟೆಂಬರ್ 7ರ ವರೆಗೆ ರೈಲು ಸಂಚರಿಸಲಿದೆ ಎಂದು ಈ ಹಿಂದೆ ತಿಳಿಸಿತ್ತು. ಇದೀಗ ಮತ್ತೆ ಪ್ರಯಾಣಿಕರ ದಟ್ಟಣೆ ನಿಯಂತ್ರಿಸಿದಲು ಈ ಸೇವೆಯನ್ನು ವಿಸ್ತರಣೆ ಮಾಡಿದೆ.

Yelahanka-Ernakulam Special Train Service Extension Know details

ರೈಲುಗಳ ವಿವರ ಇಲ್ಲಿದೆ: ರೈಲು ಸಂಖ್ಯೆ 06101/06102 ಎರ್ನಾಕುಲಂ ಯಲಹಂಕ ಎರ್ನಾಕುಲಂ ಗರೀಬ್ ರಥ್ ಸೂಪರ್‌ ​ಫಾಸ್ಟ್ ವೀಕ್ಲಿ ಎಕ್ಸ್​​ಪ್ರೆಸ್​​ ರೈಲಿನ ಸೇವೆಯನ್ನು ವಿಸ್ತರಣೆ ಮಾಡಲಾಗಿದೆ ಎಂದು ಟ್ವೀಟ್‌ ಮೂಲಕ ಭಾರತೀಯ ರೈಲ್ವೆ ಮಾಹಿತಿ ನೀಡಿದೆ.

ದಿನಾಂಕಗಳ ವಿವರ: ಎರ್ನಾಕುಲಂ ಯಲಹಂಕ ಗರೀಬ್ ರಥ್ ಸೂಪರ್‌ ​ಫಾಸ್ಟ್ ಎಕ್ಸ್‌ಪ್ರೆಸ್‌ ಸೆಪ್ಟೆಂಬರ್ 8, 11, 13, 15 ಹಾಗೂ 18ರಂದು ಸಂಚರಿಸಲಿದೆ. ಯಲಹಂಕ ಎರ್ನಾಕುಲಂ ಗರೀಬ್ ರಥ್ ಸೂಪರ್‌ ಪಾಸ್ಟ್‌ ಎಕ್ಸ್‌ಪ್ರೆಸ್ ಸೆಪ್ಟೆಂಬರ್ 9, 12, 14, 16, 19ರಂದು ಓಡಲಿದೆ ಎಂದು ಟ್ವೀಟ್‌ನಲ್ಲಿ ತಿಳಿಸಿದೆ.

ಗಣೇಶ ಹಬ್ಬದ ಶುಭಾಶಯ ಕೋರಿದ ರೈಲ್ವೆ ಇಲಾಖೆ: ಅಷ್ಟೇ ಅಲ್ಲದೆ, ನೈರುತ್ಯ ರೈಲ್ವೆಯು ಟ್ವೀಟ್‌ ಮೂಲಕ ಎಲ್ಲರಿಗೂ ಗಣೇಶ ಚತುರ್ಥಿ ಹಬ್ಬದ ಶುಭಾಶಯಗಳು. ಗಣೇಶನು ನಿಮ್ಮ ಮನೆಯಲ್ಲಿ ಸಂತೋಷ ಮತ್ತು ಅದೃಷ್ಟವನ್ನು ತುಂಬಲಿ ಎಂದು ಶುಭಾಶಯ ಕೋರಿದೆ.

ಇನ್ನು ಗಣೇಶ ಚತುರ್ಥಿ, ದಸರಾ ಹಾಗೂ ದೀಪಾವಳಿ ಹಬ್ಬಗಳು ಮತ್ತು ಸಾಲು ರಜೆಗಳನಗಳನ್ನು ಗಮನದಲ್ಲಿಟ್ಟುಕೊಂಡು ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ನೈಋತ್ಯ ರೈಲ್ವೆ ಕರ್ನಾಟಕದ ವಿವಿಧ ಸ್ಥಳಗಳಿಗೆ 22 ವಿಶೇಷ ರೈಲುಗಳನ್ನು ಕೆಲವು ದಿನಗಳ ಹಿಂದಷ್ಟೇ ಘೋಷಣೆ ಮಾಡಿತ್ತು. ಹೀಗೆ ಹಬ್ಬಗಳ ಸಂದರ್ಭಗಳಲ್ಲಿ, ದೀರ್ಘ ರಜೆ ಸಮಯದಲ್ಲಿ ಭಾರತೀಯ ರೈಲ್ವೆಯೂ ಪ್ರಯಾಣಕರ ಅನುಕೂಲಕ್ಕೆ ತಕ್ಕಂತೆ ವಿಶೇಷ ರೈಲುಗಳ ಸೇವೆಯನ್ನು ನೀಡುತ್ತಲೇ ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+