Wax Museum: ಮೈಸೂರಲ್ಲಿರುವ ವ್ಯಾಕ್ಸ್ ಮ್ಯೂಸಿಯಂ ನೋಡಿದ್ದೀರಾ?
ಮೈಸೂರು, ಏಪ್ರಿಲ್ 30 : ರಣಬಿಸಿಲು ಇನ್ನಿಲ್ಲದಂತೆ ಕಾಡುತ್ತಿದೆ. ಈ ಬಿಸಿಲಿಗೆ ಹೊರಗೆ ಹೋಗುವುದೇ ಕಷ್ಟವಾಗಿರುವುದರಿಂದ ಹೆಚ್ಚಿನವರು ಮನೆಯಿಂದ ಆಚೆ ಹೋಗಲು ಇಷ್ಟಪಡುತ್ತಿಲ್ಲ. ಅದರಲ್ಲೂ ಟ್ರಿಪ್ ಹೋಗುವವರಂತೂ ಸೆಖೆಗೆ ಹಿಂದೇಟು ಹಾಕುತ್ತಿದ್ದಾರೆ. ಎಲ್ಲೆಲ್ಲೂ ಬಿಸಿಲ ಝಳವಿರುವ ಕಾರಣದಿಂದಾಗಿ ಎಲ್ಲಿಗೂ ಹೋಗುವುದೇ ಬೇಡವೆಂಬ ತೀರ್ಮಾನಕ್ಕೆ ಹೆಚ್ಚಿನವರು ಬಂದಿದ್ದಾರೆ. ಆದರೂ ದೂರದವರು ಮೈಸೂರಿನತ್ತ ಮುಖ ಮಾಡಿ ಇಲ್ಲಿನ ಪ್ರವಾಸಿ ತಾಣಗಳಿಗೆ ತೆರಳುತ್ತಿರುವುದು ಕಂಡು ಬರುತ್ತಿದೆ.
ಮೈಸೂರಿಗೆ ಬಂದವರು ಸಾಮಾನ್ಯವಾಗಿ ಮೃಗಾಲಯ, ಅರಮನೆ, ಚಾಮುಂಡಿಬೆಟ್ಟ ಮೊದಲಾದ ಪ್ರವಾಸಿ ತಾಣಗಳಿಗೆ ತೆರಳಿ ಹಿಂತಿರುಗುತ್ತಾರೆ. ಆದರೆ ಹೆಚ್ಚಿನವರಿಗೆ ಮೈಸೂರು ನಗರದಲ್ಲೊಂದು ಹತ್ತು ಹಲವು ವಿಶೇಷತೆಗಳಿಂದ ಕೂಡಿದ ವ್ಯಾಕ್ಸ್ ಮ್ಯೂಸಿಯಂ ಇದೆ ಎನ್ನುವುದೇ ಗೊತ್ತಿಲ್ಲ. ಒಂದು ವೇಳೆ ಈ ಮ್ಯೂಸಿಯಂಗೆ ಹೋದವರಿಗೆ ಇಲ್ಲಿ ಕಳೆದ ನೆನಪುಗಳು ಚಿರಾಯುವಾಗಿರುವುದಂತು ನಿಜ.

ಹಾಗಾದರೆ ಮೈಸೂರಿನಲ್ಲಿರುವ ವ್ಯಾಕ್ಸ್ ಮ್ಯೂಸಿಯಂ ಯಾವುದು ಮತ್ತು ಎಲ್ಲಿದೆ? ಅದರ ವಿಶೇಷತೆಗಳೇನು ಎಂಬ ಕುತೂಹಲ ಬಂದೇ ಬರುತ್ತದೆ. ವ್ಯಾಕ್ಸ್ ಮ್ಯೂಸಿಯಂ ಬಗ್ಗೆ ಹೇಳಬೇಕೆಂದರೆ ಇಲ್ಲಿ ಮೇಣದಿಂದ ನಿರ್ಮಾಣ ಮಾಡಿರುವ ಪ್ರತಿಮೆಗಳನ್ನು ನೋಡುವುದಕ್ಕಿಂತ ಹೆಚ್ಚಾಗಿ ಜನರು ಅದರೊಂದಿಗೆ ಸೆಲ್ಫಿ ತೆಗೆದುಕೊಳ್ಳುವುದೇ ಜಾಸ್ತಿ.
ಕಲಾವಿದ ಉಮೇಶ್ ಶೆಟ್ಟಿಯವರ ಕಲ್ಪನೆ
ಇದರ ಹೆಸರು ಚಾಮುಂಡೇಶ್ವರಿ ಸೆಲೆಬ್ರಿಟಿ ವ್ಯಾಕ್ಸ್ ಮ್ಯೂಸಿಯಂ. ಇದು ನಗರದಿಂದ ಸ್ವಲ್ಪ ದೂರದಲ್ಲಿ ಅಂದರೆ ನಗರದ ರೇಸ್‌ಕೋರ್ಸ್ ಹಿಂಭಾಗದಲ್ಲಿದೆ. ಈ ಮ್ಯೂಸಿಯಂ ಹಲವು ವಿಶೇಷತೆಗಳನ್ನು ತನ್ನೊಳಗೆ ಹುದುಗಿಸಿಕೊಂಡು ಸೆಲ್ಫಿ ಪ್ರಿಯರನ್ನು ಕರೆಯುತ್ತದೆ. ಈ ಮ್ಯೂಸಿಯಂನ ರೂವಾರಿ ಹೊನ್ನಾವರದವರಾದ ಕಲಾವಿದ, ಕಲಾ ಶಿಕ್ಷಕ ಉಮೇಶ್ ಶೆಟ್ಟಿಯವರರಾಗಿದ್ದು, ಇವರೊಂದಿಗೆ ಇನ್ನೂ ಏಳುಮಂದಿ ಸಾಥ್ ನೀಡಿದ್ದು, ಉಮೇಶ್ ಶೆಟ್ಟಿಯವರ ಕಲ್ಪನೆ, ಕನಸು, ಪ್ರತಿಭೆ, ಶ್ರಮ ಎಲ್ಲವೂ ಸೇರಿ ಇಲ್ಲಿ ವ್ಯಾಕ್ಸ್ ಮ್ಯೂಸಿಯಂ ಆಗಿ ರೂಪತಾಳಿದೆ.
ಚಾಮುಂಡೇಶ್ವರಿ ಸೆಲೆಬ್ರಿಟಿ ವ್ಯಾಕ್ಸ್ ಮ್ಯೂಸಿಯಂ ನಿರ್ಮಾಣಕ್ಕೆ ಲಂಡನ್ನ ವ್ಯಾಕ್ಸ್ ಮ್ಯೂಸಿಯಂ ಸ್ಫೂರ್ತಿಯಂತೆ. ಬಹಳಷ್ಟು ವರ್ಷಗಳಿಂದ ಕರ್ನಾಟಕದಲ್ಲಿಯೂ ವ್ಯಾಕ್ಸ್ ಮ್ಯೂಸಿಯಂ ಮಾಡಬೇಕೆನ್ನುವ ಅವರ ಕನಸಿಗೆ ಮತ್ತು ಎಲ್ಲಿ ಮಾಡಿದರೆ ಸೂಕ್ತ ಎನ್ನುವ ಆಲೋಚನೆ ಬಂದಾಗ ನೆನಪಾಗಿದ್ದೇ ಮೈಸೂರು. ಇಲ್ಲಿಯ ವಾತಾವರಣ ಮತ್ತು ಪ್ರವಾಸಿಗರು ಬರುವ ಸ್ಥಳವಾಗಿರುವುದರಿಂದ ತಮ್ಮ ಶ್ರಮಕ್ಕೂ ಸಾರ್ಥಕತೆ ಸಿಗುತ್ತದೆ ಎಂದು ಆಲೋಚಿಸಿ ಮ್ಯೂಸಿಯಂ ನಿರ್ಮಾಣ ಮಾಡಿದ್ದಾರೆ.

ಹಲವು ಸೆಲೆಬ್ರಿಟಿಗಳ ಪ್ರತಿಮೆ ಇಲ್ಲಿವೆ
ಈ ಮ್ಯೂಸಿಯಂನಲ್ಲಿ ಹಲವು ಸೆಲಿಬ್ರಿಟಿಗಳ ಮೇಣದ ಪ್ರತಿಕೃತಿಯಿದ್ದು, ಪ್ರಶಾಂತ ಸ್ಥಳದಲ್ಲಿ ಸುಮಾರು ಆರು ಸಾವಿರ ಚದರ ಅಡಿ ಪ್ರದೇಶದಲ್ಲಿ ಮ್ಯೂಸಿಯಂನ್ನು ನಿರ್ಮಾಣ ಮಾಡಲಾಗಿದೆ. ಇಲ್ಲಿರುವ ಮಹಾನ್ ನಾಯಕರ ಪ್ರತಿಮೆಗಳು ಅದ್ಭುತವಾಗಿ ಮೂಡಿ ಬಂದಿವೆ.
ನಾವು ಮ್ಯೂಸಿಯಂಗೆ ಕಾಲಿಡುತ್ತಿದ್ದಂತೆಯೇ ಮೊದಲಿಗೆ ನಮ್ಮನ್ನು ಸೆಳೆಯುವುದು ಸರ್.ಎಂ. ವಿಶ್ವೇಶ್ವರಯ್ಯನವರ ಪ್ರತಿಮೆ. ಮೈಸೂರು ಸಂಸ್ಥಾನದ ದಿವಾನರಾಗಿ, ಕೆಆರ್‌ಎಸ್ ಜಲಾಶಯದ ನಿರ್ಮಾಣಕ್ಕೆ ಕಾರಣರಾದ ಅವರಿಗೆ ನಮಿಸಿ ಮುನ್ನಡೆದರೆ ಪ್ರಧಾನ ಮಂತ್ರಿಗಳಿಂದ ಆರಂಭವಾಗಿ ಮಿಸ್ಟರ್ ಬೀನ್ ತನಕ ಹಲವು ಸೆಲೆಬ್ರಿಟಿಗಳು ನಮ್ಮ ಗಮನಸೆಳೆಯುತ್ತಾರೆ.
ಬಿಸಿಲಿಗೆ ಪ್ರತಿಮೆ ಕಾಪಾಡಿಕೊಳ್ಳುವುದೇ ಸವಾಲ್
ಇಲ್ಲಿ ಐದು ಅಡಿ ಎತ್ತರದ ಮದರ್ ತೆರೇಸಾ ರಿಂದ ಆರಂಭವಾಗಿ 7.2 ಅಡಿ ಎತ್ತರದ ಅಜಾನುಬಾಹು ಗ್ರೇಟ್ ಕಲಿವರೆಗೆ ದೇಶ ವಿದೇಶಗಳ ಮಹಾನ್ ವ್ಯಕ್ತಿಗಳು ನಮ್ಮನ್ನತ್ತ ಸೆಳೆಯುತ್ತಾರೆ. ರಾಘವೇಂದ್ರ ಸ್ವಾಮಿ, ಸಾಯಿಬಾಬಾ, ಸ್ವಾಮಿ ವಿವೇಕಾನಂದ, ಗುರುನಾನಕ್, ಅಡಾಲ್ಫ್ ಹಿಟ್ಲರ್, ಮೈಕೆಲ್ ಜಾನ್ಸನ್, ಮಹಾತ್ಮ ಗಾಂಧಿ, ರವೀಂದ್ರನಾಥ್ ಟ್ಯಾಗೂರ್, ಭಗತ್ ಸಿಂಗ್, ಮೊನಲಿಸಾ, ಕಲ್ಪನಾಚಾವ್ಲಾ ಪ್ರಧಾನಿ ನರೇಂದ್ರ ಮೋದಿ, ರಾಜಕೀಯ ಚಾಣಕ್ಯ ಅಮಿತ್ ಶಾ ಹೀಗೆ ಹಲವರು ನಮ್ಮ ಮುಂದೆ ಹಾದು ಹೋದಂತೆ, ನಮ್ಮ ಮುಂದೆಯೇ ಬಂದು ನಿಂತಂತೆ ಭಾಸವಾಗುತ್ತದೆ.

ಇದೀಗ ಬೇಸಿಗೆಯ ಬಿಸಿಲ ಧಗೆ ಇನ್ನಿಲ್ಲದಂತೆ ಕಾಡುತ್ತಿದ್ದು, ಮೇಣದಿಂದ ತಯಾರಿಸಲಾದ ಪ್ರತಿಮೆಗಳನ್ನು ಕಾಪಾಡಿಕೊಳ್ಳುವುದು ಕೂಡ ಕಷ್ಟವಾಗಿದೆ ಹವಾನಿಯಂತ್ರಿತ ವ್ಯವಸ್ಥೆ ಮಾಡುವ ಮೂಲಕ ಕಾಪಾಡಿಕೊಳ್ಳುವ ಕೆಲಸವನ್ನು ಮಾಡಲಾಗುತ್ತಿದೆ. ಇದು ಸುಲಭದ ಕೆಲಸವಲ್ಲ ಆದರೂ ರಕ್ಷಿಸುವ ಕೆಲಸವನ್ನು ಮಾಡಲಾಗುತ್ತಿದೆ.
-
ಸಿನಿಮಾ ಕಥೆಗೆ ವಿರುದ್ಧವಾಗಿ ಕುಂಭಮೇಳ ಮೊನಾಲಿಸಾ ಮದುವೆ, 10 ಕೋಟಿ ರೂ. ಸಾಲ ಮಾಡಿದ್ದೇನೆ: ನಿರ್ದೇಶಕ ಸನೋಜ್ ಮಿಶ್ರಾ ಆತಂಕ -
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral












Click it and Unblock the Notifications