ವಿಜಯಪುರ-ಮಂಗಳೂರು ರೈಲು: ಇಲಾಖೆಗೆ ಮತ್ತೊಂದು ಬೇಡಿಕೆ
ವಿಜಯಪುರ, ಮಾರ್ಚ್ 26: ಉತ್ತರ ಕರ್ನಾಟಕ ಮತ್ತು ಕರಾವಳಿ ಸಂಪರ್ಕಿಸುವ ಏಕೈಕ ರೈಲು ವಿಜಯಪುರ-ಮಂಗಳೂರು ಜಂಕ್ಷನ್ ನಡುವೆ ಪ್ರತಿದಿನ ಸಂಚಾರ ನಡೆಸುತ್ತದೆ. ಈ ವಿಶೇಷ ರೈಲಿನ ಸೇವೆಯನ್ನು 6 ತಿಂಗಳ ಕಾಲ ವಿಸ್ತರಣೆ ಮಾಡಿ ನೈಋತ್ಯ ರೈಲ್ವೆ ಆದೇಶ ಹೊರಡಿಸಿದೆ.
ಈಗ ವಿಜಯಪುರ ರೈಲ್ವೆ ಹೋರಾಟ ಸಮಿತಿ ನೈಋತ್ಯ ರೈಲ್ವೆ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರವೊಂದನ್ನು ಬರೆದಿದೆ. ರೈಲು ನಂಬರ್ 07377/ 78 ವಿಜಯಪುರ ಮಂಗಳೂರು ನಡುವಿನ ರೈಲು ಸೇವೆ ವಿಸ್ತರಣೆ ಕುರಿತು ಪತ್ರದಲ್ಲಿ ಉಲ್ಲೇಖ ಮಾಡಿದೆ.

ಬೇಡಿಕೆ ಏನು?; ಮಂಗಳೂರು-ವಿಜಯಪುರ ನಡುವೆ 3 ವರ್ಷದ ಹಿಂದೆ ಪ್ರತಿದಿನದ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಪ್ರಾರಂಭಿಸಲಾಯಿತು. ಉತ್ತರ ಕರ್ನಾಟಕದಿಂದ ಮಂಗಳೂರಿಗೆ ಸಂಚಾರ ನಡೆಸುವ ಏಕೈಕ ರೈಲು ಇದಾಗಿದೆ. ಹುಬ್ಬಳ್ಳಿಯಿಂದ ಸಹ ಮಂಗಳೂರಿಗೆ ರೈಲು ಇಲ್ಲ ಎಂದು ಹೇಳಿದೆ.
ನಿರ್ಮಾಣ ಚಟುವಟಿಕೆಗಳಲ್ಲಿ ತೊಡಗಿರುವ ಕಾರ್ಮಿಕರು. ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ ಮುಂತಾದ ದೇವಾಲಯಗಳಿಗೆ ಭೇಟಿ ನೀಡುವ ಭಕ್ತರು ಈ ರೈಲನ್ನು ಅವಲಂಬಿಸಿದ್ದಾರೆ. ಕರಾವಳಿಯ ಕಡೆ ಆರೋಗ್ಯ ಸೇವೆ ಪಡೆಯಲು ಹೋಗುವ ಜನರಿಗೂ ರೈಲು ಸಹಾಯಕವಾಗಿದೆ ಎಂದು ಪತ್ರದಲ್ಲಿ ವಿವರಿಸಿದೆ.
ನೈಋತ್ಯ ರೈಲ್ವೆ ವಿಜಯಪುರ-ಮಂಗಳೂರು ರೈಲನ್ನು 6 ತಿಂಗಳ ಕಾಲ ವಿಸ್ತರಣೆ ಮಾಡಿರುವುದನ್ನು ಸಮಿತಿ ಸ್ವಾಗತಿಸುತ್ತದೆ. ಈ ರೈಲನ್ನು ಕಾಯಂಗೊಳಿಸುವಂತೆ ಹಿಂದೆಯೇ ಇಲಾಖೆಗೆ ಪತ್ರವನ್ನು ಬರೆದಿದ್ದು, ಪ್ರಸ್ತಾವನೆ ಇನ್ನೂ ಬಾಕಿ ಇದೆ. ಈಗ ಮಂಗಳೂರಿಗೆ ರೈಲು ತಲುಪುವ ಸಮಯ ಬದಲಾವಣೆಯಾಗಿದ್ದು, ಇನ್ನಷ್ಟು ಪ್ರಯಾಣಿಕರಿಗೆ ಸಹಾಯಕವಾಗಲಿದೆ.
@SWRRLY @AshwiniVaishnaw dear sir we express our sincere gratitude for extending the services of T no 07377/78 Vijayapur-MANGALURU train for 6 months with change in dep time from BJP. kindly request you to convert this train as regular train. @KARailway @dkdistrictrail pic.twitter.com/7wr6S7fIWH
— Vijayapur Railway Horat Samiti (@horat_samiti) March 25, 2024
(ಬಿಜಾಪುರ)-ಮಂಗಳೂರು ಜಂಕ್ಷನ್ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಮಂಗಳೂರು ಸೆಂಟ್ರಲ್ ತನಕ ಲೋಸಕಭೆ ಚುನಾವಣೆ ಮುಗಿದ ಬಳಿಕ ವಿಸ್ತರಣೆ ಮಾಡಬೇಕು ಎಂದು ಮನವಿ ಮಾಡಲಾಗಿದೆ. ರೈಲನ್ನು ಕಾಯಂಗೊಳಿಸಬೇಕು, ಮಂಗಳೂರು ಸೆಂಟ್ರಲ್ ತನಕ ವಿಸ್ತರಣೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.
ವಿಜಯಪುರ-ಮಂಗಳೂರು ರೈಲನ್ನು ವಿಸ್ತರಣೆ ಮಾಡಿ, ರೈಲು ಮಂಗಳೂರು ತಲುಪುವ ಸಮಯ ಪರಿಷ್ಕರಣೆ ಮಾಡಿ ನೈಋತ್ಯ ರೈಲ್ವೆ ಆದೇಶವನ್ನು ಹೊರಡಿಸಿದೆ. ಈ ಪರಿಷ್ಕೃತ ವೇಳಾಪಟ್ಟಿ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ.
ಹೊಸ ಆದೇಶದಂತೆ ರೈಲು ನಂಬರ್ 07377 ವಿಜಯಪುರ-ಮಂಗಳೂರು ಜಂಕ್ಷನ್ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು 1/4/2024 ರಿಂದ 30/9/2024ರ ತನಕ ವಿಸ್ತರಣೆ ಮಾಡಲಾಗಿದೆ. ರೈಲು ನಂಬರ್ 07378 ಮಂಗಳೂರು ಜಂಕ್ಷನ್-ವಿಜಯಪುರ ರೈಲನ್ನು 2/4/2024 ರಿಂದ 1/10/2024ರ ತನಕ ವಿಸ್ತರಣೆ ಮಾಡಲಾಗಿದೆ.
ಆದರೆ ಈಗಿರುವ ನಿಲ್ದಾಣ, ಬೋಗಿಗಳ ಸಂಯೋಜನೆ, ದರಗಳಲ್ಲಿ ಯಾವುದೇ ಬದಲಾವಣೆ ಇಲ್ಲದಂತೆ ರೈಲು ಸೇವೆಯನ್ನು ವಿಸ್ತರಣೆ ಮಾಡಲಾಗಿದೆ. ಈ ರೈಲನ್ನು ಕಾಯಂಗೊಳಿಸುವ, ಮಂಗಳೂರು ಸೆಂಟ್ರಲ್ ತನಕ ವಿಸ್ತರಣೆ ಮಾಡುವ ಬೇಡಿಕೆ ಬಗ್ಗೆ ಯಾವುದೇ ಆದೇಶವನ್ನು ಹೊರಡಿಸಿಲ್ಲ.
ವಿಜಯಪುರ-ಮಂಗಳೂರು ಜಂಕ್ಷನ್ ರೈಲನ್ನು ಏಪ್ರಿಲ್ 1ರಿಂದ ಮಂಗಳೂರು ಸೆಂಟ್ರಲ್ ತನಕ ವಿಸ್ತರಣೆ ಮಾಡಲು ಈ ಹಿಂದೆ ಪಾಲಕ್ಕಾಡ್ ರೈಲ್ವೆ ಬಳಕೆದಾರರ ಸಭೆಯಲ್ಲಿ ಅಧಿಕಾರಿಗಳು ಒಪ್ಪಿಗೆ ನೀಡಿದ್ದರು. ಆದರೆ ಹೊಸ ಆದೇಶದಲ್ಲಿ ರೈಲು ಮಂಗಳೂರು ಜಂಕ್ಷನ್ ತನಕ ಮಾತ್ರ ಸಂಚಾರ ನಡೆಸಲಿದೆ ಎಂದು ಉಲ್ಲೇಖ ಮಾಡಲಾಗಿದೆ.












Click it and Unblock the Notifications