Memu Train: ತುಮಕೂರು-ಯಶವಂತಪುರ ಮೆಮು ರೈಲಿಗೆ ಚಾಲನೆ- ಸಮಯಗಳ ವಿವರ ತಿಳಿಯಿರಿ
Memu Train: ಬಹುನಿರೀಕ್ಷಿತ ತುಮಕೂರು-ಯಶವಂತಪುರ ಮೆಮು ರೈಲಿಗೆ ಇಂದು (ಸೆಪ್ಟೆಂಬರ್ 27) ತುಮಕೂರಿನ ರೈಲು ನಿಲ್ದಾಣದಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಚಾಲನೆ ನೀಡಿದರು. ಹಾಗಾದರೆ ಈ ರೈಲಿನ ಸಮಯ, ಸಂಚಾರ ಮಾರ್ಗಗಗಳ ಸಂಪೂರ್ಭ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಈ ಮೆಮು ರೈಲು ತುಮಕೂರು ನಗರದಿಂದ ಬೆಳಗ್ಗೆ 8:45ಕ್ಕೆ ಹೊರಡಲಿದ್ದು, 10:25ಕ್ಕೆ ಯಶವಂತಪುರ ತಲುಪಲಿದೆ. ಅಲ್ಲಿಂದ ಮತ್ತೆ ಸಂಜೆ 5:45ಕ್ಕೆ ಹೊರಡಲಿದ್ದು, ರೈಲು ರಾತ್ರಿ 7:05 ಗಂಟೆಗೆ ತುಮಕೂರು ತಲುಪಲಿದೆ. ಭಾನುವಾರ ಹೊರತುಪಡಿಸಿ ಉಳಿದ ಎಲ್ಲ ದಿನ ಈ ರೈಲು ಸೇವೆಯನ್ನು ಪ್ರಯಾಣಿಕರು ಪಡೆದುಕೊಳ್ಳಬಹುದಾಗಿದೆ.

ರೈಲು ಸಂಖ್ಯೆ 06201/06202 ಸೇವೆಗಳು ಇಂದಿನಿಂದ ಅಂದರೆ ಸೆಪ್ಟೆಂಬರ್ 27ರಿಂದ ಆರಂಭವಾಗಿದೆ. ರೈಲು ಸಂಖ್ಯೆ 06201 ಭಾನುವಾರ ಹೊರತುಪಡಿಸಿ ಎಲ್ಲಾ ದಿನಗಳಲ್ಲಿ ಕಾರ್ಯನಿರ್ವಹಿಸಲಿದೆ. ಇನ್ನು ಯಶವಂತಪುರ-ತುಮಕೂರು ಮೆಮು ರೈಲು ಕ್ಯಾತ್ಸಂದ್ರ ಹಾಲ್ಟ್, ಹಿರೇಹಳ್ಳಿ, ದಾಬಾಸ್ಪೇಟೆ, ನಿಡವಂಡ, ಮುದ್ದಲಿಂಗನಹಳ್ಳಿ, ದೊಡ್ಡಬೆಲೆ, ಭೈರನಾಯಕನಹಳ್ಳಿ, ಗೊಲ್ಲಹಳ್ಳಿ, ಸೋಲದೇವನಹಳ್ಳಿ ಮತ್ತು ಚಿಕ್ಕಬಾಣಾವರಗಳಲ್ಲಿ ನಿಲುಗಡೆ ಇರಲಿದೆ.
ರೈಲು ಸಂಖ್ಯೆ 06203/06204 ಸೇವೆಗಳು ಸೆಪ್ಟೆಂಬರ್ 28ರಂದು ಯಶವಂತಪುರ ಮತ್ತು ಹೊಸೂರಿನಿಂದ ಪ್ರಾರಂಭ ಆಗುತ್ತವೆ. ರೈಲು ಸಂಖ್ಯೆ 06203 ಭಾನುವಾರ ಹೊರತುಪಡಿಸಿ ಉಳಿದ ದಿನಗಳಲ್ಲಿ ಸಂಚರಿಸಲಿವೆ. ಯಶವಂತಪುರದಿಂದ ಬೆಳಗ್ಗೆ 10.45ಕ್ಕೆ ಹೊರಟು ಮಧ್ಯಾಹ್ನ 12.30ಕ್ಕೆ ಹೊಸೂರು ತಲುಪಲಿದೆ.
ರೈಲು ಸಂಖ್ಯೆ 06204 ಭಾನುವಾರ ಹೊರತುಪಡಿಸಿ ಎಲ್ಲಾ ದಿನಗಳಲ್ಲಿ ಕಾರ್ಯನಿರ್ವಹಿಸಲಿದ್ದು, ಹೊಸೂರಿನಿಂದ ಮಧ್ಯಾಹ್ನ 3.20ಕ್ಕೆ ಹೊರಟು ಯಶವಂತಪುರಕ್ಕೆ ಸಂಜೆ 5.15ಕ್ಕೆ ತಲುಪಲಿದೆ. ಇದಕ್ಕೆ ಆನೇಕಲ್ ರಸ್ತೆ, ಹೀಲಲಿಗೆ, ಕರ್ಮೇಲರಂ, ಬೆಳ್ಳಂದೂರು ರಸ್ತೆ, ಬಾಣಸವಾಡಿ ಮತ್ತು ಹೆಬ್ಬಾಳಗಳಲ್ಲಿ ನಿಲುಗಡೆ ಇರಲಿದೆ.
ರೈಲು ಸಂಖ್ಯೆ 06205/06206 ಬಾಣಸವಾಡಿ-ತುಮಕೂರು-ಬಾಣಸವಾಡಿ ಸೇವೆಗಳು ಸೆಪ್ಟೆಂಬರ್ 28ರಂದು ತುಮಕೂರಿನಿಂದ ಮತ್ತು ಸೆಪ್ಟೆಂಬರ್ 30ರಂದು ಬಾಣಸವಾಡಿಯಿಂದ ಪ್ರಾರಂಭ ಆಗಲಿದೆ. ರೈಲು ಸಂಖ್ಯೆ 06205 ಸೋಮವಾರ ಮಾತ್ರ ಸಂಚರಿಸಲಿದ್ದು, ಬಾಣಸವಾಡಿಯಿಂದ ಬೆಳಗ್ಗೆ 6.15ಕ್ಕೆ ಹೊರಟು ತುಮಕೂರಿಗೆ 8.35ಕ್ಕೆ ತಲುಪಲಿದೆ.
ರೈಲು ಸಂಖ್ಯೆ 06206 ಶನಿವಾರ ಮಾತ್ರ ಸಂಚರ ಮಾಡಲಿದ್ದು, ತುಮಕೂರಿನಿಂದ ರಾತ್ರಿ 7.40ಕ್ಕೆ ಹೊರಟು ರಾತ್ರಿ 10.05ಕ್ಕೆ ಬಾಣಸವಾಡಿ ತಲುಪಲಿದೆ. ಇದರ ನಿಲುಗಡೆ ಹೆಬ್ಬಾಳ, ಚಿಕ್ಕಬಾಣಾವರ, ಭೈರನಾಯಕನಹಳ್ಳಿ, ಮುದ್ದಲಿಂಗನಹಳ್ಳಿ, ನಿಡವಂಡ, ದಾಬಾಸ್ಪೇಟೆ ಮತ್ತು ಕ್ಯಾತ್ಸಂದ್ರದಲ್ಲಿ ಇರಲಿದೆ ಎಂದು ತಿಳಿದುಬಂದಿದೆ.












Click it and Unblock the Notifications