Travel Guide: ಉಡುಪಿ ಜಿಲ್ಲೆಯಲ್ಲಿರುವ ಟಾಪ್ 7 ಅತ್ಯದ್ಭುತ ಬೀಚ್‌ಗಳಿವು: ಮಾಹಿತಿ ಇಲ್ಲಿದೆ
Travel Guide: ಫೆಬ್ರವರಿ ಮುಗಿತೆಂದರೆ ಸಾಕು ಬಹುತೇಕ ಮಂದಿ ಕಡಲ ತೀರದ ಕಡೆಗೆ ಪ್ರಯಾಣ ಬೆಳೆಸುವ ಯೋಜನೆಯಲ್ಲಿರುತ್ತಾರೆ. ನೀವು ಒಂದು ವೇಳೆ ಉಡುಪಿಯ ಕಡೆ ಪ್ರಯಾಣ ಬೆಳೆಸಿದ್ರೆ, ಈ ಅತ್ಯದ್ಭುತ ಟಾಪ್ 7 ಬೀಚ್‌ಗಳಿಗೆ ಭೀಟಿ ನೀಡುವುದನ್ನು ಮರೆಯಬೇಡಿ. ಇಲ್ಲಿಗೆ ಕುಟುಂಬ, ಸ್ನೇಹಿತರು ಜೊತೆಯೂ ಭೇಟಿ ನೀಡಿ ಸಮಯ ಕಳೆಯಬಹುದು. ಹಾಗಾದರೆ ಆ ಕಡಲತೀರಗಳು ಯಾವುವು ಹಾಗೂ ಮಾರ್ಗಗಳ ವಿವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಅತ್ಯದ್ಭುತ ಕಡಲತೀರಗಳು
* ಕಾಪು ಬೀಚ್
* ಮಲ್ಪೆ ಬೀಚ್
* ಸೇಂಟ್ ಮೇರಿ ದ್ವೀಪ
* ಕೋಡಿ ಬೀಚ್
* ಮರವಂತೆ ಬೀಚ್
* ಹೂಡೆ ಬೀಚ್
* ಪಡುಬಿದ್ರಿ ಬೀಚ್

1. ಕಾಪು ಕಡಲತೀರ ಮತ್ತು ದೀಪ ಸ್ಥ೦ಭ: ಕಾಪು ಕರಾವಳಿ ಕರ್ನಾಟಕದ ಕಡಲತೀರದ ಹಳ್ಳಿಯಾಗಿದ್ದು, ಶ್ರೀ ಕೃಷ್ಣನ ಊರಾದ ಉಡುಪಿಯಿಂದ 16.5 ಕಿಲೋ ಮೀಟರ್ ದೂರದಲ್ಲಿದೆ. ಇಲ್ಲಿನ ಕಡಲತೀರದ ಬಳಿ ಇರುವ ದೀಪ ಸ್ಥ೦ಭ ಕೂಡ ಬಹಳ ಜನಪ್ರಿಯವಾಗಿದೆ.
ಪ್ರವಾಸಿಗರು ಗಮನಿಸಬೇಕಾದ ಅಂಶಗಳು: ಹತ್ತಿರದ ಇತರ ಕಡಲತೀರಗಳಾದ ಮಲ್ಪೆ ಬೀಚ್ ಅಥವಾ ಸುರತ್ಕಲ್ ಬೀಚ್‌ಗಳಿಗೆ ಹೋಲಿಸಿದರೆ ಇಲ್ಲಿ ಜನಸಂದಣಿ ಕಡಿಮೆ. ಆದ್ದರಿಂದ ಕಾಪು ಕಡಲತೀರ ಜನಪ್ರಿಯವಾಗಿದೆ. ಇನ್ನು ದೀಪ ಸ್ಥ೦ಭದ ಬಳಿ ಇರುವ ಬಂಡೆಗಳು ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿವೆ. ಕಡಲತೀರದ ಹತ್ತಿರ ವಾಹನ ನಿಲ್ದಾಣ, ತೆಂಗಿನ ತೋಟ ಮತ್ತು ಲಘು ಉಪಾಹಾರ ಗೃಹಗಳಿವೆ.
2. ದೀಪ ಸ್ಥ೦ಭ: ಕಾಪು ದೀಪ ಸ್ಥ೦ಭವನ್ನು 1901ರಲ್ಲಿ ನಿರ್ಮಿಸಲಾಯಿತು. ಇದು 27 ಮೀಟರ್ ಎತ್ತರವಿದೆ. ಬಂಡೆಯ ಮೇಲೆ ನಿರ್ಮಿಸಲಾಗಿರುವ ಈ ದೀಪ ಸ್ಥ೦ಭ ಶತಮಾನ ಕಳೆದರೂ ಸುಭದ್ರವಾಗಿ ನಿಂತಿದೆ. ಹಿಂದಿನ ಕಾಲದಲ್ಲಿ ಉಪಗ್ರಹ ಆಧಾರಿತ ತಂತ್ರಜ್ಞಾನ ಮತ್ತು ಮಾರ್ಗದರ್ಶಕ ಇರಲಿಲ್ಲ. ಆದ್ದರಿಂದ ದೀಪ ಸ್ಥ೦ಭಗಳು ಹಡಗಿನ ನಾವಿಕರಿಗೆ ದಾರಿ ದೀಪವಾಗಿದ್ದವು.
ಪ್ರವಾಸಿಗರು ಪ್ರತಿದಿನ ಸಂಜೆ ಸಂಜೆ 6ರವರೆಗೆ ಇಲ್ಲಿಗೆ ಭೇಟಿ ನೀಡಲು ಅವಕಾಶ ಕಲ್ಪಿಸಲಾಗಿದೆ. ಸುರಕ್ಷತೆ ದೃಷ್ಟಿಯಿಂದ ಭಾರೀ ಮಳೆಯಾಗುವಂತಹ ಸಂದರ್ಭದಲ್ಲಿ ಈ ದೀಪಸ್ತಂಭಕ್ಕೆ ಭೇಟಿ ನೀಡಲು ಪ್ರವಾಸಿಗರಿಗೆ ನಿರ್ಬಂಧ ಹೇರಲಾಗುತ್ತದೆ. ಉಳಿದ ದಿನಗಳಲಲ್ಲಿ ಇಲ್ಲಿಗೆ ಭೇಟಿ ನೀಡಿ ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿಯಬಹುದು.
ಇಲ್ಲಿ ಇಲ್ಲಿಂದ ಮಲ್ಪೆ (20 ಕಿಲೋ ಮೀಟರ್), ಉಡುಪಿ (15 ಕಿಲೋ ಮೀಟರ್), ಮಂಗಳೂರು (45 ಕಿಲೋ ಮೀಟರ್), ಸಸಿಹಿತ್ಲು ಬೀಚ್ (30 ಕಿಲೋ ಮೀಟರ್) ಆಗಲಿದ್ದು, ಇಲ್ಲಿ ಭೇಟಿ ನೀಡಬಹುದಾಗಿದೆ. ಕಾಪು ಬೆಂಗಳೂರಿನಿಂದ 400 ಕಿ.ಮೀ ಮತ್ತು ಉಡುಪಿ ಹತ್ತಿರದ ರೈಲು ನಿಲ್ದಾಣದಿಂದ 15 ಕಿಲೋ ಮೀಟರ್ ಆಗಲಿದೆ. ಇಲ್ಲಿಗೆ ತಲುಪಲು ಮಂಗಳೂರು ಮತ್ತು ಉಡುಪಿಯಿಂದ ಬಸ್ಸುಗಳ ಸೌಲಭ್ಯವೂ ಕೂಡ ಇದೆ.
3. ಮಲ್ಪೆ ಬೀಚ್: ಉಡುಪಿಯಿಂದ 6 ಕಿಲೋ ಮೀಟರ್ ದೂರದಲ್ಲಿರುವ ಈ ಬೀಚ್ ಒಂದು ಅತ್ಯದ್ಭುತ ಬೀಚ್ ಆಗಿದೆ. ಇದು ಕರ್ನಾಟಕ ರಾಜ್ಯದ ಒಂದು ಪ್ರಮುಖ ಬಂದರು ಮತ್ತು ಮೀನುಗಾರಿಕೆ ಬಂದರು ಆಗಿದೆ. ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಆನಂದಿಸಲು ಪ್ರತಿನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಲೇ ಇರುತ್ತಾರೆ. ಈ ಕಡೆ ಪ್ರವಾಸ ಬೆಳೆಸಿದರೆ, ನೀವು ಬಲರಾಮ ದೇವಸ್ಥಾನ ಮತ್ತು ಬಾಸೆಲ್ ಮಿಷನ್ ಸ್ಥಾಪಿಸಿದ ಮಲ್ಪೆಯ ಅತ್ಯಂತ ಹಳೆಯ ಟೈಲ್ ಕಾರ್ಖಾನೆಗೆ ಭೇಟಿ ನೀಡುವುದನ್ನು ಮರೆಯದಿರಿ.
ಪ್ರವಾಸಿಗರಿಗೆ ಪ್ರಮುಖ ಮಾಹಿತಿ: ಮಲ್ಪೆ ಹಡಗು ನಿರ್ಮಾಣ, ಮೀನುಗಾರಿಕೆ, ಹೆಂಚು ತಯಾರಿಕೆ ಮತ್ತು ತೆಂಗಿನಕಾಯಿ ಸಂಸ್ಕರಣಾ ಕೈಗಾರಿಕೆಗಳಿಗೆ ಹೆಸರುವಾಸಿಯಾಗಿದೆ. ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿ ಸಮಯ ಕಳೆಯಬಹುದು. ಇನ್ನು ಮಲ್ಪೆ ಬಂದರಿನಿಂದ ದೋಣಿ ವಿಹಾರದಲ್ಲಿ ಸೇಂಟ್ ಮೇರಿ ದ್ವೀಪಕ್ಕೂ ಭೇಟಿ ನೀಡಬಹುದು. ಇಲ್ಲಿನ ಕಡಲತೀರದಲ್ಲಿ ಜಲ ಕ್ರೀಡೆಗಳನ್ನು ಕೂಡ ಆನಂದಿಸಬಹುದು.
ಉಳಿದ ದಿನವನ್ನು ಕಳೆಯಲು ಪ್ರವಾಸಿಗರು ಉಡುಪಿಗೆ ಶ್ರೀ ಕೃಷ್ಣ ದೇವಸ್ಥಾನಕ್ಕೆ (5 ಕಿಲೋ ಮೀಟರ್), ಕಾಪು ಬೀಚ್ ಮತ್ತು ಲೈಟ್‌ಹೌಸ್‌ಗೆ (20 ಕಿ.ಮೀ) ಭೇಟಿ ನೀಡಬಹುದು. ಮಲ್ಪೆ ಬೆಂಗಳೂರಿನಿಂದ 410 ಕಿಲೋ ಮೀಟರ್ ದೂರದಲ್ಲಿದೆ. ಅಲ್ಲದೆ, ರೈಲಿನಲ್ಲಿ ಪ್ರಯಾಣ ಬೆಳೆಸುವವರು ಉಡುಪಿ ರೈಲು ನಿಲ್ದಾಣಕ್ಕೆ ಬಂದು ಇಳಿದುಕೊಳ್ಳಬಹುದು.
ಅಲ್ಲದೆ, ಕರ್ನಾಟಕದ ಎಲ್ಲಾ ಭಾಗಗಳಿಂದ ಉಡುಪಿ ತಲುಪಲು ಬಸ್ಸುಗಳ ವ್ಯವಸ್ಥೆಯೂ ಇದೆ. ಉಡುಪಿಯಿಂದ ಬಾಡಿಗೆ ಆಟೋ ಅಥವಾ ಟ್ಯಾಕ್ಸಿ ಮೂಲಕ ಬೀಚ್ ತಲುಪಬಹುದು. ಕಡಲತೀರದ ಬಳಿ ಕೆಲವೇ ರೆಸಾರ್ಟ್‌ಗಳು ಇವೆ. ಹತ್ತಿರದ ಉಡುಪಿ ಪಟ್ಟಣದಲ್ಲಿ ಐಷಾರಾಮಿ ಹೋಟೆಲ್, ರೆಸಾರ್ಟ್‌ಗಳಿವೆ.
4. ಸೇಂಟ್ ಮೇರಿಸ್ ದ್ವೀಪ: ಈ ತಾಣ ಉಡುಪಿಯಿಂದ ಕೇವಲ 10.9 ಕಿಲೋ ಮೀಟರ್ ದೂರದಲ್ಲಿದೆ. ಸೇಂಟ್ ಮೇರೀಸ್ ದ್ವೀಪವನ್ನು ಕೊಕೊನಟ್ ಐಸ್‍ಲ್ಯಾಂಡ್ ಎಂಬ ಹೆಸರಿನಿಂದಲೂ ಕರೆಯುತ್ತಾರೆ.
5. ಮರವಂತೆ ಬೀಚ್: ಮರವಂತೆ ಕರ್ನಾಟಕ ಕರಾವಳಿಯ ಒಂದು ವಿಶಿಷ್ಟ ಕಡಲತೀರವಾಗಿದೆ. ಒಂದು ಕಡೆ ವಿಶಾಲ ಅರಬ್ಬೀ ಸಮುದ್ರ, ಮತ್ತೊಂದೆಡೆ ಸೌಪರ್ಣಿಕಾ ನದಿ, ಮಧ್ಯೆ ರಾಷ್ಟೀಯ ಹೆದ್ದಾರಿ 66 ಯನ್ನು ಇಲ್ಲಿ ಕಾಣಬಹುದು. ಇಂತಹ ಅದ್ಭುತ ದೃಶ್ಯ ಭಾರತದ ಇನ್ನೆಲ್ಲೂ ಇಲ್ಲ. 2005ರಲ್ಲಿ ಮರವಂತೆ ಕಡಲ ತೀರಕ್ಕೆ ಕರ್ನಾಟಕದ ಅತ್ಯಂತ ಸುಂದರ ಬೀಚ್ ಎಂಬ ಹೆಸರು ಬಂದಿದೆ.
ಪ್ರವಾಸಿಗರ ಪ್ರಮುಖ ಆಕರ್ಷಣೆಗಳು: ಅರಬ್ಬೀ ಸಮುದ್ರ ಮತ್ತು ಸೌಪರ್ಣಿಕಾ ನದಿಯ ಮಧ್ಯ ಹಾದು ಹೋಗುವ ರಾಷ್ಟೀಯ ಹೆದ್ದಾರಿಯನ್ನು ನೋಡುವುದೇ ಒಂಥರಾ ಮಜಾ. ಪ್ರವಾಸಿಗರು ನೀರಿಗಿಳಿದು ಎಂಜಾ ಮಾಡಬಹುದು. ಅಲ್ಲದೆ, ಹೆದ್ದಾರಿ ಸಮೀಪ ಮಾರುವ ತಾಜಾ ಎಳನೀರನ್ನು ಸವಿಯಬಹುದು. ಸಂಜೆ ವೇಳೆ ಅರಬ್ಬೀ ಸಮುದ್ರದಲ್ಲಿ ಸೂರ್ಯಸ್ತದ ಸುಂದರ ದೃಶ್ಯವನ್ನು ವೀಕ್ಷಿಸಬಹುದು.
ರಸ್ತೆಯ ಇನ್ನೊಂದು ಬದಿ ಇರುವ ಮಾರಸ್ವಾಮಿ ದೇವಸ್ಥಾನಕ್ಕೆ ಭೇಟಿ ಕೊಡಬಹುದಾಗಿದೆ. ಸೌಪರ್ಣಿಕಾ ನದಿಯಲ್ಲಿ ದೋಣಿ ವಿಹಾರವನ್ನೂ ಕೂಡ ಮಾಡಬಹುದು.
ಕುಂದಾಪುರ ರೈಲು ನಿಲ್ದಾಣದಿಂದ ಮರವಂತೆ ಬೀಚ್ 20 ಕಿಲೋ ಮೀಟರ್ ದೂರದಲ್ಲಿದೆ. ಬೆಂಗಳೂರು, ಮಂಗಳೂರು, ಮುಂಬೈ, ಕಾರವಾರ ನಗರಗಳಿಂದ ಇಲ್ಲಿಗೆ ರೈಲು ಸೇವೆ ಇದೆ. ಅಲ್ಲದೆ, ಸಮೀಪದ ನಗರಗಳಿಂದ ಸಾಕಷ್ಟು ಖಾಸಗಿ ಮತ್ತು ಸರ್ಕಾರಿ ಬಸ್‌ಗಳ ಸೇವೆ ಇದೆ. ಕುಂದಾಪುರ ಮತ್ತು ಬೈಂದೂರು ಮಧ್ಯೆ ಓಡಾಡುವ ಬಸ್ಸುಗಳು ಮರವಂತೆಯಲ್ಲಿ ನಿಲ್ಲುತ್ತವೆ.
ಮರವಂತೆ ಬೀಚ್ ರಾಜ್ಯ ರಾಜಧಾನಿ ಬೆಂಗಳೂರಿನಿಂದ 420 ಕಿಲೋ ಮೀಟರ್ ದೂರದಲ್ಲಿದೆ. ಇನ್ನು ಕರಾವಳಿಯ ಯಾವುದೇ ನಗರದಿಂದ ಮರವಂತೆ ತಲುಪಲು ಉತ್ತಮ ಬಸ್ ಸೇವೆಯೂ ಇದೆ. ಕುಂದಾಪುರ ನಗರದಿಂದ ಬಸ್ಸು, ರಿಕ್ಷಾ ಅಥವಾ ಟ್ಯಾಕ್ಸಿ ಮೂಲಕ ಮರವಂತೆ ಬೀಚ್‌ಗೆ ತಲುಪಬಹುದು. ಈ ಕಡಲ ತೀರಕ್ಕೆ ಸನಿಹವಾಗಿ ತ್ರಾಸಿಯಲ್ಲಿ ಹೋಮ್ ಸ್ಟೇ, ರೆಸಾರ್ಟ್ ಸೌಲಭ್ಯವಿದೆ. ಹತ್ತಿರದ ಕುಂದಾಪುರ ನಗರದಲ್ಲಿ ಉಳಿದುಕೊಳ್ಳಲು ವಸತಿ ಆಯ್ಕೆ ಇವೆ.
6. ಹೂಡೆ ಬೀಚ್: ಈ ಬೀಚ್ ಉಡುಪಿ ನಗರದಿಂದ ಸುಮಾರು 18 ಕಿಲೋ ಮೀಟರ್ ದೂರದಲ್ಲಿದೆ ಮತ್ತು ಕದಿಕೆ ಮತ್ತು ಡೆಲ್ಟಾ ಬೀಚ್ ನಡುವೆ ಇದೆ. ಈ ಬೀಚ್ ತುಂಬಾ ರಮಣೀಯವಾಗಿದ್ದು, ಚಲನಚಿತ್ರ ಚಿತ್ರೀಕರಣಕ್ಕೆ ಹೇಳಿ ಮಾಡಿಸಿದ ತಾಣವಾಗಿದೆ. ಇಲ್ಲಿಗೆ ಪ್ರತಿನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಇನ್ನು ಪಡುಬಿದ್ರಿ ಕಡಲತೀರವು ಉಡುಪಿ ಜಿಲ್ಲೆಯ ಪಡುಬಿದ್ರಿ ಊರಿನಲ್ಲಿದೆ. ಇದು ಉಡುಪಿಯಿಂದ 26.9 ಕಿಲೋ ಮೀಟರ್ ದೂರಲ್ಲಿದೆ.
-
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ? -
Rashmika Mandanna: ಮನೆಮಗಳಾಗಿ ಇಲ್ಲಿಗೆ ಬಂದೆ, ಈಗ ಸೊಸೆಯಾಗಿ ನಿಂತಿದ್ದೇನೆ: ರಶ್ಮಿಕಾ ಮಂದಣ್ಣ ಭಾವುಕ -
ಕೇಂದ್ರೀಯ ವಿದ್ಯಾಲಯ 1ನೇ ತರಗತಿ ಪ್ರವೇಶಾತಿ 2026: ಇಂದಿನಿಂದಲೇ ಅರ್ಜಿ ಸಲ್ಲಿಕೆ ಶುರು, ಪೋಷಕರೇ ಈಗಲೇ ಗಮನಿಸಿ












Click it and Unblock the Notifications