ಚೆನ್ನೈ- ಶಿವಮೊಗ್ಗ ನಡುವೆ ರೈಲು ಸಂಚಾರ ಆರಂಭ, ವೇಳಾಪಟ್ಟಿ ಇಲ್ಲಿದೆ
ಶಿವಮೊಗ್ಗ, ಜುಲೈ. 05: ಶಿವಮೊಗ್ಗ ಮತ್ತು ಚೆನ್ನೈ ನಡುವೆ ರೈಲು ಸೇವೆ ನೀಡಬೇಕು ಎಂದು ಸಾರ್ವಜನಿಕರು ಮತ್ತು ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿ ಈ ಹಿಂದೆ ಹಲವು ಬಾರಿ ಮನವಿ ಮಾಡಿದೆ. ಇವರ ಬೇಡಿಕೆಗೆ ಸ್ಪಂದಿಸಿರುವ ರೈಲ್ವೆ ಖಾತೆ ರಾಜ್ಯ ಸಚಿವ ವಿ ಸೋಮಣ್ಣ ಖುಷಿ ಸುದ್ದಿಯೊಂದನ್ನು ನೀಡಿದ್ದಾರೆ.
ಈ ಹಿಂದೆ ಶಿವಮೊಗ್ಗ-ಬಳ್ಳಾರಿ ಮೂಲಕ ಚೆನ್ನೈಗೆ ವಾರದಲ್ಲಿ ಎರಡು ದಿನ ಸಂಚಾರ ನಡೆಸುತ್ತಿದ್ದ ರೈಲು ಸೇವೆ ಮತ್ತೆ ಆರಂಭಿಸಬೇಕು ಎಂದು ಒತ್ತಾಯಿಸಲಾಗಿತ್ತು. ಈ ಕುರಿತು ಜನಪ್ರತಿನಿಧಿಗಳು ನೈಋತ್ಯ ರೈಲ್ವೆ ಮೇಲೆ ಒತ್ತಡ ಹೇರಬೇಕು ಎಂದು ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿ ಆಗ್ರಹಿಸಿತ್ತು. ಇದರ ಬೆನ್ನಲ್ಲೆ ಚೆನ್ನೈ ಮತ್ತು ಸತ್ಯಸಾಯಿ ಪ್ರಶಾಂತಿ ನಿಲಯಂ ನಡುವೆ ಸಂಚರಿಸುತ್ತಿದ್ದ ರೈಲನ್ನು ಶಿವಮೊಗ್ಗ - ಚೆನ್ನೈ ನಡುವೆ ಸಂಚರಿಸುವಂತೆ ಮಾಡಲಾಗಿದೆ.

ಚೆನ್ನೈ- ಶಿವಮೊಗ್ಗ ಪ್ರಯಾಣಿಕರಿಗೆ ಸಿಹಿ ಸುದ್ದಿ
ಚೆನ್ನೈ ಮತ್ತು ಸತ್ಯಸಾಯಿ ಪ್ರಶಾಂತಿ ನಿಲಯಂ ನಡುವೆ ಸಂಚರಿಸುತ್ತಿದ್ದ ರೈಲು ಸಂಖ್ಯೆ 12691 / 2 ಅನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಚೆನ್ನೈ ಮತ್ತು ಶಿವಮೊಗ್ಗ ನಡುವೆ ಸಂಚರಿಸುವಂತೆ ಮಾರ್ಗ ಬದಲಾವಣೆ ಮಾಡಲಾಗಿದೆ. ಈ ಬಗ್ಗೆ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆಗಳ ರಾಜ್ಯ ಸಚಿವ ವಿ. ಸೋಮಣ್ಣ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
"ಕರ್ನಾಟಕದ ಜನತೆಗೆ ಸಂತಸದ ಸುದ್ದಿ. ಸಾರ್ವಜನಿಕರ ಬೇಡಿಕೆಗೆ ಸ್ಪಂದಿಸಿ ರೈಲು ಸಂಖ್ಯೆ 12691/2 ಈಗ ಶಿವಮೊಗ್ಗದಿಂದ ಚೆನ್ನೈಗೆ ಸಂಚರಿಸಲಿದೆ. ಮಾರ್ಗದಲ್ಲಿ ತುಮಕೂರು, ಅರಸೀಕೆರೆ, ಕಡೂರು, ಬೀರೂರು, ತರೀಕೆರೆ ಮತ್ತು ಭದ್ರಾವತಿಯಲ್ಲಿ ನಿಲುಗಡೆ ಇರುತ್ತದೆ" ಎಂದು ತಿಳಿಸಿದ್ದಾರೆ.

ಚೆನ್ನೈ- ಶಿವಮೊಗ್ಗ ನಡುವೆ ರೈಲು ಸಂಚಾರ ಆರಂಭ
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ ರಾಘವೇಂದ್ರ ಅವರ ಮನವಿಯ ಹಿನ್ನೆಲೆಯಲ್ಲಿ ಚೆನ್ನೈ ಮತ್ತು ಸತ್ಯಸಾಯಿ ಪ್ರಶಾಂತಿ ನಿಲಯಂ ನಡುವೆ ಸಂಚರಿಸುತ್ತಿದ್ದ ರೈಲು ಸಂಖ್ಯೆ 12691/2 ಅನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಚೆನ್ನೈ ಮತ್ತು ಶಿವಮೊಗ್ಗ ನಡುವೆ ಸಂಚರಿಸುವಂತೆ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ಕೇಂದ್ರ ಸಚಿವ ವಿ ಸೋಮಣ್ಣ ಮಾಹಿತಿ ನೀಡಿದ್ದಾರೆ.
ಚೆನ್ನೈ- ಶಿವಮೊಗ್ಗ ರೈಲು ಸಂಚಾರದ ವೇಳಾಪಟ್ಟಿ :
• ಚೆನ್ನೈ - ಶಿವಮೊಗ್ಗ: ಪ್ರತಿ ಶುಕ್ರವಾರ (ಚೆನ್ನೈನಿಂದ ರಾತ್ರಿ 11.30ಕ್ಕೆ ಹೊರಟು ಬೆಳಗ್ಗೆ ಮಧ್ಯಾಹ್ನ 1.00 ಕ್ಕೆ ಶಿವಮೊಗ್ಗ ತಲುಪಲಿದೆ)
• ಶಿವಮೊಗ್ಗ - ಚೆನ್ನೈ - ಪ್ರತಿ ಶನಿವಾರ ( ಶಿವಮೊಗ್ಗದಲ್ಲಿ ಸಂಜೆ 4.00 ಗಂಟೆಗೆ ಹೊರಟು ಬೆಳಗ್ಗೆ 4.55ಕ್ಕೆ ಚೆನ್ನೈ ತಲುಪಲಿದೆ). ಮಾರ್ಗದಲ್ಲಿ ತುಮಕೂರು, ಅರಸೀಕೆರೆ, ಕಡೂರು, ಬೀರೂರು, ತರೀಕೆರೆ ಮತ್ತು ಭದ್ರಾವತಿಯಲ್ಲಿ ನಿಲುಗಡೆ ಇರುತ್ತದೆ.












Click it and Unblock the Notifications