ಕರ್ನಾಟಕದ ಶರಾವತಿ ಸೇರಿದಂತೆ ನೀವು ಭೇಟಿ ನೀಡಲೇಬೇಕಾದ ಭಾರತದ ಈ 6 ಪ್ರಸಿದ್ಧ ಸೇತುವೆಗಳು

ಭಾರತದ ರಸ್ತೆ ಜಾಲವು ದೇಶದ ವಿವಿಧ ಭಾಗಗಳನ್ನು ಸಂಪರ್ಕಿಸುವುದರ ಜೊತೆಗೆ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಅದ್ಭುತವಾದ ಸಾಧನೆಗಳಿಗೂ ಹೆಸರುವಾಸಿಯಾಗಿದೆ. ನದಿಗಳು, ಸಮುದ್ರಗಳು ಮತ್ತು ಕಣಿವೆಗಳ ಮೇಲೆ ನಿರ್ಮಿಸಲಾದ ಕೆಲವು ಭವ್ಯವಾದ ಸೇತುವೆಗಳು ಕೇವಲ ಸಂಚಾರದ ಮಾರ್ಗಗಳಷ್ಟೇ ಅಲ್ಲ, ಪ್ರವಾಸಿಗರಿಗೆ ಅದ್ಭುತವಾದ ಅನುಭವವನ್ನು ನೀಡುವ ತಾಣಗಳಾಗಿಯೂ ಬದಲಾಗಿವೆ. ಸುದೀರ್ಘವಾದ ರಸ್ತೆಯ ಪ್ರಯಾಣಗಳನ್ನು ಇಷ್ಟಪಡುವವರಿಗೆ ಭಾರತದಲ್ಲಿರುವ ಕೆಲವು ಅತಿ ಉದ್ದದ ಸೇತುವೆಗಳ ಮೇಲೆ ಕಾರಿನಲ್ಲಿ ಸಂಚರಿಸುವ ಅನುಭವವೇ ಒಂದು ವಿಭಿನ್ನವಾಗಿದೆ. ಇಂತಹ ಭಾರತದಲ್ಲಿ ಕಂಡುಬರುವ ಐದು ಅತಿ ಉದ್ದದ ಸೇತುವೆಗಳ ಮಾಹಿತಿ ಇಲ್ಲಿದೆ.

Top Longest Bridges in India

ಅಟಲ್ ಸೇತು - ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ - ಮಹಾರಾಷ್ಟ್ರ

ಅರಬ್ಬಿ ಸಮುದ್ರದ ಮೇಲೆ ಸುಮಾರು 21 ಕಿಲೋಮೀಟರ್ ದೂರ ಕಾರಿನಲ್ಲಿ ಸಂಚರಿಸುವ ಅನುಭವವನ್ನು ನೀಡುವ ಸೇತುವೆಯೇ ಅಟಲ್ ಸೇತು. ಅಧಿಕೃತವಾಗಿ "ಅಟಲ್ ಬಿಹಾರಿ ವಾಜಪೇಯಿ ಸೇವ್ರಿ-ನ್ಹಾವಾ ಶೇವಾ ಅಟಲ್ ಸೇತು" ಎಂದು ಕರೆಯಲಾಗುವ ಈ ಸೇತುವೆ 2024ರ ಜನವರಿಯಲ್ಲಿ ಉದ್ಘಾಟನೆಯಾಯಿತು. ಇದು ಭಾರತದ ಅತಿ ಉದ್ದದ ಸಮುದ್ರ ಸೇತುವೆಯಾಗಿದ್ದು, ವಿಶ್ವದಲ್ಲಿಯೂ 12ನೇ ಅತಿ ಉದ್ದದ ಸಮುದ್ರ ಸೇತುವೆ ಎಂದು ಗುರುತಿಸಲಾಗಿದೆ. ಮುಂಬೈನ ಸೇವ್ರಿಯಿಂದ ನವಿ ಮುಂಬೈ ಸಮೀಪದ ನ್ಹಾವಾ ಶೇವಾವರೆಗೆ ಹರಡಿರುವ ಈ ಆರು ಲೇನ್‌ಗಳ ಸೇತುವೆ ದಿನಕ್ಕೆ ಸುಮಾರು 70 ಸಾವಿರ ವಾಹನಗಳ ಸಂಚಾರ ಸಾಮರ್ಥ್ಯ ಹೊಂದಿದೆ. ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ ಮತ್ತು ಕರಾವಳಿ ರಸ್ತೆಗೆ ನೇರ ಸಂಪರ್ಕ ಕಲ್ಪಿಸುವ ಈ ಸೇತುವೆ ಪ್ರವಾಸಿಗರಿಗೆ ಅತ್ಯಂತ ಸುಂದರ ಡ್ರೈವ್ ಅನುಭವವನ್ನು ನೀಡುತ್ತದೆ.

ಸೇತುವೆ ಉದ್ದ: 21 ಕಿಲೋಮೀಟರ್
ಉದ್ಘಾಟನೆ: ಜನವರಿ 12, 2024

ಭಾರತದ ಅತಿ ಉದ್ದದ ರೈಲು ಮಾರ್ಗಗಳು: 3 ದಿನಕ್ಕೂ ಅಧಿಕ ರೈಲಿನಲ್ಲಿ ರೋಚಕ ಜರ್ನಿ! ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್...
ಭಾರತದ ಅತಿ ಉದ್ದದ ರೈಲು ಮಾರ್ಗಗಳು: 3 ದಿನಕ್ಕೂ ಅಧಿಕ ರೈಲಿನಲ್ಲಿ ರೋಚಕ ಜರ್ನಿ! ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್...

ಮಹಾತ್ಮ ಗಾಂಧಿ ಸೇತು - ಬಿಹಾರ

ಭಾರತದ ಅತಿ ಉದ್ದದ ಸೇತುವೆ ಎಂಬ ಖ್ಯಾತಿಯನ್ನು ಹಲವು ವರ್ಷಗಳ ಕಾಲ ಹೊಂದಿದ್ದ ಈ ಸೇತುವೆ ಬಿಹಾರದ ಮಹಾತ್ಮ ಗಾಂಧಿ ಸೇತು ಎಂದು ಕರೆಯಲಾಗುತ್ತದೆ. 1982ರಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿ ಉದ್ಘಾಟಿಸಿದ ಈ ಸೇತುವೆ ಸುಮಾರು 5.75 ಕಿಲೋಮೀಟರ್ ಉದ್ದವಿದೆ. ಗಂಗಾ ನದಿಯ ಮೇಲೆ ನಿರ್ಮಿಸಲಾದ ಈ ಸೇತುವೆ ಪಾಟ್ನಾ ಮತ್ತು ಹಾಜೀಪುರವನ್ನು ಸಂಪರ್ಕಿಸುತ್ತದೆ. ಉತ್ತರ ಮತ್ತು ದಕ್ಷಿಣ ಬಿಹಾರ ನಡುವಿನ ವ್ಯಾಪಾರ ಹಾಗೂ ಸಂಚಾರಕ್ಕೆ ಇದು ಪ್ರಮುಖ ಜೀವನಾಡಿಯಾಗಿತ್ತು. ಇತ್ತೀಚೆಗೆ ಸೇತುವೆಯನ್ನು ನವೀಕರಿಸಲಾಗಿದ್ದು, ಹೊಸ ಉಕ್ಕಿನ ರಚನೆಗಳನ್ನು ಅಳವಡಿಸಲಾಗಿದೆ. ಇಂದಿಗೂ ಸಾವಿರಾರು ವಾಹನಗಳು ಈ ಸೇತುವೆಯ ಮೂಲಕ ಸಂಚರಿಸುತ್ತಿವೆ.

ಸೇತುವೆ ಉದ್ದ: 5.75 ಕಿಲೋಮೀಟರ್
ಉದ್ಘಾಟನೆ: ಮೇ 1982

ದಿಬಾಂಗ್ ನದಿ ಸೇತುವೆ - ಅರುಣಾಚಲ ಪ್ರದೇಶ

ಅರುಣಾಚಲ ಪ್ರದೇಶದಲ್ಲಿರುವ ದಿಬಾಂಗ್ ನದಿ ಸೇತುವೆ ಭಾರತದಲ್ಲಿನ ಮೂರನೇ ಅತಿ ಉದ್ದದ ನೀರಿನ ಮೇಲಿನ ಸೇತುವೆಯಾಗಿದೆ. ಸುಮಾರು 6.2 ಕಿಲೋಮೀಟರ್ ಉದ್ದದ ಈ ಸೇತುವೆ ಬೊಂಜಿರ್ ಮತ್ತು ಮಲೇಕ್ ಗ್ರಾಮಗಳನ್ನು ಸಂಪರ್ಕಿಸುತ್ತದೆ. 2018ರಲ್ಲಿ ಪೂರ್ಣಗೊಂಡ ಈ ಸೇತುವೆ NH-13 ಟ್ರಾನ್ಸ್ ಅರುಣಾಚಲ ಹೆದ್ದಾರಿಯ ಭಾಗವಾಗಿದೆ. ಇದು ಡಂಬುಕ್ ಮತ್ತು ರೋಯಿಂಗ್ ನಡುವಿನ ಸಂಚಾರವನ್ನು ಸುಲಭಗೊಳಿಸಿದೆ. ಭಾರತ-ಚೀನಾ ಗಡಿಯ ಸಮೀಪ ಇರುವುದರಿಂದ ರಕ್ಷಣಾ ದೃಷ್ಟಿಯಿಂದಲೂ ಈ ಸೇತುವೆಗೆ ಮಹತ್ವ ಇದೆ.

Blue City of India: ಭಾರತದ ಬ್ಲೂ ಸಿಟಿ ಜೋಧ್‌ಪುರದ ವಿಶೇಷತೆ ಏನು? ನೀಲಿ ಮನೆಗಳ ಹಿಂದಿನ ರಹಸ್ಯ ಇಲ್ಲಿದೆ
Blue City of India: ಭಾರತದ ಬ್ಲೂ ಸಿಟಿ ಜೋಧ್‌ಪುರದ ವಿಶೇಷತೆ ಏನು? ನೀಲಿ ಮನೆಗಳ ಹಿಂದಿನ ರಹಸ್ಯ ಇಲ್ಲಿದೆ

ಸೇತುವೆ ಉದ್ದ: 6.2 ಕಿಲೋಮೀಟರ್
ಉದ್ಘಾಟನೆ: 2018

ಧೋಲಾ-ಸಾದಿಯಾ ಸೇತುವೆ - ಅಸ್ಸಾಂ

ಭೂಪೇನ್ ಹಜಾರಿಕಾ ಸೇತುವೆ ಎಂದೂ ಕರೆಯಲಾಗುವ ಧೋಲಾ-ಸಾದಿಯಾ ಸೇತುವೆ ಅಸ್ಸಾಂನ ಲೋಹಿತ್ ನದಿಯ ಮೇಲೆ ನಿರ್ಮಿಸಲಾಗಿದೆ. ಸುಮಾರು 9.15 ಕಿಲೋಮೀಟರ್ ಉದ್ದದ ಈ ಸೇತುವೆ ಈಶಾನ್ಯ ಭಾರತದ ಪ್ರಮುಖ ಸಂಪರ್ಕ ಮಾರ್ಗವಾಗಿದೆ. ಅಸ್ಸಾಂನ ಧೋಲಾ ಮತ್ತು ಸಾದಿಯಾ ಪ್ರದೇಶಗಳನ್ನು ಸಂಪರ್ಕಿಸುವ ಈ ಸೇತುವೆ ಅರುಣಾಚಲ ಪ್ರದೇಶದ ಸಂಪರ್ಕವನ್ನೂ ಸುಲಭಗೊಳಿಸಿದೆ. ಭಾರತ-ಚೀನಾ ಗಡಿಯ ಸಮೀಪ ಇರುವುದರಿಂದ ಸೇತುವೆಯನ್ನು ಭಾರೀ ಸೇನಾ ಟ್ಯಾಂಕ್‌ಗಳ ತೂಕ ಸಹಿಸುವಂತೆ ನಿರ್ಮಿಸಲಾಗಿದೆ. ಪ್ರಯಾಣಿಕರಿಗೆ ಹಿಮಾಲಯದ ನೋಟಗಳೊಂದಿಗೆ ನದಿಯ ಮಧ್ಯೆ ಕಾರು ಓಡಿಸುವ ಅನುಭವ ವಿಶೇಷವಾಗಿರುತ್ತದೆ.

ಸೇತುವೆ ಉದ್ದ: 9.15 ಕಿಲೋಮೀಟರ್
ಉದ್ಘಾಟನೆ: ಮೇ 2017

ಕಚ್ಚಿ ದರ್ಗಾ - ಬಿಡುಪುರ ಸೇತುವೆ - ಬಿಹಾರ

ಬಿಹಾರದಲ್ಲಿ ನಿರ್ಮಾಣವಾಗುತ್ತಿರುವ ಕಚ್ಚಿ ದರ್ಗಾ-ಬಿಡುಪುರ ಸೇತುವೆ ದೇಶದ ಅತ್ಯಂತ ದೊಡ್ಡ ಮೂಲಸೌಕರ್ಯ ಯೋಜನೆಗಳಲ್ಲಿ ಒಂದಾಗಿದೆ. ಗಂಗಾ ನದಿಯ ಮೇಲೆ ನಿರ್ಮಾಣವಾಗಿರುವ ಈ ಸೇತುವೆ 19.76 ಕಿಲೋಮೀಟರ್ ಉದ್ದದ ಪಾಟ್ನಾದ ಕಚ್ಚಿ ದರ್ಗಾವನ್ನು ವೈಶಾಲಿ ಜಿಲ್ಲೆಯ ಬಿಡುಪುರದೊಂದಿಗೆ ಸಂಪರ್ಕಿಸುತ್ತದೆ. NH-31 ಮತ್ತು NH-122B ರಾಷ್ಟ್ರೀಯ ಹೆದ್ದಾರಿಗಳನ್ನು ಜೋಡಿಸುವ ಈ ಸೇತುವೆ ಪೂರ್ಣಗೊಂಡ ಬಳಿಕ ಭಾರತದ ಎರಡನೇ ಅತಿ ಉದ್ದದ ನೀರಿನ ಮೇಲಿನ ಸೇತುವೆಯಾಗಿದೆ.

ಸೇತುವೆ ಉದ್ದ: 19.76 ಕಿಲೋಮೀಟರ್
ಉದ್ಘಾಟನೆ: ಫೆಬ್ರವರಿ 9, 2026

Top Longest Bridges in India

ಶರಾವತಿ ಸೇತುವೆ - ಹೊನ್ನಾವರ

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಸಮೀಪ ಶರಾವತಿ ನದಿಯ ಮೇಲೆ ನಿರ್ಮಿಸಲಾದ ಶರಾವತಿ ಸೇತುವೆ ಕರ್ನಾಟಕದ ಪ್ರಮುಖ ಉದ್ದದ ಸೇತುವೆಗಳಲ್ಲಿ ಒಂದಾಗಿದೆ. ರಾಷ್ಟ್ರೀಯ ಹೆದ್ದಾರಿ 66ರ ಭಾಗವಾಗಿರುವ ಈ ಸೇತುವೆ ಕರಾವಳಿ ಕರ್ನಾಟಕದ ಸಂಚಾರ ವ್ಯವಸ್ಥೆಯಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಈ ಸೇತುವೆ ಸುಮಾರು 2.25 ಕಿಲೋಮೀಟರ್‌ಗಿಂತ ಹೆಚ್ಚು ಉದ್ದವಿದ್ದು, ನದಿಯ ವಿಶಾಲ ಹರಿವು, ಹಸಿರು ವಾತಾವರಣ ಮತ್ತು ಶರಾವತಿ ಬ್ಯಾಕ್‌ವಾಟರ್ ಪ್ರದೇಶಗಳ ನಡುವೆ ಸಾಗುವ ದೃಶ್ಯ ಪ್ರಯಾಣಿಕರನ್ನು ಆಕರ್ಷಿಸುತ್ತದೆ.

ಸೇತುವೆ ಉದ್ದ: 2.44 ಕಿಲೋಮೀಟರ್‌
ಉದ್ಘಾಟನೆ: ಜುಲೈ 14, 2025

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+