ಬೆಂಗಳೂರು, ಕರಾವಳಿ ರೈಲು ಪ್ರಯಾಣಿಕರ ಗಮನಕ್ಕೆ
ಬೆಂಗಳೂರು, ಫೆಬ್ರವರಿ 13: ಹಾಸನ ಜಿಲ್ಲೆಯ ಜನರ ಬಹುವರ್ಷಗಳ ಬೇಡಿಕೆಗೆ ಮಣಿದ ರೈಲ್ವೆ ಇಲಾಖೆ ತಾತ್ಕಾಲಿಕ ನಿಲುಗಡೆ ನೀಡಲು ಆದೇಶಿಸಿದೆ. ಬೆಂಗಳೂರು ಮತ್ತು ಕರಾವಳಿ ನಡುವೆ ಸಂಚಾರ ನಡೆಸುವ ರೈಲುಗಳು ಈ ನಿಲ್ದಾಣದಲ್ಲಿ ನಿಲುಗಡೆಗೊಳ್ಳಲಿವೆ.
ನೈಋತ್ಯ ರೈಲ್ವೆ ಈ ಕುರಿತು ಆದೇಶ ಹೊರಡಿಸಿದೆ. ಪ್ರಾಯೋಗಿಕವಾಗಿ 6 ತಿಂಗಳ ಅವಧಿಗೆ ಹಾಸನದ ಆಲೂರು ನಿಲ್ದಾಣದಲ್ಲಿ ರೈಲುಗಳ ನಿಲುಗಡೆ ಮಾಡಲು ಆದೇಶ ಹೊರಡಿಸಲಾಗಿದೆ. ವೇಳಾಪಟ್ಟಿಯನ್ನು ನೀಡಲಾಗಿದೆ.

ಕರಾವಳಿ ಮತ್ತು ಬೆಂಗಳೂರು ನಗರ ಸಂಪರ್ಕಿಸುವ ಯಶವಂತಪುರ-ಕಾರವಾರ, ಕಾರವಾರ-ಯಶವಂತಪುರ, ಯಶವಂತಪುರ-ಮಂಗಳೂರು, ಮಂಗಳೂರು-ಯಶವಂತಪುರ ರೈಲುಗಳು ಆಲೂರು ನಿಲ್ದಾಣದಲ್ಲಿ ನಿಲುಗಡೆಗೊಳ್ಳಲಿವೆ.
ರೈಲುಗಳ ಪಟ್ಟಿ
* ರೈಲು ನಂಬರ್ 16515 ಯಶವಂತಪುರ-ಕಾರವಾರ ರೈಲು 12/2/2024 ರಿಂದ 29/7/2024ರ ತನಕ ಆಲೂರು ನಿಲ್ದಾಣಕ್ಕೆ ಬೆಳಗ್ಗೆ 10.30ಕ್ಕೆ ಆಗಮಿಸಿ 10.33ಕ್ಕೆ ಹೊರಡಲಿದೆ. ರೈಲು ನಂಬರ್ 16516 ಕಾರವಾರ-ಯಶವಂತಪುರ ರೈಲು ಆಲೂರು ನಿಲ್ದಾಣಕ್ಕೆ ಸಂಜೆ 4.17ಕ್ಕೆ ಆಗಮಿಸಿ, 4.18ಕ್ಕೆ ಹೊರಡಲಿದೆ. ಈ ವೇಳಾಪಟ್ಟಿ 13/2/2024 ರಿಂದ 30/7/2024ರ ತನಕ ಜಾರಿಯಲ್ಲಿರುತ್ತದೆ.
* ರೈಲು ನಂಬರ್ 16575 ಯಶವಂತಪುರ-ಮಂಗಳೂರು ರೈಲು 13/2/2024 ರಿಂದ 30/7/2024ರ ತನಕ ಆಲೂರು ನಿಲ್ದಾಣಕ್ಕೆ ಬೆಳಗ್ಗೆ 10.32ಕ್ಕೆ ಆಗಮಿಸಿ 10.33ಕ್ಕೆ ಹೊರಡಲಿದೆ. ರೈಲು ನಂಬರ್ 16576 ಮಂಗಳೂರು-ಯಶವಂತಪುರ ರೈಲು 14/2/2024 ರಿಂದ 31/7/2024ರ ತನಕ ಆಲೂರು ನಿಲ್ದಾಣಕ್ಕೆ ಸಂಜೆ 4.17ಕ್ಕೆ ಆಗಮಿಸಿ, 4.18ಕ್ಕೆ ಹೊರಡಲಿದೆ.
* ರೈಲು ನಂಬರ್ 16539 ಯಶವಂತಪುರ-ಮಂಗಳೂರು ರೈಲು 17/2/2024 ರಿಂದ 27/7/2024ರ ತನಕ ಆಲೂರು ನಿಲ್ದಾಣಕ್ಕೆ ಬೆಳಗ್ಗೆ 10.30ಕ್ಕೆ ಆಗಮಿಸಿ, 10.33ಕ್ಕೆ ನಿರ್ಗಮಿಸಲಿದೆ. ರೈಲು ನಂಬರ್ 16540 ಮಂಗಳೂರು-ಯಶವಂತಪುರ ರೈಲು 18/28/2024 ರಿಂದ 28/7/2024ರ ತನಕ ಆಲೂರು ನಿಲ್ದಾಣಕ್ಕೆ 12.14ಕ್ಕೆ ಆಗಮಿಸಿ, 12.15ಕ್ಕೆ ಹೊರಡಲಿದೆ.
ಆಲೂರು ಮಲೆನಾಡ ಮಡಿಲಿನಲ್ಲಿರುವ ರೈಲು ನಿಲ್ದಾಣ. ಇಲ್ಲಿ ರೈಲು ನಿಲ್ದಾಣವಿದ್ದರೂ ಪ್ರತಿದಿನ ಇದೇ ಮಾರ್ಗದಲ್ಲಿ ಪ್ಯಾಸೆಂಜರ್ ಮತ್ತು ಎಕ್ಸ್‌ಪ್ರೆಸ್ ರೈಲುಗಳು ಚಲಿಸಿದರೂ ಸಹ ಯಾವ ರೈಲು ನಿಲುಗಡೆಗೊಳ್ಳುತ್ತಿರಲಿಲ್ಲ.
ಮಂಗಳೂರು-ಬೆಂಗಳೂರು ಮತ್ತು ಬೆಂಗಳೂರು-ಮಂಗಳೂರು ಮಾರ್ಗವಾಗಿ ಸಾಗುವ ಎಲ್ಲಾ ರೈಲುಗಳು ಆಲೂರು ಮೂಲಕವೇ ಸಾಗಬೇಕಿತ್ತು. ಆದರೆ ಯಾವುದೇ ರೈಲು ಇಲ್ಲಿ ನಿಲ್ಲುತ್ತಿರಲಿಲ್ಲ ಎಂಬುದು ಅಚ್ಚರಿಯ ಸಂಗತಿ. ಕೊನೆಗೆ ಹಾಸನದ ರೈಲು ಬಳಕೆದಾರರು ಆಲೂರಿನಲ್ಲಿ ರೈಲು ನಿಲುಗಡೆ ಮಾಡಬೇಕು ಎಂದು ಮನವಿ ಮಾಡುತ್ತಲೇ ಬಂದಿದ್ದರು.
2009ರ ಡಿಸೆಂಬರ್‌ನಲ್ಲಿ ಆಲೂರು ರೈಲು ನಿಲ್ದಾಣ ಸ್ಥಾಪನೆಯಾಯಿತು. ತಮ್ಮ ಊರಿನ ಮೂಲಕವೇ ಹತ್ತಾರು ರೈಲುಗಳು ಸಂಚಾರ ನಡೆಸಿದರೂ ಸಹ ಆಲೂರಿನ ಜನರಿಗೆ ರೈಲಿನಲ್ಲಿ ಸಂಚಾರ ನಡೆಸುವ ಭಾಗ್ಯ ಸಿಕ್ಕಿರಲಿಲ್ಲ. ಆಲೂರು ಪಟ್ಟಣದಿಂದ ಸುಮಾರು 1 ಕಿ. ಮೀ. ದೂರದಲ್ಲಿ ರೈಲು ನಿಲ್ದಾಣವಿದೆ.
ಪ್ಲಾಟ್ ಫಾರಂ, ಶೌಚಾಲಯ, ವಿಶ್ರಾಂತಿ ಕೊಠಡಿ, ಕುಡಿಯುವ ನೀರು, ನಿಲ್ದಾಣಕ್ಕೆ ಅಗತ್ಯ ಸಿಬ್ಬಂದಿ ಇದ್ದರೂ ಸಹ ಆಲೂರಿನಲ್ಲಿ ರೈಲು ಏಕೆ ನಿಲ್ಲುತ್ತಿರಲಿಲ್ಲ ಎಂಬ ಪ್ರಶ್ನೆಗೆ ರೈಲ್ವೆ ಅಧಿಕಾರಿಗಳೇ ಉತ್ತರ ನೀಡಬೇಕಿತ್ತು.
ಸ್ಥಳೀಯ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಲೂ ಸಹ ಆಲೂರು ರೈಲು ನಿಲ್ದಾಣದಲ್ಲಿ ರೈಲು ನಿಲ್ಲುವಂತೆ ಆಗಿರಲಿಲ್ಲ. ಈಗ ನೈಋತ್ಯ ರೈಲ್ವೆ ಪ್ರಾಯೋಗಿಕವಾಗಿ ಆಲೂರಿನಲ್ಲಿ ರೈಲುಗಳನ್ನು ನಿಲ್ಲಿಸಲು ಒಪ್ಪಿಗೆ ನೀಡಿದೆ. ಜನರು ಇದನ್ನು ಸದುಪಯೋಗಪಡಿಸಿಕೊಂಡು ಶಾಶ್ವತವಾಗಿ ಆಲೂರಿನಲ್ಲಿ ಎಲ್ಲಾ ರೈಲುಗಳು ನಿಲುಗಡೆಗೊಳ್ಳುವಂತೆ ಮಾಡಿಕೊಳ್ಳಬೇಕಿದೆ.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Karnataka Heatwave: ಕಲಬರಗಿಯಲ್ಲಿ 44 ಡಿಸೆ ತಾಪಮಾನ, 12 ಜಿಲ್ಲೆಗಳಿಗೆ ಮಹತ್ವದ ಎಚ್ಚರಿಕೆ: ಐಎಂಡಿ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ












Click it and Unblock the Notifications