ಹುಬ್ಬಳ್ಳಿ-ಬೆಂಗಳೂರು ಡೈಲಿ ಸೇರಿ ಹಲವು ವಿಶೇಷ ರೈಲು ಸೇವೆ ವಿಸ್ತರಣೆ, ಪಟ್ಟಿ

ಬೆಂಗಳೂರು, ಸೆಪ್ಟೆಂಬರ್ 21; ನೈಋತ್ಯ ರೈಲ್ವೆ ಎಸ್ಎಸ್‌ಎಸ್ ಹುಬ್ಬಳ್ಳಿ-ಕೆಎಸ್ಆರ್ ಬೆಂಗಳೂರು ಪ್ರತಿದಿನದ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇರಿ ಹಲವು ವಿಶೇಷ ರೈಲುಗಳ ಸೇವೆ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಪ್ರಯಾಣಿಕರ ಬೇಡಿಕೆಯಂತೆ ರೈಲು ಸೇವೆ ವಿಸ್ತರಣೆ ಮಾಡಲಾಗಿದೆ ಎಂದು ಹೇಳಿದೆ.

ಈ ಕುರಿತು ನೈಋತ್ಯ ರೈಲ್ವೆ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ. ವಿಶೇಷ ರೈಲುಗಳ ಸೇವೆಗಳನ್ನು ಮುಂದಿನ ಆದೇಶದ ತನಕ ವಿಸ್ತರಣೆ ಮಾಡಲಾಗಿದೆ. ಆದರೆ ಈ ರೈಲುಗಳ ವೇಳಾಪಟ್ಟಿ, ಬೋಗಿಗಳ ಸಂಯೋಜನೆ ಮತ್ತು ನಿಲ್ದಾಣಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

SWR Extended Hubballi KSR Bengaluru And Other Special Train Service

ಯಾವ-ಯಾವ ರೈಲುಗಳು

* ರೈಲು ನಂಬರ್ 07339 ಎಸ್‌ಎಸ್‌ಎಸ್ ಹುಬ್ಬಳ್ಳಿ-ಕೆಎಸ್ಆರ್ ಬೆಂಗಳೂರು ಪ್ರತಿದಿನದ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಮೊದಲು ಹುಬ್ಬಳ್ಳಿಯಿಂದ ಸೆಪ್ಟೆಂಬರ್ 30ರ ತನಕ ಓಡಿಸಲು ಆದೇಶಿಸಲಾಗಿತ್ತು. ಈಗ ಅಕ್ಟೋಬರ್ 31ರ ತನಕ ವಿಸ್ತರಣೆ ಮಾಡಲಾಗಿದೆ.

* ರೈಲು ನಂಬರ್ 07340 ಕೆಎಸ್ಆರ್ ಬೆಂಗಳೂರು-ಎಸ್‌ಎಸ್‌ಎಸ್ ಹುಬ್ಬಳ್ಳಿ ಪ್ರತಿದಿನದ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಬೆಂಗಳೂರಿನಿಂದ ಅಕ್ಟೋಬರ್ 1ರ ತನಕ ಓಡಿಸಲು ಆದೇಶಿಸಲಾಗಿತ್ತು. ಈಗ ರೈಲು ಸೇವೆಯನ್ನು ನವೆಂಬರ್ 1ರ ತನಕ ವಿಸ್ತರಣೆ ಮಾಡಲಾಗಿದೆ.

* ರೈಲು ಸಂಖ್ಯೆ 06547 ಕೆಎಸ್ಆರ್ ಬೆಂಗಳೂರು-ವೇಲಂಕನ್ನಿ ವಾರದ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಕೆಎಸ್ಆರ್ ಬೆಂಗಳೂರುನಿಂದ ಸೆಪ್ಟೆಂಬರ್ 30ರ ತನಕ ಓಡಿಸಲು ತೀರ್ಮಾನಿಸಲಾಗಿತ್ತು. ಈಗ ಅಕ್ಟೋಬರ್ 28ರ ತನಕ ವಿಸ್ತರಣೆ ಮಾಡಲಾಗಿದೆ. (ಒಟ್ಟು 4 ಟ್ರಿಪ್ ಅಕ್ಟೋಬರ್ 7, 14, 21 ಮತ್ತು 28ರಂದು) ರೈಲು ಸಂಚಾರ ನಡೆಸಲಿದೆ.

* ರೈಲು ನಂಬರ್ 06548 ವೇಲಂಕನ್ನಿ-ಕೆಎಸ್ಆರ್ ಬೆಂಗಳೂರು ವಾರದ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಹಿಂದೆ ವೇಲಂಕನ್ನಿಯಿಂದ ಸೆಪ್ಟೆಂಬರ್ 30ರ ತನಕ ಓಡಿಸಲು ತೀರ್ಮಾನಿಸಲಾಗಿತ್ತು. ಈಗ ಅಕ್ಟೋಬರ್ 28ರ ತನಕ ವಿಸ್ತರಣೆ ಮಾಡಲಾಗಿದೆ. (4 ಟ್ರಿಪ್‌ಗಳಲ್ಲಿ ಅಕ್ಟೋಬರ್ 7, 14, 21 ಮತ್ತು 28ರಂದು) ರೈಲು ಓಡಲಿದೆ.

* ರೈಲು ನಂಬರ್ 06545 ಯಶವಂತಪುರ-ವಿಜಯಪುರ ಪ್ರತಿದಿನದ ವಿಶೇಷ ರೈಲನ್ನು ಈ ಹಿಂದೆ ಯಶವಂತಪುರದಿಂದ ಸೆಪ್ಟೆಂಬರ್ 29ರ ತನಕ ಓಡಿಸಲು ತೀರ್ಮಾನಿಸಲಾಗಿತ್ತು. ಅದನ್ನು ಈಗ ಡಿಸೆಂಬರ್ 31, 2023ರ ತನಕ ವಿಸ್ತರಣೆ ಮಾಡಲಾಗಿದೆ.

* ರೈಲು ನಂಬರ್ 06546 ವಿಜಯಪುರ-ಯಶವಂತಪುರ ಪ್ರತಿದಿನದ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ವಿಜಯಪುರದಿಂದ ಮೊದಲು ಸೆಪ್ಟೆಂಬರ್ 30ರ ತನಕ ಓಡಿಸಲು ತೀರ್ಮಾನಿಸಲಾಗಿತ್ತು. ಈಗ ಈ ರೈಲು ಸೇವೆಯನ್ನು ಜನವರಿ 1, 2024ರ ತನಕ ವಿಸ್ತರಣೆ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+