ಹುಬ್ಬಳ್ಳಿ, ಅರಸೀಕೆರೆ, ಬೆಂಗಳೂರು ರೈಲು ಪ್ರಯಾಣಿಕರ ಗಮನಕ್ಕೆ, ಸಂಚಾರದಲ್ಲಿ ಬದಲಾವಣೆ
ಬೆಂಗಳೂರು, ಆಗಸ್ಟ್ 20: ನೈಋತ್ಯ ರೈಲ್ವೆ ಹುಬ್ಬಳ್ಳಿ, ಅರಸೀಕೆರೆ, ಬೆಂಗಳೂರು, ಮೈಸೂರು ನಗರಕ್ಕೆ ಸಂಚಾರ ನಡೆಸುವ ಕೆಲವು ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಿದೆ. ಈ ಬದಲಾವಣೆ ತಾತ್ಕಾಲಿಕವಾಗಿದ್ದು, ನಿಗದಿತ ದಿನಾಂಕದ ಬಳಿಕ ರೈಲುಗಳು ಸಾಮಾನ್ಯ ವೇಳಾಪಟ್ಟಿಯಂತೆ ಸಂಚಾರ ನಡೆಸಲಿವೆ. ರೈಲುಗಳ ತಾತ್ಕಾಲಿಕ ನಿಲುಗಡೆ, ರೈಲು ನಿಯಂತ್ರಣ, ಭಾಗಶಃ ರದ್ದು ಕುರಿತು ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಲಾಗಿದೆ. ಪ್ರಯಾಣಿಕರು ಈ ಬದಲಾವಣೆ ಗಮನಿಸಿ, ಸಂಚಾರ ನಡೆಸಬಹುದು.
ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಮತ್ತು ಸಿಂಧನೂರು ನಿಲ್ದಾಣಗಳ ನಡುವೆ ಪ್ರದಿದಿನ ಸಂಚರಿಸುವ ಪ್ಯಾಸೆಂಜರ್ ಸ್ಪೆಷಲ್ ರೈಲುಗಳಿಗೆ (ರೈಲು ಸಂಖ್ಯೆ 07381/ 07382) ಹಳ್ಳಿಗುಡಿ ಹಾಲ್ಟ್ ನಿಲ್ದಾಣದಲ್ಲಿ 1 ನಿಮಿಷದ ತಾತ್ಕಾಲಿಕ ನಿಲುಗಡೆ ಸೌಲಭ್ಯವನ್ನು ಸೆಪ್ಟೆಂಬರ್ 1, 2024ರಿಂದ ಫೆಬ್ರವರಿ 28, 2025ರ ವರೆಗೆ ಅಸ್ತಿತ್ವದಲ್ಲಿರುವ ಸಮಯದೊಂದಿಗೆ 6 ತಿಂಗಳವರೆಗೆ ಮುಂದುವರಿಸಲಾಗುತ್ತಿದೆ ಎಂದು ನೈಋತ್ಯ ರೈಲ್ವೆ ಹೇಳಿದೆ.

ಸೋಲಾಪುರ- ಹುಬ್ಬಳ್ಳಿ ಪ್ಯಾಸೆಂಜರ್ ಸ್ಪೆಷಲ್ ರೈಲಿನ ನಿಯಂತ್ರಣದ ಬಗ್ಗೆ ಮಾಹಿತಿ ನೀಡಲಾಗಿದೆ. ಆಗಸ್ಟ್ 20 ಮತ್ತು 22 ರಂದು ಸೋಲಾಪುರದಿಂದ ಪ್ರಯಾಣ ಬೆಳೆಸುವ ರೈಲು ಸಂಖ್ಯೆ 07331 ಸೋಲಾಪುರ- ಎಸ್‌ಎಸ್‌ಎಸ್ ಹುಬ್ಬಳ್ಳಿ ಡೈಲಿ ಪ್ಯಾಸೆಂಜರ್ ಸ್ಪೆಷಲ್ ರೈಲು ಕುಸುಗಲ್ ಮತ್ತು ಹೆಬಸೂರ ನಿಲ್ದಾಣಗಳ ನಡುವೆ ಹಳಿ ನಿರ್ವಹಣಾ ಕಾಮಗಾರಿ ನಿಮಿತ್ತ 60 ನಿಮಿಷಗಳ ಕಾಲ ಮಾರ್ಗ ಮಧ್ಯದಲ್ಲಿ ನಿಯಂತ್ರಿಸಲಾಗುತ್ತಿದೆ.
ರೈಲುಗಳ ಸಂಚಾರ ಭಾಗಶಃ ರದ್ದು: ಅರಸೀಕೆರೆ ಯಾರ್ಡ್‌ನಲ್ಲಿ ಸುರಕ್ಷತೆಗೆ ಸಂಬಂಧಿಸಿದ ಕಾಮಗಾರಿ ಕೈಗೊಳ್ಳುವ ಸಲುವಾಗಿ ಹಲವು ರೈಲುಗಳನ್ನು ಭಾಗಶಃ ರದ್ದು, ಸಮಯ ಮರುನಿಗದಿ & ನಿಯಂತ್ರಿಸಲಾಗುತ್ತಿದೆ. ಆ ರೈಲುಗಳ ಮಾಹಿತಿ ಹೀಗಿದೆ.
ಭಾಗಶಃ ರದ್ದು: ರೈಲು ಸಂಖ್ಯೆ 16214 ಎಸ್‌ಎಸ್‌ಎಸ್ ಹುಬ್ಬಳ್ಳಿ-ಅರಸೀಕೆರೆ ಡೈಲಿ ಎಕ್ಸ್‌ಪ್ರೆಸ್ ರೈಲು ಆಗಸ್ಟ್ 26, ಸೆಪ್ಟೆಂಬರ್ 2, 9, 16, 21, 23, 28, 30, ಅಕ್ಟೋಬರ್ 5 ಮತ್ತು 14ರಂದು ಬೀರೂರು-ಅರಸೀಕೆರೆ ನಿಲ್ದಾಣಗಳ ನಡುವೆ ಭಾಗಶಃ ರದ್ದು.
ರೈಲು ಸಂಖ್ಯೆ 16213 ಅರಸೀಕೆರೆ-ಎಸ್‌ಎಸ್‌ಎಸ್ ಹುಬ್ಬಳ್ಳಿ ಡೈಲಿ ಎಕ್ಸ್‌ಪ್ರೆಸ್ ರೈಲನ್ನು ಆಗಸ್ಟ್ 27, ಸೆಪ್ಟೆಂಬರ್ 3, 10, 17, 22, 24, 29, ಅಕ್ಟೋಬರ್ 1, 6 ಮತ್ತು 15ರಂದು ಅರಸೀಕೆರೆ-ಬೀರೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ.
ರೈಲು ಸಂಖ್ಯೆ 06213 ಅರಸೀಕೆರೆ-ಮೈಸೂರು ಡೈಲಿ ಪ್ಯಾಸೆಂಜರ್ ಸ್ಪೆಷಲ್ ರೈಲು ಆಗಸ್ಟ್ 27, ಸೆಪ್ಟೆಂಬರ್ 3, 10, 17, 24, ಅಕ್ಟೋಬರ್ 1 ಮತ್ತು 15ರಂದು ಅರಸೀಕೆರೆ-ಹಾಸನ ನಿಲ್ದಾಣಗಳ ನಡುವೆ ಭಾಗಶಃ ರದ್ದು.
ರೈಲು ಸಂಖ್ಯೆ 06274 ಅರಸೀಕೆರೆ-ಕೆಎಸ್‌ಆರ್ ಬೆಂಗಳೂರು ಡೈಲಿ ಪ್ಯಾಸೆಂಜರ್ ಸ್ಪೆಷಲ್ ರೈಲು ಆಗಸ್ಟ್ 27, ಸೆಪ್ಟೆಂಬರ್ 3, 10, 17, 24, ಅಕ್ಟೋಬರ್ 1 ಮತ್ತು 15ರಂದು ಅರಸೀಕೆರೆ ನಿಲ್ದಾಣದಿಂದ 155 ನಿಮಿಷ ತಡವಾಗಿ ಪ್ರಯಾಣ ಮಾಡುವಂತೆ ಸಮಯ ಮರು ನಿಗದಿ ಮಾಡಲಾಗಿದೆ.
ರೈಲುಗಳ ನಿಯಂತ್ರಣ: ಆಗಸ್ಟ್ 31, ಸೆಪ್ಟೆಂಬರ್ 21, 28, ಅಕ್ಟೋಬರ್ 5 ಮತ್ತು 12ರಂದು ಪ್ರಾರಂಭವಾಗುವ ರೈಲು ಸಂಖ್ಯೆ 16545 ಯಶವಂತಪುರ-ಸಿಂಧನೂರು ಡೈಲಿ ಪ್ಯಾಸೆಂಜರ್ ಸ್ಪೆಷಲ್ ರೈಲು ಮಾರ್ಗ ಮಧ್ಯ 30 ನಿಮಿಷಗಳವರೆಗೆ ನಿಯಂತ್ರಿಸಲಾಗುತ್ತದೆ.
ಆಗಸ್ಟ್ 31, ಸೆಪ್ಟೆಂಬರ್ 21, 28, ಅಕ್ಟೋಬರ್ 5 ಮತ್ತು 12, 2024 ರಂದು ಪ್ರಾರಂಭವಾಗುವ ರೈಲು ಸಂಖ್ಯೆ 20653 ಕೆಎಸ್‌ಆ ಬೆಂಗಳೂರು-ಬೆಳಗಾವಿ ಎಕ್ಸ್‌ಪ್ರೆಸ್ ರೈಲನ್ನು ಮಾರ್ಗ ಮಧ್ಯ 20 ನಿಮಿಷಗಳವರೆಗೆ ನಿಯಂತ್ರಿಸಲಾಗುತ್ತದೆ ಎಂದು ಮಾಹಿತಿ ನೀಡಲಾಗಿದೆ.












Click it and Unblock the Notifications