ಬೆಳಗಾವಿ, ಹುಬ್ಬಳ್ಳಿಯಿಂದ ಉಧ್ನಾ ನಿಲ್ದಾಣಕ್ಕೆ ವಿಶೇಷ ರೈಲು: ವೇಳಾಪಟ್ಟಿ, ನಿಲ್ದಾಣ

ಹುಬ್ಬಳ್ಳಿ, ಜುಲೈ 09: ನೈಋತ್ಯ ರೈಲ್ವೆ ಬೆಳಗಾವಿ, ಹುಬ್ಬಳ್ಳಿಯಿಂದ ಉಧ್ನಾ ನಿಲ್ದಾಣಕ್ಕೆ ಏಕಮುಖ ವಿಶೇಷ ರೈಲು ಸೇವೆಯನ್ನು ಘೋಷಣೆ ಮಾಡಿದೆ. ರೈಲು ಸಂಚಾರದ ವೇಳಾಪಟ್ಟಿ, ನಿಲ್ದಾಣಗಳ ಮಾಹಿತಿಯನ್ನು ನೀಡಿದೆ.

ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತು ಹೆಚ್ಚುವರಿ ದಟ್ಟಣೆಯನ್ನು ತೆರವುಗೊಳಿಸಲು ಬೆಳಗಾವಿ ಮತ್ತು ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ನಿಲ್ದಾಣದಿಂದ ಉಧ್ನಾ ನಿಲ್ದಾಣಕ್ಕೆ ಏಕಮುಖ ವಿಶೇಷ ರೈಲು ಓಡಿಸಲಾಗುತ್ತಿದೆ.

Special Train Between Hubballi Belagavi To Udhna

ರೈಲು ಸಂಖ್ಯೆ 07354 ಮತ್ತು 07358 ರೈಲು ಸಂಚಾರ ನಡೆಸಲಿದೆ. ಪ್ರಯಾಣಿಕರು ಮುಂಗಡ ಬುಕ್ಕಿಂಗ್‌ಗೆ www.enquiry.indianrail.gov.in ವೆಬ್‌ಸೈಟ್‌ಗೆ ಭೇಟಿ ನೀಡಿ ಅಥವಾ ಸಹಾಯವಾಣಿ 139 ನಂಬರ್‌ಗೆ ಡಯಲ್ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.

ವೇಳಾಪಟ್ಟಿ, ನಿಲ್ದಾಣಗಳು: ಬೆಳಗಾವಿ-ಉಧ್ನಾ ವಿಶೇಷ ರೈಲು (07354) ಜುಲೈ 10 ರಂದು, ಬೆಳಗಾವಿಯಿಂದ ಬೆಳಗ್ಗೆ 10.30 ಗಂಟೆಗೆ ಹೊರಟು ಘಟಪ್ರಭಾ, ರಾಯಬಾಗ, ಕುಡಚಿ, ಮೀರಜ್, ಸಾಂಗ್ಲಿ, ಕರಾಡ, ಸತಾರಾ, ಪುಣೆ, ಕಲ್ಯಾಣ್, ಭಿವಂಡಿ ರೋಡ್, ವಸಾಯಿ ರೋಡ್, ಪಾಲ್ಘರ್, ವಾಪಿ ಮತ್ತು ವಲ್ಸಾದ್ ನಿಲ್ದಾಣಗಳಲ್ಲಿ ನಿಲುಗಡೆಗೊಂಡು ಮರುದಿನ ಮಧ್ಯ ರಾತ್ರಿ 2.45ಕ್ಕೆ ಉಧ್ನಾ ನಿಲ್ದಾಣವನ್ನು ತಲುಪಲಿದೆ.

ಈ ವಿಶೇಷ ರೈಲು ಎಸಿ ತ್ರಿ ಟೈಯರ್-2, ಸ್ಲೀಪರ್ ಕ್ಲಾಸ್-10, ಜನರಲ್ ಸೆಕೆಂಡ್ ಕ್ಲಾಸ್-3, ಎಸ್‌ಎಲ್‌ಆರ್‌ಡಿ-2 ಸೇರಿದಂತೆ ಒಟ್ಟು 17 ಬೋಗಿಗಳನ್ನು ಒಳಗೊಂಡಿರುತ್ತದೆ.

ಜುಲೈ 13 ರಂದು ಹುಬ್ಬಳ್ಳಿಯಿಂದ ಉಧ್ನಾಗೆ ವಿಶೇಷ ರೈಲು (07358) ಸಂಚಾರ ನಡೆಸಲಿದೆ. ಈ ವಿಶೇಷ ರೈಲು ಜುಲೈ 13 ರಂದು ರಾತ್ರಿ 8.20 ಗಂಟೆಗೆ ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ನಿಲ್ದಾಣದಿಂದ ಹೊರಟು ಬಾದಾಮಿ, ಬಾಗಲಕೋಟೆ, ವಿಜಯಪುರ, ಸೋಲಾಪುರ, ದೌಂಡ್, ಪುಣೆ, ಲೋನಾವಲ್, ಕಲ್ಯಾಣ್‌, ಕಮಾನ್‌ ರೋಡ್, ವಸಾಯಿ ರೋಡ್ ಮತ್ತು ವಾಪಿ ನಿಲ್ದಾಣಗಳಲ್ಲಿ ನಿಲುಗಡೆಯ ಮೂಲಕ ಮರುದಿನ ಸಂಜೆ 4.45 ಗಂಟೆಗೆ ಉಧ್ನಾ ನಿಲ್ದಾಣವನ್ನು ತಲುಪಲಿದೆ.

ಈ ವಿಶೇಷ ರೈಲು ಎಸಿ ಟು ಟೈಯರ್-1, ಎಸಿ ತ್ರಿ ಟೈಯರ್-2, ಸ್ಲೀಪರ್ ಕ್ಲಾಸ್-10, ಜನರಲ್ ಸೆಕೆಂಡ್ ಕ್ಲಾಸ್‌-5, ಎಸ್ಎಲ್‌ಆರ್‌ಡಿ-2 ಸೇರಿದಂತೆ ಒಟ್ಟು 20 ಬೋಗಿಗಳನ್ನು ಒಳಗೊಂಡಿರುತ್ತದೆ.

ಹವಾನಿಯಂತ್ರಿತ ಬೋಗಿಗಳು ಲಾಕ್ ಆಗಿರುತ್ತವೆ ಮತ್ತು ಪ್ರಯಾಣಿಕರಿಗೆ ಲಭ್ಯವಿರುವುದಿಲ್ಲ. ನಿಯಮಿತ ರೈಲುಗಳಲ್ಲಿ ವಿಪರೀತ ರಶ್‌ನಿಂದಾಗಿ ಅನಾನುಕೂಲತೆಯನ್ನು ಎದುರಿಸುತ್ತಿರುವ ಪ್ರಯಾಣಿಕರಿಗೆ ಈ ವಿಶೇಷ ರೈಲುಗಳು ಹೆಚ್ಚು ಅನುಕೂಲತೆಯನ್ನು ಒದಗಿಸುತ್ತವೆ ಎಂದು ನೈಋತ್ಯ ರೈಲ್ವೆ ಹೇಳಿದೆ.

ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ನೈಋತ್ಯ ರೈಲ್ವೆ ಹಲವು ಮಾರ್ಗದಲ್ಲಿ ಏಕಮುಖ ವಿಶೇಷ ರೈಲುಗಳನ್ನು ಓಡಿಸುತ್ತದೆ. ಈ ರೈಲುಗಳು ಕೇವಲ ತಾತ್ಕಾಲಿಕ, ಮುಂಗಡ ಟಿಕೆಟ್ ಬುಕ್ ಮಾಡುವ ಮೊದಲು ರೈಲು ಯಾವ ದಿನ ಸಂಚಾರ ನಡೆಸುತ್ತದೆ? ಎಂಬ ಮಾಹಿತಿಯನ್ನು ಪಡೆದು ಬುಕ್ ಮಾಡಿಕೊಳ್ಳಬೇಕು ಎಂದು ಪ್ರಯಾಣಿಕರಿಗೆ ಮನವಿ ಮಾಡಲಾಗಿದೆ.

ಬೆಳಗಾವಿ, ಹುಬ್ಬಳ್ಳಿಯಿಂದ ಹೊರಡುವ ರೈಲು ವಿವಿಧ ಜಿಲ್ಲೆಗಳ ಮೂಲಕ ಸಾಗುವುದರಿಂದ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ವೇಳಾಪಟ್ಟಿ, ನಿಲ್ದಾಣ ನೋಡಿಕೊಂಡು ಜನರು ಸಂಚಾರದ ಯೋಜನೆ ರೂಪಿಸಿಕೊಳ್ಳಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+