South Western Railway: ರಾಜ್ಯದ ಈ ಮಾರ್ಗಗಗಳ 12 ಪ್ರಮುಖ ರೈಲುಗಳ ಸಂಚಾರ 10 ದಿನ ರದ್ದು, ಯಾಕೆ & ದಿನಾಂಕಗಳನ್ನು ತಿಳಿಯಿರಿ

ನವದೆಹಲಿ, ಡಿಸೆಂಬರ್‌, 19: ಕಾಮಗಾರಿಗಳು ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ರೈಲುಗಳ ಸಂಚಾರ ರದ್ದು ಮಾಡಲಾಗುತ್ತದೆ. ಅದೇ ರೀತಿ ಇದೀಗ ಬಾಗಲಕೋಟೆ ಜಿಲ್ಲೆಯಲ್ಲಿ ರೈಲ್ವೆ ಕಾಮಗಾರಿಗಳು ನಡೆಯುತ್ತಿರುವ ಹಿನ್ನೆಲೆ ರಾಜ್ಯದಲ್ಲಿ ಸಂಚರಿಸುವ 12 ಪ್ರಮುಖ ರೈಲುಗಳ ಸಂಚಾರವನ್ನು 10 ದಿನಗಳ ಕಾಲ ರದ್ದು ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಯಾವೆಲ್ಲ ಮಾರ್ಗಗಗಳ ರೈಲುಗಳ ಸಂಚಾರವನ್ನು ರದ್ದಪಡಿಸಲಾಗಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಗುಳೇದಗುಡ್ಡ - ಬಾಗಲಕೋಟ ವಿಭಾಗದಲ್ಲಿ ಡಬಲ್ ಲೈನ್ ಮಾಡಲು ಪೂರ್ವ ಇಂಟರ್‌ಲಾಕಿಂಗ್ ಮತ್ತು ಇಂಟರ್‌ಲಾಕಿಂಗ್ ಕಾಮಗಾರಿ ಕಾರಣ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗುತ್ತದೆ ಎಂದು ನೈರುತ್ಯ ರೈಲ್ವೆ ಮಾಹಿತಿ ನೀಡಿದೆ.

South Western Railway: 12 major trains service canceled in these routes of state for 10 days

ಪೂರ್ಣ ಪ್ರಮಾಣದಲ್ಲಿ ರದ್ದಾಗಲಿರುವ ರೈಲುಗಳು

* ರೈಲು ಸಂಖ್ಯೆ 06919 ಎಸ್‌ಎಸ್‌ಎಸ್ ಹುಬ್ಬಳ್ಳಿ - ವಿಜಯಪುರ ದೈನಂದಿನ ಪ್ಯಾಸೆಂಜರ್ ಡಿಸೆಂಬರ್‌ 19, 2023 ರಿಂದ 28ರವರೆಗೆ ಪ್ರಯಾಣವನ್ನು ರದ್ದುಪಡಿಸಲಾಗಿದೆ.

* ರೈಲು ಸಂಖ್ಯೆ 06920 ವಿಜಯಪುರ-ಎಸ್‌ಎಸ್‌ಎಸ್ ಹುಬ್ಬಳ್ಳಿ ಡೈಲಿ ಪ್ಯಾಸೆಂಜರ್ ಪ್ರಯಾಣವನ್ನು ಡಿಸೆಂಬರ್‌ 19, 2023ರಿಂದ 29ರವರೆಗೆ ರದ್ದು ಮಾಡಲಾಗಿದೆ.

* ರೈಲು ಸಂಖ್ಯೆ 07322 ಧಾರವಾಡ - ಸೋಲಾಪುರ ದೈನಂದಿನ ಪ್ಯಾಸೆಂಜರ್ ಡಿಸೆಂಬರ್‌ 19, 2023ರಿಂದ 28ರವರೆಗೆ ರದ್ದು ಮಾಡಲಾಗಿದೆ.

* ರೈಲು ಸಂಖ್ಯೆ 07331 ಸೋಲಾಪುರ - ಎಸ್‌ಎಸ್‌ಎಸ್ ಹುಬ್ಬಳ್ಳಿ ದೈನಂದಿನ ಪ್ರಯಾಣಿಕ ಪ್ರಯಾಣವನ್ನು ಡಿಸೆಂಬರ್‌ 20, 2023ರಿಂದ 29 ರವರೆಗೆ ರದ್ದು ಮಾಡಲಾಗಿದೆ.

* ರೈಲು ಸಂಖ್ಯೆ 11305 ಸೋಲಾಪುರ - ಹೊಸಪೇಟೆ ಡೈಲಿ ಎಕ್ಸ್‌ಪ್ರೆಸ್ ಡಿಸೆಂಬರ್‌ 19, 2023ರಿಂದ 28ರವರೆಗೆ ಪ್ರಯಾಣವನ್ನು ರದ್ದು ಮಾಡಲಾಗಿದೆ.

* ರೈಲು ಸಂಖ್ಯೆ 11306 ಹೊಸಪೇಟೆ - ಸೊಲ್ಲಾಪುರ ಡೈಲಿ ಎಕ್ಸ್‌ಪ್ರೆಸ್ ಡಿಸೆಂಬರ್‌ 20, 2023ರಿಂದ 29ರವರೆಗೆ ಪ್ರಯಾಣವನ್ನು ರದ್ದು ಮಾಡಲಾಗಿದೆ.

* ರೈಲು ಸಂಖ್ಯೆ 07329 ಎಸ್‌ಎಸ್‌ಎಸ್ ಹುಬ್ಬಳ್ಳಿ - ವಿಜಯಪುರ ಡೈಲಿ ಎಕ್ಸ್‌ಪ್ರೆಸ್ ಡಿಸೆಂಬರ್‌ 19, 2023ರಿಂದ 28ರವರೆಗೆ ಪ್ರಯಾಣವನ್ನು ರದ್ದು ಮಾಡಲಾಗಿದೆ.

* ರೈಲು ಸಂಖ್ಯೆ 07330 ವಿಜಯಪುರ - ಎಸ್‌ಎಸ್‌ಎಸ್ ಹುಬ್ಬಳ್ಳಿ ಡೈಲಿ ಎಕ್ಸ್‌ಪ್ರೆಸ್ ಡಿಸೆಂಬರ್‌ 20, 2023ರಿಂದ 29ರವರೆಗೆ ಪ್ರಯಾಣವನ್ನು ರದ್ದುಪಡಿಸಲಾಗಿದೆ.

ಭಾಗಶಃ ರದ್ದಾಗುವ ರೈಲುಗಳು?

* ರೈಲು ಸಂಖ್ಯೆ 17307 ಮೈಸೂರು - ಬಾಗಲಕೋಟೆ ಡೈಲಿ ಎಕ್ಸ್‌ಪ್ರೆಸ್ ಡಿಸೆಂಬರ್‌ 19, 2023ರಿಂದ 28ರವರೆಗೆ ಮೈಸೂರಿನಿಂದ ಪ್ರಯಾಣವನ್ನು ಆರಂಭಿಸಿ ವಿಜಯಪುರ ಮತ್ತು ಬಾಗಲಕೋಟೆ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳ್ಳುತ್ತದೆ. ಈ ರೈಲು ಪ್ರಯಾಣ ವಿಜಯಪುರದಲ್ಲಿ ಕೊನೆಯಾಗುತ್ತದೆ.

* ರೈಲು ಸಂಖ್ಯೆ 17308 ಬಾಗಲಕೋಟ - ಮೈಸೂರು ಡೈಲಿ ಎಕ್ಸ್‌ಪ್ರೆಸ್ ಬಾಗಲಕೋಟೆಯಿಂದ ಡಿಸೆಂಬರ್‌ 20, 2023ರಿಂದ 29ರವರೆಗೆ ಬಾಗಲಕೋಟೆ ಮತ್ತು ವಿಜಯಪುರ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳ್ಳುತ್ತದೆ. ಈ ರೈಲು ವಿಜಯಪುರ ನಿಲ್ದಾಣದಿಂದ ಆರಂಭ ಆಗಲಿದೆ.

* ರೈಲು ಸಂಖ್ಯೆ 07378 ಮಂಗಳೂರು - ವಿಜಯಪುರ ಡೈಲಿ ಎಕ್ಸ್‌ಪ್ರೆಸ್ ಡಿಸೆಂಬರ್‌ 19, 2023ರಿಂದ 28ರವರೆಗೆ ಎಸ್‌ಎಸ್‌ಎಸ್ ಹುಬ್ಬಳ್ಳಿ ಮತ್ತು ವಿಜಯಪುರ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳ್ಳುತ್ತದೆ. ಈ ರೈಲು ಇದು ಎಸ್‌ಎಸ್‌ಎಸ್ ಹುಬ್ಬಳ್ಳಿ ನಿಲ್ದಾಣದಲ್ಲಿ ಕೊನೆಯಾಗುತ್ತದೆ.

* ರೈಲು ಸಂಖ್ಯೆ 07377 ವಿಜಯಪುರ-ಮಂಗಳೂರು ಡೈಲಿ ಎಕ್ಸ್‌ಪ್ರೆಸ್ ಡಿಸೆಂಬರ್‌ 19, 2023ರಿಂದ 28ರವರೆಗೆ ವಿಜಯಪುರ ಮತ್ತು ಎಸ್‌ಎಸ್‌ಎಸ್ ಹುಬ್ಬಳ್ಳಿ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದೆ. ಇದು ಎಸ್‌ಎಸ್‌ಎಸ್ ಹುಬ್ಬಳ್ಳಿ ನಿಲ್ದಾಣದಿಂದ ಆರಂಭ ಆಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+