NWKRTC ; 2 ಮಾರ್ಗದಲ್ಲಿ ಹೊಸ ಬಸ್ ಘೋಷಣೆ ದರ, ವೇಳಾಪಟ್ಟಿ
ಹುಬ್ಬಳ್ಳಿ, ಜನವರಿ 25: ಹುಬ್ಬಳ್ಳಿಯಲ್ಲಿ ಪ್ರಧಾನ ಕಛೇರಿ ಹೊಂದಿರುವ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಎರಡು ಹೊಸ ಮಾರ್ಗದಲ್ಲಿ ನೂತನ ಬಸ್ ಸೇವೆಯನ್ನು ಘೋಷಣೆ ಮಾಡಿದೆ. ಉತ್ತರ ಕರ್ನಾಟಕ ಭಾಗದ ಜನರಿಗೆ ಅನುಕೂಲವಾಗುವ ಬಸ್ ಸೇವೆಯ ಮಾಹಿತಿ ಇಲ್ಲಿದೆ.
ವಾ.ಕ.ರ.ಸಾ.ಸಂಸ್ಥೆಯು ರಾಜಹಂಸ ಮತ್ತು ಪಲ್ಲಕ್ಕಿ ನಾನ್ ಎಸಿ ಸ್ಲೀಪರ್ ಬಸ್ ಸೇವೆಯನ್ನು ಆರಂಭಿಸಿದೆ. ಮಾರ್ಗ, ದರ, ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಪ್ರಯಾಣಿಕರು ಈ ಸೇವೆಯ ಉಪಯೋಗ ಪಡೆದುಕೊಳ್ಳಬೇಕು ಎಂದುದ ಕರೆ ನೀಡಲಾಗಿದೆ.

ರಾಜಹಂಸ ಬಸ್ ಸೇವೆ ವಿವರ; ವಾ.ಕ.ರ.ಸಾ.ಸಂಸ್ಥೆಯು ಹಾನಗಲ್-ನಾಸಿಕ್ ನಡುವೆ ರಾಜಹಂಸ ಬಸ್ ಸೇವೆಯನ್ನು ಆರಂಭಿಸಿದೆ. ಹಾವೇರಿ, ಹುಬ್ಬಳ್ಳಿ, ಬೆಳಗಾವಿ, ನಿಪ್ಪಾಣಿ, ಕೊಲ್ಹಾಪುರ, ಕರಾಡ, ಪುಣೆ ಮೂಲಕ ಈ ಬಸ್ ಸಂಚಾರ ನಡೆಸಲಿದೆ.
ಹಾನಗಲ್‌ನಿಂದ 15:30ಕ್ಕೆ ಹೊರಡುವ ಬಸ್ ನಾಸಿಕ್‌ಗೆ 07:15ಕ್ಕೆ ತಲುಪಲಿದೆ. ನಾಸಿಕ್‌ನಿಂದ 16:30ಕ್ಕೆ ಹೊರಡುವ ಬಸ್ ಹಾನಗಲ್‌ಗೆ 08:30ಕ್ಕೆ ತಲುಪಲಿದೆ. ಈ ಮಾರ್ಗದ ಪ್ರಯಾಣ ದರ 1,300 ರೂ.ಗಳು.
ಈ ಬಸ್‌ನಲ್ಲಿ ಸಂಚಾರ ನಡೆಸಲು ಪ್ರಯಾಣಿಕರು www.ksrtc.in ವೆಬ್ ಸೈಟ್ ಮೂಲಕ ಟಿಕೆಟ್ ಬುಕ್ ಮಾಡಬಹುದು ಎಂದು ವಾ.ಕ.ರ.ಸಾ.ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.
ಪಲ್ಲಕ್ಕಿ ಬಸ್ ಸೇವೆಯ ಮಾಹಿತಿ; ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬೆಳಗಾವಿ-ಲಾತೂರ ನಡುವೆ ಪಲ್ಲಕ್ಕಿ ನಾನ್ ಎಸಿ ಸ್ಲೀಪರ್ ಬಸ್ ಸೇವೆಯನ್ನು ಆರಂಭಿಸಿದೆ. ಈ ಮಾರ್ಗಕ್ಕೆ 900 ರೂ. ಪ್ರಯಾಣ ದರವನ್ನು ನಿಗದಿ ಮಾಡಲಾಗಿದೆ.
ಬೆಳಗಾವಿಯಿಂದ ಹೊರಡುವ ಬಸ್ ಲೋಕಾಪುರ, ಮುಧೋಳ, ಜಮಖಂಡಿ, ವಿಜಯಪುರ, ಸೊಲ್ಲಾಪುರ, ತುಳಜಾಪುರ ಮಾರ್ಗವಾಗಿ ಸಂಚಾರ ನಡೆಸಲಿದೆ ಎಂದು ಪ್ರಕಟಣೆ ತಿಳಿಸಿದೆ.
ಈ ಬಸ್ ಬೆಳಗಾವಿಯಿಂದ 20:00ಕ್ಕೆ ಹೊರಡಲಿದೆ. ಲಾತೂರ ಅನ್ನು 6.20ಕ್ಕೆ ತಲುಪಲಿದೆ. ಲಾತೂರದಿಂದ 19:30ಕ್ಕೆ ಹೊರಟು, ಬೆಳಗಾವಿಯನ್ನು 05:30ಕ್ಕೆ ತಲುಪಲಿದೆ.
ಬಸ್ ಸೇವೆಗಾಗಿ www.ksrtc.in ವೆಬ್ ಸೈಟ್ ಮೂಲಕ ಟಿಕೆಟ್ ಬುಕ್ ಮಾಡಬಹುದಾಗಿದೆ.












Click it and Unblock the Notifications