ವಿಸ್ತಾರಾ ಏರ್‌ಲೈನ್ಸ್‌ನ 100ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದು-ಇದರಿಂದ ಏನೆಲ್ಲಾ ಆಯ್ತು ಗೊತ್ತಾ?
ನವದೆಹಲಿ, ಏಪ್ರಿಲ್, 02: ಸಾಮಾನ್ಯವಾಗಿ ಹವಾಮಾನ ವೈಪರಿತ್ಯದ ವೇಳೆ ವಿಮಾನಗಳನ್ನು ರದ್ದು ಮಾಡಲಾಗುತ್ತದೆ. ಆದರೆ ಕಳೆದ ವಾರ ಟಾಟಾ ಗ್ರೂಪ್‌ನ ವಿಸ್ತಾರಾ ಏರ್‌ಲೈನ್ಸ್‌ನ ಹಲವಾರು ವಿಮಾನಗಳನ್ನು ರದ್ದುಗೊಳಿಸಿತ್ತು. ಅಲ್ಲದೆ, ಅನೇಕ ವಿಮಾನಗಳು ವಿಳಂಬದೊಂದಿಗೆ ತನ್ನ ಪ್ರಯಾಣವನ್ನು ಆರಂಭಿಸಿವೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಈ ವೇಳೆ ಪ್ರಯಾಣಿಕರು ಏನೆಲ್ಲ ಸಮಸ್ಯೆಗಳನ್ನು ಅನುಭವಿಸಿದರು ಎಂದು ಇಲ್ಲಿ ತಿಳಿಯಿರಿ.
ಇನ್ನು ವಿಮಾನಗ ಸಂಚಾರ ಆರಂಭದ ಸಮಯದಲ್ಲಿ ಪ್ರಯಾಣಿಕರು ನಾವು ತುಂಬಾ ತೊಂದರೆಗಳನ್ನು ಎದುರಿಸಬೇಕಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಈ ಕುರಿತು ಇದೀಗ ನಾಗರಿಕ ವಿಮಾನಯಾನ ಸಚಿವಾಲಯ (ಎಂಒಸಿಎ) ವಿಸ್ತಾರಾದಿಂದ ವಿವರವಾದ ವರದಿಯನ್ನು ಕೇಳಿದೆ. ಈ ವರದಿಯಲ್ಲಿ, ವಿಮಾನಯಾನ ವಿಮಾನಗಳ ವಿಳಂಬ ಮತ್ತು ರದ್ದತಿಗೆ ಕಾರಣವನ್ನು ಸಚಿವಾಲಯ ಟ್ವೀಟ್ ಮೂಲಕ ಕೇಳಿದೆ.

ಸಾಮಾನ್ಯವಾಗಿ ವಿಮಾನಗಳ ವಿಳಂಬದಿಂದ ತುಂಬಾ ತೊಂದರೆಗಳನ್ನು ಅನುಭವಿಸಿದ ತುಂಬಾ ಉದಾಹರಣೆಗಳಿವೆ. ಹಾಗೆಯೇ ವಿಮಾನಯಾನ ಸಂಸ್ಥೆ ವಿಳಂಬವಾಗಿರುವ ವಿಮಾನಗಳ ಬಗ್ಗೆ ವರದಿಯನ್ನು ಕೇಳುತ್ತಿರುತ್ತದೆ. ಆದರೆ ಇದೀಗ ಟಾಟಾ ಗ್ರೂಪ್‌ನ ವಿಸ್ತಾರಾ ಏರ್‌ಲೈನ್ಸ್‌ನ 100ಕ್ಕೂ ಹೆಚ್ಚು ವಿಮಾನಗಳು ರದ್ದುಗೊಂಡ ಬಗ್ಗೆ ಕಾರಣ ಹಾಗೂ ಇನ್ನಿತರ ವಿಮಾನಗಳ ಸಂಚಾರ ಆರಂಭದಲ್ಲಿ ವಿಳಂಬವಾಗಿರುವ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ ಕೊಡುವಂತೆ ವಿಮಾನ ಸಂಸ್ಥೆಗೆ ಕೇಳಿದೆ.
Ministry of Civil Aviation (MoCA) sought a detailed report from Vistara regarding flight cancellations and major delays, with the airline having cancelled or delayed over 100 flights in the past week: MoCA official to ANI pic.twitter.com/IeGngZ8IKV
— ANI (@ANI) April 2, 2024
ಒಟ್ಟಿನಲ್ಲಿ ವಿಮಾನಗಳ ವಿಳಂಬದಿಂದ ತೊಂದರೆ ಅನುಭವಿಸುದಂತೂ ಪ್ರಯಾಣಿಕರೇ ಆಗಿರುತ್ತಾರೆ. ಆದ್ದರಿಂದ ಕೇಂದ್ರವು ವಿಮಾನಗಳ ವಿಳಂಬಕ್ಕೆ ಕಾರಣ ಕೇಳುವ ಮೂಲಕ ವಿಮಾನಯಾನ ಸಂಸ್ಥೆ ವಿರುದ್ಧ ಕೆಂಡಕಾರಿದೆ. ಇನ್ನು ವಿಮಾನ ಸಂಸ್ಥೆಯಿಂದ ಯಾವ ರೀತಿಯ ಉತ್ತರಗಳು ಬರುತ್ತವೆ ಹಾಗೂ ಪ್ರಯಾಣಿಕರಿಗಾದ ಅನಾನುಕೂಲತೆಗಳನ್ನು ಹೇಗೆ ಸರಿಪಡಿಸುತ್ತದೆ ಎಂದು ಕಾದುನೋಡಬೇಕಿದೆ.












Click it and Unblock the Notifications