Vande Bharat Express: ವಂದೇ ಭಾರತ್ ರೈಲು, ಕರ್ನಾಟಕ ಕರಾವಳಿ ಜನರಿಗೆ ಸಿಹಿಸುದ್ದಿ
ಮಂಗಳೂರು, ನವೆಂಬರ್ 21: ಭಾರತೀಯ ರೈಲ್ವೆಯ ಸೆಮಿ ಹೈಸ್ಪೀಡ್ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಬಹಳ ಬೇಡಿಕೆ ಇದೆ. ದೇಶಾದ್ಯಂತ 65ಕ್ಕೂ ಹೆಚ್ಚು ರೈಲುಗಳು ಸಂಚಾರ ನಡೆಸುತ್ತಿವೆ. ಈ ಮಾದರಿ ರೈಲುಗಳಿಗೆ ಇರುವ ಬೇಡಿಕೆಯನ್ನು ಪರಿಗಣಿಸಿ ಬೋಗಿಗಳ ಸಂಖ್ಯೆಯನ್ನು ಹೆಚ್ಚಳ ಮಾಡಲಾಗುತ್ತಿದೆ. ಕೇರಳ ರಾಜ್ಯಕ್ಕೆ ಹೆಚ್ಚುವರಿ ಬೋಗಿಯನ್ನು ಇಲಾಖೆ ಮಂಜೂರು ಮಾಡುತ್ತಿದ್ದು, ಕರ್ನಾಟಕಕ್ಕೆ ಲಾಭವಾಗಲಿದೆ.
ಸದ್ಯದ ಮಾಹಿತಿ ಪ್ರಕಾರ ಕೇರಳ ರಾಜ್ಯಕ್ಕೆ 20 ವಂದೇ ಭಾರತ್ ರೈಲು ಬೋಗಿಗಳು ಬರಲಿವೆ. ಇದರಿಂದಾಗಿ ಈಗ ಸಂಚಾರ ನಡೆಸುತ್ತಿರುವ ರೈಲುಗಳ ಬೋಗಿಗಳ ಸಂಖ್ಯೆಯನ್ನು ಹೆಚ್ಚಳ ಮಾಡಲಾಗುತ್ತಿದೆ. ತಿರುವನಂತಪುರ-ಮಂಗಳೂರು ನಡುವಿನ ರೈಲು ಬೋಗಿಯ ಸಂಖ್ಯೆ ಹೆಚ್ಚಳವಾಗಲಿದೆ.

ಪ್ರಯಾಣಿಕರಿಂದ ಬೇಡಿಕೆ: ರೈಲು ನಂಬರ್ 20631/ 20632 ತಿರುವನಂತಪುರ-ಮಂಗಳೂರು-ತಿರುವನಂತಪುರ ನಡುವೆ ವಯಾ ಅಲಪುಜಾ ನಡುವೆ ಸಂಚಾರವನ್ನು ನಡೆಸುತ್ತಿದೆ. ಹೋಗುವ ಮತ್ತು ಬರುವ ಮಾರ್ಗದಲ್ಲಿ ರೈಲಿನಲ್ಲಿ ಶೇ 200ರಷ್ಟು ಪ್ರಯಾಣಿಕರ ಬೇಡಿಕೆ ಇದೆ. ಆದ್ದರಿಂದ ರೈಲ್ವೆ ಇಲಾಖಗೆ ಈ ಮಾರ್ಗದ ರೈಲುಗಳ ಬೋಗಿಯ ಸಂಖ್ಯೆಯನ್ನು ಹೆಚ್ಚಳ ಮಾಡಲಿದೆ.
ರೈಲು ನಂಬರ್ 20631 ಮಂಗಳೂರು-ತಿರುವನಂತಪುರ ಸದ್ಯ ಸಂಪೂರ್ಣ ಭರ್ತಿಯಾಗಿ ಸಂಚಾರ ನಡೆಸುತ್ತಿವೆ. ಈಗ ರೈಲುನ್ನು 20 ಬೋಗಿಯಾಗಿ ಪರಿವರ್ತನೆ ಮಾಡಿದರೆ ಹೆಚ್ಚಿನ ಸೀಟುಗಳು ಲಭ್ಯವಾಗಲಿದ್ದು, ಹೆಚ್ಚಿನ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ಭಾರತೀಯ ರೈಲ್ವೆ ಕೆಲವು ದಿನಗಳ ಹಿಂದೆ 20 ಬೋಗಿಯ ವಂದೇ ಭಾರತ್ ರೈಲು ಪರಿಚಯಿಸಿದೆ. ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ಈ ಮಾದರಿ ರೈಲುಗಳನ್ನು ತಯಾರಿಸಲಾಗಿದೆ. ದಕ್ಷಿಣ ರೈಲ್ವೆಗೆ ಕೆಲವು ದಿನಗಳ ಹಿಂದೆ ಈ ಮಾದರಿ ರೈಲು ಬೋಗಿಯನ್ನ ಹಸ್ತಾಂತರ ಮಾಡಲಾಗಿದೆ.
ತಿರುವನ್ವೇಲಿ-ಚೆನ್ನೈ ನಡುವೆ 8 ಬೋಗಿಯನ್ನು ಹೊಂದಿರುವ ರೈಲು ಸಂಚಾರ ನಡೆಸುತ್ತಿದೆ ಈ ರೈಲು ಬೋಗಿಯನ್ನು ಹೆಚ್ಚಿಸಲಾಗುತ್ತಿದೆ. ರೈಲು ನಂಬರ್ 20634 ತಿರುವನಂತಪುರ-ಕಾಸರಗೋಡು ರೈಲು 16 ಬೋಗಿಯನ್ನು ಹೊಂದಿದೆ. 1016 ಸೀಟುಗಳಿದ್ದು, ಸಂಪೂರ್ಣ ಭರ್ತಿಯಾಗುತ್ತಿದ್ದು, ಇದನ್ನು 20 ಬೋಗಿಯಾಗಿ ಬದಲಾಯಿಸಲಾಗುತ್ತದೆ.
ಭಾರತೀಯ ರೈಲ್ವೆ ಮೊದಲು ಬಿಳಿ ಮತ್ತು ನೀಲಿ ಬಣ್ಣದ ವಂದೇ ಭಾರತ್ ರೈಲುಗಳನ್ನು ಪರಿಚಯಿಸಿತ್ತು. ಈಗ ಕೇಸರಿ ಮತ್ತು ಕಪ್ಪು ಬಣ್ಣದ ಮಾದರಿ ರೈಲುಗಳ ಸೇವೆಯನ್ನು ಆರಂಭಿಸಿದೆ. ಈಗ ಹೊಸದಾಗಿ ಬರುವ ರೈಲು ಬೋಗಿಗಳು ಇದೇ ಮಾದರಿಯವು ಎಂಬ ಮಾಹಿತಿ ಸಿಕ್ಕಿದೆ.
ಮೊದಲು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ತಿರುವನಂತಪುರಂ-ಕಾಸರಗೋಡು ತನಕ ಓಡಿಸಲಾಗುತ್ತಿತ್ತು. ಬಳಿಕ ಕರ್ನಾಟಕದ ಕರಾವಳಿ ಭಾಗದ ಬೇಡಿಕೆಯನ್ನು ಪರಿಗಣಿಸಿ ಈ ರೈಲನ್ನು ಮಂಗಳೂರು ತನಕ ವಿಸ್ತರಣೆ ಮಾಡಲಾಗಿದೆ. ಈ ರೈಲಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಪ್ರಯಾಣಿಕರಿಂದ ಭರ್ತಿಯಾಗುತ್ತಿದೆ.
ತಿರುವನಂತಪುರ-ಮಂಗಳೂರು ನಡುವಿನ ಸಂಚಾರಕ್ಕೆ ರೈಲು 8 ಗಂಟೆ 35 ನಿಮಿಷ ತೆಗೆದುಕೊಳ್ಳುತ್ತದೆ. ಈ ಮಾರ್ಗದಲ್ಲಿ ಸಾಮಾನ್ಯ ರೈಲು ಸಂಚಾರಕ್ಕೆ 12 ಗಂಟೆ 50 ನಿಮಿಷ ಮತ್ತು 15 ಗಂಟೆ ತೆಗೆದುಕೊಳ್ಳುತ್ತದೆ. ಆದ್ದರಿಂದ ವಂದೇ ಭಾರತ್‌ಗೆ ಬೇಡಿಕೆ ಹೆಚ್ಚಾಗಿದೆ.
ಕರಾವಳಿ ಭಾಗದ ಜನರು ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭಿಸಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಆದರೆ ಈ ಬೇಡಿಗೆ ಇನ್ನೂ ರೈಲ್ವೆ ಇಲಾಖೆ ಒಪ್ಪಿಗೆ ನೀಡಿಲ್ಲ. ಕೆಲವು ತಾಂತ್ರಿಕ ಕಾರಣಗಳಿಂದಾಗಿ ಈ ಮಾರ್ಗದ ರೈಲು ಸಂಚಾರ ವಿಳಂಬವಾಗುತ್ತಿದೆ.












Click it and Unblock the Notifications