Sakleshpur Landslide: ರೈಲು ಸಂಚಾರದಲ್ಲಿ ಬದಲಾವಣೆ, ಪಟ್ಟಿ

ಬೆಂಗಳೂರು, ಆಗಸ್ಟ್ 10: ಭೂ ಕುಸಿತದ ಪರಿಣಾಮ ಭಾರೀ ಮಣ್ಣು, ಮರ-ಗಿಡಗಳು ಹಾಸನ-ಮಂಗಳೂರು ಸಂಪರ್ಕ ರೈಲ್ವೆ ಹಳಿ ಮೇಲೆ ಬಿದ್ದಿದೆ. ಇದರಿಂದಾಗಿ ಕರ್ನಾಟಕದ ಕರಾವಳಿಗೆ ರೈಲು ಸಂಪರ್ಕ ಸ್ಥಗಿತವಾಗಿದೆ. ಮಣ್ಣು ತೆರವುಗೊಳಿಸುವ ಕಾರ್ಯಾಚರಣೆ ನಡೆಯುತ್ತಲೇ ಇದ್ದು, ನೈಋತ್ಯ ರೈಲ್ವೆ ಕೆಲವು ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಿ ಆದೇಶವನ್ನು ಹೊರಡಿಸಿದೆ.

ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರುವ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬಾಳ್ಳುಪೇಟೆ ಬಳಿ ಗುಡ್ಡ ಕುಸಿದು ರೈಲು ಹೇಳಿ ಮೇಲೆ ಬಿದ್ದಿದೆ. ಇದರಿಂದಾಗಿ ಹಾಸನ-ಮಂಗಳೂರು ಮತ್ತು ಮಂಗಳೂರು-ಹಾಸನ ಸಂಪರ್ಕಿಸುವ ರೈಲುಗಳ ಸಂಚಾರ ದಿಢೀರ್ ಸ್ಥಗಿತವಾಗಿದೆ. ರೈಲುಗಳನ್ನು ಸಕಲೇಶಪುರ, ಯಡಕುಮರಿ, ಶಿರವಾಗಿಲು, ಆಲೂರು ಸೇರಿ ವಿವಿಧ ಕಡೆ ನಿಲುಗಡೆ ಮಾಡಲಾಗಿದೆ.

Landslide In Sakleshpur Chage In Train Services List

ರೈಲ್ವೆ ನಿಲ್ದಾಣದಲ್ಲಿದ್ದ ಪ್ರಯಾಣಿಕರ ಅನುಕೂಲಕ್ಕಾಗಿ ಇಲಾಖೆ ಉಪಹಾರ, ಊಟ, ಕುಡಿಯುವ ನೀರಿನ ವ್ಯವಸ್ಥೆ ಮಾಡಿದೆ. ಮಣ್ಣು ತೆರವುಗೊಳಿಸುವ ಕಾರ್ಯಾಚರಣೆ ವಿಳಂಬವಾಗುತ್ತಿರುವ ಕಾರಣ ಕೆಲವು ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

ಯಾವ-ಯಾವ ರೈಲುಗಳು

* ರೈಲು ನಂಬರ್ 16512 ಕಣ್ಣೂರು-ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್. ಆಗಸ್ಟ್‌ 10ರಂದು ಕಣ್ಣೂರಿನಿಂದ ರೈಲು ಸಂಚಾರ ಸಂಪೂರ್ಣ ರದ್ದು. ರೈಲು ನಂಬರ್ 16511 ಕೆಎಸ್ಆರ್ ಬೆಂಗಳೂರು-ಕಣ್ಣೂರು ಎಕ್ಸ್‌ಪ್ರೆಸ್ ಆಗಸ್ಟ್ 10ರಂದು ಬೆಂಗಳೂರಿನಿಂದ ರೈಲು ಸಂಚಾರ ಸಂಪೂರ್ಣ ರದ್ದು.

* ರೈಲು ನಂಬರ್ 16596 ಕಾರವಾರ-ಕೆಎಸ್ಆರ್‌ ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಆಗಸ್ಟ್ 10ರಂದು ಕಾರವಾರದಿಂದ ಸಂಚಾರ ಸಂಪೂರ್ಣ ರದ್ದು. ರೈಲು ನಂಬರ್ 16595 ಕೆಎಸ್ಆರ್‌ ಬೆಂಗಳೂರು- ಕಾರವಾರ ಎಕ್ಸ್‌ಪ್ರೆಸ್ ರೈಲಿನ ಬೆಂಗಳೂರಿನಿಂದ ಸಂಚಾರ ಸಂಪೂರ್ಣ ರದ್ದು.

* ರೈಲು ನಂಬರ್ 16586 ಮುರುಡೇಶ್ವರ-ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್ ರೈಲು. ಆಗಸ್ಟ್ 10ರಂದು ಮುರುಡೇಶ್ವರದಿಂದ ರೈಲು ಸಂಚಾರ ಸಂಪೂರ್ಣ ರದ್ದು. ರೈಲು ನಂಬರ್ 16585 ಎಸ್‌ಎಂವಿಟಿ ಬೆಂಗಳೂರು-ಮುರುಡೇಶ್ವರ ರೈಲಿನ ಆಗಸ್ಟ್ 10ರ ಬೆಂಗಳೂರಿನಿಂದ ಸಂಚಾರ ಸಂಪೂರ್ಣ ರದ್ದು.

* ರೈಲು ನಂಬರ್ 07377 ವಿಜಯಪುರ-ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್. ಆಗಸ್ಟ್ 10ರಂದು ವಿಜಯಪುರದಿಂದ ರೈಲು ಸಂಚಾರ ರದ್ದು. ರೈಲು ನಂಬರ್ 07378 ಮಂಗಳೂರು ಸೆಂಟ್ರಲ್-ವಿಜಯಪುರ ಎಕ್ಸ್‌ಪ್ರೆಸ್. ಆಗಸ್ಟ್ 11ರಂದು ವಿಜಯಪುರದಿಂದ ರೈಲು ಸಂಪೂರ್ಣ ರದ್ದು.

ನಿಲ್ದಾಣಗಳ ನಡುವೆ ಸಂಚಾರ ರದ್ದು

* ರೈಲು ನಂಬರ್ 16512 ಕಣ್ಣೂರು-ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಆಗಸ್ಟ್ 9ರಂದು ಕಣ್ಣೂರಿನಿಂದ ಹೊರಟಿತ್ತು. ರೈಲನ್ನು ಸಕಲೇಶಪುರದಲ್ಲಿ ನಿಲ್ಲಿಸಲಾಗಿದೆ. ಈ ರೈಲಿನ ಸಕಲೇಶಪುರ-ಕಣ್ಣೂರು ಸಂಚಾರವನ್ನು ರದ್ದುಗೊಳಿಸಲಾಗಿದೆ.

* ರೈಲು ನಂಬರ್ 16596 ಕಾರವಾರ-ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್. ಆಗಸ್ಟ್ 9ರಂದು ಕಾರವಾರದಿಂದ ಹೊರಟಿದ್ದ ರೈಲನ್ನು ಸಕಲೇಶಪುರದಲ್ಲಿ ನಿಲ್ಲಿಸಲಾಗಿದೆ. ಸಕಲೇಶಪುರ-ಕೆಎಸ್ಆರ್ ಬೆಂಗಳೂರು ನಡುವಿನ ಸಂಚಾರವನ್ನು ರದ್ದುಗೊಳಿಸಲಾಗಿದೆ.

* ರೈಲು ನಂಬರ್ 16586 ಮುರುಡೇಶ್ವರ-ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್ ಆಗಸ್ಟ್‌ 9ರಂದು ಮುರುಡೇಶ್ವರದಿಂದ ಹೊರಟಿತ್ತು. ರೈಲನ್ನು ಸಕಲೇಶಪುರದಲ್ಲಿ ನಿಲ್ಲಿಸಲಾಗಿದೆ. ಮುರುಡೇಶ್ವರ-ಎಸ್‌ಎಂಟಿವಿಟಿ ಬೆಂಗಳೂರು ನಡುವೆ ಈ ರೈಲಿನ ಸಂಚಾರ ರದ್ದು.

* ರೈಲು ನಂಬರ್ 16585 ಎಸ್‌ಎಂವಿಟಿ ಬೆಂಗಳೂರು-ಮುರುಡೇಶ್ವರ ಎಕ್ಸ್‌ಪ್ರೆಸ್ ರೈಲು ಆಗಸ್ಟ್ 9ರ ಸಂಚಾರ ಹಾಸನದಲ್ಲಿ ಸ್ಥಗಿತ. ಹಾಸನ-ಎಸ್ಎಂವಿಟಿ ಬೆಂಗಳೂರು ನಡುವೆ ಸಂಚಾರ ರದ್ದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+