KSRTC tour package; ಬೆಂಗಳೂರು-ಗಗನಚುಕ್ಕಿ; ವೇಳಾಪಟ್ಟಿ, ದರ
ಬೆಂಗಳೂರು, ಆಗಸ್ಟ್ 09; ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ಪ್ರವಾಸಿಗರಿಗಾಗಿ ಬೆಂಗಳೂರು ನಗರದಿಂದ ಟೂರ್ ಪ್ಯಾಕೇಜ್ ಘೋಷಿಸಿದೆ. ಬೆಂಗಳೂರು-ಜೋಗ ಜಲಪಾತ ಮತ್ತು ಬೆಂಗಳೂರು-ಗಗನಚುಕ್ಕಿ ಭರಚುಕ್ಕಿ ಪ್ರವಾಸಿ ಪ್ಯಾಕೇಜ್ ಘೋಷಣೆ ಮಾಡಿದೆ.
ಕೆಎಸ್ಆರ್‌ಟಿಸಿಯ ಬೆಂಗಳೂರು ಕೇಂದ್ರ ವಿಭಾಗ ಈ ಪ್ರವಾಸಿ ಪ್ಯಾಕೇಜ್ ಘೋಷಣೆ ಮಾಡಿದೆ. ಶನಿವಾರ ಮತ್ತು ಭಾನುವಾರ ಈ ಟೂರ್ ಪ್ಯಾಕೇಜ್ ಲಭ್ಯವಿದೆ. ಈ ಪ್ಯಾಕೇಜ್ ಪ್ರವೇಶ ಶುಲ್ಕ, ಉಪಹಾರ ಮಧ್ಯಾಹ್ನ/ ರಾತ್ರಿ ಊಟವನ್ನು ಹೊರತುಪಡಿಸಿದೆ ಎಂದು ಸ್ಪಷ್ಟಪಡಿಸಲಾಗಿದೆ.

ಈ ಟೂರ್ ಪ್ಯಾಕೇಜ್ 12/8/2023ರಿಂದ ಆರಂಭವಾಗಲಿದೆ. ಪ್ರತಿ ಶನಿವಾರ ಮತ್ತು ಭಾನುವಾರ ಲಭ್ಯವಿದೆ. ಬೆಂಗಳೂರಿನಿಂದ ಹೊರಡುವ ಬಸ್ ಸೋಮನಾಥಪುರ, ತಲಕಾಡು, ಮಧ್ಯರಂಗ, ಭರಚುಕ್ಕಿ, ಗಗನಚುಕ್ಕಿಯನ್ನು ಸಂಪರ್ಕಿಸುತ್ತದೆ.
ಟೂರ್ ಪ್ಯಾಕೇಜ್ ವಿವರ, ದರ; ಕೆಎಸ್ಆರ್‌ಟಿಸಿ ಬೆಂಗಳೂರು-ಸೋಮನಾಥಪುರ- ತಲಕಾಡು-ಮಧ್ಯರಂಗ-ಭರಚುಕ್ಕಿ-ಗಗನಚುಕ್ಕಿ ಪ್ಯಾಕೇಜ್‌ಗೆ ವಯಸ್ಕರಿಗೆ 450 ರೂ.ಗಳು ಮತ್ತು ಮಕ್ಕಳಿಗೆ (6 ರಿಂದ 12 ವರ್ಷದ ವಯೋಮಿತಿ) 300 ರೂ. ಶುಲ್ಕವನ್ನು ನಿಗದಿ ಮಾಡಿದೆ.
ಬೆಂಗಳೂರಿನಿಂದ ಬೆಳಗ್ಗೆ 6.30ಕ್ಕೆ ಹೊರಡುವ ಬಸ್ 8.30ಕ್ಕೆ ಮದ್ದೂರು ತಲುಪಲಿದೆ. 8.30 ರಿಂದ 9 ಮದ್ದೂರಿನಲ್ಲಿ ಉಪಹಾರ. 9 ರಿಂದ 9.45 ಮದ್ದೂರಿನಿಂದ ಸೋಮನಾಥಪುರ. 9.45 ರಿಂದ 10.45 ಸೋಮನಾಥೇಶ್ವರ ದರ್ಶನ. 10.45 ರಿಂದ 11.30 ಸೋಮನಾಥಪುರದಿಂದ ತಲಕಾಡು. 11.30 ರಿಂದ 3 ಗಂಟೆ ತಲಕಾಡು ಪಂಚಲಿಂಗ ದರ್ಶನ, ಮಧ್ಯಾಹ್ನ ಊಟ.
ಮಧ್ಯಾಹ್ನ 3 ರಿಂದ 3.45 ತಲಕಾಡಿನಿಂದ ಮಧ್ಯರಂಗ. 3.45ರಿಂದ .355 ರಂಗನಾಥ ಸ್ವಾಮಿ ದರ್ಶನ. 3.55 ರಿಂದ 4.05 ಮಧ್ಯರಂಗದಿಂದ ಭರಚುಕ್ಕಿ. 4.05 ರಿಂದ 5 ಗಂಟೆ ಭರಚುಕ್ಕಿ ವೀಕ್ಷಣೆ. 5 ರಿಂದ 5.15 ಭರಚಿಕ್ಕಿಯಿಂದ ಗಗನಚುಕ್ಕಿ. 5.15 ರಿಂದ 6.15 ಗಗನಚುಕ್ಕಿ ವೀಕ್ಷಣೆ. 6.15 ರಿಂದ 9 ಗಂಟೆಗೆ ಬೆಂಗಳೂರಿಗೆ ವಾಪಸ್.
ಪ್ರವಾಸಿ ಟೂರ್ ಪ್ಯಾಕೇಜ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ 7760990287/ 7760990988 ಸಂಖ್ಯೆಗೆ ಕರೆ ಮಾಡಬಹುದಾಗಿದೆ.
ಬೆಂಗಳೂರು-ಜೋಗ ಟೂರ್; ಕೆಎಸ್ಆರ್‌ಟಿಸಿ ಬೆಂಗಳೂರು-ಜೋಗ ಜಲಪಾತ ವಯಾ ಶಿವಮೊಗ್ಗ, ಸಾಗರ ಟೂರ್ ಪ್ಯಾಕೇಜ್ ಸಹ ಘೋಷಿಸಿದೆ. ನಾನ್ ಎಸಿ ಸ್ಲೀಪರ್ ಬಸ್ ಈ ಪ್ಯಾಕೇಜ್ ಅಡಿ ಸಂಚಾರ ನಡೆಸುತ್ತದೆ.
ವಾರಾಂತ್ಯದಲ್ಲಿ (ಶುಕ್ರವಾರ & ಶನಿವಾರ) ಪ್ಯಾಕೇಜ್ ಲಭ್ಯ. ಬೆಂಗಳೂರು-ಜೋಗ ಜಲಪಾತ ವಯಾ ಶಿವಮೊಗ್ಗ, ಸಾಗರ ಟೂರ್ ಪ್ಯಾಕೇಜ್‌ಗೆ ವಯಸ್ಕರಿಗೆ 2,500 ರೂ. ಮತ್ತು ಮಕ್ಕಳಿಗೆ (6 ರಿಂದ 12 ವರ್ಷ) 2,300 ರೂ. ದರ ನಿಗದಿ ಮಾಡಲಾಗಿದೆ.












Click it and Unblock the Notifications