Konkan Railway: ಜೂನ್ 6ರಂದು ಮಡಗಾಂವ್-ಅಂಕೋಲ ನಡುವೆ ರೈಲು ಸಂಚಾರ ರದ್ದು-ಎಷ್ಟು ಗಂಟೆ ಹಾಗೂ ಕಾರಣ ಏನು?
Konkan Railway: ಸಾಮಾನ್ಯವಾಗಿ ಹಳಿ, ವಿದ್ಯುತ್ ಕಾಮಗಾರಿ ಸೇರಿದಂತೆ ಇನ್ನಿತ ಕೆಲಸಗಳು ನಡೆಯುತ್ತಿದ್ದರೆ, ಅಂತಹ ಮಾರ್ಗಗಳಲ್ಲಿ ರೈಲು ಸಂಚಾರವನ್ನು ರದ್ದು ಮಾಡಲಾಗುತ್ತದೆ. ಹಾಗೆಯೇ ಇದೀಗ ಮಡಗಾಂವ್- ಅಂಕೋಲ ನಡುವೆ ಜೂನ್ 6ರಂದು ಸುಮಾರು ಎರಡೂವರೆ ಗಂಟೆಗಳ ಕಾಲ ಹಳಿ ನಿರ್ವಹಣೆ ಕಾರ್ಯ ನಡೆಯಲಿರುವ ಹಿನ್ನೆಲೆ ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಆಗಲಿದೆ ಎಂದು ಕೊಂಕಣ ರೈಲ್ವೆ ಮಾಹಿತಿ ನೀಡಿದೆ.
ಜೂನ್ 6ರಂದು ಸಂಚರಿಸುವ ರೈಲು ನಂಬರ್ 06602 ಮಂಗಳೂರು ಸೆಂಟ್ರಲ್-ಮಡಗಾಂವ್ ಸ್ಟೇಷನ್ ರೈಲಿನ ಸಂಚಾರವನ್ನು ಅಂಕೋಲದಲ್ಲೇ ಕೊನೆಗೊಳಿಸಲಾಗಲಿದ್ದು, ಇದರಿಂದ ಅಂದು ಅಂಕೋಲ-ಮಡಗಾಂವ್ ನಡುವಿನ ಸಂಚಾರ ರದ್ದುಗೊಳ್ಳಲಿದೆ ಎಂದು ತಿಳಿಸಿದೆ.

ಹಾಗೆಯೇ ಜೂನ್ 6ರಂದು ರೈಲು ನಂ.06601 ಮಡಗಾಂವ್-ಮಂಗಳೂರು ಸೆಂಟ್ರಲ್ ಸ್ಟೇಷಲ್ ರೈಲಿನ ಸಂಚಾರ ನಿಗದಿತ ಸಮಯಕ್ಕೆ ಸರಿಯಾಗಿ ಅಂಕೋಲದಿಂದ ಪ್ರಾರಂಭ ಆಗಲಿದ್ದು, ಆ ದಿನ ಮಡಗಾಂವ್-ಅಂಕೋಲ ನಡುವೆ ಸಂಚಾರ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Jio Rail Appನಲ್ಲಿ ರೈಲು ಟಿಕೆಟ್ ಬುಕ್ ಮಾಡುವುದೇಗೆ?
Jio Rail App: ರೈಲ್ವೆ ಭಾರತದ ಸಾರಿಗೆ ವಿಭಾಗಗಳಲ್ಲಿ ಅತೀ ಹೆಚ್ಚು ಪ್ರಯಾಣಿಕರನ್ನು ಒಂದು ಕಡೆಯಿಂದ ಮತ್ತೊಂದೆಡೆಗೆ ಸಾಗಿಸುವ ದೊಡ್ಡ ಸಾರಿಗೆಯಾಗಿದೆ. ಪ್ರತಿನಿತ್ಯವೂ ಲಕ್ಷಾಂತರ ಜನರು ಈ ಸಾರಿಗೆಯಲ್ಲಿ ಪ್ರಯಾಣ ಮಾಡುತ್ತಿರುತ್ತಾರೆ. ಇನ್ನು ರೈಲು ಟಿಕೆಟ್‌ಗಳನ್ನು ಬುಕ್ ಮಾಡಲು ಐಆರ್‌ಸಿಟಿಯಿಂದ ಹಲವು ಆಪ್‌ಗಳಿಗೆ ಅನುಮತಿ ನೀಡಿದೆ. ಹಾಗೆಯೇ ಜಿಯೋಗೂ ಕೂಡ ಅನುಮತಿ ಕಲ್ಪಿಸಿದೆ. ಹಾಗಾದರೆ ಜಿಯೋ ಆಪ್‌ನಲ್ಲಿ ಕನ್ಫರ್ಮ್ ರೈಲು ಟಿಕೆಟ್ ಬುಕ್ ಮಾಡುವ ವಿಧಾನಗಳನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ದೇಶದಲ್ಲಿಯೇ ಅತ್ಯಂತ ಸಿರಿವಂತರಲ್ಲಿ ಒಬ್ಬರೆನಿಸಿಕೊಂಡಿರುವ ಮುಖೇಶ್ ಅಂಬಾನಿ ಟೆಲಿಕಾಂ ಕ್ಷೇತ್ರದಲ್ಲಿ ದೊಡ್ಡ ಮೈಲುಗಲ್ಲು ತಲುಪುವ ಮೂಲಕ, ಮಾರುಕಟ್ಟೆಯಲ್ಲಿ ಎಲ್ಲಾ ಕಂಪನಿಗಳು ದಂಗಾಗುವಂತೆ ಮಾಡಿದ್ದಾರೆ. ಇನ್ನು ಅಂಬಾನಿ ನೇತೃತ್ವದ ಜಿಯೋ ದೇಶಾದ್ಯಂತ 46 ಕೋಟಿಗೂ ಹೆಚ್ಚು ಬಳಕೆದಾರರನ್ನು ಹೊಂದಿದ್ದು, ಜಿಯೋ ರೈಲ್ ಆಪ್ (Jio Rail App) ಅನ್ನು ಕೂಡ ಆರಂಭಿಸಿದ್ದಾರೆ. ಹಾಗಾದರೆ ಇದರಲ್ಲಿ ಸುಲಭವಾಗಿ ಕನ್ಫರ್ಮ್ ಟಿಕೆಟ್ ಬುಕ್ ಮಾಡುವ ವಿಧಾನಗಳನ್ನು ಇಲ್ಲಿ ತಿಳಿಯಿರಿ.
ಜಿಯೋ ಆರಂಭವಾದಾಗಿನಿಂದ ಬಳಕೆದಾರರಿಗೆ ಜಿಯೋ ಸಿನಿಮಾದಿಂದ ಹಿಡಿದು ಹಲವು ಸೇವೆಗಳನ್ನು ಒದಗಿಸುತ್ತಲೇ ಬಂದಿದ್ದು, ಈ ಸೇವೆಗಳಲ್ಲಿ ಜಿಯೋ ರೈಲ್ ಟಿಕೆಟ್ ಬುಕ್ಕಿಂಗ್ ಆಪ್ ಒಂದಾಗಿದೆ. ನೀವು ಈಗಲೇ ಈ ಆಪ್ ಮೂಲಕ ಕನ್ಫರ್ಮ್ ರೈಲು ಟಿಕೆಟ್ ಬುಕ್ ಮಾಡಬಹುದಾಗಿದೆ.
2019ರಲ್ಲಿಯೇ ಕಂಪನಿಯು ಜಿಯೋ ರೈಲ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿತು. ಇದರ ಸಹಾಯದಿಂದ, ಕನ್ಫರ್ಮ್ ರೈಲು ಟಿಕೆಟ್‌ಗಳನ್ನು ಪಡೆಯುವುದು ತುಂಬಾ ಸುಲಭವಾಗುತ್ತದೆ. ಆದರೆ ಜಿಯೋ ಫೋನ್ ಬಳಕೆದಾರರು ಮಾತ್ರ ಈ ಅಪ್ಲಿಕೇಶನ್ ಅನ್ನು ಬಳಸಬಹುದು. IRCTC ಸಹಯೋಗದೊಂದಿಗೆ Jio ರೈಲ್ ಅಪ್ಲಿಕೇಶನ್ ಕನ್ಫರ್ಮ್ ರೈಲು ಟಿಕೆಟ್‌ಗಳನ್ನು ಪಡೆಯಲು ಜನರಿಗೆ ಸಹಾಯ ಮಾಡುತ್ತದೆ. ಈ ಆ್ಯಪ್‌ನ ಸಹಾಯದಿಂದ ನೀವು ಆನ್‌ಲೈನ್‌ನಲ್ಲಿ ರೈಲು ಟಿಕೆಟ್‌ಗಳನ್ನು ಬುಕ್ ಮಾಡಬಹುದು.
ಟಿಕೆಟ್ ಬುಕ್ ಮಾಡುವುದೇಗೆ?
1. Jio ಫೋನ್‌ನಲ್ಲಿ Jio Rail Appಗೆ ಭೇಟಿ ನೀಡಿ.
2. ಅಪ್ಲಿಕೇಶನ್ ಓಪನ್ ಮಾಡಿ ಪ್ರಯಾಣ ಮಾಡಲು ಬಯಸುವ ನಿಲ್ದಾಣವನ್ನು ಆಯ್ಕೆ ಮಾಡಿ.
3. ಪ್ರಯಾಣದ ದಿನಾಂಕವನ್ನು ಆಯ್ಕೆಮಾಡಿ, ಬಳಿಕ ರೈಲು ಮತ್ತು ಆಸನವನ್ನು ಆಯ್ಕೆಮಾಡಿ.
4. ಹಣಪಾವತಿ ಆಯ್ಕೆಯನ್ನು ಕ್ಲಿಕ್ ಮಾಡಿ, ಬುಕಿಂಗ್ ಬಟನ್ ಮೇಲೆ ಕ್ಲಿಕ್ ಮಾಡಬೇಕು.
5. ಕೊನೆಯದಾಗಿ ಡೆಬಿಟ್ ಕಾರ್ಡ್/ ಕ್ರೆಡಿಟ್ ಕಾರ್ಡ್/ ಜಿಯೋ ಮನಿ/ ಯುಪಿಐ ಮೂಲಕ ಆನ್‌ಲೈನ್ ಪಾವತಿ ಮಾಡುವ ಮೂಲಕ ಟಿಕೆಟ್‌ಗಳನ್ನು ಬುಕ್ ಮಾಡಬಹುದಾಗಿದೆ.












Click it and Unblock the Notifications