Irctc Train Ticket Booking: ಐಆರ್‌ಸಿಟಿಸಿಯಲ್ಲಿ ರೈಲು ಟಿಕೆಟ್ ಬುಕ್‌ ಮಾಡುವುದು ಈ ಟ್ರಿಕ್ಸ್‌ ಗೊತ್ತಿದ್ದರೆ ಸಿಂಪಲ್‌!

IRCTC Train Ticket Booking: ಇನ್ನೇನು ಸಾಲು ಸಾಲು ರಜೆಗಳು ಬರ್ತಿವೆ. ಈ ಸಂದರ್ಭದಲ್ಲಿ ಯಾವುದಾದರೂ ಊರಿಗೆ ಹೋಗಬೇಕು ಅನ್ನುವ ಪ್ಲಾನ್ ಮಾಡಿಕೊಳ್ಳುತ್ತಾ ಇದ್ದರೆ. ಇಲ್ಲವೇ ಮುಂದಿನ ದಿನಗಳಲ್ಲಿ ಎಲ್ಲಿಗಾದರೂ ಪ್ರವಾಸಕ್ಕೆ ಹೋಗಬೇಕು ಅಂತ ಪ್ಲಾನ್ ಮಾಡಿಕೊಳ್ಳುತ್ತಾ ಇದ್ದರೆ ನೀವು ತಪ್ಪದೆ ಈ ಸುದ್ದಿಯನ್ನು ಓದಿ. ಐಆರ್‌ಸಿಟಿಸಿಯಲ್ಲಿ (Indian Railway Catering and Tourism Corporation) ರೈಲು ಟಿಕೆಟ್ ಬುಕ್‌ ಮಾಡಿಕೊಳ್ಳುವುದು ಅತ್ಯಂತ ಸುಲಭವಿದೆ. ಐಆರ್‌ಸಿಟಿಸಿ ಮೂಲಕ ರೈಲು ಟಿಕೆಟ್‌ ಬುಕ್‌ ಮಾಡುವುದು ತುಂಬಾ ಸುಲಭವಿದೆ. ಆದರೆ, ಟಿಕೆಟ್ ಬುಕ್‌ ಮಾಡುವಾಗ ಕೆಲವೊಂದು ಸಿಂಪಲ್‌ ಟ್ರಿಕ್ಸ್‌ ಬಳಸಿದರೆ ನೀವು ಸುಲಭವಾಗಿ ರೈಲು ಟಿಕೆಟ್ ಬುಕ್‌ ಮಾಡಿಕೊಳ್ಳಬಹುದು. ಐಆರ್‌ಸಿಟಿಸಿ ಯಾವ ರೀತಿ ಟಿಕೆಟ್ ಬುಕ್‌ ಮಾಡಬಹುದು ಹಾಗೂ ಯಾವೆಲ್ಲ ಟ್ರಿಕ್ಸ್‌ ಬಳಸಬೇಕು ಎನ್ನುವ ಮಾಹಿತಿ ಇಲ್ಲಿದೆ.

ರೈಲು ಟಿಕೆಟ್‌ ಬುಕ್‌ ಮಾಡುವುದು ರಿಸ್ಕ್‌ ಅಂತ ತುಂಬಾ ಜನ ಹೇಳ್ತಾರೆ. ಐಆರ್‌ಸಿಟಿಸಿ ಆ್ಯಪ್ ನಲ್ಲಿ ನೀವು ಸರಳವಾಗಿ ಟ್ರೈನ್‌ ಟಿಕೆಟ್‌ ಬುಕ್‌ ಮಾಡಿಕೊಳ್ಳಬಹುದಾಗಿದೆ. ಇದಕ್ಕೆ ನೀವು ತುಂಬಾ ಜಾಸ್ತಿ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಇದಕ್ಕಾಗಿ ನೀವು ಮೊದಲು ಐಆರ್‌ಸಿಟಿಸಿ ವೆಬ್‌ಸೈಟ್‌ನಲ್ಲಿ ನಿಮ್ಮದೊಂದು ಅಕೌಂಟ್‌ ಕ್ರಿಯೇಟ್‌ ಮಾಡಬೇಕು. ಐಆರ್‌ಸಿಟಿಸಿಯ ಅಧಿಕೃತ ವೆಬ್‌ಸೈಟ್‌ https://www.irctc.co.in/nget/train-search ಅಥವಾ ಐಆರ್‌ಸಿಟಿಸಿ ಆ್ಯಪ್‌ಗೆ ಭೇಟಿ ಕೊಡಬೇಕು. ಇನ್ನು ವೆಬ್‌ಸೈಟ್‌ ಹಾಗೂ ಐಆರ್‌ಸಿಟಿಸಿ ಆ್ಯಪ್ ನಲ್ಲಿ ಟಿಕೆಟ್‌ ಬುಕ್ಕಿಂಗ್‌ ಮಾಡುವ ವಿಧಾನ ಬೇರೆ ಬೇರೆ ಇದೆ.

Irctc Train Ticket Booking Booking train tickets is simple if you know these tricks

ಐಆರ್‌ಸಿಟಿಸಿ ಆ್ಯಪ್‌ನಲ್ಲಿ ಬುಕ್ಕಿಂಗ್

ಐಆರ್‌ಸಿಟಿಸಿ ಆ್ಯಪ್‌ನ ಮೂಲಕ ನೀವು ಟ್ರೈನ್‌ ಟಿಕೆಟ್‌ ಬುಕ್ ಮಡಬೇಕೆಂದರೆ, ಮೊದಲ ವೆಬ್‌ಸೈಟ್‌ಗೆ ಭೇಟಿ ನೀಡಿ ರಿಜಿಸ್ಟರ್ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ಕಿಸಬೇಕು. ಇದಾದ ಮೇಲೆ ನಿಮ್ಮ ಮೊಬೈಲ್ ನಂಬರ್‌, ಇಮೇಲ್ ಐಡಿ, ವಯಸ್ಸು ಹಾಗೂ ಲಿಂಗ ಸೇರಿದಂತೆ ವಿವಿಧ ಮಾಹಿತಿಗಳ ವಿವರವನ್ನು ನೀಡಿ ಖಾತೆ ಪ್ರಾರಂಭಿಸಬೇಕು. ಒಮ್ಮೆ ನಿಮ್ಮ ಅಕೌಂಟ್‌ ಓಪನ್‌ ಆಯ್ತು ಎಂದರೆ, ರಿಜಿಸ್ಟ್ರೇಷನ್ ಪ್ರಕ್ರಿಯೆಗಳು ಮುಕ್ತಾಯವಾದಂತೆಯೇ.

ಇದಾದ ಮೇಲೆ ಮುಂದುವರಿದು ಲಾಗಿನ್ ಮಾಡಿ. ಪ್ಲ್ಯಾನ್ ಮೈ ಜರ್ನಿ ಎನ್ನುವ ವಿಭಾಗಕ್ಕೆ ಹೋಗಿ. ಯಾವ ರೈಲು ನಿಲ್ದಾಣದಿಂದ ಯಾವ ರೈಲು ನಿಲ್ದಾಣಕ್ಕೆ ಹೋಗಬೇಕು ಎನ್ನುವುದನ್ನು ಟೈಪ್‌ ಮಾಡಿ ಪ್ರಯಾಣದ ದಿನಾಂಕವನ್ನು ಟೈಪ್‌ ಮಾಡಿ. ಇದಾದ ಮೇಲೆ ಸರ್ಚ್‌ ಎನ್ನುವ ಆಯ್ಕೆಯ ಮೇಲೆ ಕ್ಲಿಕ್‌ ಮಾಡಿ ಆಗ ಯಾವೆಲ್ಲ ಟ್ರೈನ್‌ ನೀವು ನಿಗದಿ ಮಾಡಿದ ದಿನ ಇದೆ ಅಂತ ತೋರಿಸುತ್ತೆ. ಹೆಸರು, ವಯಸ್ಸು, ಲಿಂಗ ಹಾಗೂ ಯಾವ ಸೀಟ್‌ ಬೇಕು ಎನ್ನುವ ಮಾಹಿತಿಯನ್ನು ತುಂಬಿಸಿ. ಕೊನೆಯದಾಗಿ ಚೆಕ್ ಮಾಡಿ (Verify) ಇದಾದ ಮೇಲೆ ನಿಮ್ಮ ರಿಜಿಸ್ಟರ್‌ ಮೊಬೈಲ್‌ ಸಂಖ್ಯೆ ಹಾಗೂ ಇ - ಮೇಲ್‌ಗೆ ಟಿಕೆಟ್ ಬುಕ್ಕಿಂಗ್ ಸಂಬಂಧಿಸಿದ ಸಂಪೂರ್ಣ ಮಾಹಿತಿ ಬರಲಿದೆ.

ಈ ವಿಷಯವನ್ನು ಮರೆಯಲೇಬೇಡಿ: ಟ್ರೆನ್‌ ಬುಕ್ಕಿಂಗ್‌ಗೆ ಐಆರ್‌ಸಿಟಿಸಿ ಆ್ಯಪ್ ಬಳಸಿ ರೈಲು ಬುಕ್‌ ಮಾಡುವುದರಲ್ಲಿ ಇರುವ ಬಹುದೊಡ್ಡ ಸವಾಲು ಎಂದರೆ, ನೀವು ಐಆರ್‌ಸಿಟಿಸಿ ಆ್ಯಪ್ ರಿಜಿಸ್ಟ್ರೇಷನ್‌ ಮಾಡಿಸಿಕೊಳ್ಳುವಾಗ ಕೊಡುವ ರಿಜಿಸ್ಟ್ರೇಷನ್‌ ನಂಬರ್‌ ಅಥವಾ ಪಾಸ್‌ವರ್ಡ್‌ ಅನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ. ಐಆರ್‌ಸಿಟಿಸಿ ಆ್ಯಪ್ ನಲ್ಲಿ ರಿಜಿಸ್ಟ್ರೇಷನ್ ಮಾಡುವಾಗ ನೀಡುವ ಯೂಸರ್‌ ನೇಮ್‌ ಹಾಗೂ ಪಾಸ್‌ವರ್ಡ್‌ ಮರೆತರೆ ರಿಸೆಟ್‌ ಮಾಡುವುದು ಸ್ವಲ್ಪ ಕಷ್ಟ ಹೀಗಾಗಿ, ಪಾಸ್‌ವರ್ಡ್‌ ಹಾಗೂ ಯೂಸರ್‌ ನೇಮ್‌ ಎಲ್ಲಾದರೂ ಬರೆದಿಡಿ. ಬರೆದಿಟ್ಟ ಪಾಸ್‌ ವರ್ಡ್‌ ಯಾರಿಗೂ ಸಿಗದಂತೆ ಎಚ್ಚರಿಕೆಯನ್ನು ವಹಿಸಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+