IRCTC: ಅಯೋಧ್ಯೆ, ಕಠ್ಮಂಡು, ಪ್ರಯಾಗ್‌ರಾಜ್, ವಾರಣಾಸಿಗೆ ಟೂರ್ ಪ್ಯಾಕೇಜ್ ಘೋಷಣೆ: ದಿನಾಂಕಗಳನ್ನು ಪರಿಶೀಲಿಸಿ

ನವದೆಹಲಿ, ಮಾರ್ಚ್‌, 28: ಭಾರತೀಯ ರೈಲ್ವೆಯ ಪ್ರವಾಸೋದ್ಯಮ ವಿಭಾಗವಾದ ಐಆರ್‌ಸಿಟಿಸಿಯು ಅಯೋಧ್ಯೆ, ಕಠ್ಮಂಡು, ಪ್ರಯಾಗ್ರಾಜ್ ಮತ್ತು ವಾರಣಾಸಿಗೆ ಭೇಟಿ ನೀಡಲು ಬಯಸುವವರಿಗೆ ಪ್ರವಾಸ ಪ್ಯಾಕೇಜ್ ಅನ್ನು ಘೋಷಣೆ ಮಾಡಿದೆ. ಹಾಗಾದರೆ ಈ ಪ್ರವಾಸ ಪ್ಯಾಕೇಜ್‌ನ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಇದು 10 ದಿನಗಳ ಪ್ರವಾಸ ಆಗಿದ್ದು, ನಾಲ್ಕು ಪ್ರಮುಖ ಯಾತ್ರಾ ಸ್ಥಳಗಳು ಮತ್ತು ಪಾರಂಪರಿಕ ಸ್ಥಳಗಳನ್ನು ವೀಕ್ಷಣೆ ಮಾಡಬಹುದಾಗಿದೆ. ಪ್ರವಾಸವು 9 ರಾತ್ರಿಗಳು ಮತ್ತು 10 ಹಗಲುಗಳಾಗಿರುತ್ತದೆ. ಇದು ರೈಲು ಪ್ರಯಾಣ ಆಗಿದ್ದು, ಇಲ್ಲಿ ರಾತ್ರಿ ವಾಸ್ತವ್ಯದ ವಸತಿ ಮತ್ತು ಪ್ರಯಾಣ ವಿಮೆಯನ್ನು ಒಳಗೊಂಡಿದೆ.

IRCTC tour package announcement to Ayodhya, Kathmandu, Prayagraj, Varanasi, know dates details

ಯಾವೆಲ್ಲ ಸ್ಥಳಗಳಿಗೆ ಹೋಗಬಹುದು?

1. ಅಯೋಧ್ಯೆಯಲ್ಲಿ ರಾಮ ಜನ್ಮಭೂಮಿ ದೇವಸ್ಥಾನ, ಹನುಮಾನ್ ಗರ್ಹಿ, ಸರಯುಘಾಟ್, ನಂದಿಗ್ರಾಮ್‌ಗೆ ಭೇಟಿ ನೀಡಬಹುದಾಗಿದೆ.

2. ಕಠ್ಮಂಡುವಿನಲ್ಲಿ ಪಶುಪತಿನಾಥ ದೇವಾಲಯ, ದರ್ಬಾರ್ ಸ್ಕ್ವೈರ್, ಸ್ವಯಂಭುನಾಥ ಸ್ತೂಪವನ್ನು ನೋಡಬಹುದಾಗಿದೆ.

3. ವಾರಣಾಸಿಯಲ್ಲಿ ತುಳಸಿ ಮಾನಸ ದೇವಸ್ಥಾನ, ಸಂಕಟಮೋಚನ ದೇವಸ್ಥಾನ, ಕಾಶಿ ವಿಶ್ವನಾಥ ಕಾರಿಡಾರ್ ಮತ್ತು ದೇವಸ್ಥಾನ, ವಾರಣಾಸ್‌ಘಾಟ್‌ನಲ್ಲಿ ಗಂಗಾ ಆರತಿಯನ್ನು ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.

IRCTC tour package announcement to Ayodhya, Kathmandu, Prayagraj, Varanasi, know dates details

4. ಇನ್ನು ಪ್ರಯಾಗರಾಜ್‌ನಲ್ಲಿ ಗಂಗಾ- ಯಮುನಾ ಸಂಗಮ, ಹನುಮಾನ್ ದೇವಸ್ಥಾನಕ್ಕೆ ಬೇಟಿ ನೀಡಬಹುದಾಗಿದೆ.

ಪ್ರವಾಸದ ಹೆಸರು: ಭಾರತ ನೇಪಾಳ ಅಷ್ಟ ಯಾತ್ರೆ

ಅವಧಿ: 09 ರಾತ್ರಿಗಳು 10 ಹಗಲುಗಳು

ಪ್ರವಾಸದ ದಿನಾಂಕ: 31.03.2023

ಪ್ರವಾಸಿ ತಾಣಗಳು: ಜಲಂಧರ್ ನಗರ - ಅಯೋಧ್ಯೆ - ಕಠ್ಮಂಡು - ವಾರಣಾಸಿ - ಪ್ರಯಾಗ್ರಾಜ್ - ಜಲಂಧರ್ ನಗರ

ರೈಲು ಸಂಚಾರದ ಮಾರ್ಗಗಳು: ಜಲಂಧರ್ ನಗರ - ಅಯೋಧ್ಯೆ - ಕಠ್ಮಂಡು - ವಾರಣಾಸಿ - ಪ್ರಯಾಗ್ರಾಜ್ - ಜಲಂಧರ್ ನಗರ

ಆಸನಗಳ ಸಂಖ್ಯೆ: 600

ಲೆಹ್-ಲಡಾಖ್‌ಗೆ ಪ್ರವಾಸ ಪ್ಯಾಕೇಜ್‌ ಘೋಷಣೆ

ಹಾಗೆಯೇ ಐಆರ್‌ಸಿಟಿಸಿಯು ವಿಶಿಷ್ಟ ಸಂಸ್ಕೃತಿಗೆ ಹೆಸರುವಾಸಿಯಾದ ಲೆಹ್-ಲಡಾಖ್‌ಗೆ ಕೈಗೆಟಕುವ ದರದಲ್ಲಿ ಪ್ರವಾಸ ಪ್ಯಾಕೇಜ್‌ ಅನ್ನು ಘೋಷಿಸಿದೆ. ಈ ಪ್ರದೇಶಕ್ಕೆ ಪ್ರತಿ ವರ್ಷವೂ ಸಹ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ನೀವು ಸಹ ಬೇಸಿಗೆ ಕಾಲದಲ್ಲಿ ಈ ಪ್ರದೇಶಕ್ಕೆ ಭೇಟಿ ನೀಡಲು ಪ್ಲಾನ್‌ ಮಾಡಿಕೊಂಡಿದ್ದರೆ, ಐಆರ್‌ಸಿಟಿಸಿ ಘೋಷಿಸಿದ ಪ್ರವಾಸ ಪ್ಯಾಕೇಜ್‌ ಉತ್ತಮವಾಗಿದೆ.

7 ಹಗಲು ಮತ್ತು 6 ರಾತ್ರಿಗಳ ಪ್ರವಾಸ ಪ್ಯಾಕೇಜ್ ಇದ್ದಾಗಿದ್ದು, ಈ ಪ್ರವಾಸ ಮೇ 4ರಂದು ಹೈದರಾಬಾದ್‌ನಿಂದ ಪ್ರಾರಂಭವಾಗುತ್ತದೆ. ಹೈದರಾಬಾದ್‌ನಿಂದ ಲೇಹ್‌ಗೆ ಹಿಂದಿರುಗಲು ವಿಮಾನಯಾನ ಶುಲ್ಕ, ಬಸ್, ಹೋಟೆಲ್, ಆಹಾರ, ಮಾರ್ಗದರ್ಶಿ ಮತ್ತು ವಿಮೆಯ ಸೌಲಭ್ಯಗಳನ್ನು ಕೂಡ ಈ ಪ್ಯಾಕೇಜ್‌ನಲ್ಲಿ ಕಲ್ಪಿಸಲಾಗಿದೆ ಎಂದು ಐಆರ್‌ಸಿಟಿಸಿ ತಿಳಿಸಿದೆ.

ದರಗಳ ವಿವರ ಇಲ್ಲಿದೆ ಪ್ರವಾಸ ಪ್ಯಾಕೇಜ್ ಮೂರು ವಿಭಿನ್ನ ಆಕ್ಯುಪೆನ್ಸಿ ವರ್ಗಗಳಲ್ಲಿ ಲಭ್ಯವಿದೆ. ಸಿಂಗಲ್, ಡಬಲ್ ಮತ್ತು ತ್ರಬಲ್ ಎನ್ನುವ ಮೂರು ವರ್ಗಗಳಿರುತ್ತವೆ. ಕಂಪರ್ಟ್‌ಮೆಂಟ್‌ ವರ್ಗದಲ್ಲಿ ಮೂವರಿಗೆ 47,830 ರೂಪಾಯಿ, ಇಬ್ಬರಿಗೆ 48,560 ರೂಪಾಯಿ ಮತ್ತು ಸಿಂಗಲ್‌ ಆಕ್ಯುಪೆನ್ಸಿಗೆ 54,500 ರೂಪಾಯಿ ಆಗಲಿದೆ. ಇನ್ನು 5 ರಿಂದ 11 ವರ್ಷದೊಳಗಿನ ಮಕ್ಕಳನ್ನು ಕೂಡ ಕರೆದುಕೊಂಡು ಹೋಗಬಹುದಾಗಿದೆ.

ಮಕ್ಕಳಿಗೆ ಹಾಸಿಗೆಯೊಂದಿಗೆ 45,575 ರೂಪಾಯಿ, ಹಾಸಿಗೆಯಿಲ್ಲದೆ 41,750 ರೂಪಾಯಿ ವೆಚ್ಚ ಆಗಲಿದೆ. ಪ್ರವಾಸ ಪ್ಯಾಕೇಜ್‌ನ ಮುಖ್ಯಾಂಶಗಳು ಇದು 7 ದಿನ ಹಗಲು ಮತ್ತು 6 ರಾತ್ರಿ ಪ್ರವಾಸ ಆಗಿದೆ. ಇದರಲ್ಲಿ ತುರ್ತುಕ್‌ಗೂ ಕೂಡ ಭೇಟಿ ನೀಡಬಹುದಾಗಿದೆ. ಪ್ರವಾಸದ ಸಮಯದಲ್ಲಿ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟದ ವ್ಯವಸ್ಥೆಯು ಇರಲಿದೆ.

ಸಾರಿಗೆಯ ವಿಧಾನವು ವಿಮಾನ ಆಗಿರುತ್ತದೆ. ನೀವು IRCTC ವೆಬ್‌ಸೈಟ್‌, irctctourism.com ಅಥವಾ IRCTC ಪ್ರವಾಸಿ ಸೌಲಭ್ಯ ಕೇಂದ್ರ, ವಲಯ ಕಚೇರಿಗಳು ಮತ್ತು ಪ್ರಾದೇಶಿಕ ಕಚೇರಿಗಳ ಮೂಲಕವೂ ಈ ಪ್ರವಾಸ ಪ್ಯಾಕೇಜ್‌ ಅನ್ನು ಬುಕ್ ಮಾಡಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+