IRCTCಯಿಂದ ತಿರುಪತಿ ದರ್ಶನ ಪ್ಯಾಕೇಜ್ ಟೂರ್‌

ಐಆರ್‌ಸಿಟಿಸಿಯಿಂದ ತಿರುಪತಿ ತಿಮ್ಮಪ್ಪನ ದರ್ಶನದ ಪ್ಯಾಕೇಜ್‌ ಪ್ರವಾಸವು ಮಾರ್ಚ್ 31 ರಂದು ಪ್ರಾರಂಭವಾಗಲಿದ್ದು, ಏಪ್ರಿಲ್ 2 ರವರೆಗೆ ಮುಂದುವರೆಯಲಿದೆ.

ತಿರುವನಂತಪುರಂ, ಫೆಬ್ರವರಿ 24: ಆಂಧ್ರಪ್ರದೇಶದ ತಿರುಪತಿ ದೇವಸ್ಥಾನವು ಭಾರತದ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ. ಬಾಲಾಜಿ ದೇವಸ್ಥಾನವು ವಿಶ್ವದ ಅತ್ಯಂತ ಶ್ರೀಮಂತ ಹಿಂದೂ ದೇವಾಲಯವಾಗಿದ್ದು, ಭಾರತೀಯ ರೈಲ್ವೆಯ ಅಂಗಸಂಸ್ಥೆ IRCTC ತಿರುಪತಿ ಬಾಲಾಜಿಗಾಗಿ ತಿರುವನಂತಪುರದಿಂದ ಪ್ರವಾಸದ ಪ್ಯಾಕೇಜ್ ಅನ್ನು ಪ್ರಾರಂಭ ಮಾಡಿದೆ.

ಈ ಪ್ಯಾಕೇಜ್‌ ಪ್ರವಾಸವು ಮಾರ್ಚ್ 31 ರಂದು ಪ್ರಾರಂಭವಾಗಲಿದ್ದು, ಏಪ್ರಿಲ್ 2 ರವರೆಗೆ ಮುಂದುವರೆಯಲಿದೆ. ಈ ಐಆರ್‌ಸಿಟಿಸಿ ಪ್ರವಾಸದಲ್ಲಿ ಸ್ಲೀಪರ್ ಕ್ಲಾಸ್‌ ರೈಲು ಪ್ರಯಾಣ, ಅಲ್ಲಿಂದ ರಸ್ತೆ ಮಾರ್ಗ, ವಸತಿ ಮತ್ತು ಊಟವನ್ನು ಒಳಗೊಂಡಿದೆ.

IRCTC luanch Tirupati Darshan tour package tour

ಈ ಪ್ಯಾಕೇಜ್ ಒಳಗೊಂಡಿರುವ ಸೌಲಭ್ಯಗಳು

1 ತಿರುಮಲದಲ್ಲಿ ಭಗವಾನ್ ಬಾಲಾಜಿಯ ದರ್ಶನ ಟಿಕೆಟ್‌ಗಳು
2 ಶ್ರೀ ಕಾಳಹಸ್ತಿ ದೇವಸ್ಥಾನದ ಸಾಮಾನ್ಯ ದರ್ಶನ ಟಿಕೆಟ್‌ಗಳು.
3. ಸಂಪೂರ್ಣ ಪ್ರಯಾಣಕ್ಕಾಗಿ ಟೂರ್ ಎಸ್ಕಾರ್ಟ್.
4. ತಿರುಪತಿ ದರ್ಶನಕ್ಕೆ ಮಾತ್ರ ಪ್ರವಾಸ ಮಾರ್ಗದರ್ಶಿ.
5. ಪ್ರವಾಸ ವಿಮೆ.

ಐಆರ್‌ಸಿಟಿಸಿಯ ಪ್ಯಾಕೇಜ್ ಹೆಸರು ಮತ್ತು ಕೋಡ್: ತಿರುಪತಿ ಬಾಲಾಜಿ ದರ್ಶನ
ಪ್ಯಾಕೇಜ್‌ನ ಅವಧಿ: 02 ರಾತ್ರಿಗಳು / 03 ದಿನಗಳು
ಪ್ರವಾಸದ ಸ್ಥಳಗಳು: ತಿರುಮಲ, ಕಾಳಹಸ್ತಿ ದೇವಸ್ಥಾನ ಮತ್ತು ಪದ್ಮಾವತಿ ದೇವಸ್ಥಾನ

IRCTC luanch Tirupati Darshan tour package tour

ಪ್ರಯಾಣದ ಮಾದರಿ: ರೈಲು ಸಂಖ್ಯೆ. 17229 (ಮುಂದೆ) ಮತ್ತು ರೈಲು ಸಂಖ್ಯೆ. 17230 (ಹಿಂತಿರುಗುವಿಕೆ)
ಒಬ್ಬರಿಗೆ: 8,770 ರೂಪಾಯಿಗಳು
ಇಬ್ಬರಿಗೆ: 7,100 ರೂಪಾಯಿಗಳು
ಮೂವರಿಗೆ: 7,000 ರೂಪಾಯಿಗಳು

ಐಆರ್‌ಸಿಟಿಸಿ ತಿರುಪತಿ ಬಾಲಾಜಿ ದರ್ಶನ ಪಡೆಯಲು ಮುಂಬೈನಿಂದ ತಿರುಪತಿ ರೈಲು ಪ್ರವಾಸ ಪ್ಯಾಕೇಜ್ ಅನ್ನು ಈಗಾಗಲೇ ಭಾರತೀಯ ರೈಲ್ವೆಯಿಂದ ಪ್ರಾರಂಭಿಸಿದೆ. ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಲು 'ತಿರುಪತಿ ಬಾಲಾಜಿ ದರ್ಶನ' ಎಂಬ ರೈಲ್ ಟೂರ್ ಪ್ಯಾಕೇಜ್ ಅನ್ನು ಭಾರತೀಯ ರೈಲ್ವೆ ನೀಡಿದೆ. ಮುಂಬೈನಿಂದ ಮಾರ್ಚ್ 31 ರ ವರೆಗೆ ಪ್ರತಿದಿನ ರೈಲು ಸಂಚರಿಸಲಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಶೇಷ ರೈಲು ಮುಂಬೈನ ಲೋಕಮಾನ್ಯ ತಿಲಕ್ ಟರ್ಮಿನಸ್ (LTT) ನಿಂದ ಪ್ರತಿದಿನ ಸಂಜೆ 6:45 ಕ್ಕೆ ಹೊರಡಲಿದೆ. ರೈಲು ಮೂರು ರಾತ್ರಿ ಮತ್ತು ನಾಲ್ಕು ದಿನಗಳ ನಂತರ ಮಧ್ಯಾಹ್ನ 3:40 ಕ್ಕೆ LTT ಅನ್ನು ತಲುಪುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+