ಚಾರ್ ಧಾಮ್ ಯಾತ್ರಾ 2023: ಆರೋಗ್ಯ ತೊಂದರೆಯಿಂದ ತಪ್ಪಿಸಿಕೊಳ್ಳಲು ಪ್ರಯಾಣಿಕರು ಪಾಲಿಸಬೇಕಾದ ಪ್ರಮುಖ ಸಲಹೆಗಳಿವು

ಚಾರ್‌ ಧಾಮ್‌ ಯಾತ್ರೆಯನ್ನು ನೋಂದಯಿಸಿಕೊಂಡವರಿಗೆ ಉತ್ತರಖಂಡ ಸರ್ಕಾರವು ಆರೋಗ್ಯಕ್ಕೆ ಸಂಬಂಧಿಸಿದಂತೆ ಕೆಲವೊಂದು ಸಲಹೆಗಳನ್ನು ನೀಡಿದೆ. ಹಾಗಾದರೆ ಆ ಸಲಹೆಗಳು ಯಾವುವು ಎಂದು ಇಲ್ಲಿ ಗಮನಿಸಿ.

ನವದೆಹಲಿ, ಮಾರ್ಚ್‌, 06: ಚಾರ್ ಧಾಮ್ ಯಾತ್ರಾ 2023 ನೋಂದಣಿಯು ದೇಶಾದ್ಯಂತ ಪ್ರಾರಂಭವಾಗಿದೆ. ಮತ್ತು ಅನೇಕ ಯಾತ್ರಿಕರು ಈ ಪ್ರವಾಸದ ಪ್ಯಾಕೇಜ್‌ ಅನ್ನು ನೋಂದಯಿಸಿಕೊಳ್ಳುತ್ತಿದ್ದಾರೆ. ಇದು ದೇಶದಾದ್ಯಂತ ನಾಲ್ಕು ಪ್ರಮುಖ ಸ್ಥಳಗಳಿಂದ ಆರಂಭವಾಗುವ ಪ್ಯಾಕೇಜ್‌ ಆಗಿದೆ. ಈ ಪ್ರವಾಸ ಕೈಗೊಂಡರೆ ಸಾವಿನ ನಂತರ ವ್ಯಕ್ತಿಗೆ ಮೋಕ್ಷ ದೊರಕುತ್ತದೆ ಎನ್ನುವ ನಂಬಿಕೆಯೂ ಜನರಲ್ಲಿದೆ. ಆದ್ದರಿಂದ ಈ ಯಾತ್ರೆಗೆ ಹೆಚ್ಚು ಜನರು ನೋಂದಣಿ ಮಾಡಿಕೊಳ್ಳುತ್ತಿದ್ದಾರೆ.

ಚಾರ್ ಧಾಮ್ ಯಾತ್ರೆಯು ಹಿಂದೂ ಭಕ್ತರ ಅತ್ಯಂತ ಜನಪ್ರಿಯವಾದ ಯಾತ್ರೆಯಾಗಿದೆ. ಈ ಯಾತ್ರೆಯನ್ನು ಪೂರ್ಣಗೊಳಿಸಲು ಅತ್ಯಂತ ಕಷ್ಟಕರವಾಗಿರುತ್ತದೆ. ಮತ್ತು ಸವಾಲಿನ ಸಾಧನೆಯಂತಲೇ ಹೇಳಬಹುದಾಗಿದೆ. ಈ ಪ್ರವಾಸದ ಸಮಯದಲ್ಲಿ ಅನೇಕರು ಆರೋಗ್ಯ ತೊಂದರೆಗಳನ್ನು ಅನುಭವಿಸುತ್ತಾರೆ. ಹೀಗೆಯೇ ಈ ಹಿಂದೆಯೂ ಸಹ ಯಾತ್ರೆಯಲ್ಲಿ ಸಾವಿನ ಸಂಖ್ಯೆಯು ಏರಿಕೆಯಾಗಿತ್ತು. ಆದ್ದರಿಂದ ಉತ್ತರಖಂಡ ಸರ್ಕಾರವು ಪ್ರಯಾಣಿಕರ ಅನುಕೂಲಕ್ಕಾಗಿ ಕೆಲವೊಂದು ಸಲಹೆಗಳನ್ನು ನೀಡಿದೆ.

Important advisory for Char Dham Yatra travellers, here see details

ಪ್ರಮುಖ ಸಲಹೆಗಳನ್ನು ನೀಡಿದ ಸರ್ಕಾರ

ಉತ್ತರಾಖಂಡ ಸರ್ಕಾರವು ಈ ವರ್ಷ ಚಾರ್ ಧಾಮ್ ಯಾತ್ರೆಗೆ ನೋಂದಾಯಿಸಲು ಬಯಸುವ ಎಲ್ಲರಿಗೂ ಪ್ರಮುಖ ಸಲಹೆಯನ್ನು ನೀಡಿದೆ. ಎಲ್ಲಾ ಯಾತ್ರಾರ್ಥಿಗಳು ಅರ್ಜಿ ಸಲ್ಲಿಸುವಾಗ ತಮ್ಮ ಆರೋಗ್ಯ ಸಮಸ್ಯೆಯ ವಿವರಗಳನ್ನು ಆನ್‌ಲೈನ್ ನೋಂದಣಿ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲು ಸೂಚನೆ ನೀಡಿದೆ.

ಯಾತ್ರಾರ್ಥಿಗಳಿಗೆ ಪ್ರಮುಖ ಸಲಹೆಗಳು

ಇದು ವೈದ್ಯಕೀಯ ಅಧಿಕಾರಿಗಳು ಯಾತ್ರಾರ್ಥಿಗಳಿಗೆ ಅಗತ್ಯ ವ್ಯವಸ್ಥೆಗಳನ್ನು ಮಾಡಲು ಸಹಾಯ ಮಾಡುತ್ತದೆ. ಮತ್ತು ಯಾವುದೇ ಆರೋಗ್ಯ ತೊಂದರೆ ಆಗದಂತೆ ಚಾರ್ ಧಾಮ್ ಯಾತ್ರೆಯ ಸಮಯದಲ್ಲಿ ಸರಿಯಾದ ಆರೈಕೆಯನ್ನು ಮಾಡಲಾಗುತ್ತದೆ. ಹೀಗೆ ಈ ಹಿಂದೆ ನಿರ್ಲಕ್ಷ್ಯವಹಿಸಿದ ಕಾರಣ ಧಾಮ್ ಯಾತ್ರೆ 2022ರಲ್ಲಿ ಸಾವಿನ ಸಂಖ್ಯೆ 300ರ ಗಡಿಯನ್ನು ದಾಟಿದೆ. ಆದ್ದರಿಂದ ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡುವಂತೆ ಸೂಚನೆ ನೀಡಿದೆ.

ಆರೋಗ್ಯ ಸಮಸ್ಯೆಯ ಬಗ್ಗೆ ಮಾಹಿತಿ ನೀಡಬೇಕು

ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಮುಖ್ಯ ಕಾರ್ಯದರ್ಶಿ ಎಸ್‌ಎಸ್ ಸಂಧು ಡೆಹ್ರಾಡೂನ್‌ನಲ್ಲಿ ನಡೆದ ಸಭೆಯಲ್ಲಿ ಚಾರ್ ಧಾಮ್ ಯಾತ್ರೆಗೆ ಮುಂಚಿತವಾಗಿ ಎಲ್ಲಾ ಯಾತ್ರಿಕರ ವೈದ್ಯಕೀಯ ವಿವರನ್ನು ಕಲೆ ಹಾಕಬೇಕು. ಅಲ್ಲದೇ ವೈದ್ಯಕೀಯ ಅಧಿಕಾರಿಗಳು ವಯೋಮಿತಿ ಮೀರಿದ ಅದಂರೆ 55 ವರ್ಷ ಮೇಲ್ಪಟ್ಟ ಯಾತ್ರಿಕರ ಆರೋಗ್ಯವನ್ನು ಪರೀಕ್ಷಿಸಬೇಕು ಎಂದು ಹೇಳಿದರು.

Important advisory for Char Dham Yatra travellers, here see details

ಈ ವರ್ಷ ಚಾರ್ ಧಾಮ್ ಯಾತ್ರೆಗೆ ಅರ್ಜಿ ಸಲ್ಲಿಸುವ ಎಲ್ಲರೂ ತಮ್ಮ ವೈದ್ಯಕೀಯ ವಿವರವನ್ನು ನೀಡಬೇಕಾಗುತ್ತದೆ. ಆರೋಗ್ಯದ ತೊಂದರೆಗಳನ್ನು ತಪ್ಪಿಸಲು ಆ ವಿವರವನ್ನು ಆನ್‌ಲೈನ್ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕು. ಈಗಾಗಲೇ ಕೇದಾರನಾಥ ಮತ್ತು ಬದರಿನಾಥ ಯಾತ್ರೆಯನ್ನು ಪೂರ್ಣಗೊಳಿಸಲು ಈ ವರ್ಷ 80,000ಕ್ಕೂ ಹೆಚ್ಚು ಜನರು ನೋಂದಾಯಿಸಿಕೊಂಡಿದ್ದಾರೆ. ಎಲ್ಲಾ ಯಾತ್ರಾರ್ಥಿಗಳಿಗೂ ಕ್ಯೂಆರ್ ಕೋಡ್ ವ್ಯವಸ್ಥೆಯನ್ನು ಮಾಡಲಾಗಿದ್ದು, ಇಲ್ಲಿ ದೇವಾಲಯಗಳಿಗೆ ಭೇಟಿ ನೀಡಲು ಟೋಕನ್‌ಗಳನ್ನು ಪಡೆಯಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+