Goa Tourists: ಗೋವಾ ಪ್ರವಾಸಿಗರಿಗೆ ಸಿಹಿಸುದ್ದಿ ನೀಡಿದ ಪೊಲೀಸರು
ಪಣಜಿ, ಫೆಬ್ರವರಿ 26: ಗೋವಾ ಸದಾ ಪ್ರವಾಸಿಗರಿಂದ ತುಂಬಿರುವ ಪ್ರದೇಶ. ಅದರಲ್ಲೂ ವೀಕೆಂಡ್, ಸಾಲು ಸಾಲು ರಜೆ, ವರ್ಷಾಂತ್ಯದಲ್ಲಿ ದೇಶ-ವಿದೇಶದ ಸಾವಿರಾರು ಪ್ರವಾಸಿಗರು ಗೋವಾಕ್ಕೆ ಆಗಮಿಸುತ್ತಾರೆ. ಗೋವಾ ಪ್ರವಾಸಕ್ಕೆ ಹೋಗುವ ಪ್ರವಾಸಿಗರಿಗೆ ಪೊಲೀಸರು ಸಿಹಿಸುದ್ದಿಯನ್ನು ನೀಡಿದ್ದಾರೆ. ಭಾರತದಲ್ಲಿಯೇ ಪ್ರವಾಸಿಗರಿಗಾಗಿ ಈ ಮಾದರಿ ಸೇವೆಯನ್ನು ಆರಂಭಿಸಿರುವ ಮೊದಲ ರಾಜ್ಯ ಗೋವಾ.
ಗೋವಾ ಪೊಲೀಸರು ವಾಹನಗಳ ಜೊತೆ ಸಂಚಾರ ನಡೆಸುವ ಪ್ರವಾಸಿಗರಿಗಾಗಿ ಕ್ಯೂ ಆರ್ ಕೋಡ್ ಪರಿಚಯಿಸಿದ್ದಾರೆ. ಈ ಕೋಡ್ 12 ಗಂಟೆಗಳ ಕಾಲ ಸಕ್ರಿಯವಾಗಿ ಇರಲಿದ್ದು, ಪದೇ ಪದೇ ವಾಹನವನ್ನು ಪೊಲೀಸರು ದಾಖಲೆಗಳ ಪರಿಶೀಲನೆಗೆ ಹಿಡಿದರೆ ಪ್ರವಾಸಿಗರು ಕ್ಯೂ ಆರ್ ಕೋಡ್ ತೋರಿಸಬಹುದು.

ಈ ಕ್ಯೂ ಆರ್ ಕೋಡ್ ನೋಡಿದ ಕೂಡಲೇ ಪೊಲೀಸರಿಗೆ ಈ ವಾಹನ ಎಲ್ಲಾ ಅಗತ್ಯ ದಾಖಲೆಗಳನ್ನು ಹೊಂದಿದೆ ಎಂದು ತಿಳಿಯಲಿದೆ. ಆದ್ದರಿಂದ ಮುಂದಿನ ತಪಾಸಣೆಯನ್ನು ನಡೆಸದೇ ಅವರನ್ನು ಮುಂದಕ್ಕೆ ಕಳಿಸುತ್ತಾರೆ. ರಜೆ ದಿನಗಳಲ್ಲಿ ಪ್ರವಾಸಿಗರಿಗೆ ಪೊಲೀಸರ ಕಿರುಕುಳ ತಪ್ಪಿಸಲು ಪೊಲೀಸರು ಇದುವರೆಗೂ 4 ಸಾವಿರ ಕ್ಯೂ ಆರ್ ವಿತರಣೆ ಮಾಡಿದ್ದಾರೆ.
ಪ್ರವಾಸಿಗರಿಗೆ ಸಹಾಯಕ ಕ್ಯೂ ಆರ್ ಕೋಡ್: ಗೋವಾ ಪೊಲೀಸರು ಕ್ವಿಕ್ ಪಾಸ್ ಎಂಬ ಮೊಬೈಲ್ ಅಪ್ಲಿಕೇಶನ್ ಅನ್ನು ಸಂಚಾರಿ ಪೊಲೀಸರಿಗಾಗಿ ಪರಿಚಯಿಸಿದ್ದಾರೆ. ಇದು ರಾಜ್ಯಕ್ಕೆ ಆಗಮಿಸುವ ಪ್ರವಾಸಿ ವಾಹನಗಳ ದಾಖಲೆಗಳ ಪರಿಶೀಲನೆಗೆ ಕ್ಯೂ ಆರ್ ವ್ಯವಸ್ಥೆಯನ್ನು ಹೊಂದಿದೆ.
ಪ್ರವಾಸಿಗರ ವಾಹನವನ್ನು ತಡೆದು ತಪಾಸಣೆ ನಡೆಸಿದಾಗ ವಾಹನ ಓಡಿಸುತ್ತಿರುವವರ ಮೊಬೈಲ್ ಸಂಖ್ಯೆಗೆ ಕ್ಯೂ ಆರ್ ಕೋಡ್ ಸಂದೇಶ ರೂಪದಲ್ಲಿ ಬರುತ್ತದೆ. ಇದು 12 ಗಂಟೆಗಳ ಕಾಲ ಸಕ್ರಿಯವಾಗಿರುತ್ತದೆ. ಈ ಅವಧಿಯಲ್ಲಿ ಮತ್ತೊಮ್ಮೆ ಪೊಲೀಸರು ವಾಹನ ಹಿಡಿದರೆ ಕ್ಯೂ ಆರ್ ಕೋಡ್ ತೋರಿಸಿದರೆ ಸಾಕು.
ಪದೇ ಪದೇ ಪೊಲೀಸರು ವಾಹನ ನಿಲ್ಲಿಸಿ, ವಿವಿಧ ದಾಖಲೆಗಳನ್ನು ಪರಿಶೀಲನೆ ನೆಪದಲ್ಲಿ ಸಮಯ ವ್ಯರ್ಥ ಮಾಡುವುದು, ವಾಹನ ಸವಾರರಿಗೆ ಕಿರುಕುಳ ನೀಡುವುದು ತಡೆಯಲು ಈ ವ್ಯವಸ್ಥೆ ಪರಿಚಯಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಒಮ್ಮೆ ಪೊಲೀಸರು ಪ್ರವಾಸಿಗರ ವಾಹನ ತಪಾಸಣೆ ನಡೆಸಿದಾಗ ಕ್ಯೂ ಆರ್ ಕೋಡ್ ಪಡೆದುಕೊಂಡರೆ 12 ಗಂಟೆಗಳ ಕಾಲ ಅದು ಚಾಲ್ತಿಯಲ್ಲಿರುತ್ತದೆ. ಆಗ ಮತ್ತೊಮ್ಮೆ ವಾಹನ ಹಿಡಿದರೆ ಕ್ಯೂ ಆರ್ ಕೋಡ್ ತೋರಿಸಿ ಪ್ರವಾಸಿಗರು ಸಮಯ ವ್ಯರ್ಥ ಮಾಡದೇ ಮುಂದೆ ಸಾಗಬಹುದು.
ಕ್ವಿಕ್ ಪಾಸ್ ಎಂಬ ಮೊಬೈಲ್ ಅಪ್ಲಿಕೇಶನ್ ವಾಹನಗಳ ಫೋಟೋ, ರಿಯಲ್ ಟೈಂನಲ್ಲಿ ಅದು ಎಲ್ಲಿದೆ?, ದಿನಕ್ಕೆ ಎಷ್ಟು ಬಾರಿ ಅದನ್ನು ಪೊಲೀಸರು ತಡೆದಿದ್ದಾರೆ ಎಂಬ ಮಾಹಿತಿಯನ್ನು ತಿಳಿಸಲಿದೆ. ಪ್ರವಾಸಿಗರಿಗೆ, ಪೊಲೀಸರಿಗೆ ಈ ಅಪ್ಲಿಕೇಶನ್ ಸಹಾಯಕವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ದೇಶದಲ್ಲಿಯೇ ಮೊದಲ ಬಾರಿಗೆ ಗೋವಾದಲ್ಲಿ ಈ ಮಾದರಿ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿಗೊಳಿಸಿ ಕ್ಯೂ ಆರ್ ಕೋಡ್ ಪರಿಚಯಿಸಲಾಗಿದೆ. ರಾಜ್ಯಕ್ಕೆ ಆಗಮಿಸುವ ಪ್ರವಾಸಿಗರಿಗೆ ಆಗುವ ಕಿರಿಕಿರಿ ತಪ್ಪಿಸಲು ಇದು ಸಹಾಯಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
2024ರಲ್ಲಿ ಗೋವಾ ಪೊಲೀಸರು ಹ್ಯಾಕಥಾನ್ ಆಯೋಜನೆ ಮಾಡಿದ್ದರು. ಆಗ ಗೋವಾ ರಾಜ್ಯದ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಈ ಮಾದರಿ ವ್ಯವಸ್ಥೆ ಜಾರಿಯ ಆಲೋಚನೆ ಶೇರ್ ಮಾಡಿದ್ದರು. ಗೋವಾ ಸರ್ಕಾರ ಆ ವಿದ್ಯಾರ್ಥಿಗಳ ಮೂಲಕವೇ ಕ್ವಿಕ್ ಪಾಸ್ ಎಂಬ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿಗೊಳಿಸಿ ಅದನ್ನು ರಾಜ್ಯದಲ್ಲಿ ಪರಿಚಯಿಸಿದೆ.
-
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
ರಿಷಬ್ ಸಮಯ ಬಂದಾಗ ಮಾತಾಡ್ತೀನಿ ಅಂದ: ಅನ್ಫಾಲೋ, ಗೆಳೆಯರಲ್ಲಿ ಬಿರುಕು ವದಂತಿ ಬಗ್ಗೆ ಪ್ರಮೋದ್ ಶೆಟ್ಟಿ ಪ್ರತಿಕ್ರಿಯೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಸಚಿವರಾಗಿ ಕೆಎಎಸ್ ಅಧಿಕಾರಿ ಎಸ್.ಕುಸುಮಾ ಕುಮಾರಿ ನೇಮಕ -
April 5 Horoscope: ನಿಮ್ಮ ಅದೃಷ್ಟ ಹೇಗಿದೆ? ಸಂಪೂರ್ಣ ಮಾಹಿತಿ ಇಲ್ಲಿ -
ಬೆಂಗಳೂರಿನ ಹೊಸೂರು ರಸ್ತೆಯ ದುಸ್ಥಿತಿ: ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಟ್ಯಾಗ್ ಮಾಡಿ ಕಿರಣ್ ಮಜುಂದಾರ್ ಶಾ ಆಕ್ರೋಶ -
Bengaluru Viral: ಬೆಂಗಳೂರಿನ ಲಾಲ್ಬಾಗ್ ನೋಡಿ ತಪ್ಪೊಪ್ಪಿಗೆ ಕೊಡಬೇಕು ಎಂದ ವಿದೇಶಿಗ, ವಿಡಿಯೋ ವೈರಲ್ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
RCB vs CSK: ಆರ್ಸಿಬಿ ಕಡೆಯಿಂದ ಅಭಿಮಾನಿಗಳಿಗೆ ವಿಶೇಷ ಸಂದೇಶ: ಇಂದಿನ ಪಂದ್ಯಕ್ಕೂ ಮುನ್ನ ಇದು ಗಮನದಲ್ಲಿರಲಿ -
Virat Kohli: ಎಲ್ಲೂ ಅವಕಾಶ ಸಿಗದಿದ್ರೆ ಸ್ಯಾಂಡಲ್ವುಡ್ಗೆ ಬರ್ತೀನಿ: ವಿರಾಟ್ ಕೊಹ್ಲಿ ವಿಡಿಯೋ ವೈರಲ್












Click it and Unblock the Notifications