Get Updates
Get notified of breaking news, exclusive insights, and must-see stories!

Dudhsagar: ಪ್ರವಾಸಿಗರಿಗೆ ಸಿಹಿ ಸುದ್ದಿ, ದೂಧ್ ಸಾಗರ್ ವೀಕ್ಷಣೆಗೆ ಸರ್ಕಾರ ಅನುಮತಿ, ಸೂಚನೆ ತಿಳಿಯಿರಿ

ಬೆಂಗಳೂರು, ಆಗಸ್ಟ್ 10: ಪ್ರವಾಸಿಗರಿಗೆ ಸರ್ಕಾರ ಸಿಹಿ ಸುದ್ದಿಯೊಂದನ್ನು ಘೋಷಿಸಿದೆ. ಹಲವು ಪ್ರಮುಖ ಕಾರಣಗಳಿಂದ ತಡೆ ಹಿಡಿದಿದ್ದ 'ದೂಧ್‌ಸಾಗರ್' (Dudhsagar Waterfalls) ಚಾರಣಕ್ಕೆ (Trekking) ಮತ್ತೆ ಅವಕಾಶ ದೊರೆತಿದೆ. ಪ್ರವಾಸಿಗರು ಜಲಪಾತವನ್ನು ಕಣ್ತುಂಬಿಕೊಳ್ಳಲು 'ಕ್ಯಾಸಲ್‌ ರಾಕ್‌' ಗೆ ಇಳಿಯಲು ಮತ್ತು ಜಲಪಾತ ವೀಕ್ಷಣೆಗೆ ಗುರುವಾರದಿಂದಲೇ (ಆ.10) ಅನುಮತಿ ನೀಲಾಗಿದೆ. ಆದರೆ ಕುಲೇಮ್‌ನಿಂದ ಮಾತ್ರ ಅವಕಾಶ ನೀಡಲಾಗಿದೆ ಎಂದು ಗೋವಾ ಸರ್ಕಾರ ತಿಳಿಸಿದೆ.

ಮಳೆಗಾಲ ಆರಂಭವಾಗುತ್ತಿದ್ದಂತೆ ಕರ್ನಾಟಕ ಹಾಗೂ ಗೋವಾ ಗಡಿ ಭಾಗದ ದಟ್ಟಾರಣ್ಯದ ಮಧ್ಯೆ ಹಾಲಿನಂತೆ ಉಕ್ಕಿ ಹರಿಯುವ ಈ 'ದೂಧ್‌ಸಾಗರ್' ಜಲಪಾತದ ಸ್ಥಳಕ್ಕೆ ಪ್ರವಾಸಿಗರು ಧಾಂಗುಡಿ ಇಡುತ್ತಿದ್ದರು. ಆದರೆ ಕೆಲವು ವಾರಗಳ ಹಿಂದಷ್ಟೇ ಕೇಂದ್ರ ರೈಲ್ವೆ ರಕ್ಷಣಾ ಪಡೆಯು ಸುರಕ್ಷತೆ ದೃಷ್ಟಿಯಿಂದ ಪ್ರವಾಸಿಗರಿಗೆ ಪ್ರವೇಶ ನಿಷೇಧಿಸಿತ್ತು. ಇದು ಲಕ್ಷಾಂತರ ಪ್ರವಾಸಿಗರು/ಚಾರಣಪ್ರಿಯರ ಅಸಮಧಾನ, ಬೇಸರಕ್ಕೆ ಕಾರಣವಾಗಿತ್ತು.

Goa Govt From Today Allows Entry to Dudhsagar From Kulem, Not From Castle Rock Of Karnataka

ಇದೀಗ ಮಳೆ ಕಡಿಮೆ ಆಗಿದ್ದು, ಎಲ್ಲವು ಸಹಜ ಸ್ಥಿತಿಗೆ ಮರಳಿದ ಹಿನ್ನೆಲೆಯಲ್ಲಿ ಗೋವಾ ಸರ್ಕಾರ ಅಗತ್ಯ ಸೂಚನೆಗಳ ಸಹಿತ ಮತ್ತೆ ಪ್ರಕೃತಿಯ ಮಡಿಲಲ್ಲಿ 'ದೂಧ್‌ಸಾಗರ್' ವೀಕ್ಷಣೆಗೆ ಕುಲೆಮ್‌ನಿಂದ ಬರುವ ಪ್ರವಾಸಿಗರಿಗೆ ಅವಕಾಶ ಕಲ್ಪಿಸಿದೆ. ಆದರೆ ಕ್ಯಾಸಲ್ ರಾಕ್‌ನಿಂದ ಬರುವವರಿಗೆ ವಿಧಿಸಿದ್ದ ನಿರ್ಬಂಧ ಮುಂದುವರಿದಿದೆ. ಕರ್ನಾಟಕ ಭಾಗದಿಂದ ಬರುವವರಿಗೆ ಸದ್ಯಕ್ಕೆ ಅವಕಾಶ ಸಿಕ್ಕಿಲ್ಲ. ಈ ಮೂಲಕ ಗೋವಾ ಸರ್ಕಾರದ ಆದೇಶ ಅರ್ಧ ಜನರಿಗೆ ಸಂತಸ ನೀಡಿದರೆ, ಕರ್ನಾಟಕ ಪ್ರವಾಸಿಗರ ಅಸಮಾಧಾನಕ್ಕೆ ಕಾರಣವಾಗಿದೆ. ಅನುಮತಿ ಆದೇಶ ಬಳಿಕ ಈ ವಾರಾಂತ್ಯಕ್ಕೆ ಇಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯೂ ಇದೆ.

ಮಳೆಗಾಲದಲ್ಲಿ ಜೋರು ಮಳೆ ಆಗುತ್ತಿದ್ದಂತೆ ತನ್ನ ವೈಭವಕ್ಕೆ ಮರಳುವ, ಪ್ರಕೃತಿಯ ಹಸಿರ ಹೊದಿಕೆ ಮಧ್ಯೆ ಸುಮಾರು 1017 ಅಡಿ ಎತ್ತರದಿಂದ ಧುಮ್ಮಿಕ್ಕುವ 'ದೂಧಸಾಗರ್' ಜಲಪಾತ ವೀಕ್ಷಣೆ ಪ್ರವಾಸಿಗರು ತಂಡೋಪ ತಂಡವಾಗಿ ಮಳೆಯಲ್ಲೇ ಆಗಮಿಸುತ್ತಾರೆ. ಸದ್ಯ ಇಲ್ಲಿಗೆ ಗೋವಾದಿಂದ ಕುಲೇಮ್ ಮೂಲಕ ರೈಲು ಮಾರ್ಗವಾಗಿ ಆಗಮಿಸಲು ಅವಕಾಶ ಇದೆ.

ಸಾಮಾನ್ಯ ದಿನಗಳಲ್ಲಿ ಜಲಪಾತ ನೋಡಲು ಗೋವಾದಿಂದ ಬರುವವರು ಕುಲೇಮ್ ಗೆ ಇಳಿದ ಬರಬೇಕು. ಕರ್ನಾಟಕ ದಿಂದ ತೆರಳುವವರು ಉತ್ತರ ಕನ್ನಡ ಜಿಲ್ಲೆ ವ್ಯಾಪ್ತಿಯ ಕ್ಯಾಸಲ್‌ ರಾಕ್‌ಗೆ ಇಳಿಯಬೇಕಿದೆ. ಅಲ್ಲಿಂದ ಸುಮಾರು 15 ಕಿಲೋ ಮೀಟರ್ ದೂರದಲ್ಲಿರುವ ದೂಧಸಾಗರ ಜಲಪಾತಕ್ಕೆ ರೈಲು ಹಳಿಗಳ ಮೇಲೆ ನಡೆದುಕೊಂಡು ಟನಲ್‌ಗಳ ಮೂಲಕ ಸಾಗಬೇಕಿರುತ್ತದೆ. ಹೀಗೆ ತೆರಳುವುದನ್ನು ಲಕ್ಷಾಂತರ ಪ್ರವಾಸಿಗರು ಇಷ್ಟಪಡುತ್ತಾರೆ. ಅದನ್ನು ಆನಂದಿಸುತ್ತಾರೆ. ಆದರೆ ಅವರ ಸುರಕ್ಷತೆಯು ಅಷ್ಟೇ ಮುಖ್ಯವಾಗಿರುತ್ತದೆ.

Goa Govt From Today Allows Entry to Dudhsagar From Kulem, Not From Castle Rock Of Karnataka

ಈ ಕಾರಣದಿಂದಲೇ ಪ್ರವೇಶ ನಿರಾಕರಿಸಲಾಗಿತ್ತು

ಕ್ಯಾಸಲ್‌ರಾಕ್‌, ದೂಧ್ ಸಾಗರ್‌ದ ಪ್ರದೇಶ ಅತೀ ಸೂಕ್ಷ್ಮವಾದ ಘಾಟ್ ಪ್ರದೇಶವಾಗಿದೆ. ಜೋರು ಮಳೆ ಸಂದರ್ಭದಲ್ಲಿ ಗುಡ್ಡ ಕುಸಿತ, ಭೂಕುಸಿತ, ಜಲಪಾತದ ನೀರಿನ ಹರಿವಿನ ಹೆಚ್ಚಳ, ರೈಲು ಚಾಲನೆಗೆ ಅಡೆತಡೆ, ಸಾವು ನೋವು ಸಾಧ್ಯತೆ ಸೇರಿದಂತೆ ಇನ್ನಿತರ ಪ್ರಕೃತಿ ವಿಕೋಪದ ಘಟನೆಗಳು ಸಂಭವಿಸುವುದರಿಂದ ಗೋವಾ ಸರ್ಕಾರ ಜುಲೈ ಎರಡನೇ ವಾರ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿತ್ತು. ಇದೀಗ ಗೋವಾರದಿಂದ ಬರುವವರಿಗೆ ಮಾತ್ರ ಅನುಮತಿ ನೀಡಲಾಗಿದೆ. ಕ್ಯಾಸಲ್‌ರಾಕ್‌ನಿಂದ ಬರುವ ಮಾರ್ಗದಲ್ಲಿ ಒಂದಷ್ಟು ಸಂಚಾರ ಸಮಸ್ಯೆ ಇರುವ ಕಾರಣ ಈ ಭಾಗದಿಂದ ಬರುವವರಿಗೆ ಅವಕಾಶ ನೀಡಲಾಗಿಲ್ಲ ಎನ್ನಲಾಗಿದೆ.

ಜೋರು ಮಳೆ ನಡುವೆ ಜುಲೈ ಮೊದಲ ವಾರದ ದೂಧ್‌ ಸಾಗರ್ ನೋಡಲು ಬಂದಿದ್ದ ನೂರಾರು ಮಂದಿಗೆ ಕ್ಯಾಸಲ್‌ ರಾಕ್‌ನಲ್ಲಿ ಇಳಿಯಲು ರಕ್ಷಣಾ ಸಿಬ್ಬಂದಿ ಬಿಟ್ಟಿರಲಿಲ್ಲ. ಸುಮಾರು 400 ಮಂದಿ ಆರ್‌ಪಿಎಫ್‌ನ ಸ್ಕ್ವಾಡ್ ಈಗ ಅದೇ ರೈಲಿನಲ್ಲಿ ಗೋವಾ ಕಡೆಗೆ ವಾಪಸ್ ಕಳುಹಿಸಿತ್ತು. ಅನೇಕರನ್ನು ದೂಧ್ ಸಾಗರ್ ನಿಲ್ದಾಣದಲ್ಲಿ ಇಳಿಯಲು ಬಿಟ್ಟಿರಲಿಲ್ಲ.

ದೂಧ್‌ ಸಾಗರ್ ಜಲಪಾತಕ್ಕೆ ಹೋಗುವುದು ಹೇಗೆ?

ಈ ಜಲಪಾತಕ್ಕೆ ರೈಲಿನ ಮಾರ್ಗದಿಂದಲೇ ತಲುಪಬೇಕಿದೆ. ಗೋವಾದಿಂದ ಬರುವವರು ಮಡ್ಗಾಂವ್‌ ಮೂಲಕ ಕುಲೆಮ್‌ಗೆ ರೈಲು ಮೂಲಕ ತಲುಪಿ ತೆರಳಬಹುದು. ಮುಂದೆ ಕರ್ನಾಟಕದಿಂದ ಬರುವವರಿಗೆ ಅವಕಾಶ ನೀಡಿದಾಗ ಕ್ಯಾಸಲ್‌ರಾಕ್‌ ನಿಲ್ದಾಣಕ್ಕೆ ಇಳಿದು ಅಲ್ಲಿಂದ ಸುಮಾರು 15 ಕಿಲೋ ಮೀಟರ್ ನಡೆದು ಸುರಂಗ ಮಾರ್ಗಗಳ ಮೂಲಕ ತಲುಪಬಹುದು.ಇದು ಕರ್ನಾಟಕದಿಂದ ಬರುವವರಿಗೆ ಹೆಚ್ಚು ಅನುಕೂಲಕರವಾಗಿದೆ. ಅದೇಷ್ಟೋ ಪ್ರವಾಸಿಗರು ಗೋವಾ-ಕರ್ನಾಟಕ/ ಕರ್ನಾಟಕ- ಗೋವಾ ರೈಲು ದೂಧ್‌ಸಾಗರ್‌ ಬಳಿ ನಿಧಾನವಾಗಿ ಚಲಿಸುವಾಗ ರೈಲಿನಿಂದ ಇಳಿಯುತ್ತಾರೆ. ಹೀಗೆ ಮಾಡದಂತೆ ರೈಲ್ವೆ ಇಲಾಖೆ ಎಚ್ಚರಿಕೆ ನೀಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+