IndiGo: ಮಹಿಳಾ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ ಇಂಡಿಗೋ
ನವದೆಹಲಿ, ಮೇ. 29: ವಿಮಾನದಲ್ಲಿ ಪ್ರಯಾಣ ಮಾಡುವಾಗ ಮಹಿಳೆಯರು ಕೆಲವೊಮ್ಮೆ ಇರಿಸು ಮುರುಸು ಅನುಭವಿಸಬಹುದು. ಪಕ್ಕದಲ್ಲಿ ಕುಳಿತ ಪುರುಷ ಪ್ರಯಾಣಿಕರಿಂದ ಅಥವಾ ಬೇರೆ ಯಾವುದೇ ಕಾರಣ ಇರಬಹುದು. ಹೀಗಾಗಿ ಒಂಟಿಯಾಗಿ ಪ್ರಯಾಣಿಸುವ ಮಹಿಳೆಯರಿಗಾಗಿ ಇಂಡಿಯೋ ವಿಮಾನಯಾನ ಸಿಹಿ ಸುದ್ದಿ ನೀಡಿದೆ.
ಇಂಡಿಗೋದಲ್ಲಿನ ಮಹಿಳಾ ಪ್ರಯಾಣಿಕರು ವೆಬ್ ಚೆಕ್ ಇನ್ ಸಮಯದಲ್ಲಿ ಬೇರೆ ಮಹಿಳೆಯರು ಯಾವ ಎಲ್ಲಾ ಸೀಟುಗಳನ್ನು ಮುಂಗಡವಾಗಿ ಕಾಯ್ದಿರಿಸಿದ್ದಾರೆ ಎಂಬುದನ್ನು ನೋಡಬಹುದು. ಬಳಿಕ ಅವರ ಪಕ್ಕದಲ್ಲಿಯೇ ಸೀಟುಗಳು ಬೇಕು ಎನ್ನುವುದಾದರೇ ಅವರ ಆಯ್ಕೆ ಪ್ರಕಾರವೇ ಸೀಟುಗಳನ್ನು ರಿಸರ್ವ್ ಮಾಡಬಹುದು.

ನಿಮ್ಮ ಆಯ್ಕೆಯ ಸೀಟು ನಿಮಗೆ!
ಭಾರತೀಯ ಕಡಿಮೆ ವೆಚ್ಚದ ವಿಮಾನಯಾನ ಸಂಸ್ಥೆ ಮತ್ತು ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ ಏರ್‌ಲೈನ್ಸ್, ಮಹಿಳಾ ಪ್ರಯಾಣಿಕರಿಗೆ ಅಗತ್ಯವಿದ್ದಲ್ಲಿ ಇತರ ಮಹಿಳಾ ಪ್ರಯಾಣಿಕರಿಗೆ ಮುಂದಿನ ಸೀಟುಗಳನ್ನು ಆಯ್ಕೆ ಮಾಡುವ ಆಯ್ಕೆ ನೀಡಿದೆ. ಏರ್‌ಲೈನ್ ಈ ವಿಷಯದ ಬಗ್ಗೆ ಹೇಳಿಕೆಯನ್ನು ಬಿಡುಗಡೆ ಮಾಡಿದೆ.
ಇದು ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಇಂಡಿಯೋ ಈ ಆಯ್ಕೆಯನ್ನು ಮಹಿಳಾ ಪ್ರಯಾಣಿಕರಿಗೆ ನೀಡಿದೆ. ಅಶಿಸ್ತಿನ ಪ್ರಯಾಣಿಕರು ಮಹಿಳೆಯರಿಗೆ ತೊಂದರೆ ಉಂಟುಮಾಡಬಹುದು ಮತ್ತು ಅವರಿಗೆ ಪ್ರಯಾಣದಲ್ಲಿ ಬೇಸರ ಉಂಟುಮಾಡಬಹುದು ಎಂದಿದೆ.

ಏರ್‌ಲೈನ್ಸ್ ತನ್ನ ಹೇಳಿಕೆಯಲ್ಲಿ, "ನಮ್ಮ ಮಹಿಳಾ ಪ್ರಯಾಣಿಕರಿಗೆ ಪ್ರಯಾಣದ ಅನುಭವವನ್ನು ಹೆಚ್ಚು ಆರಾಮದಾಯಕವಾಗಿಸಲು. ಮಹಿಳಾ ಪ್ರಯಾಣಿಕ ಅನುಕೂಲಕ್ಕಾಗಿ ಇದನ್ನು ಜಾರಿಗೆ ತರಲಿದೆ. ಮಹಿಳಾ ಪ್ರಯಾಣಿಕರು ಒಂಟಿಯಾಗಿ ಮತ್ತು ಕುಟುಂಬದ ಜೊತೆಯಲ್ಲಿಯೂ ಬುಕಿಂಗ್ ಮಾಡಬಹುದು. ಇದು ಪ್ರಸ್ತುತ ನಮ್ಮ 'ಗರ್ಲ್ ಪವರ್' ರೂಲ್ಸ್ ಜೊತೆಗೆ ಹೊಂದಾಣಿಕೆಯಾಗಲಿದೆ" ಎಂದಿದ್ದಾರೆ.
2023 ರಲ್ಲಿ ಏರ್ ಇಂಡಿಯಾ ವಿಮಾನದಲ್ಲಿ ಪುರುಷ ಪ್ರಯಾಣಿಕರೊಬ್ಬರು ವಯಸ್ಸಾದ ಮಹಿಳಾ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಘಟನೆ ಹೆಚ್ಚು ಚರ್ಚಿತವಾಗಿತ್ತು. ಇದಾದ ನಂತರ ಇಂತಹದ್ದೆ ಹಲವು ಘಟನೆಗಳು ಬಹಿರಂಗವಾಗಿದ್ದವು. ಸದ್ಯ ಇಂಡಿಗೋ ಏರ್‌ಲೈನ್ಸ್‌ನ ಈ ನಡೆಗೆ ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರವಾಗಿದೆ.












Click it and Unblock the Notifications