Diwali Special Trains: ಕರ್ನಾಟಕದ ಈ ನಗರಗಳ ನಡುವೆ ವಿಶೇಷ ರೈಲು ಸಂಚಾರ: ಯಾವ ಯಾವ ನಗರ ತಿಳಿಯಿರಿ

ದೀಪಾವಳಿ ಹಬ್ಬಕ್ಕೆ ಬಂಪರ್ ಸಿಕ್ಕಿದೆ, ದೂರದ ಊರುಗಳಿಗೆ ಹೋಗುವವರಿಗೆ ಸಮಸ್ಯೆಯೇ ಆಗದಂತೆ ರೈಲ್ವೆ ಇಲಾಖೆ ವಿಶೇಷ ರೈಲುಗಳ ಸೇವೆಯ ಒದಗಿಸಿದೆ. ಸುಮಾರು 42 ವಿಶೇಷ ರೈಲುಗಳ ಓಡಾಟಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಬೆಂಗಳೂರಿಂದ ಹಬ್ಬಕ್ಕೆ ದೂರದ ಊರಿಗೆ ಹೋಗುವವರಿಗೆ ಸಮಸ್ಯೆ ಆಗದಂತೆ ರೈಲುಗಳ ವ್ಯವಸ್ಥೆ ಇರಲಿದೆ. ಅದರ ಸಂಪೂರ್ಣವಾದ ಪಟ್ಟಿ ಇಲ್ಲಿದೆ.

ಕರ್ನಾಟಕದ ಬೇರೆ ಬೇರೆ ನಗರದಲ್ಲಿ ಕೆಲಸದ ಕಾರಣಕ್ಕೆ ಹೋಗಿ ನೆಲೆಸಿರುವ ಕೋಟ್ಯಂತರ ಕನ್ನಡಿಗರು, ಹಬ್ಬದ ದಿನ ತಮ್ಮ ತಮ್ಮ ಊರಿಗೆ ತೆರಳುತ್ತಾರೆ. ಆದರೆ ಹೀಗೆ ಹೋಗುವಾಗ ಬಸ್ ವ್ಯವಸ್ಥೆ ಸರಿಯಾಗುತ್ತಿಲ್ಲ. ಇನ್ನು ಬಸ್‌ಗಳ ದರ ಗಗನಕ್ಕೆ ಏರಿ ಸಿಕ್ಕಾಪಟ್ಟೆ ಹಣವನ್ನ ವಸೂಲಿ ಮಾಡುತ್ತಾರೆ ಎಂಬ ಆರೋಪ ಕೂಡ ಇದೆ. ಹೀಗಾಗಿ, ಅನಿವಾರ್ಯ ಸ್ಥಿತಿಯಲ್ಲಿ ಪ್ರಯಾಣಿಕರು ದುಬಾರಿ ಬೆಲೆ ತೆತ್ತು ಊರಿಗೆ ಹೋಗಬೇಕಾಗಿತ್ತು. ಆದರೆ ಇವರ ಸಂಕಷ್ಟದ ಸ್ಥಿತಿ ಅರಿತಿರುವ ರೈಲ್ವೆ ಇಲಾಖೆ, ಕನ್ನಡಿಗರ ಊರುಗಳಿಗೆ ವಿಶೇಷ ರೈಲು ವ್ಯವಸ್ಥೆ ಮಾಡಿ ಆದೇಶ ಹೊರಡಿಸಿದೆ. ಹಾಗಾದ್ರೆ ಕರ್ನಾಟಕದ ಯಾವ ಯಾವ ನಗರಕ್ಕೆ ರೈಲು ವ್ಯವಸ್ಥೆಯ ಕಲ್ಪಿಸಲಾಗಿದೆ? ಬನ್ನಿ ತಿಳಿಯೋಣ.

Diwali Special Trains: South Western Railway Unveils Diwali Special Trains Service In Karnataka

ಊರಿಗೆ ಹೋಗುವವರಿಗೆ ಬಸ್ ಶಾಕ್!

ಬಹುತೇಕರಿಗೆ ವರ್ಕ್ ಫ್ರಂ ಹೋಂ ಈಗ ಮುಗಿದ ಅಧ್ಯಾಯ. ಬಹುತೇಕ ಕಂಪನಿ ಆಡಳಿತಗಳು ತಮ್ಮ ನೌಕರರಿಗೆ ಕಚೇರಿಗೆ ಬರಲು ಆದೇಶವನ್ನು ನೀಡಿವೆ. ಹೀಗೆ ಬೆಂಗಳೂರಲ್ಲಿ ಮತ್ತೆ ಬಾಡಿಗೆ ದರ & ಸಂಚಾರ ದಟ್ಟಣೆ ಹೆಚ್ಚಾಗಿದೆ. ಇದೆ ಹೊತ್ತಲ್ಲಿ ಬಸ್ ರೇಟ್‌ಗೆ ಕೂಡ ಕಡಿವಾಣ ಬೀಳ್ತಿಲ್ಲ. ವರ್ಕ್ ಫ್ರಂ ಹೋಂ ಇಲ್ಲದ ಕಾರಣ ರಜೆಯಲ್ಲೇ ಊರಿಗೆ ಹೋಗುವವರಿಗೆ ಶಾಕ್ ಎದುರಾಗಿದ್ದು, ಬಸ್ ದರದಲ್ಲಿ ಭಾರಿ ಏರಿಕೆ ಮಾಡಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.

ಇದು ಬಸ್‌ ಪರಿಸ್ಥಿತಿಯಾದರೆ, ಇನ್ನು ರೈಲಿನಲ್ಲಿ ಹೋಗೋಣ ಅಂದರೆ ಮುಂಗಡವಾಗಿ ಬುಕ್ ಮಾಡಲು ಆಗಲ್ಲ ಅಂತಹ ಸ್ಥಿತಿ ಇದೆ. ಟಿಕೆಟ್ ಪಡೆದು ನೇರವಾಗಿ ಹೋಗೋಣ ಅಂದ್ರೆ ಅಲ್ಲೂ ಜನಜಂಗುಳಿ. ಹೀಗಾಗಿ ಲಾಂಗ್ ವೀಕೆಂಡ್ ಬಂದಾಗ ಅರ್ಥಾತ್ ಸಾಲು ಸಾಲು ರಜೆಗಳು ಸಿಕ್ಕಾಗ ಸರ್ಕಾರಿ ಬಸ್‌ಗಳ ಸಂಖ್ಯೆ ಹೆಚ್ಚಿಸಬೇಕು ಎಂಬ ಒತ್ತಾಯ ಪ್ರಯಾಣಿಕರದ್ದಾಗಿತ್ತು. ಇಷ್ಟಾದರೂ ಬಸ್ ಬೆಲೆ ಏರಿಕೆ ಶಾಕ್ ಜನರನ್ನು ಕಾಡುವುದು ನಿಂತಿರಲಿಲ್ಲ. ಆದರೆ ಈಗ ದೀಪಾವಳಿಗೆ ದಿಢೀರ್ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ.

Diwali Special Trains: South Western Railway Unveils Diwali Special Trains Service In Karnataka

ವಿಶೇಷ ರೈಲುಗಳ ಪಟ್ಟಿ ಇಲ್ಲಿದೆ

ಬೆಂಗಳೂರಿಂದ ಬೇರೆ ಬೇರೆ ರಾಜ್ಯಕ್ಕೆ ಅತಿಹೆಚ್ಚು ರೈಲು ಸೇವೆ ಲಭ್ಯವಿದ್ದರೂ ಕರ್ನಾಟಕದ ಒಳಗೆ ರೈಲುಗಳ ಓಡಾಡ ಹೆಚ್ಚಾಗಿಲ್ಲ. ಹೀಗಾಗಿ ಹೆಚ್ಚು ರೈಲುಗಳ ಸೌಲಭ್ಯ ಅಗತ್ಯ ಎಂಬ ಕೂಗು ಕೇಳಿಬರುತ್ತಿತ್ತು. ಇದೀಗ ಹಬ್ಬದ ಸಮಯದಲ್ಲಿ ಕನ್ನಡಿಗರ ಆಗ್ರಹಕ್ಕೆ ಬೆಲೆ ನೀಡಿದ ರೈಲ್ವೆ ಅಧಿಕಾರಿಗಳು, ಹಲವಾರು ವಿಶೇಷ ರೈಲುಗಳ ವ್ಯವಸ್ಥೆ ಮಾಡಿದ್ದಾರೆ. ಕರ್ನಾಟಕದ ರಾಜಧಾನಿ ಸೇರಿದಂತೆ ಹಲವು ನಗರಕ್ಕೆ ವಿಶೇಷ ರೈಲು ಸೇವೆ ಲಭ್ಯವಿದೆ.

ವಿಶೇಷ ರೈಲು ಓಡಾಟದ ಬಗ್ಗೆ ಮಾಹಿತಿ ನೀಡಿರುವ 'ಸೌತ್ ವೆಸ್ಟರ್ನ್ ರೈಲ್ವೇ' ವಲಯ, 'ದೀಪಾವಳಿ ಮತ್ತು ಛತ್ ಹಬ್ಬಗಳ ಪ್ರಯುಕ್ತ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು ವಿಶೇಷ ರೈಲುಗಳನ್ನು ಓಡಿಸಲು ಭಾರತೀಯ ರೈಲ್ವೇ ಸೂಚನೆ ನೀಡಿದೆ. ಹೆಚ್ಚಿನ ಮಾಹಿತಿಗೆ, ಪ್ರಯಾಣಿಕರು ಅಧಿಕೃತ ವೆಬ್‌ಸೈಟ್ https://enquiry.indianrail.gov.in ಗೆ ಭೇಟಿ ನೀಡಲು ಅಥವಾ 139 ಅನ್ನ ಡಯಲ್ ಮಾಡಿ' ಎಂದು ತಿಳಿಸಲಾಗಿದೆ. ಹೀಗೆ, ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ, ಮಂಗಳೂರು ಮೈಸೂರು ಸೇರಿದಂತೆ ವಿವಿಧ ಪ್ರದೇಶಗಳಿಗೆ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ.

Diwali Special Trains: South Western Railway Unveils Diwali Special Trains Service In Karnataka

ಒಟ್ನಲ್ಲಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಉಂಟಾಗುವ ಪ್ರಯಾಣಿಕರ ದಟ್ಟಣೆ ತಪ್ಪಿಸೋಕೆ, ರೈಲ್ವೆ ಇಲಾಖೆ ಹಲವು ಮಾರ್ಗದಲ್ಲಿ ವಿಶೇಷ ರೈಲು ಓಡಿಸುತ್ತಿದೆ. ಬೆಂಗಳೂರು-ಮಂಗಳೂರು ಮಾರ್ಗ ಸೇರಿದಂತೆ, ಬೆಂಗಳೂರು-ಹುಬ್ಬಳ್ಳಿ, ಬೆಂಗಳೂರು-ಬೆಳಗಾವಿ ಹೀಗೆ ಕರ್ನಾಟಕದಲ್ಲಿ ಹಲವು ಜಿಲ್ಲೆಗೆ & ಪ್ರಮುಖ ನಗರಗಳಿಗು ಸಂಪರ್ಕ ಕಲ್ಪಿಸುವಂತೆ ವ್ಯವಸ್ಥೆ ಮಾಡಲಾಗಿದೆ. ಮೇಲೆ ಫೋಟೋದಲ್ಲಿ ನೀಡಿದಂತೆ, ಮತ್ತಷ್ಟು ಊರುಗಳ ವಿಶೇಷ ರೈಲು ಸೇವೆಗೆ ಮುಂದೆ ಓದಿ.

ಇನ್ನು ರಸ್ತೆ ಪ್ರಯಾಣಕ್ಕೆ ಹೋಲಿಕೆ ಮಾಡಿದರೆ ರೈಲು ಪ್ರಯಾಣವೇ ಬೆಸ್ಟ್. ಇಲ್ಲಿ ದರವೂ ಕಮ್ಮಿ ಹಾಗೂ ಪ್ರಯಾಣವೂ ಸುರಕ್ಷಿತ ಎಂಬ ಮಾತು ಇದೆ. ಇದರ ಜೊತೆಗೆ ರೈಲುಗಳಲ್ಲಿ ಓಡಾಡಲು ಉತ್ತಮವಾದ ವ್ಯವಸ್ಥೆ ಕೂಡ ಇರಲಿದೆ. ಆದರೆ ಟಿಕೆಟ್ ಸಿಗುತ್ತಿಲ್ಲ ಎಂಬುದೇ ಜನರ ಚಿಂತೆಯಾಗಿತ್ತು. ಇದೀಗ ವಿಶೇಷ ರೈಲುಗಳ ವ್ಯವಸ್ಥೆ ಕಲ್ಪಿಸುವ ಮೂಲಕ, ರಾಜ್ಯ ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಖುಷಿ ಸುದ್ದಿ ನೀಡಿದೆ. ಈ ಮೂಲಕ ಕನ್ನಡಿಗರಿಗೂ ರೈಲು ಸೇವೆಯ ವಿಚಾರದಲ್ಲಿ ಸಿಹಿಸುದ್ದಿ ಸಿಕ್ಕಿದೆ. ಹೆಚ್ಚಿನ ಮಾಹಿತಿಗಾಗಿ, ಪ್ರಯಾಣಿಕರು ಅಧಿಕೃತ ವೆಬ್‌ಸೈಟ್ https://enquiry.indianrail.gov.in ಗೆ ವಿಸಿಟ್ ನೀಡಲು ತಿಳಿಸಲಾಗಿದೆ. ಅಥವಾ 139 ಅನ್ನ ಡಯಲ್ ಮಾಡಿ ಸಂಪರ್ಕಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+