Diwali Special Trains: ಯಶವಂತಪುರ-ಬೀದರ್ ನಡುವೆ ದೀಪಾವಳಿ ಹಬ್ಬಕ್ಕೆ ವಿಶೇಷ ರೈಲು ಸಂಚಾರ!

ದೀಪಾವಳಿ ಹಬ್ಬ ಬಂದೇ ಬಿಟ್ಟಿದೆ, ಇನ್ನೇನು ಊರುಗಳಿಗೆ ಹೋಗುವವರು ಬಸ್ ಅಥವಾ ಟ್ರೈನ್ ಹಿಡಿಯಲು ಹರಸಾಹಸ ಮಾಡಬೇಕಿದೆ. ಅದರಲ್ಲೂ ಬಸ್ ದರ ಈಗಾಗಲೇ ಆಕಾಶ ತಲುಪಿದೆ. ಇನ್ನು ರೈಲುಗಳ ಕೊರತೆ ಬೇರೆ ಕಾಡುತ್ತಿದೆ ಅಂತಾ ಜನರು ಗೊಣಗುವ ವೇಳೆ, 'ಸೌತ್ ವೆಸ್ಟರ್ನ್ ರೈಲ್ವೇ' ಜನರ ಕಷ್ಟ ಅರ್ಥ ಮಾಡಿಕೊಂಡು ಕನ್ನಡಿಗರಿಗೆ ವಿಶೇಷವಾದ ಸೇವೆಯನ್ನ ಒದಗಿಸಲು ಮುಂದಾಗಿದೆ.

ಬೆಂಗಳೂರಿಂದ ಇತರ ರಾಜ್ಯಗಳಿಗೆ, ಅತಿಹೆಚ್ಚು ರೈಲು ಸೇವೆ ಲಭ್ಯವಿದ್ದರೂ ಕರ್ನಾಟಕದ ಒಳಗೆ ರೈಲುಗಳ ಓಡಾಟ ಕಮ್ಮಿ. ಹೀಗಾಗಿ ರೈಲುಗಳ ಸೌಲಭ್ಯ ಅಗತ್ಯ ಎಂಬ ಕೂಗು ಕೇಳಿಬರುತ್ತಿತ್ತು. ಇದೀಗ ಕನ್ನಡಿಗರ ಆಗ್ರಹಕ್ಕೆ ಬೆಲೆ ನೀಡಿರುವ ರೈಲ್ವೆ ಇಲಾಖೆ, ಹಲವು ವಿಶೇಷ ರೈಲು ವ್ಯವಸ್ಥೆ ಮಾಡಿದೆ. ಕರ್ನಾಟಕ ರಾಜಧಾನಿ ಸೇರಿ ಹಲವು ನಗರಕ್ಕೆ ವಿಶೇಷ ರೈಲು ಸೇವೆ ಲಭ್ಯವಿದೆ. ಈ ಪೈಕಿ ಇದೀಗ ರಾಜಧಾನಿ ಬೆಂಗಳೂರು ಮತ್ತು ಬೀದರ್ ಮಧ್ಯೆ ದೀಪಾವಳಿ ಹಬ್ಬಕ್ಕೆ ವಿಶೇಷ ರೈಲು ವ್ಯವಸ್ಥೆ ಮಾಡಿದ್ದಾರೆ. ಹಾಗಾದರೆ ವಿಶೇಷ ರೈಲಿನ ವೇಳಾಪಟ್ಟಿ ಬಗ್ಗೆ, ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.

Diwali Special Trains: Diwali Special Train List For Karnataka Passengers

ಯಶವಂತಪುರ-ಬೀದರ್ ಮಧ್ಯೆ ಸ್ಪೆಷಲ್ ಟ್ರೈನ್

ದೀಪಾವಳಿ ಹಬ್ಬದ ಹಿನ್ನೆಲೆ ನವೆಂಬರ್ 13 ಮತ್ತು 14 ರಂದು ಬೆಂಗಳೂರು & ಬೀದರ್‌ನ ಮಧ್ಯೆ ವಿಶೇಷ ರೈಲು ಸಂಚಾರ ನಡೆಸಲಿದೆ. ಮೊದಲು ಈ ವಿಶೇಷ ರೈಲು ಸಂಖ್ಯೆ 06507 ಬೆಂಗಳೂರಿನ ಯಶವಂತಪುರದಿಂದ ಹೊರಡಲಿದೆ. 13/11/2023 ರಂದು, ಯಶವಂತಪುರ ರೈಲು ನಿಲ್ದಾಣದಿಂದ ರಾತ್ರಿ 11 ಗಂಟೆ 15 ಕ್ಕೆ ಹೊರಡಲಿದೆ. ನಂತರ ಅದೇ ದಿನ ರಾತ್ರಿ 11:33 ಕ್ಕೆ ಯಲಹಂಕ ತಲುಪಲಿದ್ದು, 12:27 ಕ್ಕೆ ಗೌರಿಬಿದನೂರು ರೀಚ್ ಆಗುತ್ತೆ. ಹಾಗೇ 12:47 ಕ್ಕೆ ಹಿಂದೂಪುರ, ಬೆಳಗಿನ ಜಾವ 02:20 ಕ್ಕೆ ಧರ್ಮಾವರಂ ಹಾಗೂ 03:02 ಕ್ಕೆ ಅನಂತಪುರ ತಲುಪಲಿದೆ.

ಅಲ್ಲಿಂದ ಮುಂದಕ್ಕೆ ಬೆಳಗಿನ ಜಾವ 04:20 ಕ್ಕೆ ಗುಂತಕಲ್, 05:40 ಕ್ಕೆ ಮಂತ್ರಾಲಯದ ರಸ್ತೆ, 06:05 ಕ್ಕೆ ರಾಯಚೂರು, 06:55 ಕ್ಕೆ ಯಾದಗಿರಿ, 08:38 ಕ್ಕೆ ಶಹಬಾದ್ ತಲುಪಿ, ನಂತರ ಅಲ್ಲಿಂದ 09:10 ಕ್ಕೆ ಕಲಬುರಗಿ ಮುಟ್ಟಲಿದೆ. 10:10 ಕ್ಕೆ ಕಮಲಾಪುರ ತಲುಪುತ್ತೆ ಈ ರೈಲು. 10:49 ಕ್ಕೆ ಹುಮ್ನಾಬಾದ್‌ಗೆ ತಲುಪಿ, ನಂತರ ನೇರವಾಗಿ ಬೀದರ್ ರೈಲು ನಿಲ್ದಾಣಕ್ಕೆ ಮಧ್ಯಾಹ್ನ 12:15 ಕ್ಕೆ ತಲುಪಲಿದೆ. 13/11/2023 ರಂದು ಯಶವಂತಪುರದ ರೈಲು ನಿಲ್ದಾಣದಿಂದ ರಾತ್ರಿ 11 ಗಂಟೆ 15 ಕ್ಕೆ ಹೊರಟು, 14/11/2023 ರ ಮಧ್ಯಾಹ್ನ 12:15 ಕ್ಕೆ ಬೀದರ್ ತಲುಪಲಿದೆ ಈ ವಿಶೇಷ ರೈಲು.

ಬೀದರ್‌ನಿಂದ ಬೆಂಗಳೂರಿಗೂ ವಿಶೇಷ ರೈಲು

ಮತ್ತೊಂದು ಕಡೆ ಬೀದರ್ ರೈಲು ನಿಲ್ದಾಣದಿಂದ ಕೂಡ ರಾಜಧಾನಿ ಬೆಂಗಳೂರಿನ ಕಡೆಗೆ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ. 14/11/2023 ರ ಮಧ್ಯಾಹ್ನ 02:30 ಕ್ಕೆ ಬೀದರ್ ರೈಲು ನಿಲ್ದಾಣದಿಂದ ಹೊರಡಲಿರುವ ವಿಶೇಷ ರೈಲು, ಮರುದಿನ ಬೆಳಗಿನ ಜಾವ ಅಂದ್ರೆ 15/11/2023 ರ ಬೆಳಗ್ಗೆ 04:00 ಕ್ಕೆ ಯಶವಂತಪುರ ನಿಲ್ದಾಣ ತಲುಪಲಿದೆ. ಈ ಮೂಲಕ ಕರ್ನಾಟಕದ ಸಹಸ್ರಾರು ಪ್ರಯಾಣಿಕರಿಗೆ ಇದರಿಂದ ಲಾಭ ಸಿಗಲಿದೆ ಎನ್ನಲಾಗಿದೆ. ಬಸ್‌ಗಳ ಓಡಾಟ ಕೂಡ ದುಬಾರಿಯಾಗುವ ದೀಪಾವಳಿ ಹಬ್ಬದ ಸಮಯಕ್ಕೆ, ವಿಶೇಷ ರೈಲು ಸೇವೆ ಪ್ರಯಾಣಿಕರಿಗೆ ಸಿಹಿಸುದ್ದಿ ಕೊಟ್ಟಿದೆ.

Diwali Special Trains: Diwali Special Train List For Karnataka Passengers

ಒಟ್ನಲ್ಲಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಉಂಟಾಗುವ ಪ್ರಯಾಣಿಕರ ದಟ್ಟಣೆ ತಪ್ಪಿಸೋಕೆ, ರೈಲ್ವೆ ಇಲಾಖೆ ಹಲವು ಮಾರ್ಗದಲ್ಲಿ ವಿಶೇಷ ರೈಲು ಓಡಿಸ್ತಿದೆ. ಬೆಂಗಳೂರು-ಬೀದರ್ ಮಾರ್ಗ ಸೇರಿದಂತೆ, ಕರ್ನಾಟಕದಲ್ಲಿ ಹಲವು ಜಿಲ್ಲೆಗೆ & ಪ್ರಮುಖ ನಗರಗಳಿಗು ಸಂಪರ್ಕ ಕಲ್ಪಿಸುವಂತೆ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಪ್ರಯಾಣಿಕರು ಈ ಸೌಲಭ್ಯದ ಲಾಭ ಪಡೆಯಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+