ದಬ್ಬಗುಳಿ: ಕಾವೇರಿ ನದಿ ತಟದಲ್ಲಿ ಕುಳಿತು ಮೀನು ಹಿಡಿಯುತ್ತಾ, ಪ್ರಕೃತಿ ಸೌಂದರ್ಯ ಸವಿಯಿರಿ!
ಬೆಂಗಳೂರು, ಮೇ. 17: ಕಡಿಮೆಯಾಗಿದ್ದ ಬಿಸಿಲ ಧಗೆ ಮತ್ತೆ ಹೆಚ್ಚಾಗಿದೆ. ವಾರಾಂತ್ಯದಲ್ಲಿ ಮನೆಯಲ್ಲಿ ಕುಳಿತು ಮಾಡುವುದೇನು ಎಂದು ಯೋಚನೆ ಮಾಡುತ್ತಿದ್ರೆ ಇಲ್ಲಿದೆ ಒಳ್ಳೆ ಉಪಾಯ. ಇಲ್ಲೇ ಬೆಂಗಳೂರಿನ ಸಮೀಪವಿರುವ ದಬ್ಬಗುಳಿಗೆ ಒಂದು ಭೇಟಿ ಕೊಟ್ಟು ಬನ್ನಿ. ಈ ಹೆಸರು ಹೆಚ್ಚು ಪರಿಚಿತ ಅಲ್ಲದಿರಬಹುದು ಅದರೆ, ಇದು ಪ್ರವಾಸಿಗರ ಸ್ವರ್ಗ ಎಂದೇ ಹೇಳಬಹುದು.
ಕಾವೇರಿ ನದಿಯ ತಟದಲ್ಲಿ ಕುಳಿತು ಪ್ರಕೃತಿ ಸೌಂದರ್ಯವನ್ನು ಸವಿಯುತ್ತಾ, ಮೀನು ಹಿಡಿಯುತ್ತಾ, ವನ್ಯ ಜೀವಿಗಳನ್ನು ನೋಡುತ್ತಾ ಕುಟುಂಬ, ಸ್ನೇಹಿತರ ಜೊತೆಗೆ ದಿನವನ್ನು ಕಳೆಯಬಹುದು. ಪ್ರಶಾಂತವಾಗಿ ಹರಿಯುತ್ತಿರವ ಕಾವೇರಿ ನದಿಯಯಲ್ಲಿ ಮಿಂದು ತಣ್ಣೀರಿನಲ್ಲಿ ಬಿಸಿಲ ಬೇಗೆಯನ್ನು ಕಳೆಯಬಹುದು. ಕುಟುಂಬ ಸಮೇತರಾಗಿ, ಸ್ನೇಹಿತರ ಗುಂಪಿನ ಜೊತೆಗೆ ಸಮಯ ಕಳೆಯಲು ಉತ್ತಮ ಸ್ಥಳವಿದು.

ಬೆಂಗಳೂರಿನಿಂದ ಸುಮಾರು 110 ಕಿ.ಮೀ ದೂರದಲ್ಲಿ ದಬ್ಬಗುಳಿ ಎಂಬ ಸುಂದರವಾದ ಪ್ರವಾಸಿ ಸ್ಥಳವಿದೆ. ದಬ್ಬಗುಳಿಯಲ್ಲಿರುವ ಸ್ಪಟಿಕ ಸ್ಪಷ್ಟವಾದ ನೀರಿನಲ್ಲಿ ಸ್ನಾನ ಮಾಡಲು, ಬೈಕ್ ಸವಾರಿ ಆನಂದಿಸಲು ಪರ್ಫೇಕ್ಟ್ ಸ್ಥಳ. ಹತ್ತಿರದಿಂದ ವನ್ಯ ಜೀವಿಗಳನ್ನು ನೋಡಬಹುದು. ಅರಣ್ಯ ಇಲಾಖೆಯು ವನ್ಯಜೀವಿ ಅಭಯಾರಣ್ಯದೊಳಗೆ ಕೆಲವು ವಾಹನಗಳನ್ನು ಪ್ರವೇಶಿಸಲು ಅನುಮತಿಸುವುದಿಲ್ಲ. ಆದರೆ ಇಲ್ಲಿ ಸುತ್ತಲಿನ ಹಳ್ಳಿಗಳ ಜನರು ಗೌರವಿಸುವ ಹೊಳ್ಳಕರೆ ದಬ್ಬಗುಳ್ಳೇಶ್ವರ ದೇವಾಲಯವಿರುವ ಕಾರಣ ದೇವಾಲಯವಿರುವವರೆಗೆ ಭೇಟಿ ನೀಡಲು ಅವಕಾಶವಿದೆ.
ಈ ಸ್ಥಳ ಕನಕಪುರಕ್ಕೆ ಹತ್ತಿರವಿದ್ದು, ಬೆಂಗಳೂರಿನಿಂದ ಮೂರು ಗಂಟೆಯ ಪ್ರಯಾಣ ಮಾಡಬಹುದು. ವೀಕೆಂಡ್‌ಗಳಲ್ಲಿ ಹೆಚ್ಚು ಜನರು ಸಂಗಮ, ಚುಂಚಿ ಫಾಲ್ಸ್ ಕಡೆಗೆ ತೆರಳುವ ಕಾರಣ ಟ್ರಾಫಿಕ್ ಹೆಚ್ಚಾಗಿ ಸಮಯ ಏರಿತವಾಗಬಹುದು. ಈ ಕಾವೇರಿ ಜಲನಯನಾ ಪ್ರದೇಶವು ವಾಸ್ತವವಾಗಿ ತಮಿಳುನಾಡಿನಲ್ಲಿದೆ. 95% ರಷ್ಟು ಮಾರ್ಗವು ಕರ್ನಾಟಕದಲ್ಲಿದ್ದರೆ, ಕೊನೆಯ ಕೆಲವು ಕಿಲೋಮೀಟರ್‌ಗಳಲ್ಲಿ ತಮಿಳುನಾಡು ರಾಜ್ಯದಲ್ಲಿದೆ. ಈ ಸ್ಥಳದ ಮೇಲ್ಭಾಗದಲ್ಲಿ ಮೇಕೆದಾಟು ಮತ್ತು ಕೆಳಗಿನ ಭಾಗದಲ್ಲಿ ಹೊಗೇನಕಲ್ ಜಲಪಾತವಿದೆ.
ಪ್ರಯಾಣಕ್ಕೆ ಸಲಹೆಗಳು
1. ಈ ಸುತ್ತಮುತ್ತ ಯಾವುದೇ ಪಂಕ್ಚರ್ ಅಂಗಡಿಗಳಿಲ್ಲದ ಕಾರಣ ಕಾರು, ಬೈಕ್‌ನಲ್ಲಿ ತೆರಳುವವರು, ಪಂಕ್ಚರ್ ಕಿಟ್ ಅನ್ನು ತೆಗೆದುಕೊಂಡಿ ಹೋಗಬಹುದು
2. ಹತ್ತಿರದಲ್ಲಿ ರೆಸ್ಟೋರೆಂಟ್‌ಗಳು ಇಲ್ಲದ ಕಾರಣ ಕನಕಪುರದಿಂದಲೇ ಊಟ, ತಿಂಡಿ ಮತ್ತು ನೀರು ತೆಗೆದುಕೊಂಡು ಹೋಗಿ

3. ಕಾವೇರಿ ನದಿಯಲ್ಲಿ ಇಳಿಯುವಾಗ ಎಚ್ಚರವಿರಲಿ
4. ಕಾಡಾನೆಗಳ ಬಗ್ಗೆ ಎಚ್ಚರವಿರಲಿ
5. ಸ್ಥಳದಲ್ಲಿ ನೆಟ್‌ವರ್ಕ್ ಸಂಪರ್ಕವಿಲ್ಲದ ಕಾರಣ ಆಫ್‌ಲೈನ್ ಮ್ಯಾಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಿ.












Click it and Unblock the Notifications