Chardham Yatra 2024: ಚಾರ್‌ಧಾಮ್ ಯಾತ್ರೆಗೆ ಮಳೆ ಅಡ್ಡಿ: ಬದರಿನಾಥ್-ಋಷಿಕೇಶ ಹೆದ್ದಾರಿ ಬಂದ್
ಚಾರ್‌ಧಾಮ್ ಯಾತ್ರೆ ಮೇ 10ರಿಂದ ಆರಂಭವಾಗಿದೆ. ಆದರೆ ಅದಾಗಲೇ ಉತ್ತರಖಂಡದಲ್ಲಿ ವರುಣನ ಅರ್ಭಟ ಹೆಚ್ಚಾಗಿದೆ. ಪ್ರಮುಖ ರಸ್ತೆಗಳು ತುಂಬಿ ಮಳೆ ನೀರು ರಬಸದಿಂದ ಹರಿಯುತ್ತಿದೆ. ಗುಡ್ಡಗಾಡು ಪ್ರದೇಶದಲ್ಲಿ ಭೂಕುಸಿತವಾಗುವ ಭೀತಿ ಕೂಡ ಹೆಚ್ಚಾಗಿದ್ದು ಸಿರೋಬಗಡ ಬಳಿ ಬದರಿನಾಥ್-ಋಷಿಕೇಶ ಹೆದ್ದಾರಿಯನ್ನು ಮುಚ್ಚಲಾಗಿದೆ.
ಬದರಿನಾಥ್ ಮತ್ತು ಕೇದಾರನಾಥ ಕಡೆಗೆ ಹೋಗುವ ಪ್ರಯಾಣಿಕರನ್ನು ಶ್ರೀಕೋಟ್-ಶ್ರೀನಗರ ಮತ್ತು ಕಲಿಯಾಸೋಡ್‌ನಲ್ಲಿ ನಿಲ್ಲಿಸಲಾಗಿದೆ. ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಶ್ರೀನಗರ ಕೊತ್ವಾಲ್ ಹೋಶಿಯಾರ್ ಸಿಂಗ್ ಪಂಖೋಲಿ ಹೇಳಿದ್ದಾರೆ. ಸಿರೋಬಗಡದಲ್ಲಿ ಧಾರಾಕಾರ ಮಳೆಗೆ ನಿರಂತರವಾಗಿ ಅವಶೇಷಗಳು ಬೀಳುತ್ತಿರುವುದರಿಂದ ರಸ್ತೆಯನ್ನು ಇನ್ನೂ ತೆರೆಯಲಾಗಿಲ್ಲ ಎಂದು ಅವರು ಹೇಳಿದರು. ಇದರಿಂದ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ.
#WATCH | Due to heavy rains, the Badrinath-Rishikesh highway has been closed near Sirobagadh, due to which passengers going to Badrinath and Kedarnath have been stopped at Srikot-Srinagar and Kaliyasod.
— ANI UP/Uttarakhand (@ANINewsUP) May 11, 2024
Srinagar Kotwal Hoshiyar Singh Pankholi said that care is being taken to… pic.twitter.com/tL9145RkHJ

ಉತ್ತರಾಖಂಡದಲ್ಲಿ ಚಾರ್ ಧಾಮ್ ಯಾತ್ರೆ 2024 ಆರಂಭ
ಈ ವರ್ಷ ಚಾರ್ ಧಾಮ್ ಯಾತ್ರೆಯು ಮೇ 10 ರಂದು ಪ್ರಾರಂಭವಾಗಿದೆ. ಗಂಗೋತ್ರಿ, ಯಮುನೋತ್ರಿ ಮತ್ತು ಕೇದಾರನಾಥ ಸೇರಿದಂತೆ ಮೂರು ನಾಲ್ಕು ದೇವಾಲಯಗಳನ್ನು ತೆರೆಯಲಾಗಿದೆ. ಮೇ 12 ರಂದು (ಭಾನುವಾರ) ಬದರಿನಾಥದ ಬಾಗಿಲು ತೆರೆಯಲಿದೆ.
ಚಾರ್ ಧಾಮ್ ಯಾತ್ರೆಯು ಹಿಂದೂ ಧರ್ಮದಲ್ಲಿ ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಈ ಯಾತ್ರೆ ಸಾಮಾನ್ಯವಾಗಿ ಏಪ್ರಿಲ್-ಮೇ ನಿಂದ ಅಕ್ಟೋಬರ್-ನವೆಂಬರ್ ವರೆಗೆ ನಡೆಯಲಿದೆ. ಈ ಯಾತ್ರೆಯು ಯಮುನೋತ್ರಿಯಿಂದ ಪ್ರಾರಂಭವಾಗುತ್ತದೆ. ನಂತರ ಗಂಗೋತ್ರಿ ಕಡೆಗೆ ಸಾಗಿ ಬಳಿಕ ಕೇದಾರನಾಥಕ್ಕೆ ಹೋಗಿ ಅಂತಿಮವಾಗಿ ಬದರಿನಾಥದಲ್ಲಿ ಕೊನೆಗೊಳ್ಳುತ್ತದೆ.

ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ನೇತೃತ್ವದಲ್ಲಿ ಚಾರ್ ಧಾಮ್ ಯಾತ್ರೆಯು ಕಳೆದ ಎರಡು ವರ್ಷಗಳಿಂದ ಕಾಲ್ನಡಿಗೆಯಲ್ಲಿ ಹೊಸ ದಾಖಲೆಗಳನ್ನು ನಿರ್ಮಿಸಿದೆ.
ಕೇದಾರನಾಥ ದೇವಾಲಯ
ಮೇ 10 ರಂದು ಸುಮಾರು 10,000 ಭಕ್ತರು ಕೇದಾರನಾಥನ ದ್ವಾರಗಳನ್ನು ತೆರೆಯುವುದನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಸುಮಾರು 20 ಕ್ವಿಂಟಾಲ್‌ಗೂ ಹೆಚ್ಚು ಬಗೆಯ ಹೂವುಗಳಿಂದ ದೇವಸ್ಥಾನವನ್ನು ಅಲಂಕರಿಸಲಾಗಿತ್ತು. ದೇಗುಲದ ಬಾಗಿಲು ತೆರೆಯುವ ವೇಳೆ ಹೆಲಿಕಾಪ್ಟರ್ ಮೂಲಕ ಯಾತ್ರಾರ್ಥಿಗಳ ಮೇಲೆ ಪುಷ್ಪವೃಷ್ಟಿ ಮಾಡಲಾಯಿತು.
ಉತ್ತರಕಾಶಿ ಜಿಲ್ಲೆಯಲ್ಲಿರುವ ಯಮುನೋತ್ರಿ ಧಾಮದ ಬಾಗಿಲು ಕೂಡ ಬೆಳಗ್ಗೆ 7 ಗಂಟೆಗೆ ಭಕ್ತರಿಗಾಗಿ ತೆರೆಯಲಾಯಿತು. ದೇವಾಲಯದ ಬಾಗಿಲು ತೆರೆಯುತ್ತಿದ್ದಂತೆಯೇ ದೇವಾಲಯದ ಆವರಣದಲ್ಲಿ ನೆರೆದಿದ್ದ ಸಾವಿರಾರು ಭಕ್ತರು 'ಜೈ ಮಾ ಯಮುನಾ' ಎಂದು ಘೋಷಣೆ ಕೂಗಿದರು.

ಚಾರ್‌ಧಾಮ್ ಯಾತ್ರೆ:
ಕೇದಾರನಾಥ ಉತ್ತರಾಖಂಡ ರಾಜ್ಯದ ಅತ್ಯಂತ ಪವಿತ್ರವಾದ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಹಿಂದೂಗಳ ತೀರ್ಥಯಾತ್ರಾ ಸ್ಥಳವಾಗಿರುವ ಕೇದಾರನಾಥ ಚೋಟಾ ಚಾರ್ ಧಾಮ್ ಯಾತ್ರೆಯ ಒಂದು ಭಾಗವಾಗಿದೆ. ಕೇದಾರನಾಥ ಎಂಬ ಹೆಸರಿನಿಂದ ಕರೆಯಲ್ಪಡುವ ಮಹಾಶಿವನು ಇಲ್ಲಿ ನೆಲೆಸಿದ್ದಾನೆ.ಈ ಚೋಟಾ ಚಾರ್ ಧಾಮ್ ಆಲಯಗಳನ್ನು ಕೇವಲ 6 ತಿಂಗಳು ಮಾತ್ರ ತೆರೆಯಲ್ಪಡುತ್ತದೆ. ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯಲ್ಲಿರುವ ಕೇದಾರನಾಥವು ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುವ ವಿಶೇಷ ಸ್ಥಳವಾಗಿದೆ.

ನಮ್ಮ ಭಾರತದಲ್ಲಿರುವ 12 ಶಿವನ ಜ್ಯೋತಿರ್ಲಿಂಗಗಳಲ್ಲಿ ಕೇದಾರನಾಥ ಪ್ರಮುಖವಾದುದು. ಈ ಕಾರಣದಿಂದಲೇ ಹಿಂದೂಗಳು ಜೀವನದಲ್ಲಿ ಒಮ್ಮೆಯಾದರೂ ಸಂದರ್ಶಿಸಬೇಕು ಎಂದು ಬಯಸುತ್ತಾರೆ. ಪುರಾಣಗಳ ಪ್ರಕಾರ, ಕೇದಾರನಾಥ ದೇವಾಲಯವನ್ನು 8 ನೇ ಶತಮಾನದಲ್ಲಿ ಆದಿ ಗುರು ಶಂಕರಾಚಾರ್ಯರು ನಿರ್ಮಿಸಿದರು ಎಂದು ಹೇಳಲಾಗುತ್ತದೆ.
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ












Click it and Unblock the Notifications