ಚನ್ನಪಟ್ಟಣ-ಕೆಎಸ್ಆರ್ ಬೆಂಗಳೂರು ರೈಲು ವೇಳಾಪಟ್ಟಿ ಬದಲು

ಬೆಂಗಳೂರು, ಅಕ್ಟೋಬರ್ 01; ನೈಋತ್ಯ ರೈಲ್ವೆ ಬೆಂಗಳೂರು-ಚನ್ನಪಟ್ಟಣ ನಡುವೆ ಸಂಚಾರ ನಡೆಸುವ ಪ್ರಯಾಣಿಕರಿಗೆ ಅನುಕೂಲ ಮಾಡಕೊಡಲು ರೈಲಿನ ವೇಳಾಪಟ್ಟಿಯನ್ನು ಬದಲಾವಣೆ ಮಾಡಿದೆ. ಅಕ್ಟೋಬರ್ 1ರ ಭಾನುವಾರದಿಂದಲೇ ಈ ನೂತನ ವೇಳಾಪಟ್ಟಿ ಜಾರಿಗೆ ಬರಲಿದೆ.

ರೈಲು ನಂಬರ್ 06582 ಚನ್ನಪಟ್ಟಣ-ಕೆಎಸ್ಆರ್‌ ಬೆಂಗಳೂರು ಎಕ್ಸ್‌ಪ್ರೆಸ್ ರೈಲು ವೇಳಾಪಟ್ಟಿಯನ್ನು ಬದಲಾವಣೆ ಮಾಡಲಾಗಿದೆ. ಆದ್ದರಿಂದ ರೈಲು ಎಲ್ಲಾ ನಿಲ್ದಾಣಗಳಿಗೆ ಆಗಮನ/ ನಿರ್ಗಮನದ ಸಮಯದಲ್ಲಿ ಬದಲಾವಣೆಯಾಗಲಿದೆ.

Channapatna KSR Bengaluru Express Train Schedule Changed

ಅಕ್ಟೋಬರ್ 1ರಿಂದಲೇ ಜಾರಿಗೆ ಬರುವಂತೆ ಚನ್ನಪಟ್ಟಣ-ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು ಎಕ್ಸ್‌ಪ್ರೆಸ್ ರೈಲು ವೇಳಾಪಟ್ಟಿ ಬದಲಾವಣೆ ಮಾಡಲಾಗಿದೆ. ರೈಲು ಚನ್ನಪಟ್ಟಣದಿಂದ 17:15ಕ್ಕೆ ಹೊರಟು ಬೆಂಗಳೂರು ನಗರವನ್ನು 18:30ಕ್ಕೆ ತಲುಪಲಿದೆ.

ಇಷ್ಟು ದಿನ ರೈಲು 16:50 ಗಂಟೆಗೆ ಚನ್ನಪಟ್ಟಣದಿಂದ ಹೊರಟು ಕೆಎಸ್ಆರ್‌ ಬೆಂಗಳೂರು ನಿಲ್ದಾಣಕ್ಕೆ 18:05ಕ್ಕೆ ತಲುಪುತ್ತಿತ್ತು. ಈ ರೈಲು ಮಾರ್ಗದಲ್ಲಿ ರಾಮನಗರ, ಕೆತೋಹಳ್ಳಿ ಹಾರ್ಟ್‌, ಬಿಡದಿ, ಹೆಜ್ಜಾಲ, ಕೆಂಗೇರಿ, ಜ್ಞಾನ ಭಾರತಿ ಹಾಲ್ಟ್, ನಾಯಂಡಹಳ್ಳಿ, ಕೃಷ್ಣದೇವರಾಯ ಹಾಲ್ಟ್‌ ನಿಲ್ದಾಣಗಳ ಮೂಲಕ ಕೆಎಸ್ಆರ್ ಬೆಂಗಳೂರು ನಿಲ್ದಾಣಕ್ಕೆ ಆಗಮಿಸಲಿದೆ.

ಹೊಸ ವೇಳಾಪಟ್ಟಿ; ಹೊಸ ವೇಳಾಪಟ್ಟಿಯ ಪ್ರಕಾರ ಚನ್ನಪಟ್ಟಣ-ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲು ರಾಮನಗರಕ್ಕೆ 17.00/ 17.01ರ ಬದಲು 17.25/17.26ಕ್ಕೆ ಆಗಮನ/ ನಿರ್ಗಮನವಾಗಲಿದೆ. ಬಿಡದಿ ನಿಲ್ದಾಣಕ್ಕೆ 17.14/ 17.15ರ ಬದಲು 17.41/ 17.42ಕ್ಕೆ ಆಗಮನ/ ನಿರ್ಗಮನವಾಗಲಿದೆ. ಕೆಂಗೇರಿ ನಿಲ್ದಾಣಕ್ಕೆ 17.32/ 17.33ರ ಬದಲು 18.0/ 18.01 ಆಗಮನ/ ನಿರ್ಗಮನವಾಗಲಿದೆ.

ಬದಲಾವಣೆಯಾದ ವೇಳಾಪಟ್ಟಿಯ ಪ್ರಕಾರ ಚನ್ನಪಟ್ಟಣದಿಂದ ರೈಲು 17.15ಕ್ಕೆ ಹೊರಡಲಿದೆ. ರಾಮನಗರ 17.25/17.26, ಕೆತೋಹಳ್ಳಿ 17.33/17.34, ಬಿಡದಿ 17.41/17.42, ಹೆಜ್ಜಾಲ 17.49/17.50, ಕೆಂಗೇರಿ 18.00/18.01, ಜ್ಞಾನ ಭಾರತಿ 18.04/08.05, ನಾಯಂಡಹಳ್ಳಿ 18.09/18.10, ಕೃಷ್ಣ ದೇವರಾಯ ಹಾಲ್ಟ್‌ 18.14/18.15, ಕೆಎಸ್ಆರ್ ಬೆಂಗಳೂರು 18.30.

ರೈಲುಗಳು ರದ್ದು, ಮಾರ್ಗ ಬದಲಾವಣೆ; ಗುಂಟೂರು ವಿಭಾಗದಲ್ಲಿ ರೈಲ್ವೆ ಸುರಕ್ಷತೆಗೆ ಸಂಬಂಧಿಸಿದ ನಿರ್ವಹಣಾ ಕಾಮಗಾರಿ ಸಲುವಾಗಿ ಹಲವು ರೈಲುಗಳನ್ನು ರದ್ದುಗೊಳಿಸಲು ದಕ್ಷಿಣ ಮಧ್ಯ ರೈಲ್ವೆ ವಲಯವು ಸೂಚಿಸಿದೆ. ಈ ಕುರಿತು ಪ್ರಕಟಣೆ ಮೂಲಕ ಮಾಹಿತಿ ನೀಡಲಾಗಿದೆ.

ರೈಲು ಸಂಖ್ಯೆ 17329 ಎಸ್.ಎಸ್.ಎಸ್ ಹುಬ್ಬಳ್ಳಿ-ವಿಜಯವಾಡ ಡೈಲಿ ಎಕ್ಸ್‌ಪ್ರೆಸ್ ರೈಲನ್ನು ಅಕ್ಟೋಬರ್ 2ರಿಂದ ಅಕ್ಟೋಬರ್ 8 ರವರೆಗೆ ಮತ್ತೆ ರದ್ದುಗೊಳಿಸಲಾಗುತ್ತಿದೆ. ರೈಲು ಸಂಖ್ಯೆ 17330 ವಿಜಯವಾಡ-ಎಸ್.ಎಸ್.ಎಸ್ ಹುಬ್ಬಳ್ಳಿ ಎಕ್ಸ್‌ಪ್ರೆಸ್ ರೈಲನ್ನು ಅಕ್ಟೋಬರ್ 3 ರಿಂದ ಅಕ್ಟೋಬರ್ 9 ರವರೆಗೆ ಮತ್ತೆ ರದ್ದುಗೊಳಿಸಲಾಗುತ್ತಿದೆ.

ವಿಜಯವಾಡ ವಿಭಾಗದಲ್ಲಿ ರೈಲ್ವೆ ಸುರಕ್ಷತೆಗೆ ಸಂಬಂಧಿಸಿದ ನಿರ್ವಹಣಾ ಕಾಮಗಾರಿ ಕೆಲವು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗುತ್ತಿದೆ.

ಅಕ್ಟೋಬರ್ 1, 3 ಮತ್ತು 8 ರಂದು ಹಟಿಯಾದಿಂದ ಹೊರಡುವ ರೈಲು ಸಂಖ್ಯೆ 12835 ಹಟಿಯಾ-ಸ‌ರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲು ನಿಡದವೊಲು, ಭೀಮಾವರಂ ಟೌನ್, ಗುಡಿವಾಡ ಮತ್ತು ವಿಜಯವಾಡ ನಿಲ್ದಾಣಗಳ ಬದಲಾದ ಮಾರ್ಗದ ಮೂಲಕ ಸಂಚರಿಸಲಿದೆ.

ಅಕ್ಟೋಬರ್ 6 ರಂದು ಟಾಟಾನಗರದಿಂದ ಹೊರಡುವ ರೈಲು ಸಂಖ್ಯೆ 12889 ಟಾಟಾನಗರ-ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಸಾಪ್ತಾಹಿಕ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ನಿಡದಾವೊಲು, ಭೀಮಾವರಂ ಟೌನ್, ಗುಡಿವಾಡ ಮತ್ತು ವಿಜಯವಾಡ ನಿಲ್ದಾಣಗಳ ಬದಲಾದ ಮಾರ್ಗದ ಮೂಲಕ ಸಂಚರಿಸಲಿದೆ.

ಅಕ್ಟೋಬರ್ 5 ರಂದು ಟಾಟಾನಗರದಿಂದ ಹೊರಡುವ ರೈಲು ಸಂಖ್ಯೆ 18111 ಟಾಟಾನಗರ- ಯಶವಂತಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ನಿಡದವೊಲು, ಭೀಮಾವರಂ ಟೌನ್, ಗುಡಿವಾಡ ಮತ್ತು ವಿಜಯವಾಡ ನಿಲ್ದಾಣಗಳ ಬದಲಾದ ಮಾರ್ಗದ ಮೂಲಕ ಸಂಚರಿಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+