ವೀಕೆಂಡ್ ಆನಂದಿಸಲು ಬೆಂಗಳೂರು ಸುತ್ತಮತ್ತ ಇರುವ ರಮಣೀಯ ಸ್ಥಳಗಳು, ಇಲ್ಲಿದೆ ಮಾಹಿತಿ
ವಾರದಲ್ಲಿ ಸಿಗುವ ಎರಡು ದಿನಗಳ ವಿರಾಮದಲ್ಲಿ ದೂರದೂರಿಗೆ ಪ್ರಯಾಣಿಸಿ ಅರ್ಧ ದಿನಕ್ಕಿಂತ ಹೆಚ್ಚು ಸಮಯವನ್ನು ಕಳೆದುಕೊಳ್ಳುವುದು ಯಾವುದೇ ಅರ್ಥವಿರುವುದಿಲ್ಲ. ಹಾಗಾಗಿ ಬೆಂಗಳೂರಿನಿಂದ ಹತ್ತಿರದಲ್ಲಿರುವ ನೈಸರ್ಗಿಕ ಪ್ರದೇಶಗಳ ಮಾಹಿತಿ ಇಲ್ಲಿದೆ.
ಬೆಂಗಳೂರು, ಮಾರ್ಚ್ 17: ಎತ್ತರದ ಕಟ್ಟಡಗಳು, ಹೆಚ್ಚಾದ ವಾಹನ ದಟ್ಟಣೆ, ಕರ್ಕಶ ಶಬ್ದಗಳು, ಕೆಲಸದ ಒತ್ತಡಗಳು, ದೈನಂದಿನ ದಿನಚರಿಯಿಂದ ನೀವು ಸ್ವಲ್ಪ ವಿರಾಮ ಪಡೆಯುವುದು ಒಂದು ಮನರಂಜನೆಯ ವಿಚಾರ ಮಾತ್ರವಲ್ಲ, ಇದು ನಮ್ಮ ಒತ್ತಡ ಜೀವನಕ್ಕೆ ತುಂಬಾ ಮುಖ್ಯವಾದ ಚೈತನ್ಯ ನೀಡುತ್ತದೆ. ಹೀಗಾಗಿ ನಮಗೆ ಸಿಗುವ ವಾರಾಂತ್ಯಗಳು ಇವಕ್ಕೆ ಅವಕಾಶ ನೀಡುತ್ತವೆ. ನಿಮ್ಮ ವಾರಾಂತ್ಯವನ್ನು ಅನುಭವಿಸಲು ಕೆಲವು ಪ್ರದೇಶಗಳು ಇಲ್ಲಿವೆ.
ವಾರದಲ್ಲಿ ಸಿಗುವ ಎರಡು ದಿನಗಳ ವಿರಾಮದಲ್ಲಿ ದೂರದೂರಿಗೆ ಪ್ರಯಾಣಿಸಿ ಅರ್ಧ ದಿನಕ್ಕಿಂತ ಹೆಚ್ಚು ಸಮಯವನ್ನು ಕಳೆದುಕೊಳ್ಳುವುದು ಯಾವುದೇ ಅರ್ಥವಿರುವುದಿಲ್ಲ. ನೀವು ಬೆಂಗಳೂರಿನಲ್ಲಿ ಇದ್ದು ವಾರಾಂತ್ಯವನ್ನು ಕಳೆಯಲು ಮತ್ತು ನಗರದಿಂದ ದೂರವಿರಲು ಸ್ಥಳವನ್ನು ಹುಡುಕುತ್ತಿದ್ದರೆ ಈ ಸ್ಥಳಗಳಿಗೆ ಭೇಟಿ ನೀಡುವುದನ್ನು ಮರೆಯಬೇಡಿ. ನಿಮ್ಮ ವಿರಾಮವನ್ನು ಆನಂದಿಸಲು ನೀವು ಗರಿಷ್ಠ ಸಮಯ ಕಳೆಯಲು ಬೆಂಗಳೂರಿನ ಸುತ್ತಮುತ್ತ ಇರುವ ಕೆಲವು ಪ್ರದೇಶಗಳು ಇಲ್ಲಿವೆ.

ವೈನಾಡು
ಬೆಂಗಳೂರಿನಿಂದ ಸುಮಾರು 271 ಕಿಮೀ ದೂರದಲ್ಲಿ ವಯನಾಡ್ ಗಿರಿಧಾಮವಿದೆ. ಮಸಾಲೆ ಸ್ಪ್ಯಾಂಟೇಶನ್‌ಗಳು, ಚಾರಣ ಮತ್ತು ಪಾದಯಾತ್ರೆಯ ಮಾರ್ಗಗಳು, ಕೇವಿಂಗ್‌ನಂತಹ ಸಾಹಸ ಚಟುವಟಿಕೆಗಳು, ವನ್ಯಜೀವಿ ಅನುಭವಗಳು, ಇವುಗಳು ವಯನಾಡಿನಲ್ಲಿ ನೀವು ಆನಂದಿಸಬಹುದಾದ ಕೆಲವು ವಿಷಯಗಳಾಗಿವೆ. ಇಲ್ಲಿ ನೀವು ಪಶ್ಚಿಮ ಘಟ್ಟಗಳ ಮಡಿಲಲ್ಲಿ ಇದ್ದುಕೊಂಡು ವಾರಾಂತ್ಯದ ರಜೆಯನ್ನು ಅನುಭವಿಸಬಹುದು.

ಕೂರ್ಗ್
ಮಂಜಿನ ಕೂಡಿರುವ ಪ್ರದೇಶ ಕೂರ್ಗ್ ಬೆಂಗಳೂರಿನಿಂದ 265 ಕಿಮೀ ದೂರದಲ್ಲಿದೆ. ಭಾರತದ ಅತ್ಯಂತ ಜನಪ್ರಿಯ ಗಿರಿಧಾಮಗಳಲ್ಲಿ ಒಂದಾದ ಕೂರ್ಗ್ ರೋಚಕ ಅನುಭವಗಳಿಂದ ಕೂಡಿದೆ. ಅದು ಪ್ರಕೃತಿಯಾಗಿರಲಿ ಅಥವಾ ಸಂಸ್ಕೃತಿಯಾಗಿರಲಿ ಅಥವಾ ರುಚಿಕರ ಊಟದ ಮತ್ತೊಂದು ಬಗೆಯ ಸ್ವಾದವನ್ನು ಇಲ್ಲಿ ಸವಿಯಬಹುದು.

ಕಬಿನಿ
ರಾಜ್ಯದ ಅತ್ಯಂತ ಸುಂದರವಾದ ಅರಣ್ಯಗಳಲ್ಲಿ ಒಂದಾದ ಕಬಿನಿ ಅರಣ್ಯ ಪ್ರದೇಶವು ಬೆಂಗಳೂರಿನಿಂದ ಸುಮಾರು 245 ಕಿಮೀ ದೂರದಲ್ಲಿದೆ. ಕಬಿನಿ ನದಿಯ ಬಳಿ ಸಾಕಷ್ಟು ವಸತಿ ಆಯ್ಕೆಗಳಿವೆ. ನೀವು ಕಬಿನಿಗೆ ಪ್ರವಾಸ ಕೈಗೊಂಡರೆ ಅದು ಉತ್ತಮ ಸ್ಥಳವಾಗಿರಲಿದೆ. ನದಿ ತೀರದ ಪ್ರವಾಸ ಎಂದಿಗೂ ತಪ್ಪಿಸಬಾರದು. ನೀವು ಕಬಿನಿಗೆ ಭೇಟಿ ನೀಡಿದರೆ ನೀವು ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಬಹುದು.

ಚಿಕ್ಕಮಗಳೂರು
ಚಿಕ್ಕಮಗಳೂರು ಕರ್ನಾಟಕದ ಅತ್ಯಂತ ಸುಂದರವಾದ ಗಿರಿಧಾಮಗಳಲ್ಲಿ ಒಂದಾಗಿದೆ. ಇದು ಬೆಂಗಳೂರಿನಿಂದ 242 ಕಿಲೋಮೀಟರ್ ದೂರದಲ್ಲಿದೆ. ಗಿರಿಧಾಮವು ಕಾಫಿ ತೋಟಗಳು, ಸಮೃದ್ಧ ಕಾಡು ಮತ್ತು ಸುತ್ತಮುತ್ತಲಿನ ಬೆಟ್ಟಗಳಿಗೆ ಹೆಸರುವಾಸಿಯಾಗಿದೆ. ಚಿಕ್ಕಮಗಳೂರಿನಲ್ಲಿ ಕಾಫಿ ಎಸ್ಟೇಟ್‌ಗಳಿಗೆ ಮಾರ್ಗದರ್ಶಿ ಪ್ರವಾಸಗಳಿವೆ. ನೀವು ಏಕಾಂಗಿಯಾಗಿ ಹೋಗಲು ಬಯಸಿದರೆ ಸಾಕಷ್ಟು ಟ್ರಕ್ಕಿಂಗ್ ಹಾದಿಗಳಿವೆ.

ಏರ್‌ಕಾಡ್, ತಮಿಳುನಾಡು
ನಮ್ಮ ದಕ್ಷಿಣ ಭಾರತದ ಜನಪ್ರಿಯ ಗಿರಿಧಾಮಗಳ ಬಗ್ಗೆ ಮಾತನಾಡುವಾಗ ಏರ್‌ಕಾಡ್ ಹೊಸದೇನಲ್ಲ. ಇದು ಪೂರ್ವ ಘಟ್ಟಗಳಲ್ಲಿ ಕಂಡುಬರುತ್ತದೆ. ವರ್ಷವಿಡೀ ಆಹ್ಲಾದಕರ ಹವಾಮಾನ ಮತ್ತು ಅರಣ್ಯ ಮತ್ತು ಕಾಫಿ ತೋಟಗಳ ದೃಶ್ಯಮಯ ನೋಟಗಳಿಗೆ ಜನಪ್ರಿಯವಾಗಿದೆ. ಏರ್‌ಕಾಡ್ ಬೆಂಗಳೂರಿನಿಂದ 198 ಕಿಮೀ ದೂರದಲ್ಲಿದೆ.

ಬಿಆರ್ ಹಿಲ್ಸ್
ಬೆಂಗಳೂರಿನಿಂದ ಸರಿಸುಮಾರು 175 ಕಿಮೀ ದೂರದಲ್ಲಿ ಬಿಆರ್ ಹಿಲ್ಸ್ ಇದೆ. ಇದನ್ನು ಬಿಳಿಗಿರಿರಂಗ ಬೆಟ್ಟಗಳು ಎಂದೂ ಕರೆಯುತ್ತಾರೆ. ಇದು ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಆಫ್ರೋಡಿಂಗ್ ತಾಣಗಳಲ್ಲಿ ಒಂದಾಗಿದೆ. ಪೂರ್ವ ಮತ್ತು ಪಶ್ಚಿಮ ಘಟ್ಟಗಳು ಸಂಧಿಸುವ ಸ್ಥಳ ಬಿಆರ್ ಹಿಲ್ಸ್. ನೀವು ಕೆಲವು ಸಾಹಸ ಚಟುವಟಿಕೆ ಬಯುಸುವಿರಾದರೆ ಇಲ್ಲಿ ರಿವರ್ ರಾಫ್ಟಿಂಗ್‌ಗೆ ಹೋಗಬಹುದು.

ಹೊಗೇನಕಲ್ ಫಾಲ್ಸ್ ತಮಿಳುನಾಡು
ಈ ಬೇಸಿಗೆ ಕಾಲ. ಧುಮ್ಮಿಕ್ಕುವ ಜಲಪಾತವನ್ನು ನೋಡುತ್ತಾ ನೀವು ವಿಶ್ರಾಂತಿ ಪಡೆಯಲು ಹೊಗೇನಕಲ್ ಒಂದು ಉತ್ತಮ ಸ್ಥಳವಾಗಿದೆ. ಇದು ತಮಿಳುನಾಡಿನ ಧರ್ಮಪುರಿಯಲ್ಲಿದ್ದು, ಬೆಂಗಳೂರಿನಿಂದ ಕೇವಲ 180 ಕಿಮೀ ದೂರದಲ್ಲಿದೆ. ಕೊರಾಕಲ್ ಬೋಟ್ ರೈಡ್ ಅನ್ನು ಇಲ್ಲಿ ಅನುಭವಿಸಬಹುದು. ಉಳಿಯುವ ಆಯ್ಕೆಗಳಿಗೆ ಇಲ್ಲಿ ಕೊರತೆಯಿಲ್ಲ. ಹೊಗೇನಕಲ್‌ನಲ್ಲಿರುವಾಗ ಪ್ರಸಿದ್ಧ ತೈಲ ಮಸಾಜ್‌ಗಳನ್ನು ನೀವು ಮಾಡಿದಿಕೊಳ್ಳಬಹುದು.

ಹಾರ್ಸ್ಲಿ ಹಿಲ್ಸ್
ಹಾರ್ಸ್ಲಿ ಹಿಲ್ಸ್ ಆಂಧ್ರಪ್ರದೇಶ ಮತ್ತು ಕರ್ನಾಟಕ ಗಡಿಯಲ್ಲಿದ್ದು, ಬೆಂಗಳೂರಿನಿಂದ ಸರಿಸುಮಾರು 160 ಕಿಮೀ ದೂರದಲ್ಲಿದೆ. ಈ ಸ್ಥಳವು ಬೆಟ್ಟಗಳ ರಮಣೀಯ ದೃಶ್ಯಗಳನ್ನು ನೀಡುತ್ತದೆ. ಇಲ್ಲಿ ನೀವು ಟ್ರಕ್ಕಿಂಗ್‌ಗೆ ಹೋಗಲು ಮತ್ತು ನಿಮ್ಮ ವಿರಾಮದ ಸಮಯವನ್ನು ಆನಂದಿಸಲು ಸಾಕಷ್ಟು ಪ್ರಶಾಂತ ಸ್ಥಳಗಳನ್ನು ಹೊಂದಿದೆ. ಹಾರ್ಸ್ಲಿ ಹಿಲ್ಸ್ ಕೆಲವು ಸುಂದರವಾದ ಕಾಡುಗಳನ್ನು ಹೊಂದಿದೆ. ಅಲ್ಲದೆ ಪಕ್ಷಿ ವೀಕ್ಷಣೆಗೆ ಉತ್ತಮವಾಗಿದೆ.












Click it and Unblock the Notifications