Get Updates
Get notified of breaking news, exclusive insights, and must-see stories!

Bengaluru To coorg: ಬೆಂಗಳೂರಿನಿಂದ ನಿಮ್ಮಿಷ್ಟದ ಕೂರ್ಗ್‌ಗೆ ಪ್ರವಾಸ ಮಾಡಬೇಕೆ?, ಸಾರಿಗೆ ವಿಭಾಗ, ಸಮಯ, ದರಗಳನ್ನು ತಿಳಿಯಿರಿ

ಡಿಸೆಂಬರ್‌ ಮುಗಿದು ಹೊಸವರ್ಷಕ್ಕೆ ಇನ್ನು ಕೆಲವೇ ದಿನಗಳಷ್ಟೇ ಬಾಕಿಯಿದ್ದು, ಬಹುತೇಕ ಮಂದಿ ಈ ವೇಳೆಯಲ್ಲೇ ಪ್ರವಾಸ ಕೈಗೊಳ್ಳಲು ಪ್ಲಾನ್‌ ಮಾಡಿಕೊಂಡಿರುತ್ತಾರೆ. ಅದರಲ್ಲೂ ಈ ಸಮಯದಲ್ಲಿ ಬೆಂಗಳೂರಿನಿಂದ ಮಂಜಿನ ನಗರಿಯಂತಲೇ ಹೆಸರುವಾಸಿಯಾಗಿರುವ ಕೊಡಗು ಜಿಲ್ಲೆಯ ಕೂರ್ಗ್‌ ಕಡೆ ಪ್ರಯಾಣ ಬೆಳೆಸುವವರಿಗೆ ಉಪಯುಕ್ತ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಬೆಂಗಳೂರಿನಿಂದ ಕೂರ್ಗ್‌ NH 48 ಮೂಲಕ 265 ಕಿ.ಮೀ. ದೂರದಲ್ಲಿದೆ. ಕೂರ್ಗ್‌ಗೆ ಭೇಟಿ ನೀಡಲು ಡಿಸೆಂಬರ್‌ನಿಂದ ಮಾರ್ಚ್ ತಿಂಗಳು ಸೂಕ್ತ ಸಮಯವಾಗಿದೆ. ಕೂರ್ಗ್‌ನಲ್ಲಿ ಯಾವುದೇ ರೈಲು ನಿಲ್ದಾಣವಿಲ್ಲ, ಆದರೆ ಹತ್ತಿರದ ರೈಲು ನಿಲ್ದಾಣಗಳೆಂದರೆ ಮೈಸೂರು ಮತ್ತು ಮಂಗಳೂರು. ಅಲ್ಲದೆ, ಕೂರ್ಗ್‌ನಲ್ಲಿ ಯಾವುದೇ ವಿಮಾನ ನಿಲ್ದಾಣವಿಲ್ಲ, ಆದರೆ, ಹತ್ತಿರದ ವಿಮಾನ ನಿಲ್ದಾಣವು ಮಂಗಳೂರಿನಲ್ಲಿದೆ.

Bengaluru To coorg: Best tips for traveling from Bengaluru to coorg, know details

ಕೂರ್ಗ್‌ಗೆ ಭೇಟಿ ನೀಡಿದಾಗ ಅಬ್ಬೆ ಜಲಪಾತ, ದುಬಾರೆ ಆನೆ ಶಿಬಿರ, ಗೋಲ್ಡನ್ ಟೆಂಪಲ್, ಮಲ್ಲಳ್ಳಿ ಜಲಪಾತ ಮತ್ತು ಇನ್ನಿತರ ರೋಮಾಂಚಕಾರಿ ಸ್ಥಳಗಳಿಗೆ ನೀವು ಭೇಟಿ ನೀಡುವುದನ್ನು ಮರೆಯಬೇಡಿ.

ಕೂರ್ಗ್ ದಕ್ಷಿಣ ಭಾರತದ ಅಚ್ಚಹಸಿರಿನ ಹೊದಿಕೆ ಹೊದ್ದಂತಿರುವ ಬೆಟ್ಟಗಳಿಂದ ಕೂಡಿರುವ ಅದ್ಭುತವಾದ ತಾಣವಾಗಿದೆ. ಇಲ್ಲಿನ ಸೌಂದರ್ಯ ಎಷ್ಟಿದೆಯೆಂದರೆ, ನಿಸರ್ಗದ ಮಡಿಲಲ್ಲಿ ಕಾಲ ಕಳೆಯಲು ಬೆಂಗಳೂರಿಗರಿಗೆ ಹೇಳಿ ಮಾಡಿಸಿದ ತಾಣವಾಗಿದೆ ಅಂತಹ ತಾಣ ಇದು. ಬೆಂಗಳೂರಿನಿಂದ ಕೂರ್ಗ್‌ಗೆ ಹೇಗೆ ಪ್ರಯಾಣಿಸಬಹುದು ಮತ್ತು ಯಾವ್ಯಾವ ಸಾರಿಗೆಯಿಂದ ಪ್ರಯಾಣಿಸಲು ಎಷ್ಟು ಸಮಯ ಆಗುತ್ತದೆ ಎನ್ನುವುದನ್ನು ಇಲ್ಲಿ ತಿಳಿಯಿರಿ.

ಬೆಂಗಳೂರಿನಲ್ಲಿ ಒತ್ತಡದ ಕೆಲಸಗಳಲ್ಲಿ ತೊಡಗಿರುವವರು ದೀರ್ಘ ವಾರಾಂತ್ಯವನ್ನು ಕಳೆಯಲು ಬೆಂಗಳೂರಿನ ಬಹುತೇಕ ಮಂದಿ ಹತ್ತಿರದ ಸ್ಥಳಗಳಿಗೆ ಪ್ರವಾಸ ಕೈಗೊಳ್ಳಲು ಪ್ಲಾನ್‌ ಮಾಡಿಕೊಂಡಿರುತ್ತಾರೆ. ಮಡಿಕೇರಿಯು ಅದ್ಭುತ ತಾಣವಾಗಿದ್ದು, ಜನರು ತಮ್ಮ ಕುಟುಂಬಗಳೊಂದಿಗೆ ಪ್ರಯಾಣಿಸಲು ಮತ್ತು ಹೆಚ್ಚು ಸಮಯವನ್ನು ಕಳೆಯಲು ಸೂಕ್ತ ಪ್ರವಾಸಿ ತಾಣಗಳು ಈ ಮಾರ್ಗದಲ್ಲಿವೆ.

ಇನ್ನು ಬೆಂಗಳೂರು-ಕೂರ್ಗ್ ನಡುವಿನ ಅಂತರವು ಸುಮಾರು 265 ಕಿಲೋ ಮೀಟರ್‌ ಆಗಿದ್ದು, ಇಲ್ಲಿಗೆ ವಿವಿಧ ಸಾರಿಗೆ ವಿಧಾನಗಳ ಮೂಲಕ ಕ್ರಮಿಸಬಹುದು. ಬೆಂಗಳೂರಿನಿಂದ ಕೂರ್ಗ್‌ಗೆ 2 ದಿನಗಳ ಸುದೀರ್ಘ ಪ್ರವಾಸವನ್ನು ಬೆಳೆಸಬಹುದು. ಆದರೂ ಪರಿಪೂರ್ಣವಾದ ವಿರಾಮ ರಜೆಯನ್ನು ಕಳೆಯಲು ನೀವು ಕನಿಷ್ಟ 4 ದಿನದ ಸುದೀರ್ಘ ಪ್ರವಾಸಕ್ಕೆ ಹೋಗಬೇಕಾಗುತ್ತದೆ. ನಿಮ್ಮ ಪ್ರಯಾಣಕ್ಕಾಗಿ ಸರಿಯಾದ ಸಾರಿಗೆಯ ಆಯ್ಕೆ ಇಲ್ಲಿ ತಿಳಿಯಬಹುದಾಗಿದೆ.

ರೈಲಿನಲ್ಲಿ ಬೆಂಗಳೂರಿಗೆ ಕೂರ್ಗ್‌ಗೆ ಪ್ರವಾಸ: ಮಡಿಕೇರಿ ತನ್ನದೇ ಆದ ರೈಲ್ವೆ ನಿಲ್ದಾಣವನ್ನು ಹೊಂದಿಲ್ಲ. ಮೈಸೂರು ಜಂಕ್ಷನ್ ಕೂರ್ಗ್‌ನಿಂದ 95 ಕಿಲೋ ಮೀಟರ್‌ ಮತ್ತು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ 134 ಕಿಮೀ ದೂರದಲ್ಲಿದೆ. ಬೆಂಗಳೂರಿನಿಂದ ಕೂರ್ಗ್‌ಗೆ ರೈಲಿನಲ್ಲಿ ಪ್ರಯಾಣಿಸುವಾಗ, ರೈಲಿನಲ್ಲಿ ಮೈಸೂರು ಜಂಕ್ಷನ್‌ಗೆ ಹೋಗಬೇಕು. ಮತ್ತು ನಂತರ ಮೈಸೂರಿನಿಂದ ಬಸ್ ಅಥವಾ ಕ್ಯಾಬ್ ಮೂಲಕ ಕೂರ್ಗ್ ತಲುಪುವುದು ಉತ್ತಮ.

ಬೆಂಗಳೂರಿನಿಂದ ಅನೇಕ ರೈಲುಗಳು ಮೈಸೂರಿಗೆ ಹೋಗುತ್ತವೆ ಮತ್ತು ಪ್ರಯಾಣದ ಸಮಯ ಸುಮಾರು 3-4 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ನೀವು ಬೆಂಗಳೂರಿನಿಂದ ಮಂಗಳೂರಿಗೆ ರೈಲಿನಲ್ಲಿಯೂ ಹೋಗಬಹುದು. ಮೈಸೂರು ರೈಲು ನಿಲ್ದಾಣದಿಂದ, ನೀವು ಹತ್ತಿರದ ಬಸ್ ನಿಲ್ದಾಣಕ್ಕೆ ಹೋಗುವುದಾದರೆ, ಇದು ಕೇವಲ 1.4 ಕಿಮೀ ದೂರ ಆಗುತ್ತದೆ.

ಇಲ್ಲಿ, ನೀವು ಎಸಿ ಅಥವಾ ನಾನ್ ಎಸಿಯ ಅವಶ್ಯಕತೆಗಳ ಆಧಾರದ ಮೇಲೆ ಕೂರ್ಗ್‌ಗೆ ಬಸ್ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಈ ಬಸ್ ಪ್ರಯಾಣವು ಸುಮಾರು 3-5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಅಲ್ಲದೆ ಮೈಸೂರು ಜಂಕ್ಷನ್‌ನಿಂದ ಕೂರ್ಗ್‌ಗೆ ಹೋಗಲು ನೀವು ಕ್ಯಾಬ್ ಅನ್ನು ಸಹ ತೆಗೆದುಕೊಳ್ಳಬಹುದು. ಆದರೆ, ಬಸ್‌ಗಳಿಗೆ ಹೋಲಿಸಿದರೆ ಕ್ಯಾಬ್‌ಗಳ ಪ್ರಯಾಣ ದರ ತುಸು ಹೆಚ್ಚಾಗಿಯೇ ಇದೆ. ಆದರೆ, ಮೈಸೂರಿನಿಂದ ಕೂರ್ಗ್‌ಗೆ ಬಸ್‌ನಲ್ಲಿ ಹೋಗುವುದಾದರೆ 200-800 ರೂಪಾಯಿ ಆಗುತ್ತದೆ. ಕ್ಯಾಬ್‌ನಲ್ಲಿ ಪ್ರಯಾಣಿಸುವುದಾದರೆ 3000 ರೂಪಾಯಿ ಆಗುತ್ತದೆ.

ಬೆಂಗಳೂರಿನಿಂದ ಕೂರ್ಗ್‌ಗೆ ಬಸ್‌ ಪ್ರಯಾಣ: ಬೆಂಗಳೂರಿನಲ್ಲಿ ಸುಮಾರು 34 ಬಸ್ ನಿಲ್ದಾಣಗಳಿದ್ದು, ಅವುಗಳಲ್ಲಿ 3 ಪ್ರಮುಖ ಬಸ್ ನಿಲ್ದಾಣಗಳಾಗಿವೆ. ಈ ಎಲ್ಲಾ ಬಸ್ ನಿಲ್ದಾಣಗಳಿಂದ ಕೂರ್ಗ್‌ಗೆ ನೀವು ಬಸ್ ಪಡೆಯಬಹುದು. ನೀವು ಬೆಂಗಳೂರಿನಲ್ಲಿ ಖಾಸಗಿ ಬಸ್‌ಗಳು ಮತ್ತು ನೇರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಇನ್ನು ನಿಮ್ಮ ಅವಶ್ಯಕತೆಯ ಆಧಾರದ ಮೇಲೆ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು. ನೀವು AC, ನಾನ್-ಎಸಿ, ಸ್ಲೀಪರ್ ಇತ್ಯಾದಿಗಳನ್ನು ಆಯ್ಕೆ ಮಾಡಬಹುದಾಗಿದೆ. ಬಸ್ ಮೂಲಕ ಪ್ರಯಾಣವು ಸುಮಾರು 6 ಗಂಟೆಗಳನ್ನು ತೆಗೆದುಕೊಳ್ಳುತ್ತದೆ, ಇಲ್ಲಿ ಉತ್ತಮ ಪ್ರಯಾಣದ ಅನುಭವವನ್ನು ಪಡೆಯಬಹುದಾಗಿದೆ.

ಟ್ಯಾಕ್ಸಿಗಳಿಗೆ ಹೋಲಿಸಿದರೆ ಈ ಬಸ್‌ಗಳು ಸಾಕಷ್ಟು ಅಗ್ಗವಾಗಿದ್ದು, ಪ್ರಯಾಣ ದರ 300-800 ರೂಪಾಯಿ ಆಗಿರುತ್ತದೆ. ನೀವು ಬೆಂಗಳೂರಿನಿಂದ ಮಾತ್ರ ಬಸ್ ಹತ್ತಲು ಸಾಧ್ಯವಿಲ್ಲ, ಆದರೆ ಬಸ್ ಹೊರವಲಯಕ್ಕೆ ಹೋಗುವುದರಿಂದ ವಿವಿಧ ಸ್ಥಳಗಳಿಂದ ಬಸ್ ಹತ್ತಬಹುದು. ಆನ್‌ಲೈನ್‌ನಲ್ಲಿ ಈ ಬಸ್ ಅನ್ನು ಬುಕ್ ಮಾಡಬಹುದು.

ಬೆಂಗಳೂರಿನಿಂದ ಕೂರ್ಗ್‌ಗೆ ಕಾರಿನಲ್ಲಿ ಪ್ರಯಾಣ: ಕೂರ್ಗ್‌ನಿಂದ ಬೆಂಗಳೂರಿಗೆ ಕಾರಿನಲ್ಲಿ ರಸ್ತೆ ಪ್ರಯಾಣವೂ ಒಳ್ಳೆಯದು. NH275 ಅಥವಾ ಮೈಸೂರು ರಸ್ತೆಯ ಮೂಲಕ ಬೆಂಗಳೂರು ಮತ್ತು ಕೂರ್ಗ್ ನಡುವಿನ ಅಂತರವು 250 ಕಿಲೋ ಮೀಟರ್‌ ಆಗುತ್ತದೆ. ಮತ್ತೊಂದೆಡೆ, NH75 ಮೂಲಕ ಬೆಂಗಳೂರಿನಿಂದ ಕೂರ್ಗ್ ನಡುವಿನ ಅಂತರವು 275 ಕಿಲೋ ಮೀಟರ್‌ ಆಗುತ್ತದೆ.

ಕೂರ್ಗ್‌ನಿಂದ ಬೆಳಗ್ಗೆ 4-6 ಗಂಟೆಗಳ ನಡುವೆ ಪ್ರಯಾಣ ಬೆಳೆಸುವುದು ಉತ್ತಮ. ಇದರಿಂದ ಮಧ್ಯಾಹ್ನದ ಮೊದಲು ಮಡಿಕೇರಿಯನ್ನು ತಲುಪಬಹುದು. ಇದರಿಂದ ವಾಹಣ ದಟ್ಟಣೆಯಿಂದ ತಪ್ಪಿಸಿಕೊಳ್ಳಬಹುದು. ಇದರಿಂದ ನೀವು ಕೂರ್ಗ್ ತಲುಪಿದ ನಂತರ ವಿಶ್ರಾಂತಿ ಪಡೆಯಲು ಸಾಕಷ್ಟು ಸಮಯ ಸಿಕ್ಕಂತಾಗುತ್ತದೆ.

ರಸ್ತೆಗಳು ಸುಗಮ ಆಗಿರುವುದರಿಂದ ಪ್ರಯಾಣವು ಸುಖಕರವಾಗಿರುತ್ತದೆ. ಈ ಪ್ರಯಾಣಕ್ಕೆ ಮೂರು ಮಾರ್ಗಗಳನ್ನು ಆಯ್ಕೆ ಮಾಡಿಕೊಳ್ಳಬಹುದು, ಅವುಗಳೆಂದರೆ ಕುಶಾಲನಗರ, ಚನ್ನರಾಯಪಟ್ಟಣ ಮತ್ತು ನಾಗರಹೊಳೆ ಮಾರ್ಗಗಳಾಗಿವೆ. ಇವುಗಳಲ್ಲಿ ಕುಶಾಲನಗರ ಮಾರ್ಗವು 275 ಕಿಲೋ ಮೀಟರ್‌ ಇರುವುದರಿಂದ ಪ್ರಯಾಣದ ಸಮಯ 6 ಗಂಟೆ ಆಗಿರುತ್ತದೆ.

ಬೆಂಗಳೂರು ಟು ಕೂರ್ಗ್ ಪ್ಯಾಕೇಜ್: ಬೆಂಗಳೂರು ಮತ್ತು ಕೂರ್ಗ್ ನಡುವಿನ ಅಂತರವು 265 ಕಿಮೀ ಆಗಿದ್ದು, ಈ ಪ್ರಯಾಣವನ್ನು ಕವರ್ ಮಾಡಲು ನೀವು ವಿವಿಧ ರೀತಿಯ ಸಾರಿಗೆಗಳನ್ನು ಆಯ್ಕೆ ಮಾಡಬಹುದು. ಎರಡು ಸ್ಥಳಗಳ ನಡುವಿನ ಅಂತರವು ಹೆಚ್ಚು ಇಲ್ಲದಿರುವುದರಿಂದ, ನೀವು ಈ ಎರಡೂ ಸ್ಥಳಗಳನ್ನು ಅನ್ವೇಷಿಸಲು ಆಯ್ಕೆ ಮಾಡಬಹುದು.
ನಿಮಗೆ ಹೆಚ್ಚು ಸಮಯವಿಲ್ಲದಿದ್ದರೆ, ನೀವು ಯಾವುದೇ ಬೆಂಗಳೂರಿನಿಂದ 3 ದಿನಗಳ ಕೂರ್ಗ್ ಪ್ಯಾಕೇಜ್ ಅನ್ನು ಆಯ್ಕೆ ಮಾಡಬಹುದು.

ಇದರಿಂದ ಬೆಂಗಳೂರಿನಲ್ಲಿ 1 ದಿನ, ಕೂರ್ಗ್‌ನಲ್ಲಿ 2 ದಿನಗಳನ್ನು ಕಳೆಯಬಹುದು. ನೀವು 3 ದಿನಗಳಿಗಿಂತ ಹೆಚ್ಚು ಇದ್ದರೆ ಕೂರ್ಗ್ ಮತ್ತು ಊಟಿಯನ್ನು ಒಟ್ಟಿಗೆ ನೋಡಬಹುದಾಗಿದೆ. ಮತ್ತು ಎರಡೂ ಸ್ಥಳಗಳಲ್ಲಿ 2-2 ದಿನಗಳನ್ನು ಕಳೆಯಬಹುದು. ನೀವು 5-ದಿನದ ಪ್ರವಾಸವನ್ನು ಯೋಜಿಸಿದರೆ ಮೈಸೂರನ್ನು ಸಹ ಕವರ್ ಮಡಬಹುದಾಗಿದೆ. ಈ ಪ್ರವಾಸಕ್ಕಾಗಿ 7 ದಿನಗಳನ್ನು ತೆಗೆದುಕೊಳ್ಳುವ ಮೂಲಕ ನೀವು ಅತ್ಯಂತ ಅದ್ಭುತವಾದ ಪ್ರವಾಸವನ್ನು ಹೊಂದಬಹುದು.

ಮತ್ತು ಬೆಂಗಳೂರಿನಿಂದ 7 ರಾತ್ರಿಗಳ ಕೂರ್ಗ್ ಪ್ಯಾಕೇಜ್ ಅನ್ನು ಪಡೆಯಬಹುದು. ಇಲ್ಲಿ, ನೀವು ಬೆಂಗಳೂರಿನಿಂದ ಪ್ರಾರಂಭಿಸಿ ನಂತರ ಮೈಸೂರಿಗೆ ಪ್ರಯಾಣಿಸಬಹುದು. ನಂತರ ಕೂರ್ಗ್‌ಗೆ ಹೋಗಬಹುದು. ಈ ಸ್ಥಳಗಳಲ್ಲಿ ತಲಾ ಒಂದು ದಿನವನ್ನು ಕಳೆದ ನಂತರ, ನೀವು ಊಟಿಗೆ ಪ್ರಯಾಣಿಸಬಹುದು. ಅಲ್ಲಿ ನೀವು ಬೆಂಗಳೂರಿಗೆ ಹಿಂತಿರುಗುವ ಮೊದಲು 2-3 ದಿನಗಳನ್ನು ಕಳೆಯಬಹುದು.

ಬೆಂಗಳೂರಿಂದ ಕೂರ್ಗ್‌ಗೆ ಟ್ಯಾಕ್ಸಿ ಪ್ರಯಾಣ: ಪ್ರತಿಯೊಬ್ಬರೂ ಕಾರನ್ನು ಹೊಂದಿರುವುದಿಲ್ಲ ಅಥವಾ ಕಷ್ಟಕರವಾದ ರಸ್ತೆಗಳಲ್ಲಿ ಓಡಿಸಲು ಸಾಕಷ್ಟು ಕೌಶಲ್ಯಗಳನ್ನು ಹೊಂದಿರುವುದಿಲ್ಲ. ಆ ಸಂದರ್ಭದಲ್ಲಿ, ನೀವು ಬೆಂಗಳೂರಿನಿಂದ ಕೂರ್ಗ್ಗೆ ಟ್ಯಾಕ್ಸಿಯನ್ನು ಬುಕ್ ಮಾಡಬಹುದು. ಅಲ್ಲಿ ಚಾಲಕನು ಟ್ಯಾಕ್ಸಿಯನ್ನು ಓಡಿಸುತ್ತಾನೆ ಮತ್ತು ನೀವು ಪ್ರಯಾಸಿ ತಾಣಗಳ ಸೌಂದರ್ಯವನ್ನು ಸವಿಯಬಹುದಾಗಿದೆ. ಟ್ಯಾಕ್ಸಿಗಳಿಗೆ ವಿವಿಧ ಆಯ್ಕೆಗಳು ಲಭ್ಯವಿವೆ ಮತ್ತು ಸಮಯಕ್ಕೆ ಆದ್ಯತೆಯ ಆಧಾರದ ಮೇಲೆ ಟ್ಯಾಕ್ಸಿಯನ್ನು ಆಯ್ಕೆ ಮಾಡಬಹುದು. ಪ್ರಯಾಣಿಕರ ಸಂಖ್ಯೆಯನ್ನು ಆಧರಿಸಿ ನೀವು ಚಾಲಕನೊಂದಿಗೆ ಕಾರನ್ನು ಬುಕ್ ಮಾಡಬಹುದು.

ಕೇವಲ ಒಂದೆರಡು ಜನರಾಗಿದ್ದರೆ, ಸಣ್ಣ ಕಾರನ್ನು ಬುಕ್ ಮಾಡಬಹುದು. ಆದರೆ, ನೀವು ದೊಡ್ಡ ಕುಟುಂಬದವರಾಗಿದ್ದರೆ ಇನ್ನೋವಾದಂತಹ ಕಾರನ್ನು ಆಯ್ಕೆ ಮಾಡುವುದು ಉತ್ತಮ. ನೀವು ಮಾಡಬೇಕಾಗಿರುವುದು ಬೆಂಗಳೂರು ಟು ಕೂರ್ಗ್ ಟ್ಯಾಕ್ಸಿಯನ್ನು ಆನ್‌ಲೈನ್‌ನಲ್ಲಿ ಹುಡುಕಿ. ಅಲ್ಲಿ ನಿಮಗೆ ಹಲವಾರು ಆಯ್ಕೆಗಳನ್ನು ನೀಡಲಾಗುತ್ತದೆ. ನಿಮ್ಮ ಅನುಕೂಲಕ್ಕಾಗಿ ಮತ್ತು ಸೌಕರ್ಯಗಳಿಗೆ ಯಾವುದೇ ಕ್ಯಾಬ್ ಅಥವಾ ಟ್ಯಾಕ್ಸಿಯನ್ನು ಆಯ್ಕೆ ಮಾಡಬಹುದು. ಇದಕ್ಕೆ 2500 -4000 ರೂಪಾಯಿ ಪ್ರಯಾಣ ದರ ಆಗಿರುತ್ತದೆ.

ಬೆಂಗಳೂರಿಂದ ಕೂರ್ಗ್‌ಗೆ ವಿಮಾನ ಪ್ರಯಾಣ: ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಕೂರ್ಗ್‌ನಿಂದ 280 ಕಿಲೋ ಮೀಟರ್‌ ದೂರದಲ್ಲಿರುವ ಅತ್ಯಂತ ಉತ್ತಮವಾದ ಸಂಪರ್ಕವನ್ನು ಹೊಂದಿರುವ ವಿಮಾನ ನಿಲ್ದಾಣವಾಗಿದೆ. ಕೂರ್ಗ್‌ನಲ್ಲಿ ಯಾವುದೇ ವಿಮಾನ ನಿಲ್ದಾಣಗಳು ಇಲ್ಲದಿರುವುದರಿಂದ, ಬೆಂಗಳೂರಿನಿಂದ ಪ್ರಯಾಣಿಸುವಾಗ ನೀವು ಮಂಗಳೂರು ವಿಮಾನ ನಿಲ್ದಾಣಕ್ಕೆ ವಿಮಾನದಲ್ಲಿ ಹೋಗಬಹುದಾಗಿದೆ.

ಇಲ್ಲಿಂದ ನೀವು ಟ್ಯಾಕ್ಸಿ ಮೂಲಕ ಕೂರ್ಗ್ ತಲುಪಬಹುದು. ಟ್ಯಾಕ್ಸಿಯು ಕೂರ್ಗ್‌ಗೆ ಹೋಗಲು ಸುಮಾರು 3 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಪ್ರಯಾಣ ದರವು ಸುಮಾರು 3000 ರೂಪಾಯಿ ಆಗಿರುತ್ತದೆ. ಅದರಲ್ಲೂ ಬೆಂಗಳೂರಿನಿಂದ ಕೂರ್ಗ್ ವಿಮಾನವು ಚೆಕ್-ಇನ್ ಮತ್ತು ಇತರ ಏರ್‌ಪೋರ್ಟ್ ಫಾರ್ಮಾಲಿಟಿಗಳಿಗೆ ಸುಮಾರು ಒಂದು ಗಂಟೆ ಮತ್ತು ಹೆಚ್ಚುವರಿ ಸಮಯವನ್ನು ತೆಗೆದುಕೊಳ್ಳುತ್ತದೆ. ಬೆಂಗಳೂರಿನಿಂದ ಕೂರ್ಗ್‌ಗೆ ರೈಲು ಅಥವಾ ಕ್ಯಾಬ್ ಮೂಲಕ ಅದೇ ಸಮಯ ತೆಗೆದುಕೊಳ್ಳುತ್ತದೆ. ಆದ್ದರಿಂದ, ಮೇಲೆ ತಿಳಿಸಲಾದ ಇತರ ಆಯ್ಕೆಗಳನ್ನು ನೋಡಬಹುದಾಗಿದೆ.

ಬೆಂಗಳೂರಿಂದ ಕೂರ್ಗ್‌ಗೆ ಬೈಕ್ ಟ್ರಿಪ್: ಬೆಂಗಳೂರಿನಿಂದ ಮಡಿಕೇರಿವರೆಗಿನ ರಸ್ತೆಗಳು ಸುಸ್ಥಿತಿಯಲ್ಲಿದ್ದು, ನೀವು ಬೈಕ್‌ನಲ್ಲಿ ಪ್ರಯಾಣಿಸಲು ಇಷ್ಟಪಡುವವರಾಗಿದ್ದರೆ, ಬೆಂಗಳೂರಿಗೆ ಕೂರ್ಗ್ ಬೈಕ್ ಟ್ರಿಪ್ ತೆಗೆದುಕೊಳ್ಳಬಹುದು. ಬೈಕ್‌ನಲ್ಲಿ ಪ್ರಯಾಣಿಸುವಾಗ ಆ ಮಾರ್ಗದಲ್ಲಿ ಪ್ರಕೃತಿ ಸೌಂದರ್ಯವನ್ನು ಆನಂದಿಸಬಹುದು. ಮತ್ತು ನಿಮಗೆ ಬೇಕಾದಾಗ ನಿಲ್ಲಿಸಬಹುದು. ಅಲಗ್ಲದೆ 6 ಗಂಟೆಗಳ ಒಳಗೆ ಕೂರ್ಗ್‌ ತಲುಪಬಹುದಾಗಿದೆ. ಪ್ರಯಾಣದ ಮೂರು ಮಾರ್ಗಗಳೆಂದರೆ ಕುಶಾಲನಗರ, ಚನ್ನರಾಯಪಟ್ಟಣ ಮತ್ತು ನಾಗರಹೊಳೆ ಆಗಿವೆ.

ಎಲ್ಲಾ ಮೂರು ಮಾರ್ಗಗಳು ನೀವು ಅನ್ವೇಷಿಸಬಹುದಾದ ವಿಭಿನ್ನ ಸ್ಥಳಗಳನ್ನು ಹೊಂದಿವೆ. ಆದರೆ, ಕುಶಾಲನಗರ ಮಾರ್ಗ ಅತ್ಯಂತ ಚಿಕ್ಕದಾಗಿದೆ. ನೀವು ಬೈಕ್‌ನಲ್ಲಿ ಕೂರ್ಗ್‌ಗೆ ತಲುಪಲು ನಿರ್ಧರಿಸಿದ್ದರೆ, ತುಂಬಾ ಬಿಸಿ, ಮಳೆ ಅಥವಾ ಅತ್ಯಂತ ಶೀತ ವಾತಾವರಣದಲ್ಲಿ ಪ್ರಯಾಣಿಸಬಾರದು ಅಂತಿದ್ದರೆ, ಒಂದು ದಿನ ಅಥವಾ ಮುಂಜಾನೆಯ ವೇಳಗೆ ಪ್ರಯಾಣ ಮಾಡುವುದು ಸೂಕ್ತವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+