ಬೆಂಗಳೂರಿನ ಎಸ್‌ಎಂವಿಟಿ-ದಾನಪುರ ವಿಶೇಷ ರೈಲು ಸಂಚಾರ ಸಮಯ ವಿಸ್ತರಣೆ-ಮಾಹಿತಿ ಇಲ್ಲಿದೆ
Indian Railways: ಭಾರತೀಯ ರೈಲ್ವೆ ಪ್ರಯಾಣಿಕೆ ಅನುಕೂಲಕ್ಕೆ ತಕ್ಕಂತೆ ವಿಶೇಷ ರೈಲುಗಳು ಬಿಡುತ್ತಲೇ ಇರುತ್ತದೆ. ಹಾಗೆಯೇ ಇದೀಗ ಪ್ರಯಾಣಿಕರ ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ದಾನಪುರದ ವಿಶೇಷ ರೈಲುಗಳ ಸಂಚಾರವನ್ನು ಮತ್ತೆರಡು ವಾರ ವಿಸ್ತರಣೆ ಮಾಡಲು ರೈಲ್ವೆ ನಿರ್ಧಾರ ಮಾಡಿದೆ. ಮಾಹಿತಿ ಇಲ್ಲಿದೆ ಗಮನಿಸಿ.
ಬೆಂಗಳೂರು ಸರ್.ಎಂ.ವಿಶ್ವೇಶ್ವರಯ್ಯ ಟರ್ಮಿನಲ್-ಬಿಹಾರದ ದಾನಪುರ ನಡುವೆ ವಾರಕ್ಕೊಮ್ಮೆ ಸಂಚರಿಸುತ್ತಿದ್ದ ಎಂಟು ರೈಲುಗಳು ಆಗಸ್ಟ್ 28ರಿಂದ ಸೆಪ್ಟೆಂಬರ್ 7ರ ವರೆಗೆ ಒಟ್ಟು 14 ಟ್ರಿಪ್‌ಗಳನ್ನು ಓಡಲಿದೆ. ಅದೇ ರೀತಿ ವಾರಕ್ಕೆ ಎರಡು ಬಾರಿ ಓಡುವ ಎರಡು ರೈಲುಗಳು ತಲಾ ಎರಡು ಬಾರಿ ಹೆಚ್ಚುವರಿಯಾಗಿ ಸಂಚಾರ ಮಾಡಲಿದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.

ನವೆಂಬರ್ 1ರಿಂದ ಹೊಸ ವೇಳಾಪಟ್ಟಿ: ಸಾರಿಗೆ ವಿಭಾಗಗಲ್ಲಿಯೇ ಭಾರತೀಯ ರೈಲ್ವೆ ಅತೀ ದೊಡ್ಡ ಸಾರಿಗೆಯಾಗಿದ್ದು, ಪ್ರತಿದಿನ ಲಕ್ಷಾಂತರ ಪ್ರಯಾಣಿಕರು ರೈಲಿನಲ್ಲಿಯೇ ಪ್ರಯಾಣ ಮಾಡುತ್ತಾರೆ. ಇನ್ನು ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ವೇಳಾಪಟ್ಟಿ ಬದಲಾವಣೆ ಮಾಡಿ ವಿಶೇಷ ರೈಲುಗಳನ್ನು ಬಿಡುತ್ತಲೇ ಇರುತ್ತದೆ. ಹಾಗೆಯೇ ಇದೀಗ ನವೆಂಬರ್ ತಿಂಗಳಿನಿಂದ ಈ ಮಾರ್ಗದ ರೈಲುಗಳಿಗೆ ಹೊಸ ವೇಳಪಟ್ಟಿ ಅನ್ವಯವಾಗಲಿದೆ ಎಂದು ತಿಳಿದುಬಂದಿದೆ.
ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ಕೊಂಕಣ ರೈಲ್ವೆ ಮಾರ್ಗದಲ್ಲಿ ಚಲಿಸುವ ಎಲ್ಲಾ ರೈಲುಗಳಿಗೆ ಮಾನ್ಸೂನೇತರ ವೇಳಾಪಟ್ಟಿ ಪ್ರಕಟ ಮಾಡಿದೆ. ಅವುಗಳ ಮೂಲ ನಿಲ್ದಾಣಗಳಿಂದ ಹೊರಡುವ ರೈಲುಗಳಿಗೆ ನವೆಂಬರ್ 1, 2024ರಿಂದ ಹೊಸ ವೇಳಾಪಟ್ಟಿ ಅನ್ವಯ ಆಗಲಿದ್ದು, ಈ ರೈಲುಗಳು ಮಾನ್ಸೂನ್ ಅಲ್ಲದ ವೇಳಾಪಟ್ಟಿಯ ಅನ್ವಯ ಕಾರ್ಯನಿರ್ವಹಿಸಲಿ ಎಂದು ತಿಳಿದುಬಂದಿದೆ.
ಯಾವೆಲ್ಲ ರೈಲುಗಳಿಗೆ ಹೊಸ ವೇಳಾಪಟ್ಟಿ?
1. ರೈಲು ಸಂಖ್ಯೆ 12741/42 ವಾಸ್ಕೋ ಡ ಗಾಮಾ: ಪಾಟ್ನಾ-ವಾಸ್ಕೋ ಡ ಗಾಮಾ ಸಾಪ್ತಾಹಿಕ ಎಕ್ಸ್‌ಪ್ರೆಸ್
2. ರೈಲು ಸಂಖ್ಯೆ 11097/98 ಪುಣೆ -ಎರ್ನಾಕುಲಂ -ಪುಣೆ ಪೂರ್ಣಾ ಸಾಪ್ತಾಹಿಕ ಎಕ್ಸ್‌ಪ್ರೆಸ್
3. ರೈಲು ಸಂಖ್ಯೆ 16595/96 KSR ಬೆಂಗಳೂರು -ಕಾರವಾರ -KSR ಬೆಂಗಳೂರು ಪಂಚಗಂಗಾ ಎಕ್ಸ್‌ಪ್ರೆಸ್
4. ರೈಲು ಸಂಖ್ಯೆ 16515/16 ಯಶವಂತಪುರ - ಕಾರವಾರ - ಯಶವಂತಪುರ ಟ್ರೈ - ಸಾಪ್ತಾಹಿಕ ಎಕ್ಸ್‌ಪ್ರೆಸ್
5. ರೈಲು ಸಂಖ್ಯೆ 16585/86 SMVT ಬೆಂಗಳೂರು - ಮುರ್ಡೇಶ್ವರ - SMVT ಬೆಂಗಳೂರು ಡೈಲಿ ಎಕ್ಸ್‌ಪ್ರೆಸ್
ಸಮಯಗಳ ವಿವರ ಈ ಲಿಂಕ್‌ನಲ್ಲಿದೆ: ಪ್ರಯಾಣಿಕರು ತಮ್ಮ ಪ್ರಯಾಣವನ್ನು ಆರಂಭಿಸುವ ಮೊದಲು ಮಾನ್ಸೂನ್ ಅಲ್ಲದ ರೈಲು ಸಮಯವನ್ನು ಗಮನಿಸಲು ಕೊಂಕಣ ರೈಲ್ವೆ ಸಲಹೆ ನೀಡಿದೆ. ಈ ರೈಲುಗಳ ಮಾನ್ಸೂನ್ ಸಮಯದ ವಿವರಗಳಿಗಾಗಿ, https://swr.indianrailways.gov.in/view_detail.jsp?lang=0&id=0,4,268&dcd=7770&did=172415294788150B6C28150B6C2C262AEEF%20quiry.indianrail.gov.in. ಈ ಲಿಂಕ್ ಅನ್ನು ಕ್ಲಿಕ್ ಮಾಡಿ ಎಂದು ನೈರುತ್ಯ ರೈಲ್ವೆ ತಿಳಿಸಿದೆ. ಅಲ್ಲದೆ ಪ್ರಯಾಣಿಕರು ಈ ರೈಲಿನ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ ಅಂತಲೂ ತಿಳಿಸಿದೆ.












Click it and Unblock the Notifications