Vande Bharat: ಕಲಬುರಗಿ-ಬೆಂಗಳೂರು ರೈಲಿಗೆ ಪ್ರತಿಕ್ರಿಯೆ ಹೇಗಿದೆ?
ಬೆಂಗಳೂರು, ಮೇ 16: ಬೆಂಗಳೂರು-ಕಲಬುರಗಿ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಗೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ದರ ಹೆಚ್ಚಾಗಿದೆ ಎಂಬ ಆರೋಪದ ನಡುವೆಯೇ ರಾಜಧಾನಿ ಮತ್ತು ಕಲ್ಯಾಣ ಕರ್ನಾಟಕ ಸಂಪರ್ಕಿಸುವ ರೈಲು ಬಹುತೇಕ ಭರ್ತಿಯಾಗಿ ಸಂಚಾರ ನಡೆಸುತ್ತಿದೆ.
ಬೆಂಗಳೂರು ನಗರದ ಬೈಯಪ್ಪನಹಳ್ಳಿಯಲ್ಲಿರುವ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್-ಕಲಬುರಗಿ ನಡುವೆ ಮಾರ್ಚ್ 15ರಿಂದ ವಂದೇ ಭಾರತ್ ಕೇಸರಿ ಬಣ್ಣದ ರೈಲು ಸಂಚಾರ ಆರಂಭವಾಗಿದೆ. ವಾರದಲ್ಲಿ 6 ದಿನ ಸಂಚಾರ ನಡೆಸುವ ರೈಲು ಪ್ರಯಾಣಿಕರಿಂದ ತುಂಬುತ್ತಿದೆ.

ನೈಋತ್ಯ ರೈಲ್ವೆ ಮಾಹಿತಿ ಪ್ರಕಾರ ಮಾರ್ಚ್ 15 ರಿಂದ ಮೇ 1ರ ತನಕ ಶೇ 93.33ರಷ್ಟು ಆಸನಗಳು ಭರ್ತಿಯಾಗಿ ರೈಲು ಸಂಚಾರ ನಡೆಸುತ್ತಿದೆ. ಮೇ 7ರ ತನಕ ರೈಲು 21,016 ಜನರು ರೈಲಿನಲ್ಲಿ ಸಂಚಾರ ನಡೆಸಿದ್ದಾರೆ. ರೈಲಿನ ವೇಳಾಪಟ್ಟಿ ಬಗ್ಗೆಯೂ ಯಾವುದೇ ಅಪಸ್ವರ ಎತ್ತಿಲ್ಲ.
ಕಲ್ಯಾಣ ಕರ್ನಾಟಕಕ್ಕೆ ರೈಲು: ಲೋಕಸಭೆ ಚುನಾವಣೆ ದಿನಾಂಕ ಘೋಷಣೆಗೆ ಕೆಲವೇ ದಿನಗಳ ಮೊದಲು ಪ್ರಧಾನಿ ನರೇಂದ್ರ ಮೋದಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಸಂಪರ್ಕ ಕಲ್ಪಿಸುವ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್-ಕಲಬುರಗಿ ವಂದೇ ಭಾರತ್ ರೈಲು ಸೇವೆಗೆ ಚಾಲನೆ ನೀಡಿದ್ದರು. ನೈಋತ್ಯ ರೈಲ್ವೆ ಈ ಮಾರ್ಗದಲ್ಲಿ ಕೇಸರಿ ಬಣ್ಣದ ವಂದೇ ಭಾರತ್ ರೈಲು ಓಡಿಸುತ್ತಿದೆ.
ಕಲಬುರಗಿಯಿಂದ ಬೆಳಗ್ಗೆ 5.15ಕ್ಕೆ ಹೊರಡುವ ರೈಲು ಮಧ್ಯಾಹ್ನ 2 ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್, ಬೈಯಪ್ಪನಹಳ್ಳಿ ತಲುಪುತ್ತದೆ. ಮಧ್ಯಾಹ್ನ 2.40ಕ್ಕೆ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಹೊರಡುವ ರೈಲು ರಾತ್ರಿ 11.30ಕ್ಕೆ ಕಲಬುರಗಿ ನಿಲ್ದಾಣ ತಲುಪಲಿದೆ.
ವಂದೇ ಭಾರತ್ ರೈಲಿನಲ್ಲಿ ಚೇರ್ ಕಾರ್ (ಸಿಸಿ) ಮತ್ತು ಎಕ್ಸಿಕ್ಯುಟಿವ್ ಚೇರ್ ಕಾರ್ (ಇಸಿ) ಎಂಬ ಎರಡು ಬಗೆಯ ಸೀಟುಗಳಿವೆ. ಮಾರ್ಚ್ 15 ರಿಂದ 31ರ ತನಕ ಚೇರ್ ಕಾರ್‌ನಲ್ಲಿ 7,170 ಮತ್ತು ಎಕ್ಸಿಕ್ಯುಟಿವ್ ಕ್ಲಾಸ್‌ನಲ್ಲಿ 780 ಸೀಟುಗಳು ಭರ್ತಿಯಾಗಿವೆ.
ಏಪ್ರಿಲ್ 1 ರಿಂದ 30ರ ತನಕ ಚೇರ್ ಕಾರ್‌ನಲ್ಲಿ 12,428 ಮತ್ತು ಎಕ್ಸಿಕ್ಯುಟಿವ್ ಕ್ಲಾಸ್‌ನಲ್ಲಿ 1352 ಸೀಟುಗಳು ಭರ್ತಿಯಾಗಿವೆ. ಮೇ 1 ರಿಂದ 7ರ ತನಕ ಚೇರ್ ಕಾರ್‌ನಲ್ಲಿ 2,868 ಮತ್ತು ಎಕ್ಸಿಕ್ಯುಟಿವ್ ಕ್ಲಾಸ್‌ನಲ್ಲಿ 312 ಸೀಟುಗಳು ಭರ್ತಿಯಾಗಿವೆ. ಒಟ್ಟಾರೆ ಶೇ 93.33ರಷ್ಟು ಸೀಟುಗಳು ಭರ್ತಿಯಾಗಿ ರೈಲು ಓಡುತ್ತಿದೆ.
ಈ ರೈಲಿನ ದರ ಕೊಂಚ ಜಾಸ್ತಿ ಎಂಬ ಆರೋಪವಿದೆ. ಕಲಬುರಗಿ-ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನಡುವೆ ಚೇರ್ ಕಾರ್‌ನಲ್ಲಿ without food 1,216, with food 1,540. ಎಕ್ಸಿಕ್ಯುಟಿವ್ ಚೇರ್ ಕಾರ್ without food 2,386, with food 2,765 ರೂ. ಗಳ ದರವಿದೆ.
ವಂದೇ ಭಾರತ್ ರೈಲು ಮೂಲಕ ಬೆಂಗಳೂರಿಗೆ ಹೋಗಿ ಬರುವುದು ಸುಲಭವಾದ ಕಾರಣ ಹೆಚ್ಚು ಜನರು ಈ ರೈಲಿನಲ್ಲಿ ಸಂಚಾರ ನಡೆಸುತ್ತಿದ್ದಾರೆ. ಬಸ್ ಪ್ರಯಾಣಕ್ಕೆ ಹೋಲಿಕೆ ಮಾಡಿದರೆ ಎಸಿ ಕೋಚ್‌ಗಳಲ್ಲಿ ಅರಾಮವಾಗಿ ಸಂಚಾರ ನಡೆಸಬಹುದು, ತಳ್ಳಾಟ, ನೂಕಾಟ ಇರುವುದಿಲ್ಲ. ಆದ್ದರಿಂದ ಜನರು ರೈಲು ಸೇವೆ ಇಷ್ಟಪಟ್ಟಿದ್ದಾರೆ.
ರೈಲಿಗೆ ರಾಯಚೂರು, ಮಂತ್ರಾಲಯ ರಸ್ತೆ, ಗುಂತಕಲ್, ಅನಂತಪುರ ಮತ್ತು ಯಲಹಂಕದಲ್ಲಿ ನಿಲುಗಡೆ ಇದೆ. ಯಾದಗಿರಿಯಲ್ಲಿ ನಿಲುಗಡೆ ನೀಡಲು ಒಪ್ಪಿಗೆ ನೀಡಲಾಗಿದೆ. ಆದರೆ ರೈಲು ಇನ್ನು ನಿಲ್ಲುತ್ತಿಲ್ಲ ಎಂದು ಜನರು ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
-
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
SWR: ಪ್ರಶಾಂತಿ ಎಕ್ಸ್‌ಪ್ರೆಸ್ ರೈಲಿಗೆ ಹೆಚ್ಚುವರಿ ಬೋಗಿ: ರೈಲುಗಳ ನಿಲುಗಡೆಯಲ್ಲಿ ಬದಲಾವಣೆ -
SWR: ಏಪ್ರಿಲ್ 2-5 ಬೆಂಗಳೂರು, ಹುಬ್ಬಳ್ಳಿಯಿಂದ ವಿಶೇಷ ಎಕ್ಸ್‌ಪ್ರೆಸ್ ರೈಲು ಕಾರ್ಯಾಚರಣೆ, ವೇಳಾಪಟ್ಟಿ -
Hindi Language: ಹಿಂದಿ ಭಾಷೆ ರದ್ದು, ಎಸ್ಎಸ್ಎಲ್ಸಿ ಮಕ್ಕಳ ಬದುಕಿಗೆ ಕಲ್ಲು:ಆರ್ ಅಶೋಕ್ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ












Click it and Unblock the Notifications