Day Outing in Bengaluru: ಮನಸ್ಸಿಗೆ ಬೇಸರ ಆದಾಗ ಬೆಂಗಳೂರಿನ ಈ ಸ್ಥಳಗಳಿಗೆ ಭೇಟಿ ನೀಡಿ
ಮನಸ್ಸಿಗೆ ಬೇಸರ ಆಗಿದಿಯಾ? ಕೆಲಸದ ಒತ್ತಡ ಇದಿಯಾ? ಎಷ್ಟೇ ಪ್ರಯತ್ನ ಪಟ್ಟರು ನೀವಂದುಕೊಂಡ ಕೆಲಸ ಆಗುತ್ತಿಲ್ವಾ? ಬೆಳಿಗ್ಗೆಯಿಂದ ರಾತ್ರಿವರೆಗೂ ಕೆಲಸ ಮಾಡಿದ್ರೂ ತೃಪ್ತಿ ಸಿಗ್ತಿಲ್ವಾ? ಹೀಗಾಗುತ್ತಿದ್ದರೆ ನಿಮಗೊಂದು ಚೂರು ವಿರಾಮ ಬೇಕು ಎಂದು ಅರ್ಥ. ಅದಕ್ಕೆ ನೀವು ನಿಮಗಾಗಿ ಸ್ವಲ್ಪ ಸಮಯ ಮೀಸಲಿಡಬೇಕು. ಇದಕ್ಕಾಗಿ ಬೆಂಗಳೂರಿನಲ್ಲಿ ಸ್ಥಳಗಳಿವೆ. ಅವುಗಳ ಬಗ್ಗೆ ಮಾಹಿತಿ ಇಲ್ಲಿದೆ.
ಹೌದು.... ವಿರಾಮ ಇಲ್ಲದೆ ನೀವು ಕೆಲಸ ಮಾಡುತ್ತಿದ್ದರೆ, ಸ್ವಲ್ಪ ನಿಮಗಾಗಿ ನೀವು ಯೋಚನೆ ಮಾಡಿ. ನಿಮ್ಮ ದೇಹಕ್ಕೂ ವಿರಾಮ ವಿಶ್ರಾಂತಿ ಬೇಕು. ನಿಮ್ಮ ಮನಸ್ಸಿಗೆ ಹಿತವಾಗಬೇಕು. ನಿಮ್ಮ ಮೈಂಡ್ ಫ್ರೀ ಆಗ್ಬೇಕು. ಇದಕ್ಕಾಗಿ ನೀವು ಒಂದೊಳ್ಳೆ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಿ. ಹಾಗಾದರೆ ಅಂತಹ ಸ್ಥಳಗಳು ಯಾವವು? ನೀವು ನಿಮ್ಮ ಬಿಡುವಿಲ್ಲದ ಜಗತ್ತಿನಿಂದ ಹೊರಬರಲು ಇರುವ ಬೆಂಗಳೂರಿನ ಕೆಲ ಸ್ಥಳಗಳ ಬಗ್ಗೆ ಮಾಹಿತಿ ತಿಳಿಯೋಣ.
ಬೆಂಗಳೂರಿನಿಂದ ಕೆಲ ಕಿ.ಮೀ ದೂರದಲ್ಲಿ ಪ್ರಕೃತಿ ಮಡಲಲ್ಲಿ ಕೆಲ ರೆಸಾರ್ಟ್ಗಳು ಇವೆ. ಇಲ್ಲಿ ಕ್ರಿಕೆಟ್, ಫುಟ್‌ಬಾಲ್, ಟೇಬಲ್ ಟೆನ್ನಿಸ್, ವಾಲಿಬಾಲ್‌ನಂತಹ ವಿವಿಧ ಒಳಾಂಗಣ-ಹೊರಾಂಗಣ ಆಟಗಳನ್ನು ಆಡುತ್ತಾ ನೀವು ಸಮಯ ಕಳೆಯಬಹುದು. ಅಲ್ಲದೆ ನೀವು ಸ್ನೇಹಿತರು, ಸಹೋದ್ಯೋಗಿಗಳು, ಕುಟುಂಬಸ್ಥರೊಂದಿಗೆ ಇಲ್ಲಿಗೆ ಭೇಟಿ ನೀಡಬಹುದು. ರಜೆ ದಿನಗಳನ್ನು ಎಂಜಾಯ್ ಮಾಡಬಹುದು.

1. ಏರಿಯಾ 83 ರೆಸಾರ್ಟ್ ಡೇ ಔಟ್, ಬೆಂಗಳೂರು (Area 83 Resort Day Out, Bangalore)
ಏರಿಯಾ 83 ರೆಸಾರ್ಟ್ ಇದು ಬೆಂಗಳೂರಿನಿಂದ ಬನ್ನೇರುಘಟ್ಟ ರಸ್ತೆಯ 20 ಕಿ.ಮೀ ದೂರದಲ್ಲಿರುವ ಬಿಲ್ವಾರದ ಹಳ್ಳಿಯಲ್ಲಿದೆ (Bilwaradahalli). ಇಲ್ಲಿಗೆ ತಲುಪಲು 1 ಗಂಟೆ ಸಮಯ ಬೇಕಾಗುತ್ತದೆ. ಬೆಳಿಗ್ಗೆ 10:00 ರಿಂದ ಸಂಜೆ 6:00ಯವರೆಗೂ ಇಲ್ಲಿ ಸಮಯ ಕಳೆಯಬಹುದು.
ಏರಿಯಾ 83 ರೆಸಾರ್ಟ್ ಡೇ ಔಟ್:-
*ಡೇ ಔಟ್ ಸಮಯ: 10:00 AM ರಿಂದ 6:00 PM
*ಪ್ರವೇಶ ಸಮಯ: 9:30 AM - 10:00 AM
*ಈಜುಕೊಳದ ಸಮಯ: 11:00 AM ರಿಂದ 4:00 PM
*ಸ್ಥಳ: ಬಿಲ್ವಾರದಹಳ್ಳಿ, ಬೆಂಗಳೂರು
ಇಲ್ಲಿ ನೀವು ರಿವರ್ ರ್ಯಾಫ್ಟಿಂಗ್ ಮಾಡುವ ಮೂಲಕ ಬಿಡುವಿನ ಸಮಯವನ್ನು ಸ್ಮರಣೀಯವಾಗಿಸಬಹುದು. ಬಬಲ್ ಸಾಕರ್ (Bubble Soccer), ಕಯಾಕಿಂಗ್ (kayaking), ಹ್ಯೂಮನ್ ಫೂಸ್‌ಬಾಲ್‌ನಂತಹ (human foosball) ಕೆಲವು ಮೋಜಿನ ಚಟುವಟಿಕೆಗಳಲ್ಲಿ ಭಾಗಿಯಾಗಬಹುದು. ಇಷ್ಟು ಮಾತ್ರವಲ್ಲದೆ ರೆಸಾರ್ಟ್‌ನ ಈಜುಕೊಳದಲ್ಲಿ ಉಲ್ಲಾಸಕರ ಸಮಯವನ್ನು ಆನಂದಿಸಿ ಮತ್ತು ವೈವಿಧ್ಯಮಯ ಈಜುಕೊಳದ ಆಟವನ್ನು ಆಡಬಹುದು.
ಶಾಂತಿಯುತ ಪ್ರಕೃತಿಯ ನಡುವೆ ನೆಲೆಗೊಂಡಿರುವ ಏರಿಯಾ 83 ಒಂದು ಅದ್ಭುತ ರೆಸಾರ್ಟ್ ಆಗಿದ್ದು ಇದು ನಿಮಗೆ ಮತ್ತು ನಿಮ್ಮ ಪ್ರೀತಿಪಾತ್ರರಿಗೆ ಸೂಕ್ತ ವಿಹಾರ ತಾಣವಾಗಿದೆ. ದೈನಂದಿನ ದಿನಚರಿಗಳಿಂದ ವಿರಾಮ ತೆಗೆದುಕೊಳ್ಳಲು ಮತ್ತು ನಿಮ್ಮ ದಿನವನ್ನು ಆನಂದಿಸಲು ಇದೊಂದು ಉತ್ತಮ ಸ್ಥಳವಾಗಿದೆ.

2. ಗುಹಾಂತರ ರೆಸಾರ್ಟ್ ಬೆಂಗಳೂರು ಡೇ ಔಟ್ (Guhantara Resort Bangalore Day Out)
ಭಾರತದ ಮೊದಲ ಮಾನವ ನಿರ್ಮಿತ ಭೂಗತ ಗುಹೆ ರೆಸಾರ್ಟ್ ಬೆಂಗಳೂರಿನ ಗುಹಾಂತರಾ ರೆಸಾರ್ಟ್ ಆಗಿದೆ. ಇಲ್ಲಿ ಕ್ವಾಡ್ ಬೈಕಿಂಗ್, ಜಿಪ್-ಲೈನ್, ಪೇಂಟ್‌ಬಾಲ್ ಮತ್ತು ಬಂಗಿ ಟ್ರ್ಯಾಂಪೊಲಿನ್ ಸೇರಿದಂತೆ 10+ ರೋಮಾಂಚಕ ಚಟುವಟಿಕೆಗಳಲ್ಲಿ ಭಾಗವಹಿಸಬಹುದು. ಅಲ್ಲದೆ ಇಲ್ಲಿ ಡಿಸ್ಕೋ-ರೈನ್ ಡ್ಯಾನ್ಸ್ ಇರುತ್ತದೆ.
ಬಂಡೆಯ ಒಳಗೆ ರೇನ್ ಡ್ಯಾನ್ಸ್ ನಡೆಯಲಿದೆ. ಇಲ್ಲಿಗೆ ಭೇಟಿ ನೀಡುವವರಿಗೆ ಇದೊಂದು ಅದ್ಭುತ ಅನುಭವ. ಬಂಡೆಯ ಒಳಗೆ ಐತಿಹಾಸಿಕ ವಾಸ್ತುಶಿಲ್ಪಗಳನ್ನು ಕೆತ್ತಲಾಗಿದೆ. ಇದರ ಒಳಗೆ ಹೋಗುವ ಅನುಭವ ಅದ್ಬುತವಾಗಿರುತ್ತದೆ. ಇಲ್ಲಿ ಕಾರ್ಪೊರೇಟ್ ಈವೆಂಟ್‌ಗಳನ್ನು ಸಹ ಆಯೋಜಿಸಬಹುದು.

ಗುಹಾಂತರ ರೆಸಾರ್ಟ್ ಬೆಂಗಳೂರು ಡೇ ಔಟ್
*ಅವಧಿ: ಆಯ್ಕೆಮಾಡಿದ ಪ್ಯಾಕೇಜ್ ಅನ್ನು ಅವಲಂಬಿಸಿರುತ್ತದೆ
*ಕಾರ್ಯಾಚರಣೆಯ ಸಮಯ: 9:00 AM ರಿಂದ 10:00 PM
* ಸ್ಥಳ: ಗುಹಾಂತರ ರೆಸಾರ್ಟ್, ಕನಕಪುರ ಮುಖ್ಯ ರಸ್ತೆ, ದಕ್ಷಿಣ, ತಾಲೂಕು, ಬೆಂಗಳೂರು
ಇಲ್ಲಿ 2 ಡೇ ಔಟ್ ಪ್ಯಾಕೇಜ್‌ಗಳು, 2 ಫುಲ್ ಡೇ ಔಟ್ ಪ್ಯಾಕೇಜ್‌ಗಳು, 1 ಡಿನ್ನರ್ ಪ್ಯಾಕೇಜ್ ಅನ್ನು ನೀವು ಪಡೆಯಬಹುದು. ಬೆಳಿಗ್ಗೆ 9:00ಕ್ಕೆ ನೀವು ಕರ್ನಾಟಕದ ಹಚ್ಚ ಹಸಿರಿನ ನಡುವೆ ಇರುವ ಈ ಅನನ್ಯ ರೆಸಾರ್ಟ್‌ನಲ್ಲಿ ಚೆಕ್ ಇನ್ ಮಾಡಬಹುದು.
ಬೆಳಗಿನ ಉಪಾಹಾರದ ಜೊತೆಗೆ ಶಾಂತಿಯುತ ವಾತಾವರಣದಲ್ಲಿ ಬೆಳಿಗ್ಗೆ 10:00 AM ರಿಂದ 1:00 PM ವರೆಗೆ ಕುದುರೆ ಸವಾರಿ, ಜಿಪ್-ಲೈನಿಂಗ್, ಬಂಗೀ ಟ್ರ್ಯಾಂಪೊಲೈನ್ ಮತ್ತು ಇನ್ನೂ ಅನೇಕ ಸಾಹಸಮಯ ಹೊರಾಂಗಣ ಚಟುವಟಿಕೆಗಳಲ್ಲಿ ಭಾಗವಹಿಸಬಹುದು. ಈ ಚಟುವಟಿಕೆಗಳ ನಂತರ ಮಧ್ಯಾಹ್ನ 1:00 ಗಂಟೆಗೆ ರುಚಿಕರವಾದ ಊಟವನ್ನು ಮಾಡಿ.
ಬಳಿಕ ಈಜುಕೊಳದಲ್ಲಿ ಡೈವ್ ಮಾಡಿ ಶಾಂತಿಯುತ ವಾತಾವರಣದ ನಡುವೆ ವಿಶ್ರಾಂತಿ ಪಡೆಯಬಹುದು. ಕೆಲವು ನೀರಿನ ಚಟುವಟಿಕೆಗಳು ಸೇರಿದಂತೆ ಡಿಸ್ಕೋಥೆಕ್‌ನಲ್ಲಿ ಸಂಗೀತವನ್ನು ಆನಂದಿಸಿ. ಸಂಜೆ 4:00 ಗಂಟೆಗೆ, ಹೈ-ಟೀ ಸೆಷನ್ ಇರುತ್ತದೆ.
ಟೀ ಕಾಫಿ ಕುಡಿಯುತ್ತಾ ಹಚ್ಚ ಹಸಿರು ವಾತಾವರಣದಲ್ಲಿ ನೀವು ನಿಮ್ಮ ಸಹಚರರೊಂದಿಗೆ ಸಂಜೆ ಸಮಯ ಕಳೆಯಬಹುದು. ಈ ಸಣ್ಣ ಚಹಾ ವಿರಾಮದ ನಂತರ 4:30 PM ಒಳಾಂಗಣ/ಹೊರಾಂಗಣ ಕ್ರೀಡೆಯಲ್ಲಿ ಭಾಗವಹಿಸಿ ನಂತರ ನೀವು ಮನೆಗೆ ಹಿಂತಿರುಗಬಹುದು.
ನೀವು ಭೋಜನದ ಪ್ಯಾಕೇಜ್ ಅನ್ನು ಆರಿಸಿದರೆ, ಸೌಲಭ್ಯಗಳನ್ನು ಆನಂದಿಸಲು ಮತ್ತು ಭೋಜನವನ್ನು ಪಡೆದುಕೊಳ್ಳಲು ನಿಮಗೆ ಇನ್ನೂ ಸ್ವಲ್ಪ ಸಮಯವಿರುತ್ತದೆ.

ತಲುಪುವುದು ಹೇಗೆ?
ಗುಹಾಂತರ ರೆಸಾರ್ಟ್ ಬೆಂಗಳೂರಿನಿಂದ ಕನಕಪುರ ರಸ್ತೆಯ ಮೂಲಕ 27 ಕಿಮೀ ದೂರದಲ್ಲಿದೆ. ಖಾಸಗಿ ಮತ್ತು ಸಾರ್ವಜನಿಕ ಸಾರಿಗೆಯ ಸಹಾಯದಿಂದ ನೀವು ಸುಲಭವಾಗಿ ತಲುಪಬಹುದು.
ಹತ್ತಿರದ ರೈಲು ನಿಲ್ದಾಣ: ಕೆಎಸ್‌ಆರ್ ಬೆಂಗಳೂರು ಸಿಟಿ ಜಂಕ್ಷನ್‌ನಿಂದ 32.4 ಕಿಮೀ ದೂರದಲ್ಲಿದೆ ಮತ್ತು ಕಾರು/ಕ್ಯಾಬ್ ಮೂಲಕ ಸರಿಸುಮಾರು 1 ಗಂಟೆ 5 ನಿಮಿಷಗಳಲ್ಲಿ ತಲುಪಬಹುದು.
ಹತ್ತಿರದ ವಿಮಾನ ನಿಲ್ದಾಣ: ಬೆಂಗಳೂರು ವಿಮಾನ ನಿಲ್ದಾಣದಿಂದ 68 ಕಿಮೀ ದೂರ ಮತ್ತು ಕಾರು/ಕ್ಯಾಬ್ ಮೂಲಕ ಸುಮಾರು 1 ಗಂಟೆ 52 ನಿಮಿಷಗಳಲ್ಲಿ ತಲುಪಬಹುದು.

3. ಜೈನ್ ಫಾರ್ಮ್ಸ್ ಬೆಂಗಳೂರು ಡೇ ಔಟ್ (Jain Farms Bangalore Day Out)
ಜೈನ್ ಫಾರ್ಮ್ಸ್ ಹಳ್ಳಿ ಸೊಗಡಿನ ರೆಸಾರ್ಟ್ ಆಗಿದೆ. ಹಳ್ಳಿ ಪರಿಸರದಲ್ಲಿ ನೀವು ನಿಮ್ಮ ಪ್ರೀತಿ ಪಾತ್ರರೊಂದಿಗೆ ಸಮಯ ಕಳಿಯುವುದಲ್ಲಿದೆ ಜೊತೆಗೆ ವಿಶ್ರಾಂತಿ ಕೂಡ ಪಡೆಯಬಹುದು. ಇಲ್ಲಿ ಕಾರ್ಟ್ ರೈಡ್‌ಗಳು, ಕುಂಬಾರಿಕೆ ತಯಾರಿಕೆ ಮತ್ತು ಬಿಲ್ಲುಗಾರಿಕೆಯಂತಹ ಚಟುವಟಿಕೆಗಳಲ್ಲಿ ಭಾಗವಹಿಸಬಹುದು.
ಮ್ಯಾಜಿಕ್ ಶೋಗಳಂತಹ ವಿಸ್ಮಯಕಾರಿ ಲೈವ್ ಮನರಂಜನಾ ಈವೆಂಟ್‌ಗಳು ನಡೆಯುತ್ತವೆ. ನೀವು ರೆಸಾರ್ಟ್‌ನಲ್ಲಿರುವ ಸಮಯದಲ್ಲಿ ರುಚಿಕರವಾದ ಸಸ್ಯಾಹಾರಿ ಊಟ, ಸಂಜೆಗೆ ಬಜ್ಜಿ ಬೋಂಡಾ ಹೀಗೆ ರುಚಿಕರವಾದ ತಿಂಡಿಗಳು ಮತ್ತು ಕಾಫಿ-ಟೀ ಸೇವಿಸಬಹುದು.
ಜೈನ್ ಫಾರ್ಮ್ಸ್ ಬೆಂಗಳೂರು ಡೇ ಔಟ್:-
*ಚಟುವಟಿಕೆ ಸಮಯಗಳು: 10:00 AM - 5:00 PM (ಶನಿವಾರ ಮತ್ತು ಭಾನುವಾರ ಮಾತ್ರ) (ಆಯ್ದ ಪ್ಯಾಕೇಜ್ ಪ್ರಕಾರ)
*ಚಟುವಟಿಕೆ ಅವಧಿ: 7 ಗಂಟೆಗಳು (ಅಂದಾಜು.)
*ಸ್ಥಳ: ಬಾಗಲೂರು, ಮಾಲೂರು ರಸ್ತೆ (ಹೊಸೂರು)
ನೈಸರ್ಗಿಕ ಸೌಂದರ್ಯದ ನಡುವೆ ನೆಲೆಗೊಂಡಿರುವ ಜೈನ್ ಫಾರ್ಮ್ಸ್ ಬೆಂಗಳೂರು ನಗರದಲ್ಲಿರುವ ಅತ್ಯಂತ ಪ್ರಶಾಂತವಾದ ರೆಸಾರ್ಟ್‌ಗಳಲ್ಲಿ ಒಂದಾಗಿದೆ. 700 ಎಕರೆಗಳಷ್ಟು ವಿಸ್ತಾರವಾಗಿರುವ ವಿಶಾಲವಾದ ಮತ್ತು ಸುಂದರವಾದ ರೆಸಾರ್ಟ್ ಇದಾಗಿದ್ದು ನೀವು ಫೈರ್ ಆಕ್ಟ್, ಜ್ಯೋತಿಷ್ಯ, ಮೆಹೆಂದಿ, ಮ್ಯಾಜಿಕ್ ಶೋ, ಮಡಿಕೆ ತಯಾರಿಕೆ ಮತ್ತು ಎತ್ತಿನ ಬಂಡಿ ಸವಾರಿಯಂತಹ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಬಹುದು.
ಇದು ಹಳ್ಳಿಗಾಡಿನ ಹಳ್ಳಿಯ ಭಾವನೆಯನ್ನು ನೀಡುತ್ತದೆ. ಆದ್ದರಿಂದ ನಿಮ್ಮ ವಾರಾಂತ್ಯದ ಪ್ರವಾಸವನ್ನು ನೀವು ಇಲ್ಲಿ ಯೋಜಿಸಬಹುದು.

ತಲುಪುವುದು ಹೇಗೆ?
ರೆಸಾರ್ಟ್ ಬೆಂಗಳೂರಿನಿಂದ 6 ಕಿಮೀ ದೂರದಲ್ಲಿದೆ. ಸಾರ್ವಜನಿಕ ಅಥವಾ ಖಾಸಗಿ ಸಾರಿಗೆಯ ಮೂಲಕ ಸುಲಭವಾಗಿ ಈ ಸ್ಥಳವನ್ನು ತಲುಪಬಹುದು.
ಹತ್ತಿರದ ರೈಲು ನಿಲ್ದಾಣ: ಕೆಎಸ್‌ಆರ್ ಬೆಂಗಳೂರು ಸಿಟಿ ಜಂಕ್ಷನ್‌ನಿಂದ 5.8 ಕಿಮೀ ದೂರದಲ್ಲಿದೆ ಮತ್ತು ಕಾರು/ಕ್ಯಾಬ್ ಮೂಲಕ ಸುಮಾರು 25 ನಿಮಿಷಗಳಲ್ಲಿ ತಲುಪಬಹುದು.
ಹತ್ತಿರದ ವಿಮಾನ ನಿಲ್ದಾಣ: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರಿನಿಂದ 38.3 ಕಿಮೀ ದೂರ ಮತ್ತು ಕಾರು/ಕ್ಯಾಬ್ ಮೂಲಕ ಸರಿಸುಮಾರು 1 ಗಂಟೆ 16 ನಿಮಿಷಗಳಲ್ಲಿ ತಲುಪಬಹುದು.
-
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ -
Railway Food: ರೈಲು ಪ್ರಯಾಣಿಕರ ಬಳಿ ಬರುತ್ತೆ ಆಹಾರ: ರೈಲ್ವೆ ಇಲಾಖೆಗೆ ಕಂಪನಿಗಳ ಸಾಥ್ -
ಭಾರತೀಯ ರೈಲ್ವೆಯ ಹೊಸ ಹೆಜ್ಜೆ: 12 ಸ್ಲೀಪರ್ ವಂದೇ ಭಾರತ್ ರೈಲುಗಳ ಪರಿಚಯ, ಎಲ್ಲೆಲ್ಲಿ-ಯಾವಾಗ? -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ












Click it and Unblock the Notifications