Bengaluru-Belagavi Express Train: ಸೂಪರ್‌ ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲಿನ ಸಮಯ ಬದಲಾವಣೆ -ಮಾಹಿತಿ

ಬೆಳಗಾವಿ, ನವೆಂಬರ್, 23: ಹಳಿ ಕಮಗಾರಿ ಸೇರಿದಂತೆ ಇನ್ನಿತರ ಕಾಮಗಾರಿ ಇದ್ದಾಗ ರೈಲ್ವೆಯು ಮುಂಜಾಗ್ರತಾ ಕ್ರಮವಾಗಿ ಕೆಲವು ಮಾರ್ಗಗಳಲ್ಲಿ ರೈಲುಗಳ ಸೇವೆಗಳ ಸಮಯವನ್ನು ಬದಲಾವಣೆ ಅಥವಾ ವಿಸ್ತರಣೆ ಮಾಡಿ ಆದೇಶ ಹೊರಡಿಸಿರುವ ಉದಾಹರಣೆಗಳು ಇವೆ. ಹಾಗೆಯೇ ಇದೀಗ ಬೆಂಗಳೂರು - ಬೆಳಗಾವಿ ಸೂಪರ್‌ ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲಿನ ಸಮಯ ಬದಲಾವಣೆ ಮಾಡಿ ನೈಋುತ್ಯ ರೈಲ್ವೇ ಇಲಾಖೆ ಆದೇಶ ಹೊರಡಿಸಿದೆ.

ಪ್ರತಿ ದಿನ ಬೆಳಗ್ಗೆ 8 ಗಂಟೆಗೆ ಬೆಳಗಾವಿ ರೈಲ್ವೇ ನಿಲ್ದಾಣಕ್ಕೆ ಬರುತ್ತಿದ್ದ ರೈಲು ಇನ್ಮುಂದೆ ಬೆಳಗ್ಗೆ 6:45ಕ್ಕೆ ಆಗಮಿಸಲಿದೆ. ಮೊದಲಿನ ವೇಳಾಪಟ್ಟಿ ಪ್ರಕಾರ ಬೆಂಗಳೂರು- ಬೆಳಗಾವಿ ಸೂಪರ್‌ ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲು ಪ್ರತಿ ರಾತ್ರಿ 9 ಗಂಟೆಗೆ ಬೆಂಗಳೂರು ನಿಲ್ದಾಣದಿಂದ ಹೊರಟು ಮಾರನೇ ದಿನ ಬೆಳಗ್ಗೆ 7:35ಕ್ಕೆ ಬೆಳಗಾವಿ ರೈಲ್ವೆ ನಿಲ್ದಾಣಕ್ಕೆ ತಲುಪುತ್ತಿತ್ತು. ಆದರೆ ಅಕ್ಟೋಬರ್‌ ತಿಂಗಳನಿಂದ ರೈಲು ಬೆಂಗಳೂರಿನಿಂದ ರಾತ್ರಿ 9 ಗಂಟೆಗೆ ಹೊರಟರೂ ಹುಬ್ಬಳ್ಳಿ ನಿಲ್ದಾಣದಲ್ಲಿ 1 ಗಂಟೆ ಕಾಲ ನಿಲುಗಡೆ ಆಗುತ್ತಿತ್ತು.

Bengaluru-Belagavi Super Fast Express Train Timings Change, know details

ಇದರಿಂದ ರೈಲು ಬೆಳಗಾವಿಗೆ ಆಗಮಿಸಲು ಬೆಳಗ್ಗೆ 8 ಗಂಟೆ ಆಗುತ್ತಿತ್ತು. ಆದ್ದರಿಂದ ಬೆಂಗಳೂರು- ಬೆಳಗಾವಿ ರೈಲಿನ ಹಿಂದೆ ಬರುವ ಲೋಂಡಾ-ಮಿರಜ್‌ ಎಕ್ಸ್‌ಪ್ರೆಸ್‌ ರೈಲು ಕೂಡ ವಿಳಂಬ ಆಗುತ್ತಿದ್ದರಿಂದ ಬೆಳಗಾವಿಯ ಪ್ರಯಾಣಿಕರು ತೊಂದರೆ ಅನುಭವಿಸುವಂತೆ ಆಗಿತ್ತು.

ಹೀಗೆಯೇ ಅರಸೀಕೆರೆ, ದಾವಣಗೆರೆ ಸೇರಿದಂತೆ ಮಾರ್ಗ ಮಧ್ಯದ ವಿವಿಧ ನಿಲ್ದಾಣಗಳಿಗೆ ಮೊದಲಿಗಿಂತಲೂ ಮುಂಚಿತವಾಗಿ ತಲುಪಿ ಬೆಳಗಿನ ಜಾವ 3:35ಕ್ಕೆ ಹುಬ್ಬಳ್ಳಿ ನಿಲ್ದಾಣ ಆಗಮಿಸಲಿದೆ. ಹುಬ್ಬಳ್ಳಿಯಿಂದ 3:45ಕ್ಕೆ ಹೊರಟು ಬೆಳಗ್ಗೆ 6:45ಕ್ಕೆ ಬೆಳಗಾವಿ ನಿಲ್ದಾಣಕ್ಕೆ ಆಗಮಿಸಲಿದೆ ಎಂದು ನೈಋುತ್ಯ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಾಯೋಗಿಕ ಸಂಚಾರ ಪ್ರಾರಂಭ

ಅತ್ಯಂತ ಕಡಿಮೆ ಅವಧಿಯಲ್ಲಿ ಜನಪ್ರಿಯತೆಯನ್ನು ಪಡೆದ ವಂದೇ ಭಾರತ್‌ ರೈಲು ಸೇವೆಯನ್ನು ಈಗ ಬೆಳಗಾವಿಗೂ ವಿಸ್ತರಿಸಲು ಚಿಂತನೆ ನಡೆದಿದ್ದು, ಪೂರ್ವ ತಯಾರಿಯೂ ಕೂಡ ನಡೆದಿತ್ತು. ಇದೀಗ ಬೆಂಗಳೂರು-ಬೆಳಗಾವಿ ಮಧ್ಯೆ ವಂದೇ ಭಾರತ್‌ ಇಂಟರ್‌ಸಿಟಿ ಸೆಮಿ ಹೈಸ್ಪೀಡ್‌ ರೈಲು (ನವೆಂಬರ್‌ 21) ಪ್ರಾಯೋಗಿಕ ಸಂಚಾರ ಪ್ರಾರಂಭಿಸಿದೆ.

ಈ ಬೆಂಗಳೂರು-ಬೆಳಗಾವಿ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಪ್ರಾಯೋಗಿಕ ಚಾಲನೆ ಇಂದಿನಿಂದ ಆರಂಭವಾಗಿದ್ದು, ಚೆನ್ನೈನಿಂದ 8 ಬೋಗಿಗಳ ರೈಲು ಸೆಟ್ ಅನ್ನು ಸೇವೆಗೆ ನಿಯೋಜನೆ ಮಾಡಲಾಗಿದೆ.

ಸೋಮವಾರ ಸಂಜೆ ಈ ವಂದೇ ಭಾರತ್ ವಿಶೇಷ ರೈಲು (ಸಂಖ್ಯೆ 06031) ಚೆನ್ನೈನಿಂದ ಹೊರಟು ರಾತ್ರಿ 10 ಗಂಟೆ ಸುಮಾರಿಗೆ ಎಸ್‌ಎಂವಿಟಿ ಬೆಂಗಳೂರಿಗೆ ಆಗಮಿಸಿತು.

ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ರೈಲು ಓಡಿಸಲಾಗುತ್ತಿದೆ ಎಂದು ದಕ್ಷಿಣ ರೈಲ್ವೆ ತಿಳಿಸಿದರೆ, ಮಂಗಳವಾರ ಹುಬ್ಬಳ್ಳಿ-ಧಾರವಾಡ ಮೂಲಕ ಕೆಎಸ್‌ಆರ್ ಬೆಂಗಳೂರು ಮತ್ತು ಬೆಳಗಾವಿ ನಡುವೆ ಪ್ರಾಯೋಗಿಕ ಸಂಚಾರಕ್ಕೆ ನಿಯೋಜಿಸಲು ಉದ್ದೇಶಿಸಲಾಗಿತ್ತು. ಬೆಂಗಳೂರಿನ ಹೆಚ್ಚುವರಿ ವಿಭಾಗೀಯ ರೈಲ್ವೇ ಮ್ಯಾನೇಜರ್ ಕುಸುಮಾ ಹರಿಪ್ರಸಾದ್ ಅವರು ಚೆನ್ನೈನಿಂದ ರೈಲು ಸೆಟ್ ಅನ್ನು ಪ್ರಾಯೋಗಿಕ ಚಾಲನೆಯಲ್ಲಿ ಓಡಿಸಲಾಗುವುದು ಎಂದು ತಿಳಿಸಿದ್ದರು.

ಈ ರೈಲು ಕೆಎಸ್‌ಆರ್ ಬೆಂಗಳೂರಿನಿಂದ ಬೆಳಗ್ಗೆ 5:45ಕ್ಕೆ ಹೊರಟು ಮಧ್ಯಾಹ್ನ 1:30ಕ್ಕೆ ಬೆಳಗಾವಿ ತಲುಪುತ್ತದೆ. ಹಾಗೂ ಅದು ಬೆಳಗಾವಿಯಿಂದ ಮಧ್ಯಾಹ್ನ 2 ಗಂಟೆಗೆ ಹೊರಟು ರಾತ್ರಿ 10:10ಕ್ಕೆ ಕೆಎಸ್‌ಆರ್ ಬೆಂಗಳೂರಿಗೆ ಆಗಮಿಸಲಿದೆ. ನಂತರ ಯಶವಂತಪುರದಿಂದ ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್‌ಗೆ ರಾತ್ರಿಯ ವಂದೇ ಭಾರತ್ ವಿಶೇಷ ರೈಲು ಸೆಟ್ ಅನ್ನು ಓಡಿಸಲಾಗುವುದು. ಮಂಗಳವಾರ ರಾತ್ರಿ 11 ಗಂಟೆಗೆ ಯಶವಂತಪುರದಿಂದ ಹೊರಟು ಬುಧವಾರ ಬೆಳಗ್ಗೆ 4:30ಕ್ಕೆ ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ ತಲುಪಲಿದೆ.

ವಂದೇ ಭಾರತ್ ಎಕ್ಸ್‌ಪ್ರೆಸ್ ಕೆಎಸ್‌ಆರ್ ಬೆಂಗಳೂರಿನಿಂದ ಬೆಳಗಾವಿಗೆ 7 ಗಂಟೆ 45 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ (610.6 ಕಿಲೋ ಮೀಟರ್‌). ಪ್ರಸ್ತುತ ವೇಗದ ರೈಲಿಗಿಂತ ಎರಡು ಗಂಟೆಗಳಿಗಿಂತ ಹೆಚ್ಚು ವೇಗ ಆಗಿರುತ್ತದೆ. ಹಿಂತಿರುಗುವ ದಿಕ್ಕಿನಲ್ಲಿ, ಇದು 8 ಗಂಟೆ 10 ನಿಮಿಷಗಳಲ್ಲಿ ಅದೇ ದೂರವನ್ನು ಕ್ರಮಿಸುತ್ತದೆ.

ದರಗಳ ವಿವರ ಹೀಗಿದೆ

ಕೆಎಸ್‌ಆರ್ ಬೆಂಗಳೂರು ಮತ್ತು ಬೆಳಗಾವಿ ನಡುವಿನ ಚೇರ್ ಕಾರ್ ದರವು ಸುಮಾರು 1,500 ರೂಪಾಯಿ ಆಗಿರಬಹುದು ಮತ್ತು ಕಾರ್ಯನಿರ್ವಾಹಕ ವರ್ಗದ ದರವು ಸುಮಾರು 3,000 ರೂಪಾಯಿ ಆಗಿರುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+