ಕೊಡಗಿನ ಜಲಪಾತಗಳತ್ತ ತೆರಳುವ ಮುನ್ನ ಎಚ್ಚರವಿರಲಿ: ಯಾಕೆ ಗೊತ್ತಾ?
ಮಡಿಕೇರಿ, ಜೂನ್ 19: ಕೊಡಗಿನಲ್ಲಿ ನಿಧಾನವಾಗಿ ಮುಂಗಾರು ಆರಂಭವಾಗಿದ್ದು, ಅಷ್ಟೇನು ರಭಸವಿಲ್ಲದೆ ಮಳೆ ಸುರಿಯುತ್ತಿದ್ದು, ಮಳೆಗಾಲದ ವಾತಾವರಣವನ್ನು ನಿರ್ಮಾಣವಾಗಿದೆ. ಇಡೀ ಜಿಲ್ಲೆ ಮುಂಗಾರು ಮಳೆಯಲ್ಲಿ ಮಿಂದೇಳುತ್ತಿದ್ದರೆ, ಬೆಟ್ಟಗುಡ್ಡ ಅರಣ್ಯಗಳೆಲ್ಲವೂ ಹಸಿರಿನಿಂದ ಕಂಗೊಳಿಸುತ್ತಿವೆ. ಇದರ ನಡುವಿನ ಜಲಪಾತಗಳು ನಿಧಾನವಾಗಿ ಮೈಕೈ ತುಂಬಿಕೊಳ್ಳಲಾರಂಭಿಸಿವೆ. ಬೆಟ್ಟಗಳ, ಕಂದಕಗಳ ನಡುವೆ ಧುಮುಕುತ್ತಾ ನಿಸರ್ಗಪ್ರೇಮಿಗಳಿಗೆ ರಸದೌತಣ ನೀಡಲು ತಯಾರಿ ನಡೆಸುತ್ತಿವೆ.
ಜಿಲ್ಲೆಯಲ್ಲಿ ಹತ್ತಾರು ಜಲಪಾತಗಳಿದ್ದು, ಕೆಲವು ಜನಪ್ರಿಯವಾಗಿದ್ದು, ಅವುಗಳತ್ತ ಜನರು ತೆರಳಿದರೆ ಹೆಚ್ಚಿನ ಜಲಪಾತಗಳು ಅರಣ್ಯದ ನಡುವೆ ಇರುವ ಕಾರಣ ಹೆಚ್ಚಿನವರು ಅತ್ತ ಸುಳಿಯುವುದಿಲ್ಲ. ಆದರೆ ಇತ್ತೀಚೆಗಿನ ದಿನಗಳಲ್ಲಿ ಅಂತಹ ಜಲಪಾತಗಳನ್ನು ವೀಕ್ಷಿಸುವ ಸಲುವಾಗಿ ಕೆಲವರು ದೂರದ ಜಿಲ್ಲೆ ಮತ್ತು ರಾಜ್ಯಗಳಿಂದ ಬರುತ್ತಿದ್ದು ಅಂತಹವರು ದೂರದಿಂದಲೇ ಜಲಪಾತವನ್ನು ವೀಕ್ಷಿಸಿ ಫೋಟೋಗಳನ್ನು ತೆಗೆದುಕೊಂಡು ಹಿಂತಿರುಗಿದರೆ ಕ್ಷೇಮ.

ಕೆಲವು ಪ್ರವಾಸಿಗರು ಜಲಪಾತಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯದೆ ಬರುವುದರಿಂದ ಇಲ್ಲಿರುವ ಜಲಪಾತಗಳ ಪೈಕಿ ಯಾವುದು ಅಪಾಯಕಾರಿ ಎಂಬುದೇ ಗೊತ್ತಾಗುವುದಿಲ್ಲ. ಹೀಗಾಗಿ ಜಲಪಾತಗಳನ್ನು ವೀಕ್ಷಿಸಲು ಹೊರಡುವ ಮುನ್ನ ಅವುಗಳ ಬಗ್ಗೆ ಅರಿತುಕೊಳ್ಳುವುದು ಬಹು ಮುಖ್ಯವಾಗುತ್ತದೆ.
ಕೊಡಗಿನ ಪ್ರವಾಸೋದ್ಯಮ ಅಭಿವೃದ್ಧಿಯಾದ ಬಳಿಕ ಕುಗ್ರಾಮಗಳಲ್ಲಿಯೂ ಹೋಂಸ್ಟೇ ಆರಂಭವಾಗಿದ್ದು, ಪ್ರವಾಸಿಗರು ಎಲ್ಲಿ ಬೇಕಾದರೂ ವಾಸ್ತವ್ಯ ಹೂಡಿ ಸುತ್ತಮುತ್ತಲಿರುವ ಜಲಪಾತಗಳನ್ನು ವೀಕ್ಷಿಸಲು ಸಹಕಾರಿಯಾಗಿದೆ. ಆದರೆ ಜಲಪಾತಗಳ ಹತ್ತಿರ ಹೋದವರು ಅದರ ಸುಂದರ ದೃಶ್ಯವನ್ನು ಕಂಡು ಮೈಮರೆತು ಸ್ನಾನ ಮಾಡುವುದು, ನೀರಿನಲ್ಲಿ ಈಜುವುದು ಅಲ್ಲದೆ ಅಪಾಯಕಾರಿ ಸ್ಥಳದಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುವುದು ಹೀಗೆ ಕೆಲವು ಅಪಾಯಕಾರಿ ಸಾಹಸಗಳನ್ನು ಮಾಡಲು ಮುಂದಾಗುತ್ತಾರೆ. ಇದರಿಂದ ಕೆಲವೊಮ್ಮೆ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ.
ಕೆಲವು ಜಲಪಾತಗಳ ಒಡಲಲ್ಲಿದೆ ಮೃತ್ಯುಕೂಪ
ಜಿಲ್ಲೆಯಲ್ಲಿರುವ ಜಲಪಾತಗಳ ಪೈಕಿ ಕೆಲವು ಪಟ್ಟಣಗಳಿಗೆ ಹತ್ತಿರದಲ್ಲಿವೆ. ಉಳಿದಂತೆ ಹೆಚ್ಚಿನವು ಜನವಿರಳ ಪ್ರದೇಶಗಳಲ್ಲಿವೆ. ಇಲ್ಲಿಗೆ ಪ್ರವಾಸಿಗರಷ್ಟೆ ಬರಬೇಕೇ ವಿನಃ ಸ್ಥಳೀಯರು ಇದರತ್ತ ಸುಳಿಯುವುದು ಅಪರೂಪ. ಜೊತೆಗೆ ಈ ಜಲಪಾತಗಳು ಸುಂದರವಾಗಿದ್ದರೂ ಅದರ ಒಡಲೊಳಗೆ ಮೃತ್ಯುಕೂಪವೇ ಅಡಗಿದೆ ಎಂಬುದು ಅಷ್ಟೇ ಸತ್ಯವಾಗಿದೆ. ಬಹುತೇಕ ಅಪಾಯಕಾರಿ ಜಲಪಾತಗಳ ಬಳಿ ಸೂಚನಾ ಫಲಕ ಅಳವಡಿಸಿದ್ದರೂ ಅದರ ಬಗ್ಗೆ ತಲೆಕೆಡಿಸಿಕೊಳ್ಳದೆ ಪ್ರವಾಸಿಗರು ನೀರಿಗಿಳಿಯುವುದು, ಜಲಪಾತಗಳಿಗೆ ತಲೆಕೊಡುವುದು ಮಾಡುತ್ತಾರೆ. ಆದರೆ ಇದೆಲ್ಲವೂ ಅಪಾಯಕಾರಿ ಎಂಬುದು ಗೊತ್ತಾಗುವ ಹೊತ್ತಿಗೆ ಕೆಲವರು ಪ್ರಾಣವನ್ನೇ ಕಳೆದುಕೊಂಡು ಬಿಡುತ್ತಾರೆ.

ಜಲಪಾತಗಳು ಜನವಿರಳ ಪ್ರದೇಶಗಳಾದ ಬೆಟ್ಟಗುಡ್ಡಗಳ ನಡುವೆ ಇರುವ ಕಾರಣ ಅತ್ತ ಜನ ಸುಳಿದಾಡುವುದು ಕಡಿಮೆ. ಕೆಲವು ಜಲಪಾತಗಳು ಕಡಿದಾದ ಪ್ರದೇಶದಲ್ಲಿ ಸೃಷ್ಟಿಯಾಗಿವೆ. ಜತೆಗೆ ಹೆಬ್ಬಂಡೆಗಳ ಮೇಲೆ ನೀರು ಬೀಳುವ ಕಾರಣ ಬಂಡೆ ಪಾಚಿ ಕಟ್ಟಿರುತ್ತದೆ. ಇದರ ಮೇಲೆ ಕಾಲಿಟ್ಟರೆ ಜಾರುತ್ತದೆ. ಇದನ್ನರಿಯದೆ ಕೆಲವರು ಬಂಡೆಕಲ್ಲುಗಳ ಮೇಲೆ ನಡೆಯುವ ಪ್ರಯತ್ನ ಮಾಡುತ್ತಾರೆ. ಈ ವೇಳೆ ನಿಯಂತ್ರಣ ತಪ್ಪಿ ನೀರಿಗೆ ಬೀಳುವ ಅಪಾಯಗಳಿವೆ. ಇದರಿಂದ ಪ್ರವಾಸಿಗರು ದೂರದಿಂದ ಜಲಪಾತಗಳನ್ನು ನೋಡಲು ಬಂದು ಅದರ ಸೌಂದರ್ಯವನ್ನು ಕಣ್ತುಂಬಿಕೊಂಡು ಹೋಗುವುದು ಬಿಟ್ಟು ಶವವಾಗಿ ಹಿಂತಿರುಗುತ್ತಿರುವುದು ಬೇಸರದ ಸಂಗತಿಯಾಗಿದೆ.
ಜಲಪಾತದ ಬಳಿಗೆ ತೆರಳುವವರು ಎಚ್ಚರವಾಗಿರಿ
ಮೊದಲು ಮಡಿಕೇರಿ ಬಳಿಯಿರುವ ಅಬ್ಬಿ ಜಲಪಾತ ನೋಡಲು ಬರುವ ಪ್ರವಾಸಿಗರು ಅಲ್ಲಿ ತಲೆಕೊಟ್ಟು ಸ್ನಾನ ಮಾಡಲು ಹೋಗಿ ಪ್ರಾಣ ಕಳೆದುಕೊಳ್ಳುತ್ತಿದ್ದರು. ಮೇಲಿಂದ ಮೇಲೆ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಾದಾಗ ಜಿಲ್ಲಾಡಳಿತ ಪೊಲೀಸರನ್ನು ನಿಯೋಜಿಸುವ ಮೂಲಕ ಮತ್ತು ನೀರಿಗೆ ಇಳಿಯದಂತೆ ನಿರ್ಬಂಧ ವಿಧಿಸಿತು. ಇದರಿಂದಾಗಿ ಇಲ್ಲಿ ಪ್ರಾಣಪಾಯ ಸಂಭವಿಸುವುದು ನಿಂತಿದೆ. ಸೋಮವಾರಪೇಟೆ ತಾಲೂಕಿನ ಮಲ್ಲಳ್ಳಿ ಜಲಪಾತ ಮತ್ತು ಮುಕ್ಕೋಡ್ಲು ಗ್ರಾಮದ ಕೋಟೆ ಅಬ್ಬಿ ಜಲಪಾತವೂ ಅಪಾಯಕಾರಿಯಾಗಿದೆ. ಮಲ್ಲಳ್ಳಿ ಜಲಪಾತದಲ್ಲಿ ಈಜಲು ಅವಕಾಶವಿಲ್ಲ.
ಈ ಜಲಪಾತದ ಸೌಂದರ್ಯವನ್ನು ದೂರದಿಂದ ನೋಡಿ ಹಿಂತಿರುಗಬಹುದು. ಆದರೆ ಕೆಲವರು ಕೆಳಗಿಳಿದು ಅದರ ಸಮೀಪ ಹೋಗುತ್ತಾರೆ. ಈ ಜಾಗ ಕಡಿದಾಗಿದ್ದು, ನೀರು ಧುಮುಕುವ ಸ್ಥಳದಲ್ಲಿ ಸೆಲ್ಫಿ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಾರೆ. ಈ ವೇಳೆ ಕಾಲು ಜಾರಿ ಬಿದ್ದು ಬದುಕನ್ನು ಕಳೆದುಕೊಂಡ ಘಟನೆಗಳು ಈ ಹಿಂದೆ ನಡೆದಿವೆ.
ಚೇಲಾವರ ಜಲಪಾತದಲ್ಲಿ ಪ್ರವಾಸಿಗರು ಪ್ರಾಣ ಕಳೆದುಕೊಳ್ಳುತ್ತಿರುವುದು ಆಗಾಗ್ಗೆ ನಡೆಯುತ್ತಿರುತ್ತದೆ. ಇದುವರೆಗೆ ಜಿಲ್ಲೆಯ ಜಲಪಾತಗಳಲ್ಲಿ ಸುಮಾರು ಎಪ್ಪತ್ತೈದಕ್ಕೂ ಹೆಚ್ಚು ಮಂದಿ ಮೃತಪಟ್ಟಿರಬಹುದೆಂದು ಅಂದಾಜಿಸಲಾಗಿದೆ. ಇನ್ನಾದರೂ ಕೊಡಗಿನ ಜಲಪಾತಗಳನ್ನು ವೀಕ್ಷಿಸಲು ಆಗಮಿಸುವ ಪ್ರವಾಸಿಗರು ಜಲಪಾತಗಳ ಬಳಿ ತೆರಳಿ ಅದರ ಸೌಂದರ್ಯವನ್ನು ಸವಿದು ಯಾವುದೇ ಪ್ರಾಣಾಪಾಯ ಮಾಡಿಕೊಳ್ಳದೆ ಸುರಕ್ಷಿತವಾಗಿ ಹಿಂತಿರುಗಿದರೆ ಅಷ್ಟೇ ಸಾಕು.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications