ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಬ್ಯಾಲೆಸ್ಟ್‌ಲೆಸ್ ಟ್ರ್ಯಾಕ್ ನಿರ್ಮಾಣ-ಏನಿದು ಹಾಗೂ ತಗಲುವ ವೆಚ್ಚ ಎಷ್ಟು?, ಮಾಹಿತಿ, ವಿವರ
ನವದೆಹಲಿ, ಮಾರ್ಚ್, 29: ಭಾರತೀಯ ರೈಲ್ವೆಯಲ್ಲಿ ದೊಡ್ಡ ದೊಡ್ಡ ಬದಲಾವಣೆಗಳು ಆಗುತ್ತಲೇ ಇರುತ್ತವೆ. ಇದೀಗ ಮುಂಬೈ-ಅಹಮದಾಬಾದ್ ನಡುವಿನ ಬುಲೆಟ್ ರೈಲು ಯೋಜನೆಗಾಗಿ ದೇಶದಲ್ಲೇ ಮೊದಲ ಬಾರಿಗೆ ಬ್ಯಾಲೆಸ್ಟ್‌ಲೆಸ್ ಟ್ರ್ಯಾಕ್ ನಿರ್ಮಾಣ ಮಾಡಲಾಗುತ್ತಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಹಾಗಾದರೆ ಇದಕ್ಕೆ ತಗಲು ವೆಚ್ಚ ಎಷ್ಟು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಈ ರೈಲು ಹಳಿಯಲ್ಲಿ ಪ್ರತಿ ಗಂಟೆಗೆ ಗರಿಷ್ಠ 320 ಕಿಲೋ ಮೀಟರ್ ವೇಗದಲ್ಲಿ ಚಲಿಸಬಹುದು. ಈ ಯೋಜನೆಯಡಿ ಮುಂಬೈ ಮತ್ತು ಅಹಮದಾಬಾದ್ ನಡುವಿನ 508 ಕಿಲೋ ಮೀಟರ್ ಉದ್ದದ ಮಾರ್ಗದ ಪೈಕಿ 153 ಕಿಲೋ ಮೀಟರ್‌ಗಳಷ್ಟು ವಯಡಕ್ಟ್ ಕಾಮಗಾರಿ ಪೂರ್ಣಗೊಂಡಿದೆ.

295.5 ಕಿಲೋ ಮೀಟರ್‌ಗಳಷ್ಟು ಟ್ರ್ಯಾಕ್ ಅಡಿಪಾಯದ ಸೀಲಿಂಗ್ ಕಾಮಗಾರಿ ಪೂರ್ಣವಾಗಿದೆ. ಪ್ರಧಾನಿ ನರೇಂದ್ರ ಮೋದಿ 3.0 ಸಮಯದಲ್ಲಿ ಮತ್ತಷ್ಟು ಹೊಸತನಗಳು ಬರಲಿವೆ ಎಂದು ಅಶ್ವಿನಿ ವೈಷ್ಣವ್ ಟ್ವೀಟ್ ಮಾಡಿದ್ದಾರೆ. ಜೊತೆಗೆ ದೇಶದ ಮೊದಲ ಬುಲೆಟ್ ರೈಲು ಕಾಮಗಾರಿಯ ಪ್ರಗತಿ ಕುರಿತ ವೀಡಿಯೋವನ್ನು ಹಂಚಿಕೊಂಡಿದ್ದಾರೆ.
ಏನಿದು ಬ್ಯಾಲೆಸ್ಟ್‌ಲೆಸ್ ಟ್ರ್ಯಾಕ್.?: ಜೆ ಸ್ಲ್ಯಾಬ್ ಬ್ಯಾಲೆಸ್ಟ್‌ಲೆಸ್ ಟ್ರ್ಯಾಕ್ ವ್ಯವಸ್ಥೆಯು ಪ್ರಿ ಕ್ಯಾಸ್ಟ್ ಟ್ರ್ಯಾಕ್ ಅನ್ನು ಒಳಗೊಂಡಿದ್ದು, ಇಲ್ಲಿ ಜೋಡಣೆ ಸಾಧನಗಳು ಮತ್ತು ಹಳಿಯನ್ನು ಜೋಡಿಸಲಾಗಿರುತ್ತದೆ. ಈ ಸ್ಲ್ಯಾಬ್ ಅನ್ನು ಆರ್‌ಸಿ ಟ್ರ್ಯಾಕ್ ಬೆಡ್ ಮೇಲೆ ಇರಿಸಲಾಗುತ್ತದೆ. ಇದು ಸುಮಾರು 300 ಎಂಎಂ ದಪ್ಪ ಇರಲಿದೆ. ವಯಡಕ್ಟ್ ಟಾಪ್‌ಗಳಲ್ಲಿ ಪ್ರತ್ಯೇಕ ಅಪ್ ಮತ್ತು ಡೌನ್ ಟ್ರ್ಯಾಕ್ ಲೈನ್‌ಗಳಿಗಾಗಿ ನಿರ್ಮಾಣ ಮಾಡಲಾಗುತ್ತದೆ.
ಏಪ್ರಿಲ್ 1ರಿಂದ 5ರವೆರೆಗೆ ರೈಲು ಸಂಚಾರ ರದ್ದು: ಸಾಮಾನ್ಯವಾಗಿ ಟ್ರ್ಯಾಕ್, ಅಳಿ ಕಾಮಗಾರಿ ವೇಳೆ ರೈಲುಗಳನ್ನು ರದ್ದು ಮಾಡಲಾಗುತ್ತದೆ. ಹಾಗೆಯೇ ಇದೀಗ ಬೈಯಪ್ಪನಹಳ್ಳಿ ಯಾರ್ಡ್‌ನಲ್ಲಿ ಕಾಮಗಾರಿ ಕೈಗೊಳ್ಳುವ ಹಿನ್ನೆಲೆ ಏಪ್ರಿಲ್ 1ರಿಂದ 5ರವರೆಗೆ ಕೆಲವು ರೈಲುಗಳನ್ನು ರದ್ದುಗೊಳಿಸಲಾಗಿದ್ದು, ಇನ್ನು ಕೆಲವು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಹಾಗಾದರೆ ಯಾವೆಲ್ಲ ರೈಲುಗಳ ಮಾರ್ಗಗಳನ್ನು ಬದಲಾವಣೆ ಮಾಡಲಾಗಿದೆ ಎನ್ನವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಯಾರ್ಡ್‌ನಲ್ಲಿ ಬಾಣಸವಾಡಿ-ಕರ್ಮಮೇಳಂ ಮಾರ್ಗದಲ್ಲಿ ಬಾಕ್ಸ್ ಸೇತುವೆ ನಿರ್ಮಾಣಕ್ಕಾಗಿ ಲೈನ್ ಬ್ಲಾಕ್ ಮತ್ತು ಪವರ್ ಬ್ಲಾಕ್ ಅಳವಡಿಸುವ ಕಾಮಗಾರಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಇವೆಲ್ಲ ಮಾರ್ಗಗಳಲ್ಲಿ ರೈಲು ರದ್ದು ಮಾಡಲಾಗುತ್ತದೆ. ಮಾಹಿತಿ ಇಲ್ಲಿ ಗಮನಿಸಿ.
ಯಶವಂತಪುರ-ಸೇಲಂ-ಯಶವಂತಪುರ ಎಕ್ಸ್‌ಪ್ರೆಸ್, ಮೈಸೂರು-ಯಶವಂತಪುರ-ಮೈಸೂರು ಎಕ್ಸ್‌ಪ್ರೆಸ್, ಯಶವಂತಪುರ-ತುಮಕೂರು-ಯಶವಂತಪುರ ಮೆಮು, ಯಶವಂತಪುರ-ಹೊಸೂರು-ಯಶವಂತಪುರ ಮೆಮು ವಿಶೇಷ ರೈಲು, ಯಶವಂತಪುರ-ಚಿಕ್ಕಬಳ್ಳಾಪುರ-ಯಶವಂತಪುರ ಮೆಮು ರೈಲುಗಳ ಸಂಚಾರ ಈ ಸಮಯದಲ್ಲಿ ರದ್ದಾಗಲಿದೆ.
ಮಾರ್ಗಗಳ ಬದಲಾವಣೆ: ಕಣ್ಣೂರು-ಯಶವಂತಪುರ-ಕಣ್ಣೂರು ಎಕ್ಸ್‌ಪ್ರೆಸ್ ರೈಲು, ಯಶವಂತಪುರ-ತುಮಕೂರು-ಯಶವಂತಪುರ ಎಕ್ಸ್‌ಪ್ರೆಸ್ ರೈಲು ಕಾರ್ಮೆಲರಾಂ, ಬೈಯಪ್ಪನಹಳ್ಳಿ ಕ್ಯಾಬಿನ್, ಬೈಯಪ್ಪನಹಳ್ಳಿ, ಬೆಂಗಳೂರು ಎಸ್‌ಎಂವಿಟಿ ಮತ್ತು ಬಾಣಸವಾಡಿ ಮಾರ್ಗ ಮೂಲಕ ಸಂಚಾರ ಮಾಡಲಿದೆ.
ಯಶವಂತಪುರ-ಕೊಚುವೇಲಿ-ಯಶವಂತಪುರ ಎಕ್ಸ್‌ಪ್ರೆಸ್, ದಾದರ್-ತಿರುನೆಲ್ವೇಲಿ-ದಾದರ್ ಎಕ್ಸ್‌ಪ್ರೆಸ್, ಕೊಚುವಲಿ-ಯಶವಂತಪುರ-ಕೊಚುವೇಲಿ ರೈಲು ಬಾಣಸವಾಡಿ, ಎಸ್‌ಎಂವಿಟಿ ಬೆಂಗಳೂರು, ಬೈಯಪ್ಪನಹಳ್ಳಿ, ಬೈಯಪ್ಪನಹಳ್ಳಿ ಕ್ಯಾಬಿನ್, ಕಾರ್ಮೆಲರಾಂ ಮತ್ತು ಹೊಸೂರು ಮಾರ್ಗವಾಗಿ ಸಂಚರಿಸಲಿದೆ.












Click it and Unblock the Notifications