Get Updates
Get notified of breaking news, exclusive insights, and must-see stories!

ಬಳ್ಳಾರಿ-ಹರಿಹರ-ಬಳ್ಳಾರಿ ಡೆಮು ರೈಲು ವೇಳಾಪಟ್ಟಿ ಬದಲು; ವಿವರಗಳು

ದಾವಣಗೆರೆ, ನವೆಂಬರ್ 27; ನೈಋತ್ಯ ರೈಲ್ವೆ ಬಳ್ಳಾರಿ-ಹರಿಹರ-ಬಳ್ಳಾರಿ ಡೆಮು ರೈಲಿನ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಹೊಸ ವೇಳಾಪಟ್ಟಿಯ ಅನ್ವಯ ರೈಲು ಹರಿಹರದ ಬದಲು ದಾವಣಗೆರೆ ರೈಲು ನಿಲ್ದಾಣದಿಂದ ಹೊರಡಲಿದೆ.

ನವೆಂಬರ್ 27ರಿಂದಲೇ ಜಾರಿಗೆ ಬರುವಂತೆ ರೈಲು ಸಂಖ್ಯೆ 07395/ 07396 ಬಳ್ಳಾರಿ-ಹರಿಹರ-ಬಳ್ಳಾರಿ ಡೆಮು ರೈಲಿನ ವೇಳಾಪಟ್ಟಿಯನ್ನು ಬದಲಾವಣೆ ಮಾಡಲಾಗಿದೆ. ರೈಲಿಗೆ ಮುನಿರಾಬಾದ್ ಮತ್ತು ಹರಿಹರದ ನಿಲುಗಡೆ ಇರುವುದಿಲ್ಲ.

davanagere-ballari-demu-train-schedule (1)

ಪರಿಷ್ಕೃತ ವೇಳಾಪಟ್ಟಿ; ಪರಿಷ್ಕೃತ ವೇಳಾಪಟ್ಟಿಯ ಅನ್ವಯ ಬಳ್ಳಾರಿ ಮತ್ತು ದಾವಣಗೆರೆಯಿಂದ 27/11/2023ರಿಂದಲೇ ರೈಲು ಸಂಚಾರ ಆರಂಭವಾಗಲಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

ರೈಲು ನಂಬರ್ 07395 ಬಳ್ಳಾರಿ-ಹರಿಹರ ರೈಲನ್ನು ಬಳ್ಳಾರಿ-ದಾವಣಗೆರೆ ಡೆಮು ರೈಲು ಎಂದು ಬದಲಾವಣೆ ಮಾಡಲಾಗಿದೆ. ರೈಲು ಬಳ್ಳಾರಿಯಿಂದ ಬೆಳಗ್ಗೆ 7.50ಕ್ಕೆ ಹೊರಡಲಿದೆ, ದಾವಣಗೆರೆಗೆ ಮಧ್ಯಾಹ್ನ 1.30ಕ್ಕೆ ತಲುಪಲಿದೆ.

ರೈಲು ಮಾರ್ಗದಲ್ಲಿ ಬಳ್ಳಾರಿ ಕಂಟೋನ್ಮೆಂಟ್ 7.56/ 7.57, ಕುಡಿತಿನಿ 8.13/ 8.14, ದರೋಜಿ 8.23/ 8.24, ತೋರಣಗಲ್ಲು 8.32/ 8.34, ಗಾಡಿಗಂಗೂರು 8.43/ 8.44, ಹೊಸಪೇಟೆ 9.20/ 9.25, ತುಂಗಭದ್ರಾ ಡ್ಯಾಂ 10.01/ 10.02, ವ್ಯಾಸನಕೇರಿ 10.14/ 10.15, ವ್ಯಾಸ ಕಾಲೋನಿ 10.29/ 10.30, ಮರಿಯಮ್ಮನಹಳ್ಳಿ ಹಾಲ್ಟ್ 10.41/ 10.42, ಹಂಪಾಪಟ್ಟಣಂ ಹಾಲ್ಟ್ 10.57/ 10.58, ಹಗರಿಬೊಮ್ಮನಹಳ್ಳಿ 11.12/ 11.13, ಮಾಳವಿ 11.24/ 11.25, ಕೊಟ್ಟೂರು 11.55/ 11.56, ಬೆನ್ನೇನಹಳ್ಳಿ 12.08/ 12.09, ಹರಪನಹಳ್ಳಿ 12.24/ 12.25, ತೆಲಗಿ 12.42/12.43, ಅಮರಾತಿ ಕಾಲೋನಿ 1.03/ 1.05ಕ್ಕೆ ಆಗಮಿಸಿ/ ನಿರ್ಗಮಿಸಲಿದೆ.

ರೈಲು ನಂಬರ್ 07396 ಹರಿಹರ-ಬಳ್ಳಾರಿ ಡೆಮು ರೈಲನ್ನು ದಾವಣಗೆರೆ-ಬಳ್ಳಾರಿ ಡೆಮು ರೈಲು ಎಂದು ಬದಲಾವಣೆ ಮಾಡಲಾಗಿದೆ. ಈ ರೈಲು ದಾವಣಗೆರೆಯಿಂದ ಮಧ್ಯಾಹ್ನ 2.30ಕ್ಕೆ ಹೊರಡಲಿದೆ. ಬಳ್ಳಾರಿಗೆ ರಾತ್ರಿ 8.10ಕ್ಕೆ ತಲುಪಲಿದೆ.

ಈ ರೈಲು ಮಾರ್ಗದಲ್ಲಿ ಅಮರಾವತಿ ಕಾಲೋನಿ 2.50/2.51, ತೆಲಗಿ 3.13/3.14, ಹರಪನಹಳ್ಳಿ 3.32/ 3.33, ಬೆನ್ನೆಹಳ್ಳಿ 3.48/3.49, ಕೊಟ್ಟೂರು 4.04/ 4.05, ಮಾಳವಿ 4.28/ 4.29, ಹಗರಿಬೊಮ್ಮನಹಳ್ಳಿ 4.39/ 4.40, ಹಂಪಾಪಟ್ಟಣಂ ಹಾಲ್ಟ್‌ 4.53/ 4.54, ಮರಿಯಮ್ಮನಹಳ್ಳಿ ಹಾಲ್ಟ್ 5.08/ 5.09, ವ್ಯಾಸ ಕಾಲೋನಿ 5.19/ 5.20, ವ್ಯಾಸನಕೇರಿ 5.30/ 5.31, ತುಂಗಭದ್ರಾ ಡ್ಯಾಂ 5.43/ 5.44, ಹೊಸಪೇಟೆ 6.20/ 6.30, ಗಾಡಿಗಂಗೂರು 6.54/ 6.55, ತೋರಣಗಲ್ಲು 7.04/ 7.05, ದರೋಜಿ 7.13/ 7.14, ಕುಡಿತಿನಿ 7.22/ 7.23 ಮತ್ತು ಬಳ್ಳಾರಿ ಕಂಟೋನ್ಮೆಂಟ್ 7.39/ 7.40 ಆಗಮಿಸಿ, ನಿರ್ಗಮಿಸಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+