Ayodhya Tourist Places: ರಾಮನ ದರ್ಶನ ಪಡೆಯಲು ಅಯೋಧ್ಯೆಗೆ ಹೋಗುವಿರಾ? ಹಾಗಾದರೆ ಈ ಸ್ಥಳಗಳನ್ನ ಮಿಸ್ ಮಾಡ್ಬೇಡಿ
ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕಾಗಿ ರಾಮಮಂದಿರದ ಅಲಂಕಾರ ಕಾರ್ಯ ಭರದಿಂದ ಸಾಗಿದೆ. ಇದಕ್ಕಾಗಿ ಇಡೀ ಅಯೋಧ್ಯೆಯನ್ನು ಸುಂದರಗೊಳಿಸಲಾಗುತ್ತಿದೆ. ಇದಕ್ಕಾಗಿ ಇಡೀ ಅಯೋಧ್ಯೆ ನಗರವನ್ನೆ ವಧುವಿನಂತೆ ಸಿಂಗಾರಗೊಳಿಸಲಾಗುತ್ತಿದೆ. ಅಯೋಧ್ಯೆಯ ಜನರು ಜನವರಿ 22ರಂದು ದೀಪಾವಳಿ ಹಬ್ಬವನ್ನು ಆಚರಿಸುವ ಮೂಲಕ ತಮ್ಮ ಆರಾಧ್ಯ ದೈವ ಶ್ರೀರಾಮನನ್ನು ಸ್ವಾಗತಿಸಲಿದ್ದಾರೆ.
ರಾಮಮಂದಿರದಲ್ಲಿ ನಡೆಯಲಿರುವ ಈ ಐತಿಹಾಸಿಕ ಘಟನೆಯಿಂದಾಗಿ ಅಯೋಧ್ಯೆ ನಗರವೂ ಭಾರೀ ಸುದ್ದಿಯಲ್ಲಿದೆ. ಮಹಾಮಸ್ತಕಾಭಿಷೇಕದ ನಂತರ ಅಯೋಧ್ಯೆ ರಾಮಮಂದಿರದ ಬಾಗಿಲು ಸಾರ್ವಜನಿಕರಿಗಾಗಿ ತೆರೆಯಲಾಗುತ್ತದೆ. ಇನ್ನೂ ರಾಮನ ಜನ್ಮಸ್ಥಳದಲ್ಲಿ ಮೂರ್ತಿ ಪ್ರತಿಷ್ಠಾಪಿಸಿದ ನಂತರ ಅಯೋಧ್ಯೆ ನಗರಕ್ಕೆ ಅಪಾರ ಸಂಖ್ಯೆಯ ಭಕ್ತರು ಆಗಮಿಸುತ್ತಾರೆ ಎಂದು ನಿರೀಕ್ಷಿಸಲಾಗಿದೆ.

ಶ್ರೀರಾಮನ ನಗರವಾದ ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ನೀವು ಸಹ ಭೇಟಿ ನೀಡಲು ಯೋಜನೆ ಮಾಡುತ್ತಿದ್ದೀರಾ? ಹಾಗಾದರೆ ಶ್ರೀರಾಮನ ದೇವಾಲಯವನ್ನು ಹೊರತುಪಡಿಸಿ ನೀವು ಹೋಗಬಹುದಾದ ಇನ್ನಿತರ ಸ್ಥಳಗಳು ಯಾವುವು ಎಂಬುದನ್ನು ತಿಳಿದುಕೊಳ್ಳಿ.
1. ರಾಮ್ ಕಿ ಪೌರಿ: ಅಯೋಧ್ಯಾ ನಗರವನ್ನು ತಲುಪಿದ ನಂತರ ಮೊದಲು ರಾಮ್ ಕಿ ಪೌರಿಗೆ ಹೋಗಿ. ಸರಯು ನದಿಯ ದಡದಲ್ಲಿ ಘಾಟ್‌ಗಳ ಸರಣಿಗಳಿವೆ. ಇಲ್ಲಿ ಸ್ನಾನ ಮಾಡುವುದರಿಂದ ಎಲ್ಲಾ ಪಾಪಗಳು ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ.
2. ಹನುಮಾನ್ ಗರ್ಹಿ: ರಾಮ್ ಕಿ ಪೌರಿಯಲ್ಲಿ ಸ್ನಾನ ಮಾಡಿದ ನಂತರ ನೀವು ಹನುಮಾನ್ ಗರ್ಹಿಗೆ ಹೋಗಬೇಕು. ಏಕೆಂದರೆ ಶ್ರೀ ರಾಮನ ದರ್ಶನವನ್ನು ಹೊಂದುವ ಮೊದಲು ಇಲ್ಲಿ ಹನುಮನ ದರ್ಶನ ಮತ್ತು ಅನುಮತಿಯನ್ನು ಪಡೆಯುವುದು ಕಡ್ಡಾಯವಾಗಿದೆ. ಹೀಗಾಗಿ ಭಕ್ತರು ಶ್ರೀರಾಮನ ದರ್ಶನಕ್ಕೂ ಮೊದಲು ಹನುಮನ ಆಶೀರ್ವಾದ ಪಡೆಯುತ್ತಾರೆ.

3. ದಶರಥ ಅರಮನೆ: ರಾಜ ದಶರಥನು ಈ ಅರಮನೆಯಲ್ಲಿ ವಾಸವಾಗಿದ್ದನು. ಈ ಅರಮನೆಯಲ್ಲಿಯೇ ತನ್ನ ದರ್ಬಾರು ನಡೆಸುತ್ತಿದ್ದನು. ಹೀಗಾಗಿ ರಾಮ ಮಂದಿರ ಭೇಟಿ ನೀಡಲು ಹೋದಾಗ ಈ ಸ್ಥಳವನ್ನು ಣೊಡಲು ಮರೆಯದಿರಿ.
4. ಕನಕ ಮಹಲ್: ತ್ರೇತಾಯುಗದಲ್ಲಿ ರಾಣಿ ಕೈಕೇಯಿಯು ತಾಯಿ ಸೀತೆಗೆ ಕಾಣಿಸಿಕೊಂಡಳು ಮತ್ತು ಆಕೆಗೆ ಕನಕ ಮಹಲ್ ನೀಡಿದಳು ಎಂದು ನಂಬಲಾಗಿದೆ. ಈ ಕನಕ ಮಹಲ್ ಅನ್ನು ನೀವು ಅಯೋಧ್ಯೆಯಲ್ಲಿ ನೋಡಬಹುದು.
5. ಸೂರ್ಯಕುಂಡ: ಶ್ರೀರಾಮನ ದರ್ಶನ ಪಡೆಯಲು ಸೂರ್ಯ ದೇವನ ಸೂರ್ಯಕುಂಡಕ್ಕೆ ಬಂದನೆಂದು ನಂಬಲಾಗಿದೆ. ಹೀಗಾಗಿ ರಾಮನ ಭಕ್ತರು ಈ ಸ್ಥಳವನ್ನು ವೀಕ್ಷಿಸುತ್ತಾರೆ. ಇಲ್ಲಿ ಪ್ರತಿದಿನ ಶ್ರೀರಾಮನ ಕಥೆಯ ಲೇಸರ್ ಶೋ ಕೂಡ ನಡೆಯುತ್ತದೆ.
6. ಸೀತೆಯ ಅಡುಗೆ ಮನೆ: ಈ ಅಡುಗೆಮನೆಯಲ್ಲಿ ಸೀತಾ ಮಾತೆ ಪಂಚ ಋಷಿಗಳಿಗೆ ಊಟ ನೀಡಿದ್ದಳು. ಈ ಸ್ಥಳ ಅಯೋಧ್ಯೆಯಲ್ಲಿ ಪ್ರಸಿದ್ಧವಾಗಿದೆ.
7. ಗುಪ್ತರಘಾಟ್: ಶ್ರೀರಾಮನು ಈ ಘಾಟ್ನಿಂದ ತನ್ನ ನಿವಾಸಕ್ಕೆ ಹೋದನೆಂದು ರಾಮಾಯಣದಲ್ಲಿ ಹೇಳಲಾಗುತ್ತದೆ. ಅಯೋಧ್ಯೆಗೆ ಭೇಟಿ ನೀಡಿದ ವೇಳೆ ಈ ಸ್ಥಳದ ವೀಕ್ಷೆಯನ್ನೂ ಜನ ಮಾಡುತ್ತಾರೆ.
8. ನಾಗೇಶ್ವರ ನಾಥ ದೇವಾಲಯ: ರಾಮನ ಮಗ ಕುಶ ಸ್ಥಾಪಿಸಿದ ನಾಗೇಶ್ವರ ನಾಥ ದೇವಾಲಯ ಇಲ್ಲಿ ಪ್ರಸಿದ್ಧವಾಗಿದೆ. ಈ ಸ್ಥಳ ಕೂಡ ವೀಕ್ಷಿಸಬಹುದು.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಕಾರ್ಯಗತಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)












Click it and Unblock the Notifications