ಬಂಡೀಪುರ ಬಳಿಯ ಟಸ್ಕರ್ ಟ್ರೇಲ್ಸ್ ಜಂಗಲ್ ರೆಸಾರ್ಟ್

ಮೈಸೂರಿನಿಂದ ಊಟಿಗೆ ಹೋಗುವಾಗ ಮಧ್ಯದಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾನ ಮತ್ತು ಹುಲಿ ಅಭಯಾರಣ್ಯದ ಬಳಿ ಸಿಗುವ ಟಸ್ಕರ್ ಟ್ರೇಲ್ಸ್ ರೆಸಾರ್ಟ್ ಸಿಗುತ್ತದೆ. ಮೈಸೂರಿನಿಂದ 80 ಕಿ.ಮೀ. ಮತ್ತು ಬೆಂಗಳೂರಿನಿಂದ 220 ಕಿ.ಮೀ. ದೂರದಲ್ಲಿದೆ. ಅಲ್ಲಿಗೆ ತಲುಪಲು ಬಸ್ಸಿನ ಅನುಕೂಲಗಳಿದ್ದರೂ ಖಾಸಗಿ ವಾಹನ ಮಾಡಿಕೊಂಡು ಹೋಗುವುದು ಹೆಚ್ಚು ಅನುಕೂಲ.
ಅಭಯಾರಣ್ಯದಲ್ಲಿರುವ ವೈವಿಧ್ಯಮಯ ಪ್ರಾಣಿಜಗತ್ತನ್ನು ವೀಕ್ಷಿಸಲು ಮತ್ತು ಛಾಯಾಚಿತ್ರಗಳನ್ನು ತೆಗೆದುಕೊಳ್ಳಲು ಬಂಡೀಪುರ ರಾಷ್ಟ್ರೀಯ ಉದ್ಯಾನ ಅತ್ಯಂತ ಪ್ರಶಸ್ತ ಸ್ಥಳ. ಆನೆಗಳ ಹಿಂಡು ಅರಣ್ಯದ ನೀರಿನಲ್ಲಿ ನಲಿದಾಡಿ ಆಟವಾಡುವುದನ್ನು ನೋಡುವುದಂತೂ ಮಕ್ಕಳಾದಿಯಾಗಿ ಎಲ್ಲರಿಗೂ ಅವಿಸ್ಮರಣೀಯ ಅನುಭವ. ಅದೃಷ್ಟವಿದ್ದರೆ ಹುಲಿಯನ್ನು ಹತ್ತಿರದಿಂದಲೇ ನೋಡಬಹುದು.
ಅದಲ್ಲದೆ, ಬಂಡೀಪುರ ರಾಷ್ಟ್ರೀಯ ಉದ್ಯಾನವನ ಕರ್ನಾಟಕದಲ್ಲಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನ ಮತ್ತು ತಮಿಳ್ನಾಡಿನಲ್ಲಿರು ಮಧುಮಲೈ ರಾಷ್ಟ್ರೀಯ ಉದ್ಯಾನ ಮತ್ತು ಕೇರಳದಲ್ಲಿರುವ ವೈನಾಡ್ ಸ್ಯಾಂಕ್ಚುವರಿಯಿಂದ ಸುತ್ತುವರಿದಿದೆ. ಇಲ್ಲಿಂದಲೇ ಉಳಿದ ಅರಣ್ಯಗಳನ್ನು ವೀಕ್ಷಿಸಲು ಅನುಕೂಲವಿದೆ.
ಟಸ್ಕರ್ ಟ್ರೇಲ್ಸ್ ರೆಸಾರ್ಟ್ ಸಕಲ ಸವಲತ್ತಿನಿಂದ ಕೂಡಿದೆ. ವಾಸಕ್ಕೆ ಕಾಟೇಜ್ ಗಳಿವೆ. ರೆಸಾರ್ಟಿನಲ್ಲಿ ಊಟಕ್ಕೆ ಸುಸಜ್ಜಿತವಾದ ಟೈನಿಂಗ್ ಹಾಲ್, ಸ್ವಿಮಿಂಗ್ ಪೂಲ್, ಲೈಬ್ರರಿ, ವೈಲ್ಡ್ ಲೈಫ್ ಚಿತ್ರ ವೀಕ್ಷಿಸಲು ಕೂಡ ಅನುಕೂಲ ಮಾಡಲಾಗಿದೆ. ರಾತ್ರಿ ವೇಳೆಯಲ್ಲಿ ಕ್ಯಾಂಪ್ ಫೈರ್ ಹಾಕಿ ಪ್ರವಾಸಿಗರೊಡಗೂಡಿ ಕಾಲ ಕಳೆಯುವುದೇ ಒಂದು ಮಜ. ಖಾಸಗಿ ಜೀಪಿನಲ್ಲಿ ಬಂದಿದ್ದರೆ ರೆಸಾರ್ಟಿನವರೇ ದಟ್ಟಕಾಡಿನೊಳಗೆ ಸಫಾರಿಗೆ ಹೋಗಲು ಅವಕಾಶ ಮಾಡಿಕೊಡುತ್ತಾರೆ.
ಕೈಕಾಲುಗಳಲ್ಲಿ ಶಕ್ತಿಯಿದ್ದರೆ ಬಂಡೀಪುರ ಅರಣ್ಯದಲ್ಲಿ ಟ್ರೆಕ್ಕಿಂಗ್ ಮಾಡುವುದು ಮರೆಯಲಾಗದ ಅನುಭವ. ಗೈಡ್ ಸಂಗಡ ಕಾಲುದಾರಿಯಲ್ಲಿ ನಡೆದಾಡುತ್ತಲೇ ದಟ್ಟಾರಣ್ಯದ ಪ್ರಶಾಂತ ತಾಣದಲ್ಲಿ ಜೀವವೈವಿಧ್ಯ ಮನಸ್ಸಿಗೆ ಮುದ ನೀಡುತ್ತದೆ. ಸಣ್ಣ ಪುಟ್ಟ ಕಾಡು ಪ್ರಾಣಿಗಳು ಕಣ್ಣಮುಂದೆಯೇ ಓಡಾಡುವುದನ್ನು ನೋಡುವುದೇ ಚಂದ.
ಕಾಟೇಜ್ ಬುಕ್ ಮಾಡಿ ತಿಂಡಿ, ಊಟದ ವ್ಯವಸ್ಥೆ ಮತ್ತು ಅಡ್ಡಾಡಲು ವಾಹನದ ಸೇವೆಗಾಗಿ












Click it and Unblock the Notifications