• search
  • Live TV
keyboard_backspace

'ಆ. 31 ರ ಬಳಿಕವೂ ಅಫ್ಘಾನಿಗಳು ದೇಶ ತೊರೆಯಲು ತಾಲಿಬಾನ್‌ ಸಮ್ಮತಿ': ಜರ್ಮನಿ ರಾಯಭಾರಿ

Google Oneindia Kannada News

ಬೆರ್ಲಿನ್‌, ಆಗಸ್ಟ್‌ 26: ಅಮೆರಿಕಕ್ಕೆ ಕಾಬೂಲ್‌ ವಿಮಾನ ನಿಲ್ದಾಣದ ಉಸ್ತುವಾರಿ ಇಲ್ಲದ ಸಂದರ್ಭದಲ್ಲಿಯೂ ಅಂದರೆ ಆಗಸ್ಟ್‌ 31 ರ ಬಳಿಕವೂ ಸರಿಯಾದ ದಾಖಲೆಗಳನ್ನು ಹೊಂದಿರುವ ಅಫ್ಘಾನಿಸ್ತಾನಿಗಳಿಗೆ ದೇಶವನ್ನು ತೊರೆಯಲು ಅವಕಾಶ ಮಾಡಿಕೊಡಲಾಗುವುದು ಎಂದು ತಾಲಿಬಾನ್‌ನ ಸಂಧಾನಕಾರರು ಭರವಸೆ ನೀಡಿದ್ದಾರೆ ಎಂದು ಜರ್ಮನಿ ಹೇಳಿದೆ.

ಈ ಬಗ್ಗೆ ಟ್ಟಿಟ್ಟರ್‌ ಮೂಲಕ ಮಾಹಿತಿ ನೀಡಿರುವ ಜರ್ಮನಿಯ ರಾಯಭಾರಿ ಮಾರ್ಕಸ್ ಪೊಟ್ಜೆಲ್, "ನಾನು ತಾಲಿಬಾನ್‌ನ ಉಪ ಮುಖ್ಯ ಸಂಧಾನಕಾರ ಶೇರ್ ಮೊಹಮ್ಮದ್ ಅಬ್ಬಾಸ್ ಸ್ಟಾನಿಕ್‌ಜಾಯ್‌ ಜೊತೆ ಮಾತನಾಡಿದೆ. ಸರಿಯಾದ ದಾಖಲೆಗಳನ್ನು ಹೊಂದಿರುವ ಅಫ್ಘಾನಿಸ್ತಾನಿಗಳಿಗೆ ಆಗಸ್ಟ್‌ 31 ರ ಬಳಿಕವೂ ವಾಣಿಜ್ಯ ವಿಮಾನಗಳಲ್ಲಿ ಪ್ರಯಾಣ ಮಾಡಲು ಅವಕಾಶ ನೀಡಲಾಗುತ್ತದೆ ಎಂದು ಮೊಹಮ್ಮದ್ ಅಬ್ಬಾಸ್ ಸ್ಟಾನಿಕ್‌ಜಾಯ್‌ ಭರವಸೆ ನೀಡಿದ್ದಾರೆ," ಎಂದು ತಿಳಿಸಿದ್ದಾರೆ.

ಅಫ್ಘಾನ್‌ದಿಂದ ಎಲ್ಲರನ್ನು ರಕ್ಷಿಸಲಾಗದು ಎಂದ ಸ್ಪೇನ್‌ಅಫ್ಘಾನ್‌ದಿಂದ ಎಲ್ಲರನ್ನು ರಕ್ಷಿಸಲಾಗದು ಎಂದ ಸ್ಪೇನ್‌

ಇನ್ನು ಇದೇ ಸಂದರ್ಭದಲ್ಲಿ "ಅಫ್ಘಾನಿಸ್ತಾನಿಗಳನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಪ್ರಸ್ತುತ ನ್ಯಾಟೋ ಮಿತ್ರರಾಷ್ಟ್ರಗಳು ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆಯು ಅಲ್ಲಿಂದ ಅಮೆರಿಕ ಸೇನೆಯು ಹೊರ ಬಂದ ಬಳಿಕ ಮುಂದುವರಿಸಲು ಸಾಧ್ಯವಿಲ್ಲ," ಎಂದು ಕೂಡಾ ಜರ್ಮನಿಯ ರಾಯಭಾರಿ ಮಾರ್ಕಸ್ ಪೊಟ್ಜೆಲ್ ಹೇಳಿದರು.

 ಗಡುವು ಮುಗಿದರೂ ಅಫ್ಘಾನಿಗಳು ದೇಶ ತೊರೆಯಬಹುದು: ತಾಲಿಬಾನ್‌ ಭರವಸೆ

ಗಡುವು ಮುಗಿದರೂ ಅಫ್ಘಾನಿಗಳು ದೇಶ ತೊರೆಯಬಹುದು: ತಾಲಿಬಾನ್‌ ಭರವಸೆ

"ಆದರೆ ಮಾನವ ಹಕ್ಕುಗಳ ಹೋರಾಟಗಾರರು ಅಥವಾ ಜರ್ಮನಿಯ ಮಾಜಿ ಸ್ಥಳೀಯ ಉದ್ಯೋಗಿಗಳು ಸೇರಿದಂತೆ ದುರ್ಬಲ ಅಫ್ಘಾನಿಸ್ತಾನಿಗಳು ಆಗಸ್ಟ್‌ 31 ರ ಕೊನೆಯ ದಿನಾಂಕದ ಬಳಿಕವೂ ಅಫ್ಘಾನಿಸ್ತಾನವನ್ನು ತೊರೆಯಬಹುದು ಎಂದು ನಮಗೆ ತಾಲಿಬಾನ್‌ ಭರವಸೆ ನೀಡಿದ ಭಾಗವಾಗಿ ನಾವು ಜನರಿಗೆ ಭರವಸೆ ನೀಡಲು ಬಯಸುತ್ತೇವೆ," ಎಂದು ಜರ್ಮನಿ ಹೇಳಿಕೊಂಡಿದೆ. ಕೊನೆಯ ದಿನಾಂಕ ಮುಗಿದ ಬಳಿಕವೂ ಅಫ್ಘಾನಿಸ್ತಾನದಿಂದ ಜನರನ್ನು ಬರ್ಲಿನ್ ವಿಮಾನ ನಿಲ್ದಾಣಕ್ಕೆ ಕರೆತರುವ ಕಾರ್ಯವನ್ನು ಮಾಡಲು ಪ್ರಯತ್ನ ಮಾಡುತ್ತೇವೆ ಎಂದು ಮಂಗಳವಾರ ವಿದೇಶಾಂಗ ಸಚಿವ ಹೈಕೋ ಮಾಸ್ ಎಂದಿದ್ದರು. ಜರ್ಮನಿ ಚಾನ್ಸಿಲರ್‌ ಏಂಜೆಲಾ ಮರ್ಕೆಲ್, "ಅಫ್ಘಾನಿಸ್ತಾನದಲ್ಲಿ ನ್ಯಾಟೋ ನಿಯೋಜನೆ ಮಾಡಿದ ಈ ಎರಡು ದಶಕಗಳಲ್ಲಿ ಬೇರೆ ಬೇರೆ ದೇಶಗಳು ಅಫ್ಘಾನಿಸ್ತಾನದಲ್ಲಿ ಮಾಡಿದ ಸುಧಾರಣೆ ಕಾರ್ಯಗಳನ್ನು ಉಳಿಸಿಕೊಂಡು ರಕ್ಷಿಸಬೇಕಾದರೆ ಅಂತಾರಾಷ್ಟ್ರೀಯ ಸಮುದಾಯವು ತಾಲಿಬಾನ್ ಜೊತೆ ಮಾತುಕತೆ ನಡೆಸುವುದುದ ಅನಿವಾರ್ಯ," ಎಂದು ಬುಧವಾರ ಹೇಳಿದ್ದರು.

 ಎಲ್ಲರನ್ನೂ ರಕ್ಷಿಸಲಾಗದು: ಸ್ಫೇನ್‌

ಎಲ್ಲರನ್ನೂ ರಕ್ಷಿಸಲಾಗದು: ಸ್ಫೇನ್‌

ಈ ಹಿಂದೆ "ಅಫ್ಘಾನಿಸ್ತಾನದಲ್ಲಿ ಸ್ಪಾನಿಶ್‌ ಮಿಷನ್‌ಗಾಗಿ ಸೇವೆ ಸಲ್ಲಿಸಿದ ಎಲ್ಲಾ ಅಫ್ಘಾನ್‌ ಜನರನ್ನು ರಕ್ಷಣೆ ಮಾಡಲು ಸಾಧ್ಯವಿಲ್ಲ" ಎಂದು ಮಂಗಳವಾರ ಸ್ಪೇನ್‌ನ ರಕ್ಷಣಾ ಸಚಿವೆ ಮಾರ್ಗರಿಟಾ ರೋಬಲ್ಸ್‌, ಹೇಳಿದ್ದಾರೆ. ಹಾಗೆಯೇ ಅಫ್ಘಾನಿಸ್ತಾನದಲ್ಲಿ "ಪರಿಸ್ಥಿತಿ ಬಹಳ ನಾಟಕೀಯವಾಗಿದೆ," ಎಂದಿದ್ದಾರೆ. "ನಮ್ಮಿಂದ ಸಾಧ್ಯವಾದಷ್ಟು ಜನರನ್ನು ನಾವು ಅಫ್ಘಾನಿಸ್ತಾನದಿಂದ ಕರೆ ತರುತ್ತೇವೆ. ಆದರೆ ಬೇರೆ ಕಾರಣದಿಂದಾಗಿ ಅಫ್ಘಾನಿಸ್ತಾನದಲ್ಲೇ ಜನರು ಉಳಿದರೆ ಅದು ನಮ್ಮ ಮೇಲೆ ಆಧಾರಿತವಾದುದ್ದಲ್ಲ. ಆದರೆ ಅದು ಅಲ್ಲಿನ ಸ್ಥಿತಿಯ ಮೇಲೆ ಆಧಾರಿತವಾಗುತ್ತದೆ," ಎಂದಿದ್ದರು. ಸ್ಪೇನ್‌ನ ರಕ್ಷಣಾ ಸಚಿವೆ ಮಾರ್ಗರಿಟಾ ರೋಬಲ್ಸ್‌ ಇದಕ್ಕೂ ಮುನ್ನ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿ, "ಯುಎಸ್‌ ಪಡೆಗಳು ಕಾಬೂಲ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತನ್ನ ಹಿಡಿತದಲ್ಲಿ ಹೊಂದಿರುವವರೆಗೆ ಮಾತ್ರ ಸ್ಪೇನ್‌ ತನ್ನ ಸ್ಥಳಾಂತರ ಕಾರ್ಯವನ್ನು ನಡೆಸಲು ಸಾಧ್ಯ," ಎಂದು ಹೇಳಿದ್ದಾರೆ.

ಗಡುವು ವಿಸ್ತರಿಸುವ ಪ್ರಶ್ನೆಯೇ ಇಲ್ಲ; ತಾಲಿಬಾನ್ಗಡುವು ವಿಸ್ತರಿಸುವ ಪ್ರಶ್ನೆಯೇ ಇಲ್ಲ; ತಾಲಿಬಾನ್

 ಗಡುವು ವಿಸ್ತರಣೆ ಸಾಧ್ಯವೇ ಇಲ್ಲ

ಗಡುವು ವಿಸ್ತರಣೆ ಸಾಧ್ಯವೇ ಇಲ್ಲ

ಈ ನಡುವೆ ಅಮೆರಿಕ ತನ್ನ ರಕ್ಷಣೆ ಕಾರ್ಯದ ಗಡುವು ವಿಸ್ತರಣೆ ಮಾಡುವ ಚಿಂತನೆ ನಡೆಸುತ್ತಿದೆ ಎಂದು ಸುದ್ದಿಯಾಗಿತ್ತು. ಈ ಬೆನ್ನಲ್ಲೇ ತಾಲಿಬಾನ್‌ ಈ ಬಗ್ಗೆ ಪ್ರತಿಕ್ರಿಯಿಸಿ ಯಾವುದೇ ಗಡುವು ವಿಸ್ತರಣೆಗೆ ಅವಕಾಶ ನೀಡಲಾಗದು ಎಂದು ಹೇಳಿದೆ. ಎಲ್ಲಾ ವಿದೇಶಿಯರು ಆಗಸ್ಟ್‌ 31 ರೊಳಗೆ ದೇಶ ತೊರೆಯಬೇಕು. ದೇಶ ತೊರೆಯಲು ನೀಡಲಾದ 31ರ ಗಡುವನ್ನು ವಿಸ್ತರಿಸುವ ಪ್ರಶ್ನೆಯೇ ಇಲ್ಲ ಎಂದು ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದಿರುವ ತಾಲಿಬಾನ್ ಮತ್ತೊಮ್ಮೆ ಘೋಷಣೆ ಮಾಡಿದೆ. ಮಂಗಳವಾರ ತಾಲಿಬಾನ್ ಬಿಕ್ಕಟ್ಟಿನ ಕುರಿತು ಚರ್ಚೆಗೆ ಜಿ 7 ದೇಶಗಳು ಸಭೆ ನಡೆಸಿದ್ದು, ಮುಖಂಡರು ಗಡುವು ವಿಸ್ತರಿಸಲು ಕೋರುವ ಚಿಂತನೆ ನಡೆಸಿದ್ದರು ಎಂದು ವರದಿಯಾಗಿದೆ. ಈ ಬೆನ್ನಲ್ಲೇ, ಗಡುವು ವಿಸ್ತರಣೆ ಸಾಧ್ಯವಿಲ್ಲ ಎಂದು ತಾಲಿಬಾನ್ ತಿಳಿಸಿದೆ.

 ಆಗಸ್ಟ್‌ 31 ರವರೆಗೆ ಮಾತ್ರ ಗಡುವು, ವಿಸ್ತರಿಸಲು ಸಾಧ್ಯವಿಲ್ಲ

ಆಗಸ್ಟ್‌ 31 ರವರೆಗೆ ಮಾತ್ರ ಗಡುವು, ವಿಸ್ತರಿಸಲು ಸಾಧ್ಯವಿಲ್ಲ

ಈ ಬೆನ್ನಲ್ಲೇ ಅಮೆರಿಕದ ಅಧ್ಯಕ್ಷ ಜೋ ಬೈಡೆನ್‌ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ನಾವು ಆಗಸ್ಟ್‌ 31 ರವರೆಗೆ ಮಾತ್ರ ಈ ರಕ್ಷಣಾ ಕಾರ್ಯ ನಡೆಸಲು ಸಾಧ್ಯ. ಆ ಬಳಿಕ ಗಡುವನ್ನು ವಿಸ್ತರಣೆ ಮಾಡಲಾಗುವುದಿಲ್ಲ ಎಂದು ತಿಳಿಸಿದ್ದಾರೆ. ಅಫ್ಘಾನಿಸ್ತಾನದ ಕಾಬೂಲ್ ವಿಮಾನ ನಿಲ್ದಾಣದ ಉಸ್ತುವಾರಿಯನ್ನು ಆಗಸ್ಟ್ 31ರ ಬಳಿಕ ಅಮೆರಿಕ ನೋಡಿಕೊಳ್ಳುವುದಿಲ್ಲ ಎಂದು ಸೇನೆಯ ಅಧಿಕಾರಿಗಳು ಹೇಳಿದ್ದಾರೆ. ಹಾಗೆಯೇ ಸ್ಥಳಾಂತರ ಕಾರ್ಯ ನಿಗದಿತ ಗಡುವಿನಲ್ಲೇ ಮುಗಿಯಲಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಅಮೆರಿಕ ರಕ್ಷಣಾ ಇಲಾಖೆಯ ವಕ್ತಾರ ಜಾನ್ ಕಿರ್ಬೈ, "ತಾಲಿಬಾನಿಗಳು ಕಾಬೂಲ್ ವಿಮಾನ ನಿಲ್ದಾಣದ ಸುತ್ತಲಿನ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಿದ್ದಾರೆ. ಹಮೀದ್ ಕರ್ಜಾಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರಲು ಕೇವಲ ಒಂದು ಮಾರ್ಗವಿದೆ" ಎಂದು ಹೇಳಿದ್ದಾರೆ. "ತಾಲಿಬಾನಿಗಳು ತಮ್ಮ ಚೆಕ್‌ಪೋಸ್ಟ್‌ನಲ್ಲಿ ಭದ್ರತೆ ಹೆಚ್ಚಿಸಿದ್ದಾರೆ. ಈ ಮೂಲಕ ವಿಮಾನ ನಿಲ್ದಾಣಕ್ಕೆ ಬರುವ ಜನರ ಗುಂಪನ್ನು ನಿಯಂತ್ರಣ ಮಾಡುತ್ತಿದ್ದಾರೆ. ಆಗಸ್ಟ್ 31ರ ಬಳಿಕ ನಿಲ್ದಾಣಕ್ಕೆ ಬರುವವರಿಗೆ ಮತ್ತಷ್ಟು ನಿರ್ಬಂಧ ಹೇರುವ ಸಾಧ್ಯತೆ ಇದೆ" ಎಂದು ಜಾನ್ ಕಿರ್ಬೈ ತಿಳಿಸಿದ್ದಾರೆ.

(ಒನ್‌ ಇಂಡಿಯಾ ಸುದ್ದಿ)

English summary
We received assurance from a Taliban negotiator that Afghans who have the right documents will still be allowed to leave Afghanistan after August 31 said German Envoy.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X