ಯುಎಸ್ ಅಫ್ಘಾನ್ ತೊರೆದಂತೆ ಮಧ್ಯ ಏಷ್ಯಾದಲ್ಲಿ ದೊಡ್ಡಣ್ಣನ ಸ್ಥಾನಕ್ಕೆ ಏರಲಿದೆಯೇ ರಷ್ಯಾ?
ಕಾಬೂಲ್, ಆಗಸ್ಟ್ 20: ಕಳೆದ ಭಾನುವಾರ ಅಫ್ಘಾನಿಸ್ತಾನ ಸರ್ಕಾರವು ಪತನವಾಗಿದೆ. ಈ ನಡುವೆ ಜಗತ್ತಿನ ದೊಡ್ಡಣ್ಣ ಅಮೆರಿಕಾವೂ ತನ್ನ ಅಫ್ಘಾನಿಸ್ತಾನದಿಂದ ತನ್ನ ಎಲ್ಲಾ ಸೇನೆಯನ್ನು ವಾಪಾಸ್ ಕರೆಸಿ ಕೊಂಡಿದೆ. ಹಾಗೆಯೇ ಅಫ್ಘಾನ್‌ನಲ್ಲಿರುವ ತನ್ನ ರಾಯಭಾರಿ ಅಧಿಕಾರಿಗಳನ್ನು ಹಿಂದಕ್ಕೆ ಕರೆಸಿಕೊಂಡಿದೆ. ಹಲವಾರು ಮಂದಿ ಅಫ್ಘಾನಿಸ್ತಾನವನ್ನು ತೊರೆದು ಹೋಗುತ್ತಿರುವ ನಡುವೆಯೂ ರಷ್ಯಾ ರಾಯಭಾರಿಗಳು ಮಾತ್ರ ಅಫ್ಘಾನಿಸ್ತಾನದಲ್ಲೇ ನೆಲೆಸಿದ್ದಾರೆ. ಅಮೆರಿಕ ತನ್ನ ಸೇನೆಯನ್ನು ಹಿಂಪಡೆಯುತ್ತಿದ್ದಂತೆ ಕಾಬೂಲ್‌ನಿಂದ ನೂರಾರು ಮೈಲಿ ದೂರದಲ್ಲಿ ತಜಕೀಸ್ತಾನದ ಗಡಿಯಲ್ಲಿ ಶಸ್ತ್ರಸಜ್ಜಿತ ನೂರಾರು ರಷ್ಯಾ ಪಡೆಗಳು ಹಾಗೂ ವಾಹನಗಳು ನಿಂತಿದ್ದದ್ದು ಮಾತ್ರ ಸುಳ್ಳಲ್ಲ.
ತಾಲಿಬಾನ್‌ನ ಉಗ್ರರು ಇರುವ 12 ಮೈಲಿ ದೂರದಲ್ಲೇ ರಷ್ಯಾದ ಈ ಮಿಲಿಟರಿ ಪಡೆ ಇದೆ ಎಂದು ಹೇಳಲಾಗಿದೆ ಮತ್ತು ಹಾಗೆಯೇ ತಾವು ಅಫ್ಘಾನಿಸ್ತಾನದಲ್ಲಿ ಇರುವುದನ್ನು ರಷ್ಯನ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ನಾವೆಲ್ಲರೂ ಕಣ್ಣಿಗೆ ಕಾಣುವಂತೆ ಇದ್ದೇವೆ. ನಾವು ಅಡಗಿ ಕುಳಿತಿಲ್ಲ ಎಂದು ರಷ್ಯನ್ ಅಧಿಕಾರಿ ಆಂಟನಿ ಸಿಡೋರವ್ ಹೇಳಿದ್ದಾರೆ. ಈ ಬೆನ್ನಲ್ಲೇ ಮಧ್ಯ ಏಷ್ಯಾವನ್ನು ಮುಂದಿನ ಹಿಂಸಾಚಾರದಿಂದ ರಷ್ಯ ರಕ್ಷಿಸಿಕೊಳ್ಳುತ್ತಿದೆಯೇ ಎಂಬ ಅನುಮಾನವೂ ಕೂಡಾ ಮೂಡಿ ಬಂದಿದೆ. ಈ ನಡುವೆ ಮಧ್ಯ ಏಷ್ಯಾದಲ್ಲಿ ತನ್ನ ಕಬಂದ ಭಾಹುವನ್ನು ಚಾಚುವ ಎಲ್ಲಾ ಯತ್ನವನ್ನು ರಷ್ಯಾ ಮಾಡುತ್ತಿದೆ. ಹಾಗೆಯೇ ಮಧ್ಯ ಏಷ್ಯಾದಲ್ಲಿ ದೊಡ್ಡಣ್ಣ ಅಮೆರಿಕದ ಸ್ಥಾನವನ್ನು ತಾನು ತುಂಬುವ ಪ್ರಯತ್ನದಲ್ಲಿದೆ.
ಅಫ್ಘಾನಿಸ್ತಾನದಿಂದ ತನ್ನ ಸೇನೆಯನ್ನು ಹಿಂದಕ್ಕೆ ಪಡೆದುಕೊಂಡ ಅಮೆರಿಕದ ಬಗ್ಗೆ ಮಾತನಾಡಿದ ರಷ್ಯಾದ ವಿದೇಶಾಂಗ ಸಚಿವರು, "ನಾನು ಇದು ಗಾಯಗೊಂಡ ಪ್ರಾಣಿ ಎಂದು ಹೇಳಲಾರೆ," ಎಂದಿದ್ದಾರೆ. ಈ ಕೆಲವು ದೇಶಗಳ ಗುಂಪುಗಳು ಒಂದು ದೇಶವನ್ನು ತನ್ನ ಉಪಯೋಗಕ್ಕೆ ಬಳಸಿಕೊಂಡು ಈಗ ಕಷ್ಟದ, ನೋವಿನ ಸಂದರ್ಭದಲ್ಲಿ ಕೈ ಬಿಡುವುದು ಎಷ್ಟು ಸರಿ," ಎಂದು ಕೂಡಾ ಪ್ರಶ್ನಿಸಿದ್ದಾರೆ.

ಅಫ್ಘಾನ್‌ನಲ್ಲೇ ಉಳಿದ ರಷ್ಯಾ ರಾಯಭಾರಿ!
ಮಧ್ಯ ಏಷ್ಯಾದ ಪ್ರಮುಖ ರಾಷ್ಟ್ರವಾದ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ತನ್ನ ಆಡಳಿತವನ್ನು ಮತ್ತೆ ಪಡೆಯಲು ಒಂದು ಕಡೆಯಿಂದ ರಷ್ಯಾವೂ ಕೂಡಾ ಪಾತ್ರ ವಹಿಸಿದೆ ಎಂದು ಹೇಳಬಹುದು. ಆದರೆ ಇದಕ್ಕೆ ಮುಖ್ಯ ಕಾರಣ ದೊಡ್ಡಣ್ಣ ಅಮೆರಿಕ ಎಂಬುವುದನ್ನು ನಾವು ಎಲ್ಲೂ ಅಲ್ಲಗಳೆಯುವಂತಿಲ್ಲ. ಭಾರತ ಹಾಗೂ ಅಮೆರಿಕಾವು ಅಫ್ಘಾನಿಸ್ತಾನದಿಂದ ತನ್ನ ಎಲ್ಲಾ ಸಿಬ್ಬಂದಿಗಳನ್ನು, ಜನರನ್ನು ಕರೆ ತರುವ ಮೂಲಕ ತಾಲಿಬಾನ್‌ನಿಂದ ದೂರವಿರುವಾಗ, ಚೀನಾ, ರಷ್ಯಾ ಮತ್ತು ಪಾಕಿಸ್ತಾನ ಮಾತ್ರ ತಾಲಿಬಾನ್‌ಗೆ ಸಮೀಪವಾಗುತ್ತಿದೆ. ಮಾಸ್ಕೋಗೆ ಅಸ್ತವ್ಯಸ್ತವಾಗಿರುವ ಯುಎಸ್ ಸೇನೆ ವಾಪಾಸಾತಿಯು, 1989 ರಲ್ಲಿ ರಷ್ಯಾಕ್ಕೆ ತನ್ನ ಹಿಮ್ಮೆಟ್ಟುವಿಕೆಯನ್ನು ನೆನಪಿಸುತ್ತದೆ. ಇದು ಜಾಗತಿಕ ಮಟ್ಟದಲ್ಲಿ ಭಾರೀ ಪ್ರಚಾರದ ವಿಜಯವಾಗಿದೆ.
ಈ ವಾರದ ಆರಂಭದಲ್ಲಿ ಅಫ್ಘಾನಿಸ್ತಾನದಿಂದ ಹಲವಾರು ರಾಷ್ಟ್ರಗಳು ತಮ್ಮ ರಾಯಭಾರಿಗಳನ್ನು ಅಫ್ಘಾನಿಸ್ತಾನದಿಂದ ಹಿಂದಕ್ಕೆ ಪಡೆಯುತ್ತಿದ್ದರೂ ರಷ್ಯಾ ಮಾತ್ರ ಅಲ್ಲೇ ಉಳಿದಿತ್ತು. ಹಾಗೆಯೇ ನಾವು ಸುರಕ್ಷಿತವಾಗಿದ್ದೇವೆ ಎಂದು ಹೇಳಿಕೊಂಡಿತ್ತು. ರಾಯಭಾರಿ ಡಿಮಿಟ್ರಿ ಜಿರ್ನೋವ್, ''ತಾಲಿಬಾನ್ ಈಗಾಗಲೇ ತನ್ನ ರಾಯಭಾರ ಕಚೇರಿಯನ್ನು ಕಾವಲು ಕಾಯುತ್ತಿದ್ದಾರೆ,'' ಎಂದು ಹೇಳಿದ್ದರು. ಭಯೋತ್ಪಾದಕರು ರಷ್ಯನ್ನರಿಗೆ ತಮ್ಮ ರಾಜತಾಂತ್ರಿಕರ "ಒಂದೇ ಒಂದು ಕೂದಲು ಉದುರುವುದಿಲ್ಲ" ಎಂದು ಭರವಸೆ ನೀಡಿದ್ದಾರೆ ಎಂದು ರಷ್ಯಾ ರಾಯಭಾರಿ ಡಿಮಿಟ್ರಿ ಜಿರ್ನೋವ್ ಹೇಳಿದ್ದಾರೆ.

ಜುಲೈನಲ್ಲಿ ತಾಲಿಬಾನ್ ಜೊತೆ ಸಭೆ ನಡೆಸಿದ್ದ ರಷ್ಯಾ
ಮಧ್ಯ ಏಷ್ಯಾದಲ್ಲಿ ತನ್ನ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಬಯಸುತ್ತಿರುವ ರಷ್ಯಾವು ಅಫ್ಘಾನಿಸ್ತಾನದ ವಿಚಾರದಲ್ಲಿ ತಾಲಿಬಾನ್ ಜೊತೆ ಹಲವಾರು ಬಾರಿ ಸಭೆ ನಡೆಸಿದೆ. ಇತ್ತೀಚೆಗೆ ತಾಲಿಬಾನ್ ಜೊತೆ ರಷ್ಯಾವು ಜುಲೈನಲ್ಲಿ ಸಭೆ ನಡೆಸಿದೆ. ಈ ಸಂದರ್ಭದಲ್ಲಿ ತಾಲಿಬಾನ್ ರಷ್ಯಾದ ಮೇಲೆ ಯಾವುದೇ ಪ್ರಭಾವವನ್ನು ಬೀರುವುದಿಲ್ಲ ಹಾಗೂ ರಷ್ಯಾಕ್ಕೆ ವಿರುದ್ದವಾಗಿ ಯಾವುದೇ ಕಾರ್ಯವನ್ನು ಮಾಡುವುದಿಲ್ಲ ಎಂದು ಭರವಸೆಯನ್ನು ನೀಡಿದೆ. ತಾಲಿಬಾನ್ ಅನ್ನು ನಿಷೇಧಿತ ಉಗ್ರ ಸಂಘಟನೆ ಎಂದು ಗುರುತಿಸಲಾಗಿದ್ದರೂ ಕೂಡಾ ರಷ್ಯಾ ಮಾತ್ರ ತಾಲಿಬಾನ್ ಜೊತೆಗೆ ಹಲವಾರು ಸಭೆಗಳನ್ನು ನಡೆಸಿದೆ. ತಾಲಿಬಾನ್ ಜೊತೆಗೆ ತಾನು ನಡೆಸಿದ ಹಲವು ಸುತ್ತಿನ ಸಭೆಗಳ ಬಗ್ಗೆ ಮಾತನಾಡಿದ ರಷ್ಯಾದ ತಜ್ಞ, ಇದು ''ಸುರಕ್ಷತಾ ತಂತ್ರ'' ಎಂದು ಬಣ್ಣಿಸಿದ್ದಾರೆ.

ತಾಲಿಬಾನ್ ವಿಷಯದಲ್ಲಿ ಭಾರತ, ರಷ್ಯಾ ನಡುವೆ ಚರ್ಚೆ
ಯುಎಸ್ ಮತ್ತು ನ್ಯಾಟೋ ಪಡೆಗಳು ಹೊರಬಂದ ನಂತರ ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಪರಿಸ್ಥಿತಿಯ ನಡುವೆ ಮಾತುಕತೆಯನ್ನು ನಡೆಸಲು ಭಾರತ ಮತ್ತು ಅದರ ಸಾಂಪ್ರದಾಯಿಕ ಮಿತ್ರ ರಷ್ಯಾ ಒಪ್ಪಿಕೊಂಡಿವೆ. ರಷ್ಯಾದ ಎನ್ ಎಸ್ ಎ ನಿಕೊಲಾಯ್ ಪತ್ರುಶೇವ್ ಮತ್ತು ಉಪ ವಿದೇಶಾಂಗ ಸಚಿವ ಇಗೊರ್ ಮೊರ್ಗುಲೋವರನ್ನು ಭೇಟಿಯಾಗಲು ರಷ್ಯಾಕ್ಕೆ ಹೋದ ಸಂದರ್ಭದಲ್ಲಿ ಉಪ ಎನ್ಎಸ್ಎ ಪಂಕಜ್ ಸರನ್ ಅಫ್ಘಾನ್ ಪರಿಸ್ಥಿತಿಯ ಬಗ್ಗೆ ಮಾತನಾಡಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ರಾಜತಾಂತ್ರಿಕ ಮೂಲಗಳು, "ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಗಮನದಲ್ಲಿ ಇಟ್ಟುಕೊಂಡು, ವಿಶೇಷವಾಗಿ ಯುಎಸ್ ಮತ್ತು ನ್ಯಾಟೋಗಳ ನಿರ್ಗಮನದ ಬಗ್ಗೆ ಚರ್ಚೆ ನಡೆಸಲಾಗಿದೆ," ಎಂದು ತಿಳಿಸಿದೆ. ರಷ್ಯಾದ ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯದರ್ಶಿ ಹೆಚ್.ಇ. ನಿಕೋಲಾಯ್ ಪತ್ರುಶೇವ್ ಮತ್ತು ರಷ್ಯಾದ ಭದ್ರತಾ ಮಂಡಳಿಯ ಕಾರ್ಯದರ್ಶಿ ಎಚ್‌ಇ ಅಲೆಕ್ಸಾಂಡರ್ ವೆನೆಡಿಕ್ಟೊವ್ ಜೊತೆ ನಡೆಯಲಿರುವ ಚರ್ಚೆಗಳು ಪ್ರಾದೇಶಿಕ ಹಾಗೂ ಅಂತರಾಷ್ಟ್ರೀಯ ಸಮಸ್ಯೆಗಳನ್ನು ಒಳಗೊಂಡಿದೆ," ಎಂದು ಭಾರತೀಯ ರಾಯಭಾರ ಕಚೇರಿಯ ಟ್ವೀಟ್ ಮಾಡಿದೆ. ಮಾಸ್ಕೋದ ಭಾರತೀಯ ರಾಯಭಾರಿ ಬಿ ವೆಂಟಕೇಶ್ ವರ್ಮ ಮತ್ತು ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯದರ್ಶಿಯ (ಎನ್ಎಸ್‌ಸಿಎಸ್) ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು ಎಂದು ವರದಿ ತಿಳಿಸಿದೆ.
Recommended Video

ತಾಲಿಬಾನ್ ಜೊತೆ ಸೇರಿ ಅಫ್ಘಾನಿಸ್ತಾನದಲ್ಲಿ ರಷ್ಯಾದ ಕಾರ್ಯತಂತ್ರ
ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ದಾಳಿ ನಡೆಸಿ ಕೊನೆಗೂ ಅಶ್ರಫ್ ಘನಿ ಗದ್ದುಗೆಯಿಂದ ಕೆಳಗೆ ಇಳಿಯುವಂತೆ ಮಾಡಿ ಆಗಿದೆ. ಶೀತರ ಸಮರದ ಬಗ್ಗೆ ತಿಳಿದಿರುವ ಯಾರೇ ಆದರೂ, ಇತ್ತೀಚೆಗೆ ರಷ್ಯಾವು ಅಶ್ರಫ್ ಘನಿ ಆಡಳಿತಕ್ಕಿಂತ ತಾಲಿಬಾನ್ ಆಡಳಿತದಲ್ಲಿ ಮಾಸ್ಕೋದ ರೇಡಿಯೋ ಕೇಂದ್ರ ಸುರಕ್ಷಿತ ಎಂದು ಹೇಳಿರುವುದಕ್ಕೆ ಆಶ್ಚರ್ಯ ಪಡುವುದು ಖಚಿತ. ಈ ತಾಲಿಬಾನಿಗರೇ 1980 ರಲ್ಲಿ ಸುಮಾರು 15,000 ಸೋವಿಯತ್ ಒಕ್ಕೂಟದ ಸಿಬ್ಬಂದಿಗಳ ಮಾರಣ ಹೋಮ ನಡೆಸಿದೆ ಎಂಬುವುದನ್ನು ನಾವು ಈ ಸಂದರ್ಭದಲ್ಲಿ ಮರೆಯುವಂತಿಲ್ಲ. ನಾಲ್ಕು ಕಾರುಗಳ ತುಂಬಾ ಹಣವನ್ನು ತುಂಬಿ ಅಶ್ರಫ್ ಘನಿ ಪರಾರಿಯಾಗಿದ್ದಾರೆ. ಹಾಗೆಯೇ ಹೆಲಿಕಾಪ್ಟರ್‌ನಲ್ಲಿ ಹಣವನ್ನು ತುಂಬಿ ಹೋಗುವ ಯತ್ನವನ್ನು ಮಾಡಿದ್ದಾರೆ. ಆದರೆ ಎಲ್ಲಾ ಹಣವೂ ತುಂಬಿಕೊಳ್ಳಲು ಸಾಧ್ಯವಾಗಿಲ್ಲ. ಹಾಗಾಗಿ ಸ್ವಲ್ಪ ಹಣವು ಡಾಂಬರು ರಸ್ತೆಯ ಮೇಲೆ ಚೆಲ್ಲಾಪಿಲ್ಲಿಯಾಗಿ ಹರಡಿತ್ತು," ಎಂದು ರಷ್ಯಾ ವಕ್ತಾರೆ ನಿಖಿತ ಇಶ್ಚೆಂಕ್ ಈ ಹಿಂದೆ ಹೇಳಿದ್ದರು. ಆದರೆ ಅಶ್ರಫ್ ಘನಿ ಮಾತ್ರ ಇದನ್ನು ವಿರೋಧಿಸಿ, ''ನನಗೆ ಶೂ ಹಾಕಿಕೊಳ್ಳಲು ಕೂಡಾ ಸಮಯವಿರಲಿಲ್ಲ,'' ಎಂದಿದ್ದಾರೆ.
ತಾಲಿಬಾನ್ ರಷ್ಯಾ ಭಯೋತ್ಪಾದಕ ಸಂಘಟನೆಗಳ ಪಟ್ಟಿಯಲ್ಲಿ 2003 ರಿಂದ ಇದೆ. ಆದರೆ ರಷ್ಯಾ ಮಾತ್ರ ತಾಲಿಬಾನ್ ಜೊತೆ ಮಾತುಕತೆ ನಡೆಸುತ್ತಲ್ಲೇ ಇದೆ. ಆದರೆ ಇದು ಶಾಂತಿಯ ದೃಷ್ಟಿಯಿಂದ ಎಂದು ರಷ್ಯಾ ಹೇಳಿಕೊಳ್ಳುತ್ತಿದೆ. ಇತ್ತೀಚೆಗೆ ಈ ಬಗ್ಗೆ ಮಾತನಾಡಿದ ಕಾಬೂಲ್‌ನಲ್ಲಿ ರಷ್ಯಾದ ಸುದೀರ್ಘ ಆಟದ ಬಗ್ಗೆ ಸ್ಪಷ್ಟ ಉತ್ತರವನ್ನು ನೀಡಿರುವ ಅಫ್ಘಾನಿಸ್ತಾನದ ಕ್ರೆಮ್ಲಿನ್ ರಾಯಭಾರಿ ಜಮೀರ್ ಕಾಬುಲೋವ್, "ನಾವು ಕಳೆದ ಏಳು ವರ್ಷಗಳಿಂದ ತಾಲಿಬಾನ್‌ನೊಂದಿಗೆ ಸಂಪರ್ಕವನ್ನು ಉಳಿಸಿಕೊಂಡಿದ್ದೇವೆ, ಹಲವು ಸಮಸ್ಯೆಗಳನ್ನು ಚರ್ಚಿಸುತ್ತಿದ್ದೇವೆ," ಎಂದು ಹೇಳಿದ್ದಾರೆ. ರಷ್ಯಾ ಮಾತ್ರ ಮಧ್ಯ ಏಷ್ಯಾದಲ್ಲಿ ತನ್ನ ಪ್ರಾಬಲ್ಯವನ್ನು ಹೆಚ್ಚಿಸುವ ಎಲ್ಲಾ ಪ್ರಯತ್ನಗಳನ್ನು ಸತತವಾಗಿ ಮಾಡುತ್ತಿದ್ದಾರೆ.
(ಒನ್ ಇಂಡಿಯಾ)
-
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
Bengaluru: ಬೆಂಗಳೂರು ನಗರದಲ್ಲಿ ಸ್ವಿಗ್ಗಿ, ಜೊಮ್ಯಾಟೋ ಡೆಲಿವರಿ ಬಾಯ್ಸ್ಗೆ ಸಂಕಷ್ಟ, ಅಮಾನವೀಯ ಲಿಫ್ಟ್ ಸಂಸ್ಕೃತಿ -
ಚಿಕ್ಕಮಗಳೂರಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರಿನಂದಾ ಸಾವು: 2 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Copra: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಮತ್ತೆ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ: ನಿರ್ಮಾಣವಾಯ್ತು ಹೊಸ ಇತಿಹಾಸ -
Mona Lisa: ಮಹಾಕುಂಭ ಮೇಳದ ಫೇಮಸ್ ಮೊನಾಲಿಸಾ ಪತಿಗೆ ಕಾನೂನು ಸಂಕಷ್ಟ: ಫರ್ಮಾನ್ ಖಾನ್ ಮೇಲೆ ಪೋಕ್ಸೋ ಪ್ರಕರಣ -
2nd PUC: ಬೆಂಗಳೂರು - ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 260 ವಿದ್ಯಾರ್ಥಿಗಳಿಗೆ 35,000 ರೂ. -
RBI New Rule: ಇನ್ಮುಂದೆ ಆನ್ಲೈನ್ ವಹಿವಾಟಿನಲ್ಲಿ ದೊಡ್ಡ ಬದಲಾವಣೆ: 10,000 ರೂ. ಹಣ ವರ್ಗಾವಣೆಗೂ ಹೊಸ ನಿಯಮ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Gold Rate April 10: ಚಿನ್ನ - ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಬೆಳವಣಿಗೆ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
ದ್ವಿತೀಯ PUC ರಿಪೀಟರ್ಸ್ ಗಮನಕ್ಕೆ: ತಾಂತ್ರಿಕ ದೋಷ ಸರಿಪಡಿಸಿ ಪರಿಷ್ಕೃತ ಫಲಿತಾಂಶ ಪ್ರಕಟಿಸಿದ ಮಂಡಳಿ










Click it and Unblock the Notifications